ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುರೇಶ್ ಕುಲಾಲ್ ಪ್ರಾಯ : 48 ತಂದೆ: ದಿ|| ನಾರಾಯಣ ಮೂಲ್ಯ ವಾಸ: ವಿದ್ಯಾ ನಿಲಯ  ಮನೆ  ಪುದು ಅಂಚೆ ತುಂಬೆ ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 09-04-2021 ರಂದು ಪಿಗ್ಮಿ ಕೆಲಸದ ನಿಮಿತ್ತ ತನ್ನ ಬಾಬ್ತು KA-70-E-5454 ನೇ ಜ್ಯುಪಿಟರ್ ಸ್ಕೂಟರಿನಲ್ಲಿ  ಪಾಣೆಮಂಗಳೂರು ಕಡೆಯಿಂದ ಬೋಳಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೇಲ್ಕಾರ್  ಎಂಬಲ್ಲಿಗೆ ತಲುಪಿದಾಗ ಮೆಲ್ಕಾರ್ ಕೆ.ವಿ ಶೆಣೈ ಪೆಟ್ರೋಲ್ ಬಂಕ್ ಕಡೆಯಿಂದ KA-21-J-2640 ನೇ ಮೋಟಾರ್ ಸೈಕಲನ್ನು ಅದರ ಸವಾರ ರಾಜೇಶ್ ರವರು ಅತೀ ವೇಗ ಅಜಾಗರೂಕತೆ ನಿರ್ಲಕ್ಷ್ಯತನದಿಂದ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲ ಕಾಲಿನ ಪಾದಕ್ಕೆ  ಗುದ್ದಿದ ಗಾಯ, ಬಲಕೈ ಮೊಣ ಗಂಟಿಗೆ ತರಚಿದ ಗಾಯವಾಗಿ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 42/2021 ಕಲಂ 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಮ್ರಾನ್ ಖಾನ್ ಪ್ರಾಯ: 39 ವರ್ಷ  ತಂದೆ: ದಿ|| ಬಾಬು ಖಾನ್ ವಾಸ: 1-228 ನೆತ್ತಿಲಪದವು ನರಿಂಗಾನ ಅಂಚೆ ಮತ್ತು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 13-4-2021 ರಂದು ಅವರ ತಮ್ಮನಾದ ಇಸ್ಲಾಂ ಖಾನ್ ಎಂಬವರ ಬಾಬ್ತು KA-19-EU-4168 ನೇ ಸ್ಕೂಟರಿನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಕಡೆಗೆ ಹೋಗುತ್ತಿದ್ದ ಸಮಯ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಗೂಡಿನಬಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಸ್ಕೂಟರ್ ಸವಾರರು ತಿರುವು ರಸ್ತೆಯಲ್ಲಿ ಸ್ಕೂಟರನ್ನು ಅತೀ ವೇಗ ಅಜಾಗರೂಕತೆ ಮತ್ತು  ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸವಾರ ಹಾಗೂ ಸಹ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸಹ ಸವಾರ ಇಮ್ರಾನ್ ಖಾನ್ ರವರ ಎಡಭುಜಕ್ಕೆ, ಎಡಬದಿ ಎದೆಗೆ ಹಾಗೂ ತಲೆಗೆ ಗುದ್ದಿದ ನೋವಾಗಿದ್ದು ಚಿಕಿತ್ಸೆಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 43/2021 ಕಲಂ 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶರತ್ , ಪ್ರಾಯ: 20  ವರ್ಷ, ತಂದೆ: ಧನಂಜಯ ಗೌಡ, ವಾಸ: ಅಲ್ಪೆ ಕೋಡಿ  ಮನೆ, ಐವತ್ತೋಕ್ಲು ಗ್ರಾಮ,, ಸುಳ್ಯ  ತಾಲೂಕು ರವರು ದಿನಾಂಕ 13.04.2021 ರಂದು  ಅವರ ಸ್ನೇಹಿತ್ ಲಿಖಿತ ಎಂಬವನೊಂದಿಗೆ ಡಿಯೋ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಕುಳಿತು ಕೊಂಡು ಹೋಗುವಾಗ ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಗಾಳಿಕೂಪು ಎಂಬಲ್ಲಿಗೆ ತಲುಪಿದಾಗ ಲಿಖಿತನು ಚಲಾಯಿಸುತ್ತಿದ್ದ  ಸ್ಕೂಟರ್  ನಂಬ್ರ ಕೆಎ 21 ಇಎ 6365 ನೇದರ ನಿಯಂತ್ರನ ತಪ್ಪಿ ರಸ್ತೆಯ ಎಡ ಬಾಗದ ಮಣ್ಣಿ ನ ರಸ್ತೆಯಲ್ಲಿ  ಸ್ಕಿಡ್ ಆಗಿ ಎಡ ಭಾಗಕ್ಕೆ ಸ್ಕೂಟರ್ ಸಮೇತ್ ಬಿದ್ದ ಪರಿಣಾಮ ಪಿರ್ಯಾದುದಾರರ ಎಡ ಕೈ ಮಣಿ ಗಂಟಿನ ಮೇಲ್ಬಾಗ ಮುರಿತದ ಗಾಯವಾಗಿದ್ದು ಕೊಡಲೇ ಆಂಬ್ಯುಲೇನ್ಸ್ ಒಂದರಲ್ಲಿ ಪಿರ್ಯಾದಿದಾರರನ್ನು ಮತ್ತು ಸ್ಕೂಟರ್ ಸವಾರನಾದ ಲಿಖಿತ ನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ ನಂಬ್ರ :05/2021  ,ಕಲಂ: 279, 337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ವಿಟ್ಲ ಪೊಲೀಸ್‌ ಠಾಣಾ ಪಿ ಎಸ್‌ ಐ ಹಾಗೂ ಸಿಬ್ಬಂದಿಯವರು ದಿನಾಂಕ:14-04-2021 ರಂದು ರೌಂಡ್ಸ್‌ ಕರ್ತವ್ಯ ಮಾಡುತ್ತಾ ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ಕೊಕ್ಕೆಪುಣಿ ಕ್ವಾಟರ್ಸ್‌ಗೆ ತಲುಪಿದಾಗ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿಯು ಕೈಯಲ್ಲಿ ಪಾಲಿಥೀನ್‌ ಚೀಲವನ್ನು ಹಿಡಿದುಕೊಂಡಿದ್ದವನನ್ನು ಪರಿಶೀಲನೆ ಮಾಡಿದಾಗ ಪಾಲಿಥೀನ್‌ ಚೀಲದ ಒಳಗೆ ಮದ್ಯ ತುಂಬಿದ 1]ಮೈಸೂರು ಲ್ಯಾನ್ಸರ್‌ ಕಂಪನಿಯ 90 ಎಂ ಎಲ್‌ನ ಟೆಟ್ರಾ ಪ್ಯಾಕೇಟ್‌ಗಳು-33 (ಇವುಗಳ ಅಂದಾಜು ಮೌಲ್ಯ 1155/- ರೂ) ,2]ವಿಂಡ್ಸರ್‌ ಡಿಲಕ್ಸ್‌ ವಿಸ್ಕಿ ಕಂಪೆನಿಯ 90 ಎಂಎಲ್‌ನ ಟೆಟ್ರಾ ಪ್ಯಾಕೆಟುಗಳು-06 (ಇವುಗಳ ಅಂದಾಜು ಮೌಲ್ಯ 210 ರೂ) ಪತ್ತೆ ಆಗಿರುವುದಾಗಿದೆ. ಹಾಗೂ ಆಪಾದಿತನ ಕಿಸೆಯಲ್ಲಿ ಮಧ್ಯ ಮಾರಾಟ ಮಾಡಿದ  80/-ರೂ ಇರುವುದು ಕಂಡು ಬಂದಿದ್ದು ಆತನ ಹೆಸರು ಭಾಸ್ಕರ ಎಂದು ತಿಳಿಸಿದ್ದು ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 55/2021  ಕಲಂ: 14 ಜೊತೆಗೆ 32(1),ಕಲಂ 15 ಜೊತೆಗೆ 32(2) (ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಶೋಭ ಪ್ರಾಯ 59 ವರ್ಷ ದ್ವಿತೀಯ ದರ್ಜೆ ಸಹಾಯಕರು  ಆಹಾರ ಶಾಖೆ  ಬಂಟ್ವಾಳ ರವರಿಗೆ ಬಂದ ಮಾಹಿತಿಯಂತೆ ದಿನಾಂಕ  14-04-2021 ರಂದು ಬಂಟ್ವಾಳ ತಾಲೂಕು  ಕಾವಳಪಡೂರು ಗ್ರಾಮದ  ಆಲಂಪುರಿ ಎಂಬಲ್ಲಿ  ಭದ್ರಾ ಗ್ಯಾಸ ಏಜೆನ್ಸಿಯಿಂದ  ಮನೆ ಮನೆ ವಿತರಣೆಯಾಗುವ   ಗ್ಯಾಸ್  ಸಿಲಿಂಡರ್  ನ್ನು ಆಲಂಪುರಿ ಎಂಬಲ್ಲಿ  ಗುಡ್ಡ ರಸ್ತೆಯಲ್ಲಿ  ನಿಲ್ಲಿಸಿ ಗ್ಯಾಸ್ ಸಿಲಿಂಡರ್ ನಿಂದ   ಇನ್ನೊಂದು ಗ್ಯಾಸ್ ಸಿಲಿಂಡರ್ ಗೆ  ರೀ ಪಿಲ್ಲಿಂಗ್  ಮಾಡುತ್ತಿದ್ದಾರೆ ಎಂಬುವುದಾಗಿ ಬಂದ ಮಾಹಿತಿಯಂತೆ ಕಾವಳಪಡೂರು ಗ್ರಾಮದ  ಆಲಂಪುರಿ ಎಂಬಲ್ಲಿಗೆ ಹೋದಾಗ  ಆಲಂಪುರಿ ಗುಡ್ಡ ಪ್ರದೇಶ ಮಣ್ಣು ರಸ್ತೆಯಲ್ಲಿ  ಒಂದು ವಾಹನವನ್ನು ನಿಲ್ಲಿಸಿದ್ದು  ಅಲ್ಲಿದ್ದ ಇಬ್ಬರ ಪೈಕಿ ಒಬ್ಬಾತ  ಓಡಿ ಹೋಗಿದ್ದು ಇನ್ನೊಬ್ಬನ ಹೆಸರು ಕೇಳಲಾಗಿ  ಜಯಪ್ರಕಾಶ್   ಎಂಬುವುದಾಗಿ ತಿಳಿಸಿದ್ದು  ಓಡಿ ಹೋದವನು  ರಾಮ ಚಂದ್ರ ಎಂದು ತಿಳಿಸಿದ್ದು  ಆರೋಪಿಗಳು  3 ಸಿಲಿಂಡರ್ ನಿಂದ   ಗ್ಯಾಸನ್ನು  ರೀಪಿಲ್ಲಿಂಗ್  ಮಾಡಿರುವುದು ಕಂಡು ಬಂದಿದ್ದು  ಆರೋಪಿಗಳ ವಿರುಧ್ಧ  ಬಂಟ್ವಾಳ ಗ್ರಾಮಾಂತರ ಠಾಣಾ ಅ/ಕ್ರ 44/2021 ಕಲಂ  3,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ  1955 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಇಬ್ರಾಹಿಂ ಪ್ರಾಯ 63 ವರ್ಷ  ತಂದೆ.ಯಾಸೂಫ್ ವಾಸ. ನೆಹರು ನಗರ  ಮನೆ.   ನರಿಕೊಂಬು  ಗ್ರಾಮ ಬಂಟ್ವಾಳ ತಾಲೂಕು ರವರು ನರಿಕೊಂಬು ಗ್ರಾಮದ ನೇತ್ರಾವತಿ ಹಳೇ ಪಂಪ್ ಹೌಸ್ ನಲ್ಲಿ ಪಂಪ್ ಅಪರೇಟರ್  ಕೆಲಸ ಮಾಡಿಕೊಂಡಿದ್ದು, ದಿನಾಂಕ 14-04-2021 ರಂದು ಪಂಪ್ ಹೌಸ್ ಗೆ ಪಂಪ್ ಅಪರೇಟರ್ ಮಾಡಲು ಹೋದ ಸಮಯ ಹೊಸ ಸೇತುವೆಯ ಮೇಲ್ಬಾಗ ಹೈವೇ ಹೋಟೆಲ್ ನ ಸಮಿಪ ನೇತ್ರಾವತಿ ನದಿ ನೀರಿನಲ್ಲಿ ಓರ್ವ ಗಂಡಸಿನ  ಮೃತ ದೇಹ ನದಿ ನೀರಿನಲ್ಲಿ ತೇಲಾಡುತ್ತಿದ್ದು. ಈತನಿಗೆ ಸುಮಾರು 25 ರಿಂದ 30 ವರ್ಷ ಪ್ರಾಯವಾಗಿದ್ದು. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 14-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-04-2021 12:19 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080