ಅಪಘಾತ ಪ್ರಕರಣ: ೦2
ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ್ವರಿ (30) ತಂದೆ: ಬಾಸ್ಕರ ವಾಸ: ಕಲ್ಲುಮುಟ್ಲು ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರು ಅವರ ತಂದೆ ಅಪ್ಪಕುಂಞ (65) ರವರೊಂದಿಗೆ ದಿನಾಂಕ 13.12.2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಅರಂತೋಡು ಕಡೆಯಿಂದ ಸುಳ್ಯ ಬಸ್ ಸ್ಟ್ಯಾಂಡ್ ಕಡೆಗೆ ಕೆಎ 21 ಡಬ್ಲ್ಯು 3828 ನೇದರ ಮೋಟಾರ್ ಸೈಕಲ್ ಸವಾರ ನಂದಿಕ್ ಕೆ ಜೆ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಿರ್ಯಾದುದಾರರ ತಂದೆಗೆ ಡಿಕ್ಕಿವುಂಡು ಮಾಡಿದ ಪರಿಣಾಮ ಪಿರ್ಯಾದುದಾರರ ತಂದೆಯು ರಸ್ತೆಗೆ ಬಿದ್ದು, ತಲೆಯ ಹಿಂಬದಿ ಹಾಗೂ ಕಾಲಿಗೆ ರಕ್ತಗಾಯವಾದವರನ್ನು ಪಿರ್ಯಾದುದಾರರು ಮತ್ತು ಅಲೇ ಇದ್ದ ಸ್ಥಳಿಯರು ಉಪಚರಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆ ಹೋಗಿ ನಂತರ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 97/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ ಟಿ.ಜೆ ಪ್ರಾಯ 38 ವರ್ಷ, ಗಂಡ: ಟಿ.ವಿ ಜೊಸೇಫ್, ವಾಸ: ಅರಿಮಜಲುಮನೆ, ಇಚಲಂಪಾಡಿ ಗ್ರಾಮ, ಕಡಬ ತಾಲೂಕು ರವರ ದೂರಿನಂತೆ ದಿನಾಂಕ 13-12-2021 ರಂದು 18-30 ಗಂಟೆಗೆ ಆರೋಪಿ ಲಾರಿ ಚಾಲಕ KA-13-A-0603ನೇ ನೋಂದಣಿ ನಂಬ್ರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಅಲ್ವಿನ್ ಜಾರ್ಜ್ ಎಂಬವರು ಸವಾರರಾಗಿ ಸೆಬಿನ್ ಸನ್ನಿ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೊಗುತ್ತಿದ್ದ KA-19-EH-3960ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಸವಾರ ಮತ್ತು ಸಹಸವಾರ ಗಂಬೀರ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಸವಾರ ಅಲ್ವಿನ್ ಜಾರ್ಜ್ ರವರು ಚಿಕಿತ್ಸೆ ಫಲಿಸದೆ ದಿನಾಂಕ.13.12.2021 ರಂದು 20-51 ಗಂಟೆಗೆ ಮೃತಪಟ್ಟಿರುತ್ತಾರೆ ಅಲ್ಪಿನ್ ಜಾರ್ಜ್ರವರ ಮೃತ ದೇಹವು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಇರುತ್ತದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 152/2021 ಕಲಂ: 279,338, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಕ್ಷಿತ್ ಪ್ರಾಯ 28 ವರ್ಷ ತಂದೆ; ನಾರಾಯಣ ಪೂಜಾರಿ ವಾಸ; ಮರ್ದೋಳಿ ಮನೆ ನರಿಕೊಂಬು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ಮುಗರೋಡಿ ಕನ್ಷ್ಟ್ರಕ್ಷನ್ ನ ಬಾಬ್ತು ಕಂಪೆನಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು ಬಿ.ಸಿರೋಡು – ಪುಂಜಾಲ್ ಕಟ್ಟೆ ಚತುಷ್ಪದ ರಸ್ತೆಯ ಅಗಲೀಕರಣದ ನಿರ್ಮಾಣ ಕೆಲಸ ಆಗುತ್ತಿದ್ದು ಸದ್ರಿ ರಸ್ತೆಯ ಬಾಬ್ತು ತಡೆಗೋಡೆ ನಿರ್ಮಾಣದ ಕೆಲಸವನ್ನು ಪಿರ್ಯಾದಿದಾರರು 10 ತಿಂಗಳಿಂದ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು. ತಡೆಗೋಡೆ ನಿರ್ಮಾಣ ಮಾಡುವರೇ G-I ಕಬ್ಬಿಣದ ಶೀಟುಗಳನ್ನು ಅಳವಡಿಸಿ ಕೆಲಸ ಮಾಡಿಕೊಂಡಿದ್ದು ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ ಎಂಬಲ್ಲಿ ಕಾಮಗಾರಿ ನಡೆಯುತ್ತಿದ್ದು ದಿನಾಂಕ 11-12-2021 ರಂದು ಪಿರ್ಯಾದಿದಾರರು ಮತ್ತು ಕೆಲಸದವರು ರಾತ್ರಿ 7.30 ಗಂಟೆಯ ವರೆಗೆ ಕೆಲಸ ಮಾಡಿ ಆದಿತ್ಯವಾರ ರಜೆ ಇದ್ದುದರಿಂದ ಪಿರ್ಯಾದಿದಾರರು ಮತ್ತು ಕೆಲಸದವರು 35 G-I ಕಬ್ಬಿಣದ ಶೀಟುಗಳನ್ನು ರಸ್ತೆಯ ಬದಿಯಲ್ಲಿ ಭದ್ರವಾಗಿ ಜೋಡಿಸಿಟ್ಟು ಅದರ ಮೇಲೆ ಟಾರ್ಪಾಲನ್ನು ಮುಚ್ಚಿಟ್ಟು ಮನೆಗೆ ಹೋಗಿದ್ದು . ದಿನಾಂಕ 13-12-2021 ರಂದು ಬೆಳಿಗ್ಗೆ 9.00 ಗಂಟೆಗೆ ಪಿರ್ಯಾದಿದಾರರು ಕೆಳಗಿನ ವಗ್ಗ ಎಂಬಲ್ಲಿಗೆ ಬಂದಾಗ ರಸ್ತೆಯ ಬದಿಯಲ್ಲಿ ಜೋಡಿಸಿಟ್ಟ 35, G-I ಕಬ್ಬಿಣದ ಶೀಟುಗಳ ಪೈಕಿ 24, G-I ಕಬ್ಬಿಣದ ಶೀಟುಗಳು ಇಲ್ಲದೇ ಇದ್ದು ಪಿರ್ಯಾದಿದಾರರು ಪಕ್ಕದಲ್ಲಿ ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು 24, G-I ಕಬ್ಬಿಣದ ಶೀಟುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಕಳವಾದ 24, G-I ಕಬ್ಬಿಣದ ಶೀಟುಗಳ ಅಂದಾಜು ಮೊತ್ತ ರೂ 75,000/ ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 157/2021 ಕಲಂ 379 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦3
ಬೆಳ್ತಂಗಡಿ ಪೊಲೀಸ್ ಠಾಣೆ : ಸಹಾಯಕ ಪೊಲೀಸ್ ಉಪನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರು ದಿನಾಂಕ:14.12.2021 ರಂದು ಸಿಬ್ಬಂದಿಗಳ ಜೊತೆ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಬೊಳ್ಳಾಜೆ ಎಂಬಲ್ಲಿ ತಲುಪಿದಾಗ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಸದ್ರಿ ವಾಹನವನ್ನು ಪರಿಶೀಲಿಸಲಾಗಿ ಅದರಲ್ಲಿ ಒಂದು ದನವು ಇದ್ದು , ಈ ಬಗ್ಗೆ ಆರೋಪಿಗಳಲ್ಲಿ ಕೇಳಿದಾಗ ಸದ್ರಿ ದನವನ್ನು ಸಾಗಾಟಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಯಾ ಅನುಮತಿಯನ್ನು ಪಡೆಯದೇ ಅಕ್ರಮವಾಗಿ ದನವನ್ನು ಕಡಿದು ಮಾಂಸಮಾಡಲು ಸಾಗಾಟಮಾಡುತ್ತಿರುವುದಾಗಿದೆ. ಸ್ವಾಧೀನಪಡಿಸಿದ ಹಸುವಿನ ಅಂದಾಜು ಮೌಲ್ಯ ರೂ.10,000/- ಹಾಗೂ ದನವನ್ನು ಸಾಗಾಟ ಮಾಡಲು ಉಪಯೋಗಿಸಿದ ಮಹೇಂದ್ರ ಪಿಕಪ್ ವಾಹನದ ಅಂದಾಜು ಮೌಲ್ಯ 1,50,000/- ಆಗಬಹುದ್ದು. ಸದ್ರಿ ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಲಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 109/2021 ಕಲಂ: 4,5,7,8,12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ & ಸಂರಕ್ಷಣಾ ಆಧ್ಯಾದೇಶ ನಿಯಮ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕರು ಪುತ್ತೂರು ನಗರ ಪೊಲೀಸ್ ಠಾಣೆ ರವರು ದಿನಾಂಕ: 13.12.2021 ರಂದು ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಪುತ್ತೂರು ತಾಲೂಕು, ಪುತ್ತೂರು ಕಸಬಾ ಗ್ರಾಮದ, APMC ರಸ್ತೆ ಬಳಿ ಇರುವ ಪ್ರುಟ್ಸ್ ಮತ್ತು ವೆಜಿಟೇಬಲ್ಸ್ ಅಂಗಡಿಯ ಬಳಿ ಒಬ್ಬಾತನು ಒಂದು ಪಾಲಿಥಿನ್ ಕೈ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವುದನ್ನು ಕಂಡು ಸಂಶಯ ಬಂದು ಜೀಪನ್ನು ನಿಲ್ಲಿಸಿ, ಆತನ ಬಳಿ ಹೋದಾಗ ಆತನು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ಕಂಡು ಓಡಿ ಹೋಗಲು ಪ್ರಯತ್ನಿಸಿದಾಗ ಸಿಬ್ಬಂದಿಗಳ ಸಹಾಯದಿಂದ ಆತನನ್ನು ಹಿಡಿದು ನಿಲ್ಲಿಸಿ ಆತನ ಹೆಸರು ವಿಳಾಸ ಕೇಳಲಾಗಿ ಶೇಖರ (64) ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಹಸಿರು ಬಣ್ಣದ ಪಾಲಿಥಿನ್ ಕೈ ಚೀಲದ ಬಗ್ಗೆ ವಿಚಾರಿಸಲಾಗಿ ಅಕ್ರಮವಾಗಿ ಮದ್ಯವನ್ನು ವಶದಲ್ಲಿಟ್ಟುಕೊಂಡು ಪರವಾನಿಗೆ ರಹಿತ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದುದರಿಂದ ಆರೋಪಿತನ ವಶದಲ್ಲಿದ್ದ 90 Ml ನ 43 “DOUBLE KICK FINE WHISKY” ಟೆಟ್ರಾ ಪ್ಯಾಕೇಟ್‌ಗಳನ್ನು, ನಗದು ಹಣ ರೂ: 170/- ಮತ್ತು ಹಸಿರು ಬಣ್ಣದ ಪಾಲಿಥಿನ್ ಕೈ ಚೀಲವನ್ನು ವಶಪಡಿಸಿಕೊಂಡಿದ್ದು ಇದರ ಒಟ್ಟು ಬೆಲೆ ರೂ: 1,290/- ಆಗಿದ್ದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 112-2021 ಕಲಂ: 32, 34 ಕೆ.ಇ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ
ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 14.12.2021 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿತರು ಏಕಾಎಕಿಯಾಗಿ ಯಾವುದೇ ಅನುಮತಿ ಪಡೆಯದೆ ಅಕ್ರಮ ಕೂಟ ಸೇರಿಕೊಂಡು ಪೊಲೀಸು ಠಾಣೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಸೇರಿ ಸಾರ್ವಜನಿಕರ, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಾ ಠಾಣೆಯೊಳಗ ಪ್ರವೇಶಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ ಯಾವುದೇ ಮಾಸ್ಕ್ ಧರಿಸದೆ ಸರಕಾರವು ಹೊರಡಿಸಿದ ಕೋವಿಡ್ ನಿಯಾಮಾವಳಿಯನ್ನು ಉಲ್ಲಂಘಿಸಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 160/2021 ಕಲಂ:143.147. 151 341 353 269 270 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಣಪ ಪೂಜಾರಿ (64) ತಂದೆ:ದಿ||ಐತ ಪೂಜಾರಿ ವಾಸ:ಪಟ್ಲ ಮನೆ, ವಿಟ್ಲಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ರವರ ಮಗಳು ಪ್ರಿಯಕುಮಾರಿ ಪ್ರಾಯ 38 ವರ್ಷ ಎಂಬವರು ಸುಮಾರು 12 ವರ್ಷದಿಂದ ಪುತ್ತೂರು ನಗರದ ಹಾರಾಡಿ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕೆ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿಕೊಂಡಿದ್ದು. ಸುಮಾರು ಒಂದು ತಿಂಗಳ ಹಿಂದೆ ಮುಖ್ಯ ಶಿಕ್ಷಕಿಯಾಗಿ ಬಡ್ತಿಗೊಂಡಿರುವುದರಿಂದ ,ಸದ್ರಿ ಶಾಲೆಯು ಉನ್ನತೀಕರಣಗೊಂಡಿರುವುದರಿಂದ ಕೆಲಸದ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು. ಮನೆಯಲ್ಲಿರುವಾಗ ಆಗಾಗ ಪಿರ್ಯಾಧಿದಾರರ ಹತ್ತಿರ ನನಗೆ ಕರ್ತವ್ಯ ಒತ್ತಡ ಜಾಸ್ತಿಯಾಗುತ್ತದೆ ಎಂದು ಹೇಳುತ್ತಿದ್ದಳು. ದಿನಾಂಕ:13-12-2021 ರಂದು ಪಿರ್ಯಾಧಿದಾರರಿಗೆ ಅಳಿಯ ರಮೇಶ ರವರು ಬೆಳಿಗ್ಗೆ 06.00 ಗಂಟೆಯ ಸಮಯಕ್ಕೆ ಫೋನ್ ಕರೆ ಮಾಡಿ ಹೆಂಡತಿ ಬಿದ್ದಿರುತ್ತಾಳೆ ಬೇಗ ಬನ್ನಿ ತಿಳಿಸಿದ ಮೇರೆಗೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಸಿಪಿಸಿಆರ್‌ಐ ಬಳಿ ಇರುವ ಅಳಿಯನ ಮನೆಗೆ ಹೋಗಿ ವಿಚಾರಿಸಲಾಗಿ ಪಿರ್ಯಾಧಿಯ ಮಗಳು ಮನೆಯ ಒಳಗೆ ಕೋಣೆಯಲ್ಲಿ ಬೆಳಿಗ್ಗೆ 5.30 ಗಂಟೆಯ ಸಮಯಕ್ಕೆ ಕಿಟಕಿಯ ಮೇಲ್ಭಾಗದ ಕಂಬಿಗೆ ಚೂಡಿದಾರದ ವೇಲ್‌ನ್ನು ಕಟ್ಟಿ ಮತ್ತೂಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡಿರುವುದು ತಿಳಿದಿರುತ್ತದೆ. ಪಿರ್ಯಾಧಿದಾರರು ಕೂಡಲೆ ಅಳಿಯನ ಕಾರಿನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯಾಧಿಕಾರಿಯವರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸದಂತೆ ಒಂದು ಅಂಬುಲೆನ್ಸನಲ್ಲಿ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಪಿರ್ಯಾಧಿದಾರರ ಮಗಳು ಚಿಕತ್ಸೆಯಲ್ಲಿರುತ್ತಾ ದಿನಾಂಕ:14-12-2021 ರಂದು ಸಂಜೆ 5.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 35/2021 ಕಲಂ 174 ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.