ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅಬೂಬಕ್ಕರ್‌ ಸಿದ್ದೀಕ್‌ (31)ತಂದೆ:ಮೊಹಮ್ಮದ್‌ ಪಿ ವಾಸ:ಅರಫಾ ಮಂಜಿಲ್‌, ಬಾವಳಿಗುಳಿ ಮನೆ, ನರಿಂಗಾನ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ    ದಿನಾಂಕ:13-09-2021 ರಂದು ಮೋಟಾರ್‌ ಸೈಕಲ್‌ ನಂಬ್ರ ಕೆಎ-19-ಇವಿ-8330ನೇದರಲ್ಲಿ ತಾನು ಸವಾರನಾಗಿ ಅವರ ಅಣ್ಣ ಬಶೀರ್‌ ಟಿ ರವರು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಲ್ಲಡ್ಕದಿಂದ -ವಿಟ್ಲಕ್ಕೆ ಬರುವರೇ ವೀರಕಂಭದಿಂದಾಗಿ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 10.30 ಗಂಟೆಗೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಎಂಬಲ್ಲಿಗೆ ತಲುಪಿದಾಗ ತಿರುವ ರಸ್ತೆಯಲ್ಲಿ ಪಿರ್ಯಾಧಿಯ ಮುಂದೆ ಹೋಗುತ್ತಿದ್ದ ಕೆಎ-19-ಇಡಬ್ಲು-7766ಆಕ್ಟಿವಾ ಹೊಂಡಾಕ್ಕೆ ವಿಟ್ಲ ಕಡೆಯಿಂದ-ಕಲ್ಲಡ್ಕದ ಕಡೆಗೆ ಬರುತ್ತಿದ್ದ ಕೆಎ-19-ಎಸಿ-1704ನೇ ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಯಾವುದೋ ಕಾರನ್ನು ಓವರಟೇಕ್‌ ಮಾಡಿ ಪಿರ್ಯಾಧಿದಾರರ ಮುಂದೆ ಹೋಗುತ್ತಿದ್ದ ಆಕ್ಟೀವಾಕ್ಕೆ ಹಾಗೂ ಪಿರ್ಯಾಧಿ ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ಕೆಎ-19-ಇವಿ-8330ನೇದಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಆಕ್ಟಿವಾ ಸವಾರನ ಬಲತೊಡೆಗೆ ಮತ್ತು ಬಲಕೈ ಮಣಿಗಂಟಿಗೆ ಗುದ್ದಿದ ನೋವು ಮತ್ತು ಹಣೆಗೆ ತರಚಿದ ಗಾಯ ಆಗಿದ್ದು. ಪಿರ್ಯಾಧಿ  ಬಲಕಾಲಿಗೆ ಗುದ್ದಿದ ನೋವಾಗಿದ್ದು. ಸಹ ಸವಾರನಾಗಿದ್ದ ಬಶೀರ್‌ ಟಿ ರವರಿಗೆ ಬಲ ಕೈ ಕಿರು ಬೆರಳಿಗೆ ಗುದ್ದಿದ ,ತರಚಿದ ಹಾಗೂ ಎರಡು ಮೊಣಕಾಲಿಗೆ ತರಚಿದ ನೋವಾಗಿದ್ದು. ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು. ನಂತರ ಕಾರಿನ ಚಾಲಕನ ಹೆಸರು ತಿಳಿಯಲಾಗಿ ಇಸ್ಮಾಯಿಲ್‌ ಉದೈಫ್‌ ಎಂದು ತಿಳಿದಿದ್ದು. ಆತನಿಗೆ ಯಾವುದೇ ಗಾಯ ನೋವು ಆಗಿರಲಿಲ್ಲ. ಕಾರಿನ ನಂಬ್ರ ನೋಡಲಾಗಿ ಕೆಎ-19-ಎಸಿ-1704ನೇ ಮಾರುತಿ ಶೀಫ್ಟ್‌ ಡಿಜೈರ್‌ ಕಾರು ಆಗಿರುತ್ತದೆ. ಕಾರಿನ ಮುಂಭಾಗ ಜಖಂ ಆಗಿರುತ್ತದೆ. ಗಾಯಾಳುಗಳಾದ ಅಬ್ದುಲ್‌ ಬಶೀರ್‌ ಹಾಗೂ ಅಬ್ದುಲ್‌ ರಹಿಮಾನ ರವರನ್ನು ಸೇರಿದವರಲ್ಲಿ ಒಂದು ಅಂಬುಲೆನ್ಸನಲ್ಲಿ ಮಂಗಳೂರು ಹೈಲ್ಯಾಂಡ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುವುದಾಗೊದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 121/2021  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಇಸ್ಮಾಯಿಲ್‌ ಫೌಶಾನ್‌, ಪ್ರಾಯ 24 ವರ್ಷ.  ತಂದೆ: ಮೊಹಮ್ಮದ್‌ ಇಸ್ಮಾಯಿಲ್‌, ವಾಸ: ಪಿಎಂಕೆ ಮನೆ, ಪಡೀಲ್‌, ಪುತ್ತೂರು ಕಸ್ಬಾ ಗ್ರಾಮ,  ಪುತ್ತೂರು  ತಾಲೂಕು ಎಂಬವರ ದೂರಿನಂತೆ ದಿನಾಂಕ 14-09-2021 ರಂದು 08-00 ಗಂಟೆಗೆ ಆರೋಪಿ ಕಾರು ಚಾಲಕ ಸುಬ್ರಮಣ್ಯ ಎಂಬವರು KA-21-P-1862 ನೇ ನೋಂದಣಿ ನಂಬ್ರದ ಕಾರನ್ನು ಬೊಳುವಾರು-ಪುತ್ತೂರು ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಬೊಳುವಾರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಪ್ರಗತಿ ಆಸ್ಪತ್ರೆ ಬಳಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಪೂರ್ತಿ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರು ಮತ್ತು ಗಣೇಶ್ ಪ್ರಸಾದ್ ರವರು ಪ್ರಯಾಣಿಕರಾಗಿದ್ದು, ಪಕೀರ್ ಬೇಗ್ ಎಂಬವರು ಚಾಲಕರಾಗಿ ಬೊಳುವಾರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-A-9925 ನೇ ನೋಂದಣಿ  ನಂಬ್ರದ ಅಟೋರಿಕ್ಷಾಕ್ಕೆ  ಮುಖಾಮುಖಿ ಅಪಘಾತವಾಗಿ ಪಿರ್ಯಾದುದಾರರಿಗೆ ಹಣೆಯ ಬಲಭಾಗ, ಬಲ ಅಂಗೈ, ಬಲ ಪಾದದ ಕಿರು ಬೆರಳಿನ ಬಳಿ ಗಾಯ, ಗಣೇಶ್ ಪ್ರಸಾದ್ ರವರಿಗೆ ಮೊಣಕಾಲಿಗೆ ಗಾಯ, ಮತ್ತು ಪಕೀರ್ ಬೇಗ್ ರವರ ಬಲಕಾಲಿನ ಮೊಣಗಂಟು, ಬಲಕೋಲು ಕೈ, ಮುಖ ಹಾಗೂ ಹಲ್ಲಿಗೆ ಗಾಯವಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡದಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  114/2021  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೆ ಪ್ರಕರಣ: 1

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 14.09.2021 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ U/s 5,7,11 The Karnataka prevention of slaughter and preservation of cattle act-2020, and ಕಲಂ 47,48,56 Transport of animal act-1978 and U/s 11(A),11(B) Prevention of cruelty of animal act- 1960 & U/s 177 IMV act ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕು||ಟ್ರೆಸ್ಟ ಡಯಾನ ಫೆರ್ನೆಂಡಿಸ್‌ (24)ತಂದೆ:ಕ್ರಿಸ್ಟೋಪರ್ ಫೆರ್ನಾಂಡಿಸ್‌ ವಾಸ:3-3/63 2ನೇ ಮೇನ್‌, ರೋಡ್‌ ಚರ್ಚ ,ಪ್ರಶಾಂತ ನಗರ ಮಂಗಳೂರು ಎಂಬವರ ದೂರಿನಂತೆ ಪಿರ್ಯಾದುದಾರರ ಅಕ್ಕ ಮೈಜೀ ಕರೋಲ್‌ ಫೆರ್ನಂಡಿಸ್‌ ಪ್ರಾಯ 31 ವರ್ಷ ರವರು ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಕೃಷಿ ಅದ್ಯಯನದ ಬಗ್ಗೆ ಆಸಕ್ತಿಯನ್ನು ಹೊಂದಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಪಾರ್ಮ್ ಹೌಸ್‌ನಲ್ಲಿ ದಿನಾಂಕ:12.09.2021 ರಿಂದ ಅಧ್ಯಯನ ಮಾಡುತ್ತಿದ್ದವರು ದಿನಾಂಕ:14.09.2021 ರಂದು ಸಂಜೆ ಸಮಯ 5:45 ಗಂಟೆಗೆ ಯಾರು ಇಲ್ಲದ ಸಮಯ ಪಾರ್ಮ ಹೌಸನಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಉಸಿರುಕಟ್ಟಿದ್ದವರನ್ನು ಚಿಕಿತ್ಸೆ ಬಗ್ಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಮಂಗಳೂರಿನ ಪಾದರ್‌ ಮುಲ್ಲರ ಆಸ್ವತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾದಿಕಾರಿಯವರು ಪರಿಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 27/2021  ಕಲಂ 174   ಸಿ.ಅರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕುಮಾರ್ ಶಿವಪುತ್ರಪ್ಪ ಶಡಗರವಳ್ಳಿ (34) ತಂದೆ:ದಿ||ಶಿವಪಿತ್ರಪ್ಪ, ಅಕ್ಕಿಹೊಳೆ ಮನೆ, ಹಾನಗಲ್ ತಾಲೂಕು ಹಾವೇರಿ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು, ಸಹೋದರ ಹಾಗೂ ಸಂಬಂಧಿ ಬಸವಂತಪ್ಪರವರೊಂದಿಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಮದರಸದ ಪಕ್ಕದಲ್ಲಿ ವಾಸವಾಗಿರುವುದಾಗಿದೆ. ಬಸವಂತಪ್ಪನು ಮದ್ಯ ಸೇವಿಸುವ ಚಟವನ್ನು ಹೊಂದಿದ್ದು,  ದಿನಾಂಕ: 14.09.2021 ರಂದು ಸಮಯ ಸುಮಾರು 14:00 ಗಂಟೆಗೆ  ಮನೆಯಲ್ಲಿದ್ದ  ಬಸವಂತಪ್ಪ ರವರಿಗೆ ವಾಂತಿ ಮಾಡಿಕೊಂಡು ಎದೆನೋವು ಎಂದು ಹೇಳಿದಾಗ ಬಸವಂತಪ್ಪ ರವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಯು ಡಿ ಆರ್ ನಂ:31/2021 ಕಲಂ:174 ಸಿ.ಆರ್ ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-09-2021 07:05 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080