ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುರೇಶ, ಪ್ರಾಯ: 41 ವರ್ಷ,  ತಂದೆ: ದಿ. ಬಾಬು, ವಾಸ: ಕಲಾಬಾಗಿಲು ಮನೆ, ಅಂಕರಜಾಲು, ಮೂಡುಪಡುಕೋಡಿ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 13-07-2022 ರಂದು 20.00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರು ಮೂರ್ಜೆ ಕಡೆಯಿಂದ ಪುಂಜಾಲಕಟ್ಟೆ ಪೇಟೆ ಕಡೆಗೆ ಬಂಟ್ವಾಳ – ಬೆಳ್ತಂಗಡಿ ಸಾರ್ವಜನಿಕ ಹೆದ್ದಾರಿ ರಸ್ತೆಯ ಬದಿ ಕಚ್ಚಾ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಕಟ್ಟೆ ಮನೆ ಕ್ರಾಸ್ ಎಂಬಲ್ಲಿ ಫಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ಮೂರ್ಜೆ ಕಡೆಯಿಂದ ಮೋಟಾರ್ ಸೈಕಲ್ KA21Q0055 ನೇದನ್ನು ಅದರ ಸವಾರ ವೇಣುಗೋಪಾಲ ಎಂಬವರು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಹಣೆಗೆ ಮತ್ತು ತಲೆಯ ಹಿಂಬದಿಗೆ ರಕ್ತ ಬರುವ ಗಾಯ ಮತ್ತು ಎದೆಗೆ ಗುದ್ದಿದ ನೋವು ಉಂಟಾಗಿದ್ದು, ಮೋಟಾರ್ ಸೈಕಲ್ ಸವಾರ ವೇಣುಗೋಪಾಲ ಕೂಡ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡಿದ್ದು, ಫಿರ್ಯಾದಿದಾರರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 48/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಂ. ಮುದ್ದಯ್ಯ ಪ್ರಾಯ 63 ವರ್ಷ, ತಂದೆ: ದಿ|| ಎಂ. ವೆಂಕಟಪತಿ, ವಾಸ: 9-44, ಬಿ.ಸಿ.ಕಾಲೊನಿ, ಪ್ಯಾಪಿಲಿ, ಡೋನ್‌ ತಾಲೂಕು, ಕರ್ನೂಲ್‌ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ ರವರು ನೀಡಿದ ದೂರಿನಂತೆ ದಿನಾಂಕ 13-07-2022 ರಂದು ಆರೋಪಿ ಲಾರಿ ಚಾಲಕ  ಎಂ. ಮನೋಜ್‌ ಕುಮಾರ್‌ ಎಂಬವರು AP-21-TY-9459 ನೇ ನೋಂದಣಿ ನಂಬ್ರದ ಲಾರಿಯಲ್ಲಿ ಲೈಮ್ ಸ್ಟೋನ್ ಪೌಡರ್ ಲೋಡ್ ಮಾಡಿಕೊಂಡು, ಬದಲಿ ಚಾಲಕ ದೊರಗಾರಿ ರಂಗಸ್ವಾಮಿಯವರೊಂದಿಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಕರ್ನೂಲ್ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಬಜತ್ತೂರು  ಗ್ರಾಮದ ನೀರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಲಾರಿಯು ಚಾಲಕನ ಹತೋಟಿ ತಪ್ಪಿ ಹೆದ್ದಾರಿಯ ಬಲಭಾಗಕ್ಕೆ ಹೋಗಿ ಬಲಭಾಗದಲ್ಲಿರುವ ನೀರು ಹರಿಯುವ ತೋಡಿಗೆ ಪಲ್ಟಿಯಾಗಿ ಬಿದ್ದು ಲಾರಿಗೆ ಮತ್ತು ಲಾರಿಯಲ್ಲಿದ್ದ ಲೋಡಿಗೆ ಹಾನಿಯಾಗಿರುತ್ತದೆ. ಆರೋಪಿ ಚಾಲಕನಿಗೆ ಗಾಯವಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  122/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರು ದಿನಾಂಕ: 11-07-2022 ರಂದು ರಾತ್ರಿ 9:30 ಗಂಟೆಗೆ ತನ್ನ ಮನೆಯಲ್ಲಿ ಅತ್ತೆ ಹಾಗೂ ಮಕ್ಕಳೊಂದಿಗೆ ಇರುವ ಸಮಯ ಆರೋಪಿ ಮೈದುನ ಮನೆಗೆ ಬಂದು ತನ್ನ ಅತ್ತೆಯೊಂದಿಗೆ ವಿನಹ ಕಾರಣ ಜಗಳ ಪ್ರಾರಂಭಿಸಿದ್ದು ಆ ವೇಳೆ ಪಿರ್ಯಾದಿದಾರರು ನನ್ನ ಗಂಡ ಮನೆಯಲ್ಲಿ ಇಲ್ಲ ನೀನು ಜಗಳ ಮಾಡಬೇಡ ಇಲ್ಲಿಂದ ಹೋಗು ಎಂದು ಹೇಳಿದಾಗ ಆರೋಪಿ ಪಿರ್ಯಾದಿದಾರರನ್ನುದ್ದೇಶಿಸಿ ನೀನು ನನ್ನನ್ನು  ಮನೆಯಿಂದ ಹೋಗು ಎಂದು ಹೇಳಲು  ಯಾರು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ:  61/2022 ಕಲಂ: 448,504,354,324, 109 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾಗೇಶ (40)  ತಂದೆ: ಕುಂಞಣ್ಣ ಮುಗೇರ  ವಾಸ: ಪೊಟ್ರೆ ಮನೆ ದೋಳ್ಪಾಡಿ  ಗ್ರಾಮ ಕಡಬ ತಾಲೂಕು ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿಯ ತಂದೆಗೆ 4 ಜನ ಮಕ್ಕಳಿದ್ದು ಅವರಲ್ಲಿ ಪಿರ್ಯಾದಿಯ ತಮ್ಮ ಲೋಕೇಶ್ ಎಂಬಾತನು ಕೂಲಿ ಕೆಲಸ ಮಾಡಿಕೊಂಡಿದ್ದನು ಆತನಿಗೆ ಆಲಂಕಾರಿನ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿರುತ್ತದೆ ಹಾಗೂ ಪಿರ್ಯಾದಿಯ ಅಕ್ಕ ತುಳಸಿ ಎಂಬವರು ಹೆರಿಗೆ ನಿಮಿತ್ತ ಮೂರು ತಿಂಗಳ ಹಿಂದೆ ಮನೆಗೆ ಬಂದಿದ್ದು ಮದುವೆ ಕಾರ್ಯವನ್ನು ಪಿರ್ಯಾದಿಯ ಅಕ್ಕ ತುಳಸಿರವರ ಹೆರಿಗೆಯಾದ ನಂತರ ಮಾಡಿಸುವ ಬಗ್ಗೆ ಇತ್ತಂಡದವರು ಒಪ್ಪಿಕೊಂಡಿದ್ದು ದಿನಾಂಕ 13-07-2022 ರಂದು ರಾತ್ರಿ ಸುಮಾರು 8:00 ಗಂಟೆಗೆ ಮನೆಯವರೆಲ್ಲರೂ ಊಟ ಮುಗಿಸಿಕೊಂಡು ಲೋಕೇಶ್‌ನ ಮದುವೆ ವಿಚಾರದ ಬಗ್ಗೆ ಮನೆಯಲ್ಲಿಯೇ ಮಾತನಾಡಿ ರಾತ್ರಿ 10-00 ಗಂಟೆಗೆ ಮಲಗಿದ್ದರು ದಿನಾಂಕ;14-07-2022 ಬೆಳಗ್ಗಿನ ಜಾವ ಸಮಯ ಸಮಾರು 3:00 ಗಂಟೆಗೆ ಪಿರ್ಯಾದಿಯ ಅಕ್ಕನ ಮಗು ಎಚ್ಚರಗೊಂಡಾಗ  ಪಿರ್ಯಾದಿಯ ಅಕ್ಕ ಎದ್ದು ನೋಡೊದಾಗ ಪಿರ್ಯಾದಿಯ ತಮ್ಮ ಲೋಕೇಶ್‌ನು ಮಲಗಿದ್ದಲ್ಲಯೇ ವಾಂತಿ ಮಾಡುತ್ತಿದ್ದು, ಬಾಯಲ್ಲಿ ನೊರೆ ಬರುತ್ತಿದ್ದು, ಯಾವುದೋ ವಿಷ ಪದಾರ್ಥದ ವಾಸನೆ ಬರುತ್ತಿದ್ದು ಹಾಗೂ ಪಿರ್ಯಾದಿಯ ತಮ್ಮ ಲೋಕೇಶ್‌ನು ಅಶ್ವಸ್ಥಗೊಂಡದ್ದರಿಂದ ತಕ್ಷಣ ಖಾಸಗಿ ವಾಹನದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೆಳಗ್ಗಿನ ಜಾವ 5-15 ಗಂಟೆಗೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಲ್ಲಿ ಪರಿಕ್ಷಿಸಿದ ವೈದ್ಯರು ಲೋಕೇಶ್‌ನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 22/2022 ಕಲಂ:174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 15-07-2022 10:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080