ಅಪಘಾತ ಪ್ರಕರಣ: ೦3
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಋತ್ವಿಕಾ (25) ಗಂಡ: ದರ್ಶನ್ ವಾಸ: ರುಕ್ಮಿಣಿ ನಿವಾಸಮನೆ, ಚಿತ್ತಾಕುಳ ಗ್ರಾಮ ದೇಸಾಯಿವಾಡ ಸದಾಶಿವಗಡ ಅಂಚೆ ಕಾರಾವಾರ ತಾಲೂಕು ಉತ್ತರ ಕನ್ನಡ ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ: 14-04-2022 ರಂದು ಪಿರ್ಯಾದಿದಾರರ ಗಂಡನ ಬಾಬ್ತು ಕೆಎ 30 ಎನ್ 1537 ನೇ ಕಾರಿನಲ್ಲಿ ಪಿರ್ಯಾದಿ ಅವರ ಗಂಡ ದರ್ಶನ್ ಮಾವ ದಿಗಂಬರ ಅತ್ತೆ ದೀಪಾ ಮತ್ತು ಮಗಳು ಇಶಾನ್ವಿ ಜೊತೆಯಲ್ಲಿ ಕಾರವಾರದಿಂದ ಧರ್ಮಸ್ಥಳಕ್ಕೆ ಹೊರಟು ಕಾರನ್ನು ದರ್ಶನ್ ರವರು ಉಜಿರೆ ಧರ್ಮಸ್ಥಳ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ನೀರಚಿಲುಮೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ಚಾಲಕ ದುಡುಕುತನದಿಂದ ಚಲಾಯಿಸಿ ಚಾಲಕನ ಚಾಲನಾ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿರುವ ಚರಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿ ಋತ್ವಿಕಾ ರವರಿಗೆ ಎದೆಗೆ ಗುದ್ದಿದ ಗಾಯ ದರ್ಶನ್ ರವರಿಗೆ ಎದೆಗೆ ಗುದ್ದಿದ ಗಾಯ, ದಿಗಂಬರ್ ರವರಿಗೆ ಬಲಕೋಲು ಕಾಲಿಗೆ ಗುದ್ದಿದ ಗಾಯ ಹಾಗೂ ದೀಪಾ ರವರಿಗೆ ಮುಖ, ಮೂಗಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳು ಉಜಿರೆ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು ಈ ಪೈಕಿ ದರ್ಶನ್ ಮತ್ತು ದೀಪಾ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಹೋಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 57/2022 ಕಲಂ; 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸುರೇಶ್ (41), ತಂದೆ ಮೋಹನ್ ಶೆಟ್ಟಿ , ವಾಸ:ಪೊನ್ನೆ ಮಾರಡ್ಕ ಮನೆ,ಕೊಕ್ರಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 13-04-2022 ರಂದು ಬೆಳ್ತಂಗಡಿ ತಾಲುಕು ಸುಲ್ಕೇರಿ ಗ್ರಾಮದ ಸಿರಿಮಜಲು ಎಂಬಲ್ಲಿ ಗುರುವಾಯನಕೆರೆ- ನಾರಾವಿ ಸಾರ್ವಜನಿಕ ರಸ್ತೆಯಲ್ಲಿ ಮಾರುತಿ ಓಮಿನಿ ಕಾರು ನಂ ಕೆ ಎ 21 ಎಂ 3164 ನೇದನ್ನು ಅದರ ಚಾಲಕ ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ದುಡುಕುತನ ಮತ್ತು ನಿರ್ಲ್ಯಕ್ಷತನದಿಂದ ಚಲಾಯಿಸಿ ಎದುರಿನಿಂದ ಅಂದರೆ ನಾರಾವಿ ಕಡೆಯಿಂದ ಬರುತ್ತಿದ ಆಕ್ವಿವಾ ದ್ವಿ ಚಕ್ರ ವಾಹನ ನಂ ಕೆಎ 20 ಇ ವಿ 4068 ನೇದಕ್ಕೆ ಡಿಕ್ಕಿ ಹೊಡೆದು ಕಾರು ರಸ್ತೆಯ ತಗ್ಗು ಪ್ರದೇಶದ ತೋಟಕ್ಕೆ ಮಗುಚಿ ಬಿದ್ದಿದ್ದು ದ್ವಿ ಚಕ್ರ ವಾಹನ ಸವಾರರು, ದ್ವಿಚಕ್ರ ವಾಹನದೊಂದಿಗೆ ಮಗುಚಿ ಬಿದ್ದು ಸವಾರ ಸಂಪತ್ ಹೆಗ್ಡೆಯವರಿಗೆ ಬಲ ಕೈಗೆ, ಬಲ ಕಣ್ಣಿನ ಬಳಿ, ಎರಡೂ ಕಾಲುಗಳಿಗೆ ರಕ್ತ ಗಾಯಗಳಾಗಿದ್ದು ಸಹಸವಾರಳಾದ ಶ್ರೀಮತಿ ಸಂಜನಾರವರಿಗೆ ಎಡ ಕಾಲಿನ ಬೆರಳುಗಳಿಗೆ ರಕ್ತಗಾಯ ಸೊಂಟಕ್ಕೆ ಹಾಗೂ ಕುತ್ತಿಗೆ ನೋವುಗಾಯಗಳಾಗಿ, ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 23-2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಆಶಾಲತ ಪ್ರಾಯ 25 ವರ್ಷ, ತಂದೆ: ರಾಮ ನಾಯ್ಕ, ವಾಸ: ಮುಂಡಾಜೆ ಮನೆ, ಕಬಕ ಗ್ರಾಮ & ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 13/04/2022 ರಂದು 18-00 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಚರಣ್.ಕೆ. ಎಂಬವರು KA-21-EB- 9670ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ ಮಧುಕುಮಾರ್ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ಪಿರ್ಯಾದಿದಾರರು ಸವಾರೆಯಾಗಿ, ಧನ್ಯಶ್ರೀ ರವರರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಪಡ್ನೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-1543 ನೇ ನೋಂದಣಿ ನಂಬ್ರದ ಸ್ಕೂಟರನ್ನು ರಸ್ತೆಯ ಬಲಬದಿಯ ಕೆದಿಲ ಕಡೆಗೆ ಹೋಗಿರುವ ಡಾಮಾರು ರಸ್ತೆಗೆ ಹೋಗಲು ಸ್ಕೂಟರಿನ ಬಲಗಡೆಯ ಇಂಡಿಕೇಟರ್ ಹಾಕಿ ಸೂಚನೆಯನ್ನು ನೀಡಿ ರಸ್ತೆಯ ಬಲಬದಿಯ ಡಾಮಾರು ಅಂಚಿಗೆ ತಲುಪಿದಾಗ ಸ್ಕೂಟರಿಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಸಹಸವಾರೆ ಸ್ಕೂಟರ್ ಸಮೇತ ರಸೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕಾಲಿನ ಕೋಲು ಕಾಲಿಗೆ ಹಾಗೂ ತೊಡೆಗೆ ಗುದ್ದಿದ ಗಾಯ ಮತ್ತು ಸಹಸವಾರೆಗೆ ಕೈಕಾಲುಗಳಿಗೆ ಸಣ್ಣ-ಪುಟ್ಟ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ ಹಾಗೂ ಅಪಘಾತದಿಂದ ಆರೋಪಿ ಹಾಗೂ ಸಹಸವಾರನಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಯ ದಾಖಲಾಗಿರುತದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 70/2022 ಕಲಂ: 279,337ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಮೋಹಿನಿ, ಪ್ರಾಯ: 67 ವರ್ಷ, ಗಂಡ: ಶ್ರೀಧರ ದೇವಾಡಿಗ, ವಾಸ: ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮನೆ, ಬಿ. ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ಕಿರಿಯ ಮಗನಾದ ರತನ್ ಕುಮಾರನು ಈ ಹಿಂದೆ ಟೀಚರ್ಸ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ 10 ವರ್ಷಗಳ ಹಿಂದೆ ಕೆಲಸ ಬಿಟ್ಟು ಆ ಬಳಿಕ ಮಾನಸಿಕ ಅಸ್ವಸ್ಥನಾಗಿದ್ದು, ಪ್ರತೀದಿನ ವಿಪರೀತ ಶರಾಬು ಕುಡಿದುಕೊಂಡು ಯಾವುದೇ ಕೆಲಸಕ್ಕೆ ಹೋಗದೇ ಸರಿಯಾಗಿ ಮನೆಗೂ ಬಾರದೇ, ಪೇಟೆಯಲ್ಲಿ ಮಲಗಿಕೊಂಡು ಇದ್ದವನು. ಈ ದಿನ ದಿನಾಂಕ; 14.04.2022 ರಂದು ಸಂಜೆ ಸಮಯ ಸುಮಾರು 4.00 ಗಂಟೆಗೆ ಬಂಟ್ವಾಳ ತಾಲೂಕು ಬಿ. ಕಸಬಾ ಗ್ರಾಮದ ದೇವರಕಟ್ಟೆ ಬಸ್ಸು ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಫಿರ್ಯಾದಿದಾರರು ಹೋದಾಗ ಬಸ್ಸು ನಿಲ್ದಾಣದ ಒಳಗೆ ಅವರ ಮಗ ನೆಲದ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದು, ಹತ್ತಿರ ಹೋಗಿ ನೋಡಲಾಗಿ ಮೃತಪಟ್ಟಿರುವುದು ತಿಳಿದು ಬಂದಿದ್ದು ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 15-2022 ಕಲಂ: 174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸರಸ್ವತಿ (62) ಗಂಡ: ದಿ, ಸುಂದರ ವಾಸ: ಕರಿಯ ಮೂಲೆ ಮನೆ, ಅಜ್ಜಾವರ ಗ್ರಾಮ ಸುಳ್ಯ ತಾಲೂಕು ರವರ ಮೊಮ್ಮಗಳು ಜಯಲಕ್ಷ್ಮೀ (18), ಅವಳ ತಂದೆ ಚಂದ್ರಹಾಸ ವಿಪರೀತ ಮಧ್ಯಸೇವನೆ ಮಾಡಿ ಮಾನಸಿಕ ಅಸ್ವಸ್ಥರಾಗಿ ಮತಿ ಕಳೆದುಕೊಂಡಿದ್ದು, ಇದರಿಂದ ಜಯಲಕ್ಷ್ಮೀ ಮಾನಸಿಕವಾಗಿ ನೊಂದು ಇದೇ ಕಾರಣಕ್ಕೆ ದಿನಾಂಕ 07.04.2022 ರಂದು ಸಮಯ ಸುಮಾರು 21:30 ಗಂಟೆಗೆ ತಮ್ಮ ಮನೆಯಾದ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ಇಲಿಪಾಷಣ ಸೇವಿಸಿದವಳನ್ನು, ಅವಳ ತಾಯಿ ಪ್ರೇಮ, ಜಯಲಕ್ಷ್ಮೀಯನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದು, ನಂತರ ದಿನಾಂಕ 12.04.2022 ರಂದು ಆಸ್ಪತ್ರೆಯಿಂದ ಮನೆಗೆ ಹೋಗಿದ್ದು, ದಿನಾಂಕ 13.04.2022 ರಂದು ಪುನಃ ಉಲ್ಬಣಗೊಂಡು ಆರೋಗ್ಯದಲ್ಲಿ ಏರುಪೇರು ಆದವಳನ್ನು, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ದಿನಾಂಕ 14.04.2022 ರಂದು ಸಮಯ 02:00 ಗಂಟೆಗೆ ಚಿಕಿತ್ಸೆ ಪಡೆಯುತ್ತಿರುವ ಸಮಯ ಚಿಕಿತ್ಸೆ ಫಲಕಾರಿಯಾಗದೇ ಜಯಲಕ್ಷ್ಮೀ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ 16/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.