ಅಪಘಾತ ಪ್ರಕರಣ: ೦3
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಖರ ಪ್ರಾಯ 34 ವರ್ಷ ತಂದೆ: ಕೃಷ್ಣ ಶೆಟ್ಟಿಗಾರ ವಾಸ: ಇರಂದೂರು ಮನೆ, ವಿಟ್ಲ ಕಸಬಾ ಗ್ರಾಮ ಮಂಗಿಲಪದವು ಅಂಚೆ ಬಂಟ್ವಾಳ ತಾಲೂಕು ರವರು ದಿನಾಂಕ: 13-01-2022 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಕೋಡಪದವಿಗೆ ಹೋಗುವರೇ ಮಂಗಿಲಪದವು- ಕೋಡಪದವು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಂಗಿಲಪದವಿನಿಂದ ಕೋಡಪದವಿಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 08.50 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕೊಡಂಗೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿನಿಂದ ಸುಮಾರು 15 ಅಡಿ ಮುಂದುಗಡೆ ಅಂದರೆ ಕೋಡಪದವು ಕಡೆಗೆ ಕೆಎ-19-ಎಕ್ಸ್ -7736 ಮೋಟಾರ್ ಸೈಕಲಿನಲ್ಲಿ ಸವಾರ ಗಣೇಶ್ ಸಹ ಸವಾರ ಪುರಂದರನನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಕೋಡಪದವಿನಿಂದ ಮಂಗಿಲಪದವಿಗೆ ಒಂದು ವಾಹನ ಬರುತ್ತಿರುವುದನ್ನು ಕಂಡು ಮೋಟಾರ್ ಸೈಕಲ್ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ಹತೋಟಿ ತಪ್ಪಿ ರಸ್ತೆಯ ಎಡ ಬದಿಯ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತು. ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲಿನೊಂದಿಗೆ ಕೆಳಗೆ ಬಿದ್ದ ಪರಿಣಾಮ ಸವಾರ ಗಣೇಶನಿಗೆ ಅಲ್ಪ-ಸ್ವಲ್ಪ ಗುದ್ದಿದ ಗಾಯವಾಗಿರುತ್ತದೆ. ಸಹ ಸವಾರ ಪುರಂದರ ರವರಿಗೆ ಎಡ ತೊಡೆಗೆ ಗುದ್ದಿದ್ದ ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 10/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವೆಂಕಪ್ಪ ಕೆ ತಂದೆ: ಕರಿಯಪ್ಪ ವಾಸ: ಮಡ್ಯಂಗಳ ಮನೆ ಅರಿಯಡ್ಕ ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 13.01.2022 ರಂದು ಸಮಯ ಸುಮಾರು ಸಂಜೆ 7.00 ಗಂಟೆಗೆ ಕೌಡಿಚ್ಚಾರಿಗೆ ಹಾಲು ಕೊಡುವರೆ ಮನೆಯಿಂದ ಹೊರಟು ಕೌಡಿಚ್ಚಾರಿನ ಹೋಟೇಲ್ ಗೆ ಹಾಲು ಕೊಟ್ಟು ವಾಪಾಸ್ಸು ಮನೆಯ ಕಡೆಗೆ ಹೋಗುವರೆ ಸುಳ್ಯದಿಂದ ಕುಂಬ್ರ ಕಡೆಗೆ ಹಾದು ಹೊಗುವ ರಾಷ್ಟ್ರೀಯ ಹೆದ್ದಾರಿಯ ಡಾಮಾರು ರಸ್ತೆಯ ಬಲಬದಿಯಲ್ಲಿರುವ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತ ಪುತ್ತೂರು ತಾಲುಕು ಅರಿಯಡ್ಕ ಗ್ರಾಮದ ಪಶು ವೈಧ್ಯಕೀಯ ಆಸ್ಪತ್ರೆ ಮುಂಭಾಗ ತಲುಪುತ್ತಿದ್ದಂತೆ ಸದ್ರಿ ರಸ್ತೆಯಲ್ಲಿ ಕುಂಬ್ರದಿಂದ ಸುಳ್ಯ ಕಡೆಗೆ ಮೋಟಾರು ಸೈಕಲ್ ನ್ನು ಅದರ ಸವಾರನ್ನು ಅಜಾಗರೂಕತೆ ಹಾಗು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಎಡ ಕೈ ಎಡ ಕಣ್ಣಿನ ಹುಬ್ಬು, ಹಣೆಗೆ ಮತ್ತು ಶರೀರದ ಇತರ ಭಾಗಗಳಿಗೆ ಗುದ್ದಿದ ಹಾಗೂ ತರಚೀದ ಗಾಯಗಳಾಗಿರುತ್ತದೆ. ಅಲ್ಲಿ ಸೇರಿದ್ದ ಸಾರ್ವಜನಿಕರು ಪಿರ್ಯಾದಿದಾರರನ್ನು ಉಪಚರಿಸಿ ಒಂದು ಆಟೋರಿಕ್ಷಾದಲ್ಲಿ ಪುತ್ತೂರಿನ ಹಿತಾ ಆಸ್ಪತ್ರೆಗೆ ಪಿರ್ಯಾದಿದಾರರನ್ನು ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ. ಈ ಅಪಘಾತಕ್ಕೆ ಕೆಎ 21 ಯು 6538 ನೇ ಮೋಟಾರ್ ಸೈಕಲ್ ಸವಾರ ಯೋಗಿಶ್ವರನ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿರುವುದೇ ಕಾರಣವಾಗಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಅಕ್ರ 09/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಲಕ್ಷ್ಮೀಶ, ಪ್ರಾಯ: 21 ವರ್ಷ, ತಂದೆ: ದಿ.ಧನರಾಜ್, ವಾಸ: ಅಳಕೆಮಜಲು ಮನೆ, ಇಡ್ಕಿದು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 13.01.2022 ರಂದು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-19-ಇಎಮ್-3851 ನೇದನ್ನು ಸವಾರಿ ಮಾಡಿಕೊಂಡು ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದು, ಸದ್ರಿಯವರ ಚಿಕ್ಕಮ್ಮನ ಮಗನಾದ ಮನ್ವಿತ್ ನು ಆತನ ಬಾಬ್ತು ಕೆಎ-19-ಹೆಚ್‌ಹೆಚ್-7409ನೇ ದನ್ನು ಸವಾರಿ ಮಾಡಿಕೊಂಡು ಫಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದು, ರಾತ್ರಿ ಸಮಯ ಸುಮಾರು 11.35 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಟ್ಯಾರು ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ವಿರುದ್ಧ ದಿಕ್ಕಿನಿಂದ ಅಂದರೆ ಪುತ್ತೂರು ಕಡೆಯಿಂದ ಸಂಟ್ಯಾರು ಕಡೆಗೆ ಕೆಎ-05-ಎಕೆ-4209 ನೇ ಟ್ಯಾಂಕರನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಮ್ಮ ಮನ್ವಿತ್ ರವರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದಿದ್ದು,. ಪರಿಣಾಮವಾಗಿ ಮನ್ವಿತ್ ರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಮನ್ವಿತ್ ರವರನ್ನು ಉಪಚರಿಸಿ ನೋಡಿದಾಗ ಸದ್ರಿಯವರ ಬಲ ಕೈ, ಬಲ ಕಾಲಿಗೆ, ಎಡ ಕಾಲಿನ ತೊಡೆಗೆ ಗಾಯವಾಗಿದ್ದು, ಅಲ್ಲಿ ಸೇರಿದ್ದ ಸಾರ್ವಜನಿಕರ ಸಹಾಯದಿಂದ ಫಿರ್ಯಾದಿದಾರರು ಮನ್ವಿತ್ ರವರನ್ನು ಚಿಕಿತ್ಸೆಯ ಬಗ್ಗೆ ವಾಹನವೊಂದರಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮನ್ವಿತ್ ನನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಕ್ರ: 10/2022 ಕಲo: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦2
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಶೋಕ್ ಪ್ರಾಯ:38 ವರ್ಷ ತಂದ; ಪುರುಷೋತ್ತಮ ಗೌಡ ವಾಸ; ಬಲಿಪಗುಡ್ಡೆ ಮನೆ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ರವರು ರಿಕ್ಷಾ ಚಾಲಕಾಗಿದ್ದು ಪ್ರಸ್ತುತ ಕೊಕ್ಕಡ ಗ್ರಾಮದ ಬಲಿಪಗುಡ್ಡೆ ಗಿರಿಯಪ್ಪ ಗೌಡ ರವರ ಬಾಬ್ತು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರುವುದಾಗಿದೆ. ದಿನಾಂಕ:13-01-2022 ರಂದು ಮದ್ಯಾಹ್ನ 1.30 ಗಂಟೆಗೆ ಪಿರ್ಯಾದುದಾರರು ತನ್ನ ಸ್ವಂತ ಕೆಲಸದ ಬಗ್ಗೆ ಪುತ್ತೂರಿಗೆ ಹೋಗುವರೇ ತನ್ನ ಆಟೋ ರಿಕ್ಷಾವನ್ನು ಕೊಕ್ಕಡ ಗಾಮದ ಉಪ್ಪಾರಪಳಿಕೆ ಸತೀಶ್ ಎಂಬವರ ಅಂಗಡಿಯ ಎದುರು ನಿಲ್ಲಿಸಿ ಮನೆಯ ಹಾಗೂ ರಿಕ್ಷಾದ ಕೀ ಗೊಂಚಲನ್ನು ರಿಕ್ಷಾದಲ್ಲಿ ಇಟ್ಟು ಹೋಗಿದ್ದು ಪಿರ್ಯಾದುದಾರರು ವಾಪಾಸು ಬಂದು ಮನೆಗೆ ಹೋಗುವರೇ ರಿಕ್ಷಾದ ಬಳಿ ಬಂದಾಗ ಮನೆಯ ಹಾಗೂ ರಿಕ್ಷಾದ ಕೀ ಕಾಣದೇ ಇದ್ದು ಸಂಶಯಗೊಂಡು ಮನೆಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಮನೆಯ ಎದುರಿನ ಬೀಗ ತೆರೆದು ಒಳನುಗ್ಗಿ ಮನೆಯ ರೂಮ್ ನಲ್ಲಿದ್ದ ಗಾದ್ರೇಜ್ ನ ಕಪಾಟನ್ನು ತೆರೆದು ಅದರೊಳಗಿದ್ದ 4 ಪವನ್ ತೂಕದ ಕರಿಮಣಿ ಸರ-1 ಒಂದು ಪವನ್ ತೂಕದ ಮಗುವಿನ ಕೊರಳ ಚೈನ್-2, ಅರ್ಧ ಪವನ್ ತೂಕದ ಕಿವಿ ಒಲೆ ಒಂದು ಜೊತೆ ಮತ್ತು ಒಂದು ಗ್ರಾಂ ತೂಕದ ಉಂಗುರ-3. ವನ್ನು ಯಾರೋ ಕಳ್ಳರು ದಿನಾಂಕ;13-01-2022 ರಂದು 13.30 ಗಂಟೆಯಿಂದ 16.30 ಗಂಟೆಯ ಮದ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 1,60,000 ಆಗಬಹುದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 06/2022 ಕಲಂ:454,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅಪ್ಸ ಪ್ರಾಯ 25 ವರ್ಷ ತಂದೆ:ಮಹಮ್ಮದ್ ಕೆ ವಾಸ:ಕೊಳ್ಳೆಜಾಲ್ ಮನೆ ಹಿರೇಬಂಡಾಡಿ ಗ್ರಾಮ ಪುತ್ತೂರು ತಾಲೂಕು ರವರ ತಂದೆ ಸ್ವಂತ ಲಾರಿಯನ್ನು ಹೊಂದಿದ್ದು ದಿನಾಂಕ 13-10-2021 ರಂದು ತನ್ನ ಮನೆಯಾದ ಹಿರೇಬಂಡಾಡಿಯಿಂದ ಪಿರ್ಯಾದುದಾರರನ್ನು ಕೆ.ಎ 21 ಇ ಎ 2811 ನೇ ಮೊಟಾರು ಸೈಕಲ್ ನಲ್ಲಿ ಕುಳ್ಳಿರಿಸಿಕೊಂಡು ಹೊರಟು ಉಪ್ಪಿನಂಗಡಿ ಗ್ರಾಮದ ಗಾಂಧಿಪಾರ್ಕ್ ಎಂಬಲ್ಲಿರುವ ಜೈನ್ ಸ್ವೀಟ್ ಬಳಿಯಲ್ಲಿ ಸಂಜೆ 5.00 ಗಂಟೆಗೆ ಸದ್ರಿ ಮೊಟಾರು ಸೈಕಲನ್ನು ನಿಲ್ಲಿಸಿ ಬೈಕ್ ನ ಕೀಯನ್ನು ಪಿರ್ಯಾದುದಾರರಲ್ಲಿ ನೀಡಿ ಬೈಕನ್ನು ಪೇಟೆಗೆ ಬಂದಾಗ ನೋಡಿಕೊಳ್ಳುವಂತೆ ಹೇಳಿ ಪಿರ್ಯಾದುದಾರರ ತಂದೆ ಲಾರಿಯಲ್ಲಿ ಬಳ್ಳಾರಿಗೆ ಹೋಗಿದ್ದು ದಿನಾಂಕ 14-01-2022 ರಂದು ಬೆಳಿಗ್ಗೆ 09.30 ಗಂಟೆಗೆ ಪಿರ್ಯಾದುದಾರರು ಪೇಟೆಗೆ ಬಂದು ಮೊಟಾರು ಸೈಕಲ್ ನಿಲ್ಲಿಸಿದ ಸ್ದಳದಲ್ಲಿ ಹಾಗೂ ಸುತ್ತ ಮುತ್ತ ಪರಿಶೀಲಿಸಿದಲ್ಲಿ ಬೈಕ್ ಪತ್ತೆಯಾಗದೇ ಇದ್ದು ಬೈಕ್ ಕಳವಾಗಿರುವುದು ಕಂಡು ಬಂದಿದ್ದು ಸದ್ರಿ ಕಳವಾದ ಬೈಕ್ ನ ಅಂದಾಜು ಮೌಲ್ಯ ರೂ 75,000/- ಆಗಬಹುದ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 13/2022 ಕಲಂ:379 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬತ್ತಲು ವೆಂಕಟೇಶ್ವರಲು ಪ್ರಾಯ 30 ವರ್ಷ ತಂದೆ:ವೆಂಕಟೇಶ್ವರಲು ವಾಸ:1-133, ಮುಂಡ್ಲಮೂರು ಮಂಡಲಂ ಕೋಮ್ಮವರಂ ಗ್ರಾಮ ಇದರ ಅಂಚೆ ಪ್ರಕಾಶಂ ಜಿಲ್ಲೆ ಆಂದ್ರಪ್ರದೇಶ ರಾಜ್ಯ ಎಂಬುವರು ಅವರ ಹೆಂಡತಿ ಮತ್ತು ಮಕ್ಕಳೊಂದಿಗೆ ಮಂಗಳೂರು-ಬೆಂಗಳೂರು ರಾ.ಹೆದ್ದಾರಿ ಕಾಮಗಾರಿ ಕೆಲಸಕ್ಕಾಗಿ ಬಂದು ಕಡಬ ತಾಲೂಕು ಕೊಣಾಲು ಗ್ರಾಮದ ಆರ್ಲ ಎಂಬಲ್ಲಿರುವ ಪಾಪಚ್ಚನ್ ಎಂಬವರ ಮನೆಯಲ್ಲಿ ವಾಸವಾಗಿ ಆಂದ್ರಪ್ರದೇಶದ ಕೆ.ಎನ್.ಆರ್.ಎಲ್ ಕನ್ ಸ್ಟ್ರಕ್ಷನ್ ಕಂಪೆನಿಯಲ್ಲಿ ರಸ್ತೆಯ ಒಳ ಚರಂಡಿ ವಿಭಾಗದ ಕೆಲಸ ಮಾಡಿಕೊಂಡು ಇರುವುದಾಗಿದೆ. ನಮ್ಮ ಕೋಣೆಯ ಪಕ್ಕ ತಗಡು ಶೀಟ್ ನ ಕಟ್ಟಡದಲ್ಲಿ ಕೆಲಸ ಮಾಡು ಬಿಹಾರ ರವರು ವಾಸವಿದ್ದು, ದಿನಾಂಕ:13.01.2022 ರಂದು ಪಿರ್ಯಾದಿದಾರರು ಕೆಲಸ ಮುಗಿಸಿ ಪಿರ್ಯಾದಿಯ ಬಾಬ್ತು ಮೋಟಾರ್ ಸೈಕಲ್ ನಂಬ್ರ ಎಪಿ.39.ಕೆಇ.8554ನೇ ಪಲ್ಸರ್ ಎನ್.ಎಸ್ 25 ನು ಹೊರಗಡೆ ನಿಲ್ಲಿಸಿ ರಾತ್ರಿ ಊಟ ಮಾಡಿ 10.30 ಗಂಟೆಗೆ ಮಲಗಿದ್ದವರು, ದಿನಾಂಕ:14.01.2022 ರಂದು 03.30 ಗಂಟೆಗೆ ಪಿರ್ಯಾದಿಯ ರೂಮಿನ್ ಎದುರುಗಡೆ ಬೈಕನಿಂದ ಹೆಲ್ಮೇಟ್ ಬಿದ್ದ ಶಬ್ದ ಕೇಳಿ ಎದ್ದು ಹೊರಗಡೆ ಬಂದು ನೋಡಿದಾಗ ಬೈಕ್ ನ ಬಳಿ ಒಬ್ಬಾತನೂ ನಿಂತುಕೊಂಡಿದ್ದು, ಮತ್ತೊಬ್ಬ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಕುಳಿತ್ತಿರುವುದು ವಾಹನಗಳ ಸಂಚಾರದ ಬೆಳಕಿನಿಂದ ಕಂಡು ಮತ್ತೊಬ್ಬನು ರೂಮಿನ್ ಬಾಗಿಲು ಬಳಿ ನಿಂತುಕೊಂಡಿದ್ದವನು. ಪಿರ್ಯಾದಿಯಲ್ಲಿ ಬೈಕ್ ನ ಕೀ ಕೊಡುವಂತೆ ಬೆದರಿಸಿ ಆತನು ಕೈಯಲ್ಲಿ ಹಿಡಿದುಕೊಂಡಿದ್ದ. ಸುತ್ತಿಗೆಯನ್ನು ಪಿರ್ಯಾದಿ ಕಡೆ ಬಿಸುತ್ತಾ ಪಿರ್ಯಾದಿ ಧರಿಸಿದ ಶರ್ಟ್ ನ ಕಿಸೆಗೆ ಕೈ ಹಾಕಿ ರೂ 200/- ನ್ನು ಎಳೆದುಕೊಂಡು ಹೆದರಿಸಿ ರೂಮಿನ ಒಳಗಡೆ ಹೋಗಿ ಪಿರ್ಯಾದಿಯ ಸೀಮ್ ನಂಬ್ರ 9731220770 ನೇ ಇದ್ದ Redmi Company Mobile, ಇದರ ಅಂದಾಜು ಮೌಲ್ಯ ರೂ 10,000/-, ಸಿಮ್ ನಂಬ್ರ 9676323554ನೇ ಇದ್ದ Nokia Company Keypad Mobile ಇದರ ಅಂದಾಜು ಮೌಲ್ಯ 1000/-, ನಂತರ ನನ್ನ ಕೆಲಸದಾಳು ವೆಂಟ್ರಾವು ಇವರ ಸಿಮ್ ನಂಬ್ರ 7981951150 ಇದ್ದ Motorolo Company ಮೊಬೈಲ್ ಇದರ ಅಂದಾಜು ಮೌಲ್ಯ 5000/-, ಪರಮೇಶ್ ಎಂಬವರ ಸಿಮ್ ನಂಬ್ರ 7411843812ನೇ ಇದ್ದ Redmi Cmpany ಮೊಬೈಲ್ ಇದರ ಅಂದಾಜು ಮೌಲ್ಯ 4000/- ಆಗಬಹುದು. ಹಾಗೂ ಪಿರ್ಯಾದಿಯ Black Color ನ ಬ್ಯಾಗ್ ನಲ್ಲಿದ್ದ ರೂ 25,000/-, ವಿನೋದ್ ಎಂಬವರ ಗುಲಾಬಿ ಬಣ್ಣದ ಬ್ಯಾಗ್ ನಲ್ಲಿದ್ದ ರೂ 8000/-, ಪ್ರಮೋದ್ ಎಂಬಾತನ ಬ್ಯಾಗ್ ನಲ್ಲಿದ್ದ ರೂ 2000/- ನಗದನ್ನು ಸುಲಿಗೆ ಮಾಡಿಕೊಂಡು, ಸುತ್ತಿಗೆಯಂತಿದ್ದ ಆಯುಧದಿಂದ ಪಿರ್ಯಾದಿಯ ಬಲ ಕೈಗೆ ಹೊಡೆದು ನಂತರ ಹೊರಗಡೆ ನಿಲ್ಲಿದ್ದ ಪಿರ್ಯಾದಿಯ ಎಪಿ.39.ಕೆಇ.8554ನೇ ಪಲ್ಸರ್ ಎನ್.ಎಸ್ 25 ನೇ ಮೋಟಾರು ಸೈಕಲ್ ನ್ನು ಅವರುಗಳು ದೋಚಿಕೊಂಡು ಹೋಗಿದ್ದು, ಅದರ ಅಂದಾಜು ಮೌಲ್ಯ ರೂ 1,30,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 14/2022 ಕಲಂ:394 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಿನೇಶ ಪ್ರಾಯ:36 ವರ್ಷ ತಂದೆ; ದಿ/ ಚಂದಪ್ಪ ಪೂಜಾರಿ ವಾಸ; ಅಂಟೆಮಜಲು ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ:14-01-2022 ರಂದು ಬೆಳಿಗ್ಗೆ 08.30 ಗಂಟೆ ಸಮಯಕ್ಕೆ ದಿನೇಶ ಮೂಲ್ಯ (38) ಎಂಬಾತನು ಅನ್ನಪೂರ್ಣ ಛತ್ರದ ಹಿಂಭಾಗದಲ್ಲಿ ಗಾರೆ ಕೆಲಸ ಮಾಡುತ್ತಿರುವ ಸಮಯ ಸುಮಾರು 09.15 ಗಂಟೆಗೆ ಆಕಸ್ಮಿಕವಾಗಿ ಗೋಡೆಯಿಂದ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅಂಬುಲ್ಯಾನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ 10.15ಗಂಟೆಗೆ ಕರೆದುಕೊಂಡು ಹೋದಲ್ಲಿ ವೈದ್ಯ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 05/2022 ಕಲಂ: 174 ಸಿಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪ್ರಸಾದ್ (38 ವರ್ಷ) , ತಂದೆ: ದಿ ಅಣ್ಣು ಪೂಜಾರಿ, ವಾಸ: ಏಳ್ತಾರು ಮನೆ ಕೊಯಿಲ ಗ್ರಾಮ ಮತ್ತು ಅಂಚೆ ಆತೂರು ಕಡಬ ತಾಲೂಕು ರವರ ತಮ್ಮ ಪ್ರಮೋದ್ ಪ್ರಾಯ 35 ವರ್ಷ ತಂದೆ: ದಿ. ಅಣ್ಣು ಪೂಜಾರಿ ವಾಸ: ಶಾಂತಿನಗರ ಮನೆ ಸವಣೂರು ಅಂಚೆ ಮತ್ತು ಗ್ರಾಮ , ಪುತ್ತೂರು ತಾಲೂಕು ಎಂಬಾತನು ವಾಹನಗಳಿಗೆ ಪೈಂಟಿಂಗ್ ಮಾಡುವ ವೃತ್ತಿಯನ್ನು ಮಾಡಿಕೊಂಡಿದ್ದು, ಸುಮಾರು 4 ವರ್ಷಗಳಿಂದ ಸವಣೂರಿನಲ್ಲಿರುವ ಜಾಗ ಹಾಗೂ ಮನೆಯನ್ನು ಮಾರಾಟ ಮಾಡಿದ್ದು, ನಂತರ ಪಿರ್ಯಾದಿದಾರರ ತಮ್ಮ ಪ್ರಮೋದ್ ನು ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸುಮಾರು 7 ವರ್ಷಗಳ ಹಿಂದೆ ಕೆಮ್ಮಾಯಿಯ ಕೊಡಿಮರ ಎಂಬಲ್ಲಿಂದ ರತ್ನಾವತಿ ಎಂಬವರನ್ನು ವಿವಾಹವಾಗಿದ್ದು ಅವರ ವೈವಾಹಿಕ ಜೀವನದಲ್ಲಿ ಸರಿ ಹೊಂದಾಣಿಕೆ ಇಲ್ಲದೇ ಇದ್ದುದರಿಂದ ಅವರಿಬ್ಬರೂ ವಿಚ್ಚೇದನ ಪಡೆದು ಬೇರೆ ಬೇರೆಯಾಗಿ ವಾಸವಾಗಿದ್ದರು. ಪಿರ್ಯಾದಿದಾರರ ತಮ್ಮನು ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದು ಅಲ್ಲದೇ ಸುಮಾರು 10 ವರ್ಷಗಳಿಂದ ಮೂರ್ಚೆ ರೋಗದಿಂದ ಬಳಲುತ್ತಿದ್ದು, ಪಿರ್ಯಾದಿದಾರರ ಮನೆಗೂ ಕೂಡ ಸುಮಾರು 1 ವರ್ಷಗಳಿಂದ ಬಾರದೇ ಇದ್ದು ಹಾಗೂ ದೂರವಾಣಿ ಸಂಪರ್ಕ ಕೂಡ ಇಲ್ಲದೇ ಇದ್ದು ದಿನಾಂಕ: 14-01-2022 ರಂದು ಬೆಳಿಗ್ಗೆ 8:45 ಗಂಟೆಗೆ ಪಿರ್ಯದಿದಾರರು ತಮ್ಮನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಿರ್ಯಾದಿದಾರರು ಪುತ್ತೂರಿಗೆ ಬಂದು ತಮ್ಮನ ಮೃತ ದೇಹವನ್ನು ಗುರುತಿಸಿದ್ದು, ಪ್ರಮೋದ್‌ನು ಅತಿಯಾದ ಮದ್ಯಸೇವನೆ ಮಾಡುತ್ತಿದ್ದವನು ಮೂರ್ಚೆ ರೋಗ ಕಾಯಿಲೆ ಅಥವಾ ಇನ್ನಾವುದೋ ಕಾಯಿಲೆಯಿಂದ ಬಳಲುತ್ತಿದ್ದವನು ದಿನಾಂಕ: 13-01-2022 ರಂದು ರಾತ್ರಿಯಿಂದ ಈ ದಿನ ದಿನಾಂಕ: 14-01-2022 ರಂದು ಬೆಳಿಗ್ಗೆ 08:45 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಯು ಡಿ ಆರ್: 03/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಶಾರದಾ, ಪ್ರಾಯ 36 ವರ್ಷ, ಗಂಡ: ಆನಂದ, ವಾಸ: ಮೈರ್ಪಳ್ಳ ಮನೆ, ಅಮರಮುಡ್ನೂರು ಗ್ರಾಮ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ಆನಂದ ಪ್ರಾಯ 48 ವರ್ಷ, ತಂದೆ: ದಿ: ಐತ ಎಂಬವರು ಅವರ ವಾಸದ ಮನೆಯಲ್ಲಿ ಒಬ್ಬರೇ ಇದ್ದು, ದಿನಾಂಕ 13.01.2022 ರಂದು ಸಂಜೆ 5-00 ಗಂಟೆಯ ವೇಳೆಗೆ ಅವರ ಸ್ವಾಧೀನದ ಕೃಷಿ ತೋಟದಲ್ಲಿರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದು, ದಿನಾಂಕ 14.01.2022 ರಂದು ಮಧ್ಯಾಹ್ನ 2-00 ಗಂಟೆಯ ವೇಳೆಗೆ ಅವರ ಮನೆಗೆ ಅವರ ಅಕ್ಕ ಯಮುನಾ ರವರು ಬಂದಾಗ ಮನೆ ಬಾಗಿಲು ತೆರೆದಿದ್ದು, ಆನಂದನು ಕಾಣದೇ ಇದ್ದಾಗ ಮನೆಯ ಪರಿಸರದಲ್ಲಿ ಹುಡುಕಾಡಿದಾಗ ಮನೆಯ ಎದುರಿನ ತೋಟದಲ್ಲಿರುವ ಕೆರೆಯಲ್ಲಿ ಆನಂದನ ಮೃತದೇಹವು ತೇಲುತ್ತಿರುವುದು ಕಂಡು ಬಂದಿದ್ದು, ಹಾಗೂ ತೆಂಗಿನ ಕಾಯಿಗಳು ತೇಲುತ್ತಿರುವುದು ಕಂಡು ಬಂದಿದ್ದು ಆನಂದನು ಕೆರೆಯ ಬದಿಯಲ್ಲಿರುವ ತೆಂಗಿನ ಮರ ಏರಿ ಕಾಯಿ ಕೀಳುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆರೆಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 03/2022. ಯಂತೆ ಪ್ರಕರಣ ದಾಖಲಾಗಿರುತ್ತದೆ