ಜೀವಬೆದರಿಕೆ ಪ್ರಕರಣ: ೦2
ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಿತಿನ್ ರಾಜ್ (30) ತಂದೆ: ವಾಸು ದೇವ ನಾಯ್ಕ್ ವಾಸ: ನವಶ್ರೀ ಮನೆ, ಹೊಸಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು ರವರು ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ನವಶ್ರೀ ಮನೆಯ ಕೊಳಕೆ ಬೈಲು ಎಂಬಲ್ಲಿ ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರಿಗೂ ಮನೆ ಸಮೀಪದ ಶಾಲಿನಿ ಎಂಬವರಿಗೂ ಜಾಗದ ವಿಚಾರದಲ್ಲಿ ತಕರಾರು ಇರುತ್ತದೆ. ದಿನಾಂಕ: 13.07.2021 ರಂದು ಶಾಲಿನಿರವರು ತಕರಾರು ಜಾಗದ ಸರ್ವೆ ಮಾಡಿಸಿದ್ದು, ಪಿರ್ಯದಾದಾರರಿಗೆ ನೋಟೀಸ್ ಆಗಿರುತ್ತದೆ. ಸರ್ವೆ ಮುಗಿದ ಬಳಿಕ ಎದ್ರಿದಾರರಾದ ಶಾಲಿನಿ ಮತ್ತು ಅವರ ಮಗ ಪ್ರದೀಪ್ ಸರ್ವೆಯಾದ ಜಾಗಕ್ಕೆ ಬಂದು ಗುರುತು ಕಲ್ಲನ್ನು ತಗೆದು ಪಿರ್ಯಾದಿದಾರರ ಜಾಗಕ್ಕೆ ಹಾಕಿದ್ದು, ಈ ಬಗ್ಗೆ ಪಿರ್ಯಾದಿದಾರರು ಪ್ರಶ್ನಿಸಿದಾಗ ಎದ್ರಿದಾರರಗಳು ಆಗ ಸರ್ವೆ ಮಾಡಿಸಿ ಕಲ್ಲು ಹಾಕಿದ್ದು ಸರಿಯಾಗಿರುವುದಿಲ್ಲ. ಅದನ್ನು ತಗೆದು ನಿಮ್ಮ ಜಾಗದಲ್ಲಿ ಹಾಕುತ್ತೇವೆ ಎಂದಿದ್ದು, ಅದಕ್ಕೆ ನಾವು ಹಾಕಲು ಬಿಡುವುದಿಲ್ಲ ಎಂದು ಪಿರ್ಯಾದಿದಾರರು ಹೇಳಿದಕ್ಕೆ ಪಿರ್ಯಾದಿದಾರರನ್ನು ಹಾಗೂ ಅಲ್ಲಿ ಸೇರಿದ ಅವರ ಪತ್ನಿ ಚೈತ್ರಾ, ತಾಯಿ ವನಿತಾ, ಸಂಬಂಧಿಕರಾದ ಆದರ್ಶ, ಅಶ್ವಿನಿ, ಮತ್ತು ಶಾಂತರಾಮ್ ರವರನ್ನು ಉದ್ದೇಶಿಸಿ “ನೀವು ನಮ್ಮನ್ನು ತಡೆದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ, ಅವಾಚ್ಯ ಶಬ್ದದಿಂದ ಬೈದು ಅಲ್ಲೇ ಇದ್ದ ಮರದ ದೊಣ್ಣೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದು, ಅವರಲ್ಲಿ ಶಾಲಿನಿರವರು ಪಿರ್ಯಾದಿದಾರರ ತಲೆಗೆ, ಹಣೆಗೆ, ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ. ಪ್ರದೀಪ್ ನು ಪಿರ್ಯಾದಿದಾರರ ತಮ್ಮ ಆದರ್ಶನ ಎದೆಗೆ, ಸೊಂಟಕ್ಕೆ, ದೊಣ್ಣೆಯಲ್ಲಿ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿರುತ್ತಾರೆ. ನಂತರ ಅರ್ಜಿದಾರರ ತಾಯಿ, ಪತ್ನಿ ಬೊಬ್ಬೆ ಹೊಡೆದಾಗ ದೊಣ್ಣೆಯನ್ನು ಅಲ್ಲೇ ಬಿಸಾಡಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 49-2021 ಕಲಂ:447, 324, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಶಾಲಿನಿ (57) ಗಂಡ: ದಿ// ಶ್ರೀಧರ ರಾವ್ ವಾಸ: ಪೆರಿಂಜೆ ಮನೆ, ಹೊಸಂಗಡಿ ಗ್ರಾಮ,ಬೆಳ್ತಂಗಡಿ ತಾಲೂಕು ರವರು ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪೆರಿಂಜೆ ಎಂಬಲ್ಲಿ ವಾಸವಾಗಿದ್ದು, ಮನೆ ವಾರ್ತೆ ಕೆಲಸ ಮತ್ತು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರಿಗೂ ಮನೆ ಸಮೀಪದ ವಾಸುದೇವ ಎಂಬವರಿಗೂ ಜಾಗದ ವಿಚಾರದಲ್ಲಿ ತಕರಾರು ಇರುತ್ತದೆ. ದಿನಾಂಕ: 13.07.2021 ರಂದು ಜಾಗದ ಸರ್ವೆ ಮಾಡಿಸಿದ್ದು, ಈ ಬಗ್ಗೆ ವಾಸುದೇವ ನಾಯ್ಕ್ ನವರಿಗೂ ನೋಟೀಸ್ ಆಗಿರುತ್ತದೆ. ಸರ್ವೆ ಮುಗಿದ ಬಳಿಕ ಎದ್ರಿದಾರರಾದ ವಾಸುದೇವ ನಾಯ್ಕ್, ಅವನ ಮಗ ನಿತೀನ್, ಆದರ್ಶ, ಅಶ್ವಿನಿ, ಶಾಂತರಾಮ್ ಎಂಬವರುಗಳು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯದಿದಾರರಿಗೂ ಮತ್ತು ಅವರ ಮಗ ಪ್ರದೀಪ್ ರವರನ್ನು ಉದ್ದೇಶಿಸಿ ನೀವು ನಮ್ಮ ಜಾಗದಲ್ಲಿ ಸರ್ವೆ ಕಲ್ಲು ಹಾಕಿದ್ದೀರಾ? ನಿಮಗೆ ಬೇಲಿ ಹಾಕಲು ಬಿಡುವುದಿಲ್ಲ. ಎಂದು ಹೇಳಿ ಸರ್ವೆ ಕಲ್ಲನ್ನು ತಗೆಯಲು ಆದರ್ಶ ಮುಂದಾದಗ ಪಿರ್ಯಾದಿದಾರರು ತಡೆದಿದ್ದು, ಆ ಸಮಯ ವಾಸುದೇವ ನಾಯ್ಕ್ ರವರು, ಆತನ ಮಗ ನಿತೀನ್, ಆದರ್ಶ, ಅಶ್ವಿನಿ, ಶಾಂತರಾಮ್ ರವರನ್ನು ಕರೆದು ಅವರಿಬ್ಬರಿಗೂ ಹೊಡೆಯಿರಿ ಎಂದಾಗ ನಿತೀನ್ ಆತನ ಕೈಯಿಲ್ಲಿದ್ದ ಮರದ ದೊಣ್ಣೆಯಿಂದ ಪಿರ್ಯಾದಿದಾರರ ಸೊಂಟಕ್ಕೆ, ತಲೆಗೆ ಹೊಡೆದು ದೂಡಿ ಹಾಕಿರುತ್ತಾನೆ. ಆದರ್ಶ ಎಂಬವನು ಬಿದ್ದಲಿಗೆ ಹೊಟ್ಟೆಗೆ ಕಾಲಿನಿಂದ ತುಳಿದಿರುತ್ತಾನೆ. ತಡೆಯಲು ಬಂದ ಮಗ ಪ್ರದೀಪ್ ನಿಗೂ ಕೂಡಾ ನಿತೀನ್ ಅದೇ ದೊಣ್ಣೆಯಿಂದ ಸೊಂಟಕ್ಕೆ, ಕಾಲಿಗೆ ಹೊಡೆದು, ಇತರರೆಲ್ಲರೂ ಸೇರಿ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ವಿಚಾರ ತಿಳಿದು ಪಿರ್ಯಾದಿದಾರರ ದೂಡ್ಡ ಮಗ ಶೋಬಿತ್ ರವರು ಬರುವುದನ್ನು ಕಂಡು ನಿತೀನ್ ದೊಣ್ಣೆಯನ್ನು ಅಲ್ಲೇ ಬಿಸಾಡಿ ಪಿರ್ಯಾದಿದಾರರನ್ನು ಮತ್ತು ಇತರರನ್ನು ಉದ್ದೇಶಿಸಿ ಮುಂದಕ್ಕೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 50-2021 ಕಲಂ:143, 147, 447, 324, 504, 506, ಜೊತೆಗೆ149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಹಲ್ಲೆ ಪ್ರಕರಣ: ೦2
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪದ್ಮ ಣಾಭ ಮಯ್ಯ ಪ್ರಾಯ: 42 ವರ್ಷ, ತಂದೆ; ಕೃಷ್ಣಮಯ್ಯ, ವಾಸ; ಕೊಯ್ಯೊಟ್ಟು ಮನೆ, ಮಣಿನಾಲ್ಕೂರು ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 14.07.2021 ರಂದು ಬಂಟ್ವಾಳ ತಾಲೂಕು ಕಾವಳ ಮುಡೂರು ಗ್ರಾಮದ ಕಾವಳಮುಡೂರು ಸೇವಾ ಸಹಕಾರಿ ಸಂಘದಹಣದ ಅವ್ಯವಹಾರದ ಬಗ್ಗೆ ಸೇವಾಸಹಕಾರಿ ಸಂಘದ ಬಳಿ ಸಾರ್ವಜನಿಕರು ಪ್ರತಿಭಟನೆಯನ್ನು ಮಾಡುತ್ತಿರುವ ಸಮಯ ಬಾಲಕೃಷ್ಣ ಅಂಚನ್ ಎಂಬವರು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ನೋಡಿದ ಪಿರ್ಯಾದಿಯು ಕೂಡಾ ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಪ್ರಾರಂಭಿಸಿದಾಗ ಅಲ್ಲಿದ್ದ ಪದ್ಮಶೇಖರ್ ಜೈನ್ ರವರು ಇತರ ಆರೋಪಿತರುಗಳಾದ ಸದಾನಂದ ಶೆಟ್ಟಿ ಉಚ್ಚಿಲ, ಪುತ್ತುಮೋನು, ಬಾಲಕೃಷ್ಣ ಅಂಚನ್, ಪುರುಷೋತ್ತಮ ಕೊಂಬೇಲು, ಟೋಮಿ ಕೊಂಚಾಡಿ ಎಂಬವರೊಂದಿಗೆ ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ನೀನು ಯಾಕೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದೀಯಾ, ನಿನಗೇನು ಅಧಿಕಾರವಿದೆ ನೀನು ಈ ಗ್ರಾಮದವನು ಅಲ್ಲ ಎಂದು ನಿಂದಿಸಿ ತುಳು ಭಾಷೆಯಲ್ಲಿ ಕೇಳುತ್ತಿದ್ದ ಸಮಯ ಆರೋಪಿಗಳ ಪೈಕಿ ಸದಾನಂದ ಉಚ್ಚಿಲ ಎಂಬವರು ಪಿರ್ಯಾದಿದಾರರಿಗೆ ಕೈಯಿಂದ ಎದೆಗೆ, ಬಲಬದಿಯ ಕೆನ್ನೆಗೆ ಗುದ್ದಿದ್ದು, ಅದೇ ಸಮಯ ಉಳಿದ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂಬಿತ್ಯಾದಿ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 44/2021 ಕಲಂ: 143, 147, 341, 323, 504 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸದಾನಂದ ಶೆಟ್ಟಿ, ಪ್ರಾಯ: 51 ವರ್ಷ, ತಂದೆ:ದಿ/ನಾರಾಯಣ ಶೆಟ್ಟಿ, ವಾಸ: ಚ್ಚಲ ಮನೆ, ಕಾವಳಕಟ್ಟೆ ಅಂಚೆ, ಕಾವಳ ಮುಡೂರು ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 14.07.2021 ರಂದು ಪಿರ್ಯಾದಿಯು ಬಾಲಕೃಷ್ಣ ಅಂಚನ್ ಎಂಬವರೊಂದಿಗೆ ಬಂಟ್ವಾಳ ತಾಲೂಕು ಕಾವಳ ಮುಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿರುವ ಕಾವಳಮುಡೂರು ಸೇವಾ ಸಹಕಾರಿ ಸಂಘಕ್ಕೆ ಬರುತ್ತಿರುವಾಗ ಸಂಘದ ಕಟ್ಟಡದ ಎದುರು ಸಾರ್ವಜನಿಕರು ಸೇರಿಕೊಂಡು ಯಾವುದೋ ವಿಷಯದ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದು, ಪ್ರತಿಭಟನಾ ಸ್ಥಳದಲ್ಲಿದ್ದ ಪದ್ಮನಾಭಮಯ್ಯ ಎಂಬವರು ಪಿರ್ಯಾದಿಯ ಕಡೆಗೆ ತಿರುಗಿ ವಿಡಿಯೋ ಮಾಡುತ್ತಿದ್ದುದ್ದನ್ನು ಕಂಡು ಪಿರ್ಯಾದಿ ಅವರೊಡನೆ “ ನೀವು ಯಾಕೆ ನಮ್ಮ ವಿಡಿಯೋ ಮಾಡುತ್ತಾ ಇದ್ದಿರಿ ಎಂದು ಕೇಳಿದಾಗ ಸ್ಥಳದಲ್ಲಿದ್ದ ಪ್ರಶಾಂತ್ ಶೆಟ್ಟಿ ಗಂಗಾಧರ ಪ್ರಭು ಮುಚ್ಚಿಲೋಡಿ, ಶೇಷಗಿರಿ ಮನ್ಯ, ಸಂತೋಷ್ ನೇಲ್ಯಪಲ್ಕೆ, ಗಣೇಶ್ ನಾಯ್ಕ್ ಹಾಗೂ ಇತರರು ಅಕ್ರಮಕೂಟ ಸೇರಿ ಪಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ದೂಡಿ ಹಾಕಿದ್ದಲ್ಲದೇ ಪಿರ್ಯಾದಿಯ ಜೊತೆಗೆ ಇದ್ದ ಬಾಲಕೃಷ್ಣ ಬಿ ಅಂಚನ್ ರವರಿಗೆ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ದೂಡಿ ಹಾಕಿರುವುದಾಗಿದೆ. ಆರೋಪಿತರೆಲ್ಲ ನೀವು ಇಲ್ಲಿಂದ ಹೋಗಿ ಇಲ್ಲದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 45/2021 ಕಲಂ: 143,147,323, 504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦2
ವೇಣೂರು ಪೊಲೀಸ್ ಠಾಣೆ : ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರು ದಿನಾಂಕ 14-07-2021 ರಂದು ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಕರಂಬಾರು ಗ್ರಾಮದ ಮಾರಾಜೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಶಿರ್ಲಾಲು ಕಡೆಯಿಂದ ಮಾರಾಜೆ ಕಡೆಗೆ ಪಿಕಪ್ ವಾಹನ ಬರುವುದನ್ನು ಕಂಡು ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಚಾಲಕ ಪ್ರಾನಿಸ್ ಪಿಂಟೋ ಎಂಬವರಿದ್ದು ಅಲ್ಲದೇ ಪಿಕಪ್ ವಾಹನದ ಬಾಡಿಯಲ್ಲಿ ಎರಡು ಜಾನುವಾರುಗಳು ಕಂಡುಬಂದಿದ್ದು ಸದ್ರಿ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಹಿಂಸ್ಮಾತಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಒಂದು ದನ ಮತ್ತು ಒಂದು ಹೋರಿ ಬೆಲೆ ಸುಮಾರು 5,000/ ಹಾಗೂ ಜಾನುವಾರುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ಕೆಎ 21 ಎ 1513 ನೇ ಪಿಕಪ್ ವಾಹನ , ಬೆಲೆ ಸುಮಾರು 2,00,000/ ಹಾಗೂ ಹಗ್ಗದ ತುಂಡುಗಳನ್ನು ಹಾಗೂ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು ವೇಣೂರು ಠಾಣಾ ಅ.ಕ್ರ ನಂಬ್ರ: 51-2021 ಕಲಂ: 5,7,12 ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ; 363,376,417 ಐಪಿಸಿ,ಕಲಂ: 67(A)Information Technology Act ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦2
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋಹಿತ್ ಕುಮಾರ್ (25) ತಂದೆ: ಚಾಮಯ್ಯ ನ್ ವಾಸ: ನಾರಾಲು ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರ ತಂದೆ ಚಾಮಯ್ಯ (52) ಎಂಬವರು ದಿನಾಂಕ 14.07.2021 ರಂದು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ನಾರಾಲು ಎಂಬಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಬಾಬ್ತು ಹಸುಗಳಿಗೆ ಹುಲ್ಲನ್ನು ಹಾಕಲು ಹುಲ್ಲು ತುಂಡುಮಾಡುವ ಚಾಪ್ ಕಟರ್ ಮೀಷಿನ್ ಚಾಲು ಮಾಡುವರೇ ಕರೆಂಟ್ ಪ್ಲಗ್ ಗೆ ವೈರನ್ನು ಸಿಕ್ಕಿಸುವ ಸಮಯ ವಿದ್ಯುತ್ ಸ್ಪರ್ಶವಾಗಿ ನೆಲಕ್ಕೆ ಎಸೆಯ್ಪಟ್ಟು ಸೃತಿ ಕಳೆದುಕೊಂಡವರನ್ನು ಪಿರ್ಯಾದುದಾರರು ಮತ್ತು ಅವರ ತಾಯಿ, ಚಿಕಿತ್ಸೆಯ ಬಗ್ಗೆ ಚಾಮಯ್ಯರವರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷೀಸಿದ ವೈದ್ಯರು ಚಾಮಯ್ಯರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿ ಆರ್ ಸಂಖ್ಯೆ 28/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಬಾಬು ಎನ್ ಪ್ರಾಯ44 ವರ್ಷ ತಂದೆ ದಿ|| ರಾಘವನ್ ವಾಸ ನಡುಕಡಿಯಲ್ ಎನ್ ಐ ಟಿ ನಾಯರ್ ಕುಝಿ ಅಂಚೆ ಪುಲಕೊಡ್ ತಾಲೂಕು ಕೊಝೀಕೊಡ್ ಕೇರಳ ರವರ ತಮ್ಮ ಬಿಜು ಕೆ ಪ್ರಾಯ 39 ವರ್ಷರವರು ಸುಮಾರು 2 ವರ್ಷ ದಿಂದ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಓಟೆ ಪಿಲಿಂಜ ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಆತನು ಹೆಚ್ಚಾಗಿ ಅಮಲು ಪದಾರ್ಥ ಸೇವನೆ ಮಾಡಿದ ಸಮಯ ಸರಿಯಾಗಿ ಊಟ ಮಾಡುತ್ತಿರಲಿಲ್ಲ ದಿನಾಂಕ 12-07-2021 ರಂದು ಮಧ್ಯಾಹ್ನ ತನಕ ಬಿಜು ಕೆ ರವರು ಚಾಲಕ ಕೆಲಸ ಮಾಡಿ ನಂತರ ಆತನು ಕೆಲಸಕ್ಕೆ ಬಾರದೆ ಆತನು ರೂಮ್ ನಲ್ಲಿದ್ದನು ದಿನಾಂಕ:13-07-2021 ರಂದು ಜಯರಾಜ್ ಮತ್ತು ಸುರೇಶ್ ರವರು ಬಿಜು ಕೆ ರವರ ರೂಮ್ ಗೆ ಹೋಗಿ ನೋಡಲಾಗಿ ಬಿಜು ಕೆ ಮಲಗಿದ್ದ ಸ್ಥಿತಿಯಲ್ಲಿದ್ದು ಆತನನ್ನು ಎಬ್ಬಿಸಿ ಆರೈಕೆ ಮಾಡಿ ನೋಡಲಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಂತರ ಒಂದು ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಿನಾಂಕ 13-07-2021 ರಂದು ಸುಮಾರು 20.00 ಗಂಟೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಬಿಜು ಕೆ ರವರು ಮೃತ ಪಟ್ಟ ಬಗ್ಗೆ ತಿಳಿಸಿದರು. ಬಿಜು ಕೆ ನವನು ವೀಪರಿತ ಅಮುಲು ಪದಾರ್ಥ ಸೇವಿಸಿ ಅಥವಾ ಇನ್ನು ಯಾವುದೋ ಖಾಯಿಲೆಯಿಂದ ಅಥವಾ ಇತರ ಯಾವುದೋ ವಿಷಯದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 15/2021 ಕಲಂ 174 ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.