ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಶಿಧರ ಪ್ರಾಯ : 63 ವರ್ಷ ತಂದೆ: ದಿ|| ಸೀತಾರಾಮ ವಾಸ: ಮಾದಂಗೆ ಮನೆ ಕಳ್ಳಿಗೆ  ಗ್ರಾಮ  ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:13-11-2021 ರಂದು KA-19-EW-9639 ನೇ ಸ್ಕೂಟರ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಟೈಲರಿಂಗ್   ಸಾಮಾನುಗಳನ್ನು ಖರೀದಿಸಲು ರಾಮಲಕಟ್ಟೆ ಯಿಂದ ಫರಂಗಿಪೇಟೆಗೆ  ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 18:45 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ತುಂಬೆ ಶಾರದ ಭವನದ ಎದುರು ತಲುಪಿದಾಗ ಸ್ಕೂಟರ್ ಸವಾರ ಸುಮಿತ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಬಿದ್ದು ಅಪಘಾತವಾಗಿದ್ದು,ಅಪಘಾತದಲ್ಲಿ ಪಿರ್ಯಾದಿಯ ಬಲಕಾಲಿನ ಮಣಿಗಂಟಿಗೆ  ಗುದ್ದಿದ ಗಾಯ, ಹೆಬ್ಬೆರಳಿಗೆ ಮತ್ತು ತೋರು ಬೆರಳಿಗೆ ತರಚಿದ ಗಾಯವಾಗಿದ್ದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ, ಸವಾರ ಸುಮಿತ್ ನಿಗೆ ಮೈಕೈಗೆ ತರಚಿದ ನೋವಾಗಿದ್ದು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 124/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಿಂಚನ್ ಪ್ರಾಯ : 21 ವರ್ಷ ತಂದೆ: ಭರತ್ ಎಲ್ ಪೂಜಾರಿ ವಾಸ: ಕೊಡಂಗೆ ಶಾಲೆ ಬಳಿ ಕೈಕಂಬ, ಬಿ ಮೂಡ ಗ್ರಾಮ,  ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಅಂಟೋನಿ ಕ್ಯಾಟರಿಂಗ್ ನಲ್ಲಿ ವೈಟರ್ ಆಗಿ  ಈ ದಿನ ದಿನಾಂಕ:14-11-2021 ರಂದು ನಿಶ್ಚಿತಾರ್ಥದ ನಿಮಿತ್ತ ಕ್ಯಾಟರಿಂಗ್ ಬಗ್ಗೆ ಮಂಗಳೂರಿಗೆ ಹೋಗಿ ಕೆಲಸ ಮುಗಿಸಿ ವಾಪಾಸ್ಸು  KA 21 B 0728  ನಂಬರ್ ದ ಪಿಕ್ ಆಪ್ ವಾಹನದಲ್ಲಿ  ಅದರ ಚಾಲಕ ಕ್ಯಾಬಿನ್ ನಲ್ಲಿ ರೋಹನ್ ರವರನ್ನು ಕುಳ್ಳಿರಿಸಿ, ಹಿಂದುಗಡೆ ಬಾಡಿಯಲ್ಲಿ ಪ್ರಕರಣದ ಪಿರ್ಯಾದಿ ಸಿಂಚನ್ , ಆಶಿತ್ , ಚೇತನ್ , ಮತ್ತು ಸುದೀಪ್ ಎಂಬವರನ್ನು ಕುಳ್ಳೀರಿಸಿಕೊಂಡು ಮಂಗಳೂರು ಕಡೆಯಿಂದ ಮೊಡಂಕಾಪು ಬಿ.ಸಿ.ರೋಡ್ ಕಡೆಗೆ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು 15:45 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲಕಟ್ಟೆ ಪಂಪ್ ಹೌಸ್ ಬಳಿ  ಪಿಕ್ ಆಪ್ ವಾಹನವನ್ನು  ಅತೀ ವೇಗ ದುಡುಕುತನ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಚಾಲಕನ ಚಾಲನ ಹತೋಟಿ ತಪ್ಪಿ ರಸ್ತೆಯ ಎಡಬದಿಯ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿ ಹಿಂದುಗಡೆ ಕುಳಿತಿದ್ದ ಪಿರ್ಯಾದಿ ಸಿಂಚನ್ ಹಾಗೂ ಇತರರು ರಟ್ಟಿ ರಸ್ತೆಗೆ  ಬಿದ್ದು ಪಿರ್ಯಾದುದಾರರ ಬಲಕಾಲಿಗೆ ಹಾಗೂ ತಲೆಗೆ ಗುದ್ದಿದ ಗಾಯ ಸುದೀಪ್ ಗೆ ತಲೆಗೆ ಕೈಕಾಲು ಗಳಿಗೆ ಮತ್ತು ಎಡ ಕಣ್ಣಿನ ಬಳಿ ಗಾಯ ,ಆಶಿತ್ ಮತ್ತು ಚೇತನ್ ರವರಿಗೆ ತಲೆಗೆ ಕೈಕಾಲುಗಳಿಗೆ ತೀವ್ರಗಾಯವಾಗಿದ್ದು  ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ತೀವ್ರ ಗಾಯಗೊಂಡ ಆಶಿತ್ ಮತ್ತು ಚೇತನ್ ರವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 125/2021  ಕಲಂ 279,337,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿ ಎಮ್ ಇಸುಬು (47) ತಂದೆ:ಮಹಮ್ಮದ್ ವಾಸ:ಪಡ್ಡಡ್ಕ ಮನೆ ನೆಲ್ಯಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರು ದಿ:10.11.2021 ರಂದು ರಾತ್ರಿ  ತನ್ನ ಮಕ್ಕಳನ್ನು ನೆಲ್ಯಾಡಿ ಮಸೀದಿಯಿಂದ ಕರೆದುಕೊಂಡು ಬರಲು ಫಿರ್ಯಾಧಿಯು ಮನೆಯಿಂದ ತನ್ನ ಬಾಬ್ತು ಕೆಎ-21-ಇಎ-9563 ನೇ ಮೋಟಾರು ಬೈಕ್ ನಲ್ಲಿ ಸವಾರಿ ಮಾಡಿಕೊಂಡು ರಾ.ಹೆ-75 ರಲ್ಲಿ ಹೋಗುತ್ತಾ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಪೇಟೆಯ ಮಸೀದಿ ರಸ್ತೆಗೆ ತಿರುಗುವರೇ ಫಿರ್ಯಾಧಿಯು ಮೋಟಾರು ಸೈಕಲ್ ನ ಬಲಬದಿ ಇಂಡಿಕೇಟರ್ ಹಾಕಿ ನಿಧಾನವಾಗಿ ಮಸೀದಿ ರಸ್ತೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ರಾತ್ರಿ 8-15 ಗಂಟೆಗೆ ರಸ್ತೆಯ ಮುಕ್ಕಾಲು ಭಾಗ ದಾಟಿದ ನಂತರ ಫಿರ್ಯಾಧಿ ಹಿಂಬದಿಯಿಂದ ಅಂದರೆ ಉಪ್ಪಿನಂಗಡಿ ಕಡೆಯಿಂದ ಪೆರಿಯಶಾಂತಿ ಕಡೆಗೆ ಕೆಎ-21-ಹೆಚ್-8706 ನೇ ಮೋಟಾರು ಬೈಕನ್ನು ಅದರ ಸವಾರ ನವಾಲ್ ಎಂಬಾತನು ತೀರಾ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾಧಿಯ ಮೋಟಾರು ಬೈಕಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಬೈಕ್ ಜಖಂ ಗೊಂಡು, ಅಲ್ಲದೇ ಫಿರ್ಯಾಧಿ ಬಲ ಮಗ್ಗುಲಾಗಿ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾಧಿಯ ಬಲಕೈ ಹಸ್ತ ಮತ್ತು ಬೆರಳುಗಳಿಗೆ ಮೂಳೆ ಮುರಿತದ ತೀವ್ರ ಗಾಯವಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದು ದಿನಾಂಕ:11.11.2021 ರಂದು ನೋವು ಉಲ್ಭಣಗೊಂಡು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಹೋಗಲು ತಿಳಿಸಿದಂತೆ ಪುತ್ತೂರು ಸಿಟಿ ಆಸ್ಪತ್ರೆಗೆ ಹೋದಲ್ಲಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ:139/2021 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಬಿನ್ ಅಬ್ದುಲ್ ರಝಾಕ್( 16 ವರ್ಷ), ತಂದೆ:  ಅಬ್ದುಲ್ ರಝಾಕ್, ವಾಸ: 420, ಕಡವಿನ ಬಾಗಿಲು ಮನೆ, ಇಳಂತಿಲ ಅಂಚೆ & ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 14-11-2021 ರಂದು 07-30 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಮೊಹಮ್ಮದ್ ಸಾದಿಕ್ ಎಂಬವರು KA-21-EB-5293 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿ ನಲ್ಲಿ ಪಿರ್ಯಾದುದಾರರಾದ ಮಹಮ್ಮದ್ ಬಿನ್ ಅಬ್ದುಲ್ ರಝಾಕ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ-ಇಳಂತಿಲ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಕಡವಿನಬಾಗಿಲು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಡವಿನಬಾಗಿಲು ಎಂಬಲ್ಲಿ ಸುಳ್ಯ ಟ್ರೇಡರ್ಸ್ ಗಾರ್ಬಲ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ, ಮೋಟಾರ್ ಸೈಕಲ್ ಸ್ಕಿಡ್ ಆಗಿ ಸವಾರರಿಬ್ಬರೂ ರಸ್ತೆಗೆ ಬಿದ್ದು, ಸಹಸವಾರನಿಗೆ ಎಡಕೈ ತಟ್ಟಿಗೆ, ಎಡಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ರಕ್ತಗಾಯ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಆರೋಪಿ ಸವಾರನಿಗೆ ಬಲಕೈತಟ್ಟಿಗೆ, ಬಲಕಾಲಿನ ಮಣಿಗಂಟಿನ ಬಳಿ ಗುದ್ದಿದ ಹಾಗೂ ತರಚಿದ ಗಾಯವಾಗಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  142/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ 14-11-2021 ರಂದು 17.30 ಗಂಟೆಗೆ  ಧರ್ಮಸ್ಥಳ ಪೊಲೀಸ್ ಠಾಣಾ  ಪೊಲೀಸ್ ಉಪ ನಿರೀಕ್ಷಕರಾದ  ಕೃಷ್ಣಕಾಂತ ಪಾಟೀಲ್ ರವರು ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕಾಸಿ ಎಂಬಲ್ಲಿ  ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದಾಗ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ  1) ದಿವಾಕರ ಕೆ, 2) ಶಾಂತಪ್ಪ ಗೌಡ3) ಸಂಜೀವ ಪೂಜಾರಿ4) ಶಿವಣ್ಣ5) ಬಾಲಕೃಷ್ಣ ಮುಗೇರ 6) ಅಂಬ್ರೋ ಸ್ ಡಿ ಸೋಜಾ 7) ಹರೀಶ್ 8) ಸುಂದರ 9) ಉಮೇಶ 10) ಕೃಷ್ಣಪ್ಪ ಪೂಜಾರಿ  ರವರನ್ನು ವಶಕ್ಕೆ ಪಡೆದುಕೊಂಡಿದ್ದು  ಮಹಾಲಿಂಗ, ನವೀನ್ ಎಂಬವರು ಓಡಿ ಪರಾರಿಯಾಗಿರುತ್ತಾರೆ . ಆರೋಪಿಗಳ ವಶದಿಂದ  ಜೂಜಾಟಕ್ಕೆ ಬಳಸಿದ  10 ಕೋಳಿಗಳು  ಹಾಗೂ 9560/- ರೂ ಮತ್ತು ಸ್ಥಳದಿಂದ 04 ಮೋಟಾರ್ ಸೈಕಲ್ ಗಳನ್ನು  ಸ್ವಾಧಿನಪಡಿಸಿಕೊಂಡಿದ್ದು, ಸ್ವಾಧಿನಪಡಿಸಿಕೊಂಡ ವಾಹನಗಳ ಅಂದಾಜು ಮೌಲ್ಯ 1,45,000/- ರೂ ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 73/2021 ಕಲಂ:87 ಕೆ.ಪಿ ಅಕ್ಟ್  ನಂತೆ ಪ್ರಕರಣ ದಾಖಲಾಗಿದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಿ ಹರಿಯಪ್ಪ ಮಡಿವಾಳ(75) ತಂದೆ: ದಿ| ಸೂರಪ್ಪ ಮಡಿವಾಳ ವಾಸ: ಮುಗ್ದಾಲ್ ಗುಡ್ಡೆ ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಮಗ ಮೃತ ಸೋಮಶೇಖರ್ ದಿನಾಂಕ:13-11-2021 ರಂದು ಸೆಲೂನ್ ನಲ್ಲಿ ಕೆಲಸ ಮಾಡಿಕೊಂಡಿರುವ ಸಮಯ ಸಂಜೆ ಸುಮಾರು 6.30 ಗಂಟೆಗೆ ಎದೆ ನೋವು ಮತ್ತು ತಲೆ ನೋವು ಆಗುತ್ತಿರುವುದಾಗಿ ತಿಳಿಸಿ ಮನೆಗೆ ಹೋಗಿದ್ದು, ಮನೆಯಲ್ಲಿ ಕುಸಿದು ಬಿದ್ದಿರುತ್ತಾನೆ. ಬಳಿಕ ಆತನನ್ನು ಆಂಬ್ಯುಲೆನ್ಸ್ ನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದಾಗ ವೈದ್ಯರು ರಾತ್ರಿ 9.30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 38-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-11-2021 11:53 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080