ಅಪಘಾತ ಪ್ರಕರಣ: ೦5
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮುಖೇಶ್ ಪ್ರಾಯ: 36 ವರ್ಷ ತಂದೆ: ದೇವು ಪೂಜಾರಿ ವಾಸ: ಕೊಲ್ಲಬೆಟ್ಟು ಮನೆ, ಪುದು ಗ್ರಾಮ,ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 12-12-2021 ರಂದು ರಾತ್ರಿ ಸಮಾರು 9:00 ಗಂಟೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗೀಪೇಟೆ ಎಂಬಲ್ಲಿ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ನಂಬ್ರ KA-19-EZ-0870 ನೇದನ್ನು ಅದರ ಸವಾರ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ಪಾದಚಾರಿ ರೋಹಿತ್ @ ರೋಹಿತಾಶ್ವನಿಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದಿದ್ದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ರೋಹಿತ್ ರವರು ರಸ್ತೆಗೆ ರಟ್ಟಿ ಬಿದ್ದು ಬಲಬದಿ ಹಣೆಗೆ, ಎದೆಗೆ, ಎರಡೂ ಕಾಲುಗಳಿಗೆ, ಬಲಕೈಗೆ ಗಾಯಗಳಾಗಿ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 138/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇಲ್ಯಾಸ್ ಪ್ರಾಯ: 37ವರ್ಷ ತಂದೆ: ಹಸನ್ ಬಾವ ವಾಸ: ಕೊಳಕೆ ಮನೆ, ಸಜೀಪಮೂಡ ಗ್ರಾಮ,ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 3-12-2021 ರಂದು ರಾತ್ರಿ ಸುಮಾರು 11:00 ಗಂಟೆಗೆ ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ಕೆದಿಲ ಎಂಬಲ್ಲಿ ಬೋಳಿಯಾರು-ಕೆದಿಲ ಸಾರ್ವಜನಿಕ ರಸ್ತೆಯಲ್ಲಿ ದ್ವಿಚಕ್ರ ವಾಹನ ನಂಬ್ರ KA-19-EP-5706 ನೇ ಯದನ್ನು ಅದರ ಸವಾರ ಲತೀಫ್ ರವರು ಹಸನ್ ಬಾವ ರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ನಿರ್ಲಕ್ಷ್ಯತನದಿಂದ ಹಾಗೂ ದುಡುಕುತನದಿಂದ ಚಲಾಯಿಸಿದ ಪರಿಣಾಮ ದ್ವಿಚಕ್ರ ವಾಹನ ಸ್ಕಿಡ್ಡಾಗಿ ಬಿದ್ದು ಸಹಸವಾರ ಹಸನ್ ಬಾವ ರವರ ತಲೆಗೆ, ಎದೆಗೆ, ಹೊಟ್ಟೆಗೆ ಗಾಯಗಳಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 139/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಕುಂಞ (60) ತಂದೆ:ಸಿದಿ ಕುಂಞ ವಾಸ:ಕುಂಜುರುಪಂಜ ಮನೆ, ಆರ್ಯಾಪು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:12-12-2021 ರಂದು ಸೂರಿಕುಮೇರು ಎಂಬಲ್ಲಿರುವ ತನ್ನ ಮಗಳ ಮನೆಗೆ ಹೋಗುವರೆ ಪುತ್ತೂರಿನಿಂದ ಖಾಸಗಿ ಬಸ್ಸಿನಲ್ಲಿ ಬಂದು ಸೂರಿಕುಮೇರು ಬಸ್ಸು ನಿಲ್ದಾಣದಲ್ಲಿ ಇಳಿದು ಸಂಜೆ 7.00 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಡ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಮಾಣಿ ಕಡೆಗೆ ಹೋಗುತ್ತಿರುವಾಗ ಮಾಣಿ ಕಡೆಯಿಂದ-ಕಲ್ಲಡ್ಕ ಕಡೆಗೆ ಕೆಎ-19-ಡಿ-5569ನೇ ಲಾರಿಯ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಲಾರಿಯ ಸೈಡಿನ ಭಾಗದಿಂದ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾಧಿದಾರರು ರಸ್ತೆಗೆ ಬಿದ್ದು ಮೂಗಿನ ಬಳಿ, ತುಟಿಯ ಬಳಿ ರಕ್ತಗಾಯವಾಗಿದ್ದು ಹಾಗೂ ಎಡಬದಿಯ ಪಕ್ಕೆಲುಬಿಗೆ ಗುದ್ದಿದಗಾಯವಾಗಿರುತ್ತದೆ. ನಂತರ ಲಾರಿ ಚಾಲಕನ ಹೆಸರು ಅಮೀರ್ ಅಹಮ್ಮದ್ ಎಂದು ತಿಳಿದಿರುತ್ತದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 162/2021 ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎ ರೇವತಿ ಪ್ರಾಯ 69 ವರ್ಷ, ಗಂಡ: ದಿ. ವಾಸುದೇವ ಕೆದಿಲಾಯ, ವಾಸ: 1-173, ಸಂಬ್ರಮ ಮನೆ, ಶ್ರೀರಾಮ ನಗರ, ಸಾಲ್ಮರ ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 12-12-2021 ರಂದು 11-00 ಗಂಟೆಗೆ ಆರೋಪಿ ಕಾರು ಚಾಲಕಿ ತಾರಾದೇವಿ ರೈ ಎಂಬವರು KA-01-MP-7330ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಎಪಿಎಂಸಿ ಸಾರ್ವಜನಿಕ ರಸ್ತೆಯಲ್ಲಿ ಆದರ್ಶ ಆಸ್ಪತ್ರೆ ಕಡೆಯಿಂದ ಪುತ್ತೂರು ಮುಖ್ಯ ಪೇಟೆಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಎಪಿಎಂಸಿ ರಸ್ತೆಯ IDEAL-LAB ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ, ಆದರ್ಶ ಆಸ್ಪತ್ರೆ ಕಡೆಯಿಂದ ಪುತ್ತೂರು ಮುಖ್ಯ ಪೇಟೆಯ ಕಡೆಗೆ ರಸ್ತೆಯ ಎಡ ಭಾಗದಲ್ಲಿ ನಡೆದುಕೊಂಡು ಹೊಗುತ್ತಿದ್ದ ಪಿರ್ಯಾದುದಾರರಾದ ಎ ರೇವತಿರವರಿಗೆ ಕಾರು ಹಿಂದಿನಿಂದ ಅಪಘಾತವಾಗಿ, ತಲೆಯ ಹಿಂಭಾಗಕ್ಕೆ ರಕ್ತಗಾಯ, ಬಲ ಕೈಯ ಕೋಲು ಕೈಗೆ ಮತ್ತು ಬೆನ್ನಿನ ಭಾಗಕ್ಕೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 151/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರತಿಬ್ (24) S/o ಶ್ರೀಧರ್ ಕುಲಾಲ್ , R/o ಬಂಗೇರಕಟ್ಟೆ ಮನೆ, ಪಾರೆಂಕಿಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:13-12-2021 ರಂದು ತನ್ನ ಬಾಬ್ತು ಕೆಎ 21 ವೈ 2781 ನೇ ಮೋಟಾರು ಸೈಕಲ್ನಲ್ಲಿ ಸಹಸವಾರ ಯತೀನ್ ಎಂಬವರನ್ನು ಕುಳ್ಳಿರಿಸಿಕೊಂಡು ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ರಾತ್ರಿ 7.20 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ಆನ್ ಸಿಲ್ಕ್ ಕ್ಲೋತ್ ಸೆಂಟರ್ ಎದುರು ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 20 ಪಿ 5313 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಭುಜಕ್ಕೆ ಗುದ್ದಿದ ಗಾಯ, ಎಡಕಾಲಿನ ಪಾದಕ್ಕೆ ತರಚಿದ ತರಚಿದ ರಕ್ತ ಗಾಯವಾಗಿರುತ್ತದೆ, ಸಹವಾರ ಯತೀನ್ರವರು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ್ಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ1]. ಅ.ಕ್ರ 92/2021 ಕಲಂ 279,337,304 (A)ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಕಳವು ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವರ್ಗೀಸ್ ಪ್ರಾಯ:40 ವರ್ಷ ತಂದೆ ; ಮತ್ತಾಯಿ ವಾಸ ; ಕಾಜರಕಟ್ಟೆ ಮನೆ ರೆಂಜಿಲಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ವರ್ಗೀಸ್ ಎಂಬುವರು ಕಡಬದ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಆಟೋ ಮೋಬೈಲ್ಸ್ ವಾಹನನ ಬಿಡಿ ಭಾಗಗಳ ಅಂಗಡಿ ಮಾಲಿಕನಾಗಿದ್ದು, ದಿನಾಂಕ: 13-12-2021 ರಂದು ಎಂದಿನಂತೆ ಬೆಳಿಗ್ಗೆ 8:45 ಗಂಟೆಯ ಸಮಯಕ್ಕೆ ಮನೆಗೆ ಬೀಗ ಹಾಕಿ ಕಡಬಕ್ಕೆ ಕೆಲಸದ ನಿಮಿತ್ತ ಹೋಗಿರುತ್ತಾರೆ ಹಾಗೂ ಇಬ್ಬರು ಮಕ್ಕಳು ಶಾಲೆಗೆ ಹೋಗಿರುತ್ತಾರೆ. ಪಿರ್ಯಾದುದಾರರ ಹೆಂಡತಿ ಕಡಬದಲ್ಲಿ ಕೆಲಸವನ್ನು ಮುಗಿಸಿಕೊಂಡು ತನ್ನ ಮನೆಯಾದ ರೆಂಜಿಲಾಡಿ ಗ್ರಾಮದ ಕಾಜರಕಟ್ಟೆ ಎಂಬಲ್ಲಿಗೆ ಬಂದಿದ್ದು ಸಮಯ ಸುಮಾರು ಸಂಜೆ 4:45 ಗಂಟೆಗೆ ಮನೆಗೆ ಬಂದು ಮನೆಯ ಎದುರಿನ ಬೀಗವನ್ನು ತರೆದು ಒಳಗಡೆ ಹೋಗಿ ನೋಡಲಾಗಿ ಮನೆಯ ಹಿಂಬದಿಯಲ್ಲಿ ಹಿಂಭಾಗದ ಬಾಗಿಲನ್ನು ನೋಡಿದಾಗ ಅದು ತೆರೆದಿದ್ದು ಪಿರ್ಯಾದುದಾರರ ಪತ್ನಿ ಸಂಶಯಗೊಂಡು ಮಲಗುವ ಕೋಣೆಯ ಬಳಿ ಹೋಗಿ ಗೋಡ್ರೆಜ್ ನಲ್ಲಿ ಇರಿಸಿದ್ದ ಚಿನ್ನಾಭರಣಗಳು ಕಾಣೆಯಾಗಿರುತ್ತದೆ. ಹಾಗೂ ಒಳಗಿದ್ದ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿತ್ತದೆ ಎಂದು ಪಿರ್ಯಾದುದಾರರ ಹೆಂಡತಿ ಪಿರ್ಯಾದುದಾರರಿಗೆ ದೂರವಾಣಿಯ ಮೂಲಕ ತಿಳಿಸಿದಾಗ ಪಿರ್ಯಾದುದಾರರು ಮನೆಗೆ ಬಂದು ನೋಡಿದ್ದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಮುಖಾಂತರ ಒಳಗೆ ನುಗ್ಗಿ ಮನೆಯ ಒಳಗಡೆ ಬೆಡ್ ರೂಮ್ನಲ್ಲಿದ್ದ ಗೋಡ್ರೆಜ್ ನ ಬೀಗವನ್ನು ಯಾವುದೋ ಆಯುಧದಿಂದ ಬಲತ್ಕಾರವಾಗಿ ಮೀಟಿ ತೆಗೆದಿದ್ದು ಅದರ ಒಳಗಡೆ ಲಾಕ್ ನಲ್ಲಿದ್ದ ಒಟ್ಟು 41 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುತ್ತದೆ.ಇದರ ಒಟ್ಟು ಅಂದಾಜು ಮೌಲ್ಯ 150,000.00/- ಆಗಿರಬಹುದು. ಈ ಬಗ್ಗೆ ಕಡಬ ಠಾಣಾ ಅ.ಕ್ರ 105/2021 ಕಲಂ. 454.380. IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹನುಮಂತ ಸ್ವಾಗಿಹಳ್ಳ ಪ್ರಾಯ 26ವರ್ಷ ತಂದೆ: ಮಹಾದೇವಪ್ಪ ವಾಸ: ರಣತ್ತೂರು ಗ್ರಾಮ ಸಿರಹಟ್ಟಿ ತಾಲೂಕು ಗದಗ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿರವರು ಸುಮಾರು 6 ತಿಂಗಳ ಹಿಂದೆ ಕೂಲಿ ಕೆಲಸ ಹುಡುಕಿಕೊಂಡು ಪುತ್ತೂರಿಗೆ ಬಂದಿರುವುದಾಗಿದೆ. ಪಿರ್ಯಾದಿದಾರರು ಕರೆದ ಕಡೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ದಿನಾಂಕ: 13-12-2021 ರಂದು ಬೆಳಿಗ್ಗೆ 10 :00 ಗಂಟೆಗೆ ಪುತ್ತೂರಿನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಪಿರ್ಯಾದಿದಾರರ ತಂದೆ ಮಹಾದೇವಪ್ಪ ಮತ್ತು ದೊಡ್ಡಪ್ಪನ ಮಗ ಬಸಪ್ಪ ಹಾಗೂ ಪರಿಚಯದ ಮರಿಯಪ್ಪನವರೊಂದಿಗೆ ಕುಳಿತುಕೊಂಡಿರುವಾಗ ಪಿರ್ಯಾದಿದಾರರ ಪರಿಚಿತನಾದ ಅವಿನಾಶ್ ಎಂಬಾತನು ಪಿರ್ಯಾದಿದಾರರ ಬಳಿ ಬಂದು 50 ರೂಪಾಯಿ ಕೊಡುವಂತೆ ಕೇಳಿರುತ್ತಾನೆ. ಅದಕ್ಕೆ ಪಿರ್ಯಾದಿದಾರರು ನನ್ನ ಬಳಿ ಹಣವಿಲ್ಲ ಎಂದಿದ್ದು, ಇದಕ್ಕೆ ಕೋಪಗೊಂಡು ಅವಿನಾಶನು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಬಳಿಕ ಆತನ ಕಿಸೆಯಿಂದ ಯಾವುದೋ ಸಾಧನವನ್ನು ತೆಗೆದು ಪಿರ್ಯಾದಿದಾರರ ಬಲಕಾಲಿಗೆ ಚುಚ್ಚಿ ಹಲ್ಲೆ ನಡೆಸಿರುತ್ತಾನೆ . ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 111-2021 ಕಲಂ: 323, 324 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೀವ ಪೂಜಾರಿ , ಪ್ರಾಯ: 65 ವರ್ಷ, ತಂದೆ: ಕೃಷ್ಣಪ್ಪ , ವಾಸ: ಕಲಾಯಿ ಮನೆ, ಮಚ್ಚಿನ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರಿಗೆ ಮತ್ತು ಅವರ ತಮ್ಮನಾದ ರಾಘವ ಪೂಜಾರಿ ಎಂಬವರಿಗೆ ಸುಮಾರು 4-5 ವರ್ಷದಿಂದ ಜಾಗದ ತಕರಾರು ಇದ್ದು ದಿನಾಂಕ: 12-12-2021 ರಂದು ಸಮಯ ಸುಮಾರು 12.00 ಗಂಟೆಗೆ ಪಿರ್ಯಾದಿದಾರರು ತನ್ನ ಮನೆಯಾದ ಬೆಳ್ತಂಗಡಿ ತಾಲೂಕು, ಮಚ್ಚಿನ ಗ್ರಾಮದ ಕಲಾಯಿ ಎಂಬಲ್ಲಿನ ಮನೆಯ ಸಮೀಪದ ತೋಟದ ಎದುರಿನ ಸರಕಾರಿ ಜಾಗದಲ್ಲಿ ಸೊಪ್ಪು ಕಡಿಯುತ್ತಿರುವ ಸಮಯ ರಾಘವ ಪೂಜಾರಿಯವರು ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ “ಅವ್ಯಾಚ ಶಬ್ಧಗಳಿಂದ ಬೈದು ಮರದ ದೊಣ್ಣೆಯಿಂದ ಪಿರ್ಯಾದಿದಾರರಿಗೆ ತಲೆಗೆ ಕೈಕಾಲುಗಳಿಗೆ ಹೊಡೆದು ನಿನ್ನನ್ನು ಜೀವ ಸಹಿತ ಬಿಡವುದಿಲ್ಲ ಎಂದು ಬೆದರಿಕೆ ಹಾಕಿ ಕೈಯಲ್ಲಿದ್ದ ಮರದ ದೊಣ್ಣೆಯನ್ನು ಅಲ್ಲೆ ಬಿಸಾಕಿ ಹೋಗಿದ್ದು ಅಲ್ಲಿಯೇ ಸಮೀಪ ಸೊಪ್ಪು ಕಡಿಯುತ್ತಿದ್ದ ಪಿರ್ಯಾದಿದಾರರ ಹೆಂಡತಿ ಮತ್ತು ಮಗಳು ಓಡಿ ಬಂದು ಪಿರ್ಯಾದಿದಾರರನ್ನು ಆರೈಕೆ ಮಾಡಿ ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 94/2021 ಕಲಂ: 324, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 13.12.2021 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 108/2021 ಕಲಂ: 3 & 4 ಫೋಕ್ಸೋ ಕಾಯ್ದೆ & 376,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕವಿತಾ ಪ್ರಾಯ 18 ವರ್ಷ ಗಂಡ ಕುಮಾರ್ ತಿಪ್ಪಣ್ಣ ಲಮಾಣಿ ವಾಸ: ಶಿವಪುರ್ , ಹಾವೇರಿ ದುಂಡಶಿ ಶಿಗ್ಗಾವ್ ತಾಲೂಕು ಹಾವೇರಿ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು ಸುಮಾರು 6 ತಿಂಗಳ ಹಿಂದೆ ಕುಮಾರ್ ತಿಪ್ಪಣ್ಣ ಲಮಾಣಿ ರವರನ್ನು ಮದುವೆಯಾಗಿದ್ದು ಕುಮಾರ ತಿಪ್ಪಣ್ಣ ಲಮಾಣಿ ಯವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಪಿರ್ಯಾದಿದಾರರು ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದು ಪ್ರತಿವರ್ಷ 34ನೇ ನೆಕ್ಕಿಲಾಡಿ ಗ್ರಾಮದ ಉದಯಗಿರಿ ರಾದಕೃಷ್ಣ ರವರ ತೋಟಕ್ಕೆ ಹಾಗೂ ರೋಡ್ನ ಕೆಲಸಕ್ಕೆ ಬಂದು ಕೆಲಸ ಮುಗಿಸಿ ಹೋಗುತ್ತಿದ್ದು ದಿನಾಂಕ: 13-12-2021ರಂದು ಬೆಳಿಗ್ಗೆ 08.15ಗಂಟೆಗೆ ಪಿರ್ಯಾದಿದಾರರ ಗಂಡ ಕುಮಾರ್ ತಿಪ್ಪಣ್ಣ ಲಮಾಣಿ ಪ್ರಯ 29 ವರ್ಷ ರವರು 34ನೇ ನೆಕ್ಕಿಲಾಡಿ ಗ್ರಾಮದ ಉದಯಗಿರಿ ರಾದಕೃಷ್ಣ ರವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ಆಕಸ್ಮಿಕವಾಗಿ ಕುಸಿದು ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ದನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗೊಳಫಡಿಸಿದಲ್ಲಿ ವೈದ್ಯರು ಕುಮಾರ ತಿಪ್ಪಣ್ಣ ಲಮಾಣಿ ರವರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ:42/2021 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಸುಮಾಧರ (50) ತಂದೆ: ಜನಾರ್ಧನ ಗೌಡ ವಾಸ: ಕೊಯ್ಕೊಳಿ, ದುಗ್ಗಲಡ್ಕ ,ಸುಳ್ಯ ಕಸಬಾ ಗ್ರಾಮ,ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಅಣ್ಣ ಕೃಷ್ಣಪ್ಪ (55) ತಂದೆ: ಜನಾರ್ಧನ ಗೌಡ ಎಂಬವರು ದಿನಾಂಕ: 07.12.2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ಎಂಬಲ್ಲಿ ನೆಕ್ರಾಜೆ ಗಿರಿಧರ ಎಂಬವರ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವ ಸಮಯ ಸುಮಾರು 09:25 ಗಂಟೆಗೆ ಹಾವು ಕಚ್ಚಿದವರನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಬಂದು ದಿನಾಂಕ: 09.12.2021 ರಂದು ಆರೋಗ್ಯದಲ್ಲಿ ಏರುಪೇರು ಆದವರನ್ನು ಪುನ: ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ದಿನಾಂಕ 11.12.2021 ರಂದು ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಈ ದಿನ ದಿನಾಂಕ: 13.12.2021 ರಂದು ಸಮಯ ಸುಮಾರು 13:10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಪ್ಪ ರವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಯುಡಿಆರ್ 54/2021 ಕಲಂ:174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀ ದೀಕ್ಷಿತ್, ಪ್ರಾಯ: 28 ವರ್ಷ, ತಂದೆ: ಜೋಸ್, ವಾಸ: ಗಾಂಧೀನಗರ ಕೊಯ್ಯಕುರಿ ಕೊಪ್ಪ ಮನೆ, ತೋಟತ್ತಾಡಿ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ಜೋಸ್ (59) ಎಂಬವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು, ದಿನಾಂಕ : 12-12-2021 ರಂದು ಸಂಜೆ ಸುಮಾರು 5-00 ಗಂಟೆಗೆ ತನ್ನ ಮನೆಯಲ್ಲಿ ರಬ್ಬರ್ ಶೀಟ್ ಮಾಡಲು ತಂದು ಇಟ್ಟಿದ್ದ ಆಸೀಡ್ ನ್ನು ಕುಡಿದು ಅಸ್ವಸ್ಥಗೊಂಡಿದ್ದವರನ್ನು ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಅವರನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕಡೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 8-40 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ 62/2021 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.