ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಘುಪತಿ (41) ಬಿ.ಸಂ 6484 ತಂದೆ:ತಿಮ್ಮೇ ಗೌಡ ವಾಸ:ಪದುಮನ ಹಳ್ಳಿ ಕಟ್ಟಾಯ ಹೋಬಳಿ ಗೋರೂರು ಅಂಚೆ,ಹಾಸನ ತಾಲೂಕು ಮತ್ತು ಜಿಲ್ಲೆ ರವರು ಧರ್ಮಸ್ಥಳ ಬಸ್ ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು,  ಬಸ್ ನಂಬ್ರ KA-21-F-0198  ನೇಯದ್ದನ್ನು  ಚಲಾಯಿಸಿಕೊಂಡು ದಿನಾಂಕ 13.02.2021 ರಂದು ಧರ್ಮಸ್ಥಳ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ತುಂಬಿಕೊಂಡು ಸುಬ್ರಹ್ಮಣ್ಯ ಕಡೆಗೆ ಹೊರಟು  ಕಡಬ ತಾಲೂಕು ಶಿರಾಡಿ ಗ್ರಾಮದ ರಾ.ಹೆ 75 ರ ಅಡ್ಡಹೊಳೆ ಎಚ್.ಪಿ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಫಿರ್ಯಾದಿದಾರರ ಎದುರಿನಿಂದ ಅಂದರೆ ಗುಂಡ್ಯ ಕಡೆಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ KA-19-MF-386 ನೇ ನಂಬ್ರದ ಕಾರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬಸ್ಸಿನ ಬಲಬದಿಯ ಮುಂಭಾಗದ ಬಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಬಸ್ ಜಖಂ ಗೊಂಡು ಕಾರು ಚಾಲಕ ಮಹಮ್ಮದ್ ಅನಾಸ್ ರವರ ತಲೆಗೆ ಹಾಗೂ ಕಾಲಿಗೆ ಗಾಯವಾಗಿದ್ದು ,ಕಾರಿನಲ್ಲಿದ್ದ ಫಾಯಿಝಾ,ಮರಿಯಮ್ಮ,ಮಹಮ್ಮದ್ ಮುರ್ತಾಲ್ ಮಕ್ಕಳಾದ ಮಹಮ್ಮದ್ ಸಹಾನ್,ಮರಿಯಮ್ಮ ಜುಲ್ಫಾ,ಆಯಿಸಾತ್ ಜಝಾ ರವರೆಲ್ಲರಿಗೂ ತಲೆಗೆ ಗಾಯವಾಗಿರುತ್ತದೆ. ಗಾಯಗೊಂಡ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರೆಲ್ಲರನ್ನು ಚಿಕಿತ್ಸೆಯ ಬಗ್ಗೆ 108 ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಕಡೆಗೆ ಕಳುಹಿಸಿಕೊಟ್ಟಿದ್ದು,  ಮಂಗಳೂರು ಐಲ್ಯಾಂಡ್ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿರುವ ವಿಷಯ ಫಿರ್ಯಾಧಿದಾರರಿಗೆ ತಿಳಿದಿರುತ್ತೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 16/2021 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಿಯಾಜ್ ಪಾಷಾ, ಪ್ರಾಯ: 41 ವರ್ಷ ತಂದೆ: ದಿ. ಅಬ್ದುಲ್ ಜಬ್ಬಾರ್ ವಾಸ: ಬಳ್ಳಮಜಲು ಮನೆ ಕುರಿಯ ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು, ಹಾಲಿ ವಿಳಾಸ : ಪಂಪ್ ಹೌಸ್ ರಸ್ತೆ ಬೇಲೂರು  ನಗರ, ಬೇಲೂರು ತಾಲೂಕು ರವರು ಹೆಂಡತಿ ಶಕೀನಾ ಮತ್ತು ಮಕ್ಕಳೊಂದಿಗೆ ದಿನಾಂಕ: 12.02.2021 ರಂದು ಸದ್ರಿಯವರ ಬಾವನ ಮನೆಯಾದ ಬಳ್ಳಮಜಲುವಿಗೆ ಬಂದಿದ್ದು, ದಿನಾಂಕ: 13.02.2021 ರಂದು ಬಳ್ಳಮಜಲುವಿನಿಂದ ಬೇಲೂರಿಗೆ ಹೊರಟು ಫಿರ್ಯಾದಿದಾರರ ಬಾಬ್ತು ಕೆಎ-07-ಎಮ್-8088 ನೇ ಕಾರನ್ನು ಕುರಿಯ ಸೊಸೈಟಿಯಿಂದ ಸ್ವಲ್ಪ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಆ ಸಮಯ ಫಿರ್ಯಾದಿದಾರರ ಹೆಂಡತಿ ಮತ್ತು ಮಕ್ಕಳು ಮತ್ತು  ಫಿರ್ಯಾದಿದಾರರ ಬಾವ ಅಬ್ದುಲ್ ಜಬ್ಬಾರ್‌ರವರ ಮನೆಯಿಂದ ನಡೆದುಕೊಂಡು ಕಾರಿನ ಬಳಿ ಬಂದು ಪಿರ್ಯಾದಿದಾರರ ಮಗ ಮಹಮ್ಮದ್ ನುಬೈದ್‌ನು ಕಾರಿನ ಹಿಂದಿನಿಂದ ಬಂದು ಕಾರಿನ ಬಲಬದಿಗೆ ಬರುತ್ತಿದ್ದಂತೆ ಪರ್ಪುಂಜ ಕಡೆಯಿಂದ ಪುತ್ತೂರು ಕಡೆಗೆ ಕೆಎ-12-ಎನ್-2639 ನೇ ಕಾರನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಮಹಮ್ಮದ್ ನುಬೈದ್‌ನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಣಾಮ ನುಬೈದನು ಕಾರಿನಿಂದ ಸ್ವಲ್ಪ ಮುಂದೆ ಡಾಮಾರು ರಸ್ತೆಗೆ  ಬಿದ್ದಿದ್ದು, ಕೂಡಲೇ ಫಿರ್ಯಾದಿದಾರರು ನುಬೈದ್‌ನನ್ನು ಎಬ್ಬಿಸಿ ಉಪಚರಿಸಿ ನೋಡಿದಾಗ ನುಬೈದ್‌ನ ಬಲಕಾಲಿನ ತೊಡೆಗೆ ರಕ್ತ ಗಾಯ  ಮತ್ತು ಎಡ ಹಣೆ ಹಾಗೂ ಮೂಗಿನ ಬಳಿ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಅಪಘಾತ ಉಂಟು ಮಾಡಿದ ಕಾರಿನ ಚಾಲಕ ಕೂಡಾ ಕಾರನ್ನು ನಿಲ್ಲಿಸಿ ಫಿರ್ಯಾದಿಧಾರರ ಬಳಿ ಬಂದಿದ್ದು, ನಂತರ ಫಿರ್ಯಾದಿದಾರರು, ಅವರ ಪತ್ನಿ ಮತ್ತು ಕಾರಿನ ಚಾಲಕ ನವೀನ್‌ಕುಮಾರ್  ನುಬೈದ್‌ನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ನುಬೈದ್‌ನನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಆ.ಕ್ರ 14/21 ಕಲಂ: 279,337  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಶ್ರೀಮತಿ ಲಲಿತಾ ಪ್ರಾಯ 86 ವರ್ಷ ಗಂಡ ಲೇ ನಾರಾಯಣ ಸಾಲ್ಯಾನ ಅರ್ಕುಳ ಬಯಲು ಮನೆ ಅರ್ಕುಳ ಗ್ರಾಮ ಮಂಗಳೂರು ತಾಲುಕು  ರವರು ಮತ್ತು  ಅವರ ಮಗಳು ಯಶೋದ ಹಾಗೂ ನೆರೆಯ ವಾಸಿ ಶ್ರೀಮತಿ ರತಿರವರೊಂದಿಗೆ ದಿನಾಂಕ 14.02.2021 ರಂದು ಫರಂಗೀಪೇಟೆಯಲ್ಲಿರುವ ಸ್ವಯಂ ಭೂ ವರದೇಶ್ವರ ದೇವಸ್ಥಾನದ ವಾರ್ಷಿಕಾ ಜಾತ್ರೆಗೆಂದು ದೇವಸ್ಥಾನಕ್ಕೆ ಬಂದಿದ್ದು ದೇವಸ್ಥಾನದಲ್ಲಿ ಮಹಾಪೂಜೆ ನೋಡಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಸ್ವೀಕರಿಸಿ ಕೈ ತೊಳೆಯುವರೇ ಹೋಗುವ ಸಮಯ ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ 2 ಎಳೆಯ ಚಿನ್ನದ ಚೈನ್ ಇಲ್ಲದೇ ಇದ್ದು ಅಲ್ಲಿಯೇ ಪಿರ್ಯಾದುದಾರರು ಹುಡುಕಾಡಿದ್ದಲ್ಲಿ ಸಿಕ್ಕಿರುವುದಿಲ್ಲ ,ಪಿರ್ಯಾದುದಾರರ ಚೈನ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆ ಇದ್ದು ಕಳವಾದ ಚಿನ್ನದ ಮೌಲ್ಯ ರೂ 78,000/- ಆಗಬಹುದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 25/2021 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರವೀಣ ಕುಮಾರ್ ಪ್ರಾಯ 56 ವರ್ಷ ತಂದೆ: ಯಾಧವ ಕೆ ವಾಸ: ಕೆಡೆಂಜಿಗುತ್ತು ಮನೆ, ಕುದ್ಮಾರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ರವರು ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್  ಇದರ ತಾಲೂಕು ಸಮಿತಿ ಅಧ್ಯಕ್ಷನಾಗಿದ್ದು 12.02.2021 ರಂದು ಸಂಕ್ರಮಣವಾದುದರಿಂದ ಪಿರ್ಯಾದಿದಾರರು ಸ್ನೇಹಿತರಾದ ದಯಾನಂದ ಮತ್ತು ಸದಾನಂದರವರೊಂದಿಗೆ ಪೂಜೆಗೆಂದು ಬೆಳಿಗ್ಗೆ 07.30 ಗಂಟೆಗೆ ಕ್ಷೇತ್ರದ ಧರ್ಮಚಾವಡಿಗೆ ಬಂದಾಗ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲುರವರು  ನೀನು ಒಳಗೆ ಬರಬೇಡ ನಿನ್ನನ್ನು ಹೊರಗೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದು, ನಂತರ  ಪಿರ್ಯಾದಿದಾರರು ಪ್ರವೇಶ ಬಾಗಿಲಿನ ಒಳಗೆ ಹೋಗುತ್ತಿದ್ದಂತೆ ಜಯಂತ ನಡುಬೈಲುರವರೊಂದಿಗೆ ಇದ್ದ ದೀಪಕ್, ಲಕ್ಷ್ಮಣ, ಪ್ರವೀಣ್‌ರವರು ಧರ್ಮ ಚಾವಡಿಯ ಒಳಗೆ ಹೋಗದಂತೆ ತಡೆದು, ಜಯಂತ ನಡುಬೈಲು ರವರು ದೀಪಕ್, ಲಕ್ಷ್ಮಣ ಪ್ರವೀಣ್‌ರವರು ಮೂವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ಸ್ವಲ್ಪ ಹೊತ್ತಿನ ನಂತರ ಪಿರ್ಯಾದಿದಾರರು ಹೊರಗೆ ಧರ್ಮ ಚಾವಡಿಯ ಉತ್ತರ ದ್ವಾರದ ಬಳಿಗೆ ಬಂದಾಗ ಸುಮಾರು 09.00 ಗಂಟೆಗೆ ಜಯಂತ ನಡುಬೈಲುರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವನೇ ಎಲ್ಲಾ ಮಾಡುವುದು ಅವನಿಗೆ ಹೊಡೆಯಿರಿ ಎಂದು ಹೇಳಿದಾಗ ಅವರೊಂದಿಗೆ ಇದ್ದ ದೀಪಕ್ ಲಕ್ಷ್ಮಣ ಮತ್ತು ಪ್ರವೀಣರು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದಾಗ ಅಲ್ಲಿದ್ದ ಪೊಲೀಸರು ಬಂದು ತಡೆದಿದ್ದು, ಆಗ ಜಯಂತ ನಡುಬೈಲು ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಈ ಹಲ್ಲೆಯಿಂದ ಪಿರ್ಯಾದಿದಾರರು ನೋವು ಜಾಸ್ತಿಯಾದ ಕಾರಣ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದು, ಈ ಘಟನೆಗೆ ಶ್ರೀಕ್ಷೇತ್ರ ನಂದನ ಬಿತ್ತಿಲ್ ಗೆಜ್ಜೆಗಿರಿಯ ಯಜಮಾನರಾದ ಶ್ರೀಧರ ಪೂಜಾರಿಯವರ ಪರವಾಗಿ ಮಾತನಾಡಿರುವುದಕ್ಕೆ ಈ ಕೃತ್ಯ ನಡೆಸಿರುವುದಾಗಿದೆ ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 13/21 ಕಲಂ: 341, 504, 323, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಶೇಖರ ಕೆ (38) ತಂದೆ: ಬಾಬು ಕೆ ಕುತ್ತಮೂಟ್ಟೆ ಮನೆ, ಉಬರಡ್ಕ ಮಿತ್ತೂರು ಗ್ರಾಮ ಸುಳ್ಯ ತಾಲೂಕು  ರವರು ಆಟೋ ರಿಕ್ಷಾ ಚಾಲಕರಾಗಿದ್ದು ಅದರಂತೆ ದಿನಾಂಕ 13.02.2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಆಟೋ ರಿಕ್ಷಾ ಸ್ಟ್ಯಾಂಡ್ ಬಳಿ ಬಾಡಿಗೆಗೆ ಎಂದು ನಿಲ್ಲಿಸಿರುವ ಸಮಯ ಒಬ್ಬ ವ್ಯಕ್ತಿಯು ಆಟೋ ರಿಕ್ಷಾದ ಬಳಿ ಬಂದು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಪಿರ್ಯಾದುದಾರರು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದು ಸದ್ರಿ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಸಮಯ ಸುಮಾರು 14:15 ಗಂಟೆಗೆ ಮೃತ ಪಟ್ಟಿರುವ ವಿಷಯ ತಿಳಿಯಿತು. ನಂತರ ಆತನ ಹೆಸರು ಗುಂಟಿ ರೆಡ್ಡಪ್ಪ ಆಂದ್ರಪ್ರದೇಶದ ಶಿವಾಜಿನಗರದ ಮರನಪಲ್ಲೆ ಯ ನಿವಾಸಿ ಆತನು ಸುಳ್ಯ ಗ್ಲೋಬಲ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ  ಎಂಬುದಾಗಿ ನಂತರ ತಿಳಿದ್ದಿದ್ದು ಸದ್ರಿ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 10/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-02-2021 11:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080