ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ಮಜೀದ್‌, ಪ್ರಾಯ 43 ವರ್ಷ, ತಂದೆ: ದಿ|| ಮಹಮ್ಮದ್‌, ವಾಸ: ರಾಮನಗರ ಮನೆ, ಉಪ್ಪಿನಂಗಡಿ ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 15-03-2022 ರಂದು ಸಮಯ ಸುಮಾರು  05-00 ಗಂಟೆಗೆ ಯಾವುದೋ ಅಪರಿಚಿತ ವಾಹನವನ್ನು ಅದರ ಚಾಲಕ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನೇಜಿಗಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆಸರು ತಿಳಿದು ಬಾರದ ಪಾದಾಚಾರಿಯೊಬ್ಬರಿಗೆ ಅಪಘಾತವಾಗಿ, ಅವರು ರಸ್ತೆಗೆ ಬಿದ್ದು, ಮುಖಕ್ಕೆ, ಕೈಗಳಿಗೆ ಹಾಗೂ ಕಾಲಿಗೆ ರಕ್ತಗಾಯವಾಗಿ ಮಾತನಾಡದೇ ಇದ್ದು, ಗಾಯಾಳುವನ್ನು ಚಿಕಿತ್ಸೆ ಬಗ್ಗೆ 108 ಅಂಬ್ಯಲೆನ್ಸ್‌ ತರಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ವಾಹನ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಬಗ್ಗೆ ದಾಖಲಿಸದೇ ಮತ್ತು ಪೊಲೀಸ್‌ ಠಾಣೆಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  50/2022 ಕಲಂ: 279,337ಐಪಿಸಿ & ಕಲಂ: 134(ಎ)& (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ಮಜೀದ್‌, ಪ್ರಾಯ 43 ವರ್ಷ, ತಂದೆ: ದಿ|| ಮಹಮ್ಮದ್‌, ವಾಸ: ರಾಮನಗರ ಮನೆ, ಉಪ್ಪಿನಂಗಡಿ ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 15-03-2022 ರಂದು ಸಮಯ ಸುಮಾರು  05-00 ಗಂಟೆಗೆ ಯಾವುದೋ ಅಪರಿಚಿತ ವಾಹನವನ್ನು ಅದರ ಚಾಲಕ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನೇಜಿಗಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆಸರು ತಿಳಿದು ಬಾರದ ಪಾದಾಚಾರಿಯೊಬ್ಬರಿಗೆ ಅಪಘಾತವಾಗಿ, ಅವರು ರಸ್ತೆಗೆ ಬಿದ್ದು, ಮುಖಕ್ಕೆ, ಕೈಗಳಿಗೆ ಹಾಗೂ ಕಾಲಿಗೆ ರಕ್ತಗಾಯವಾಗಿ ಮಾತನಾಡದೇ ಇದ್ದು, ಗಾಯಾಳುವನ್ನು ಚಿಕಿತ್ಸೆ ಬಗ್ಗೆ 108 ಅಂಬ್ಯಲೆನ್ಸ್‌ ತರಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ವಾಹನ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಬಗ್ಗೆ ದಾಖಲಿಸದೇ ಮತ್ತು ಪೊಲೀಸ್‌ ಠಾಣೆಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  50/2022 ಕಲಂ: 279,337ಐಪಿಸಿ & ಕಲಂ: 134(ಎ)& (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಿಯುದ್ದೀನ್ ಶಾಫಿ  ಪ್ರಾಯ 39 ವರ್ಷ, ತಂದೆ:ಹಸನ್ ಮುಸ್ಲೀಯಾರ್ , ವಾಸ: ಪೊಳಲಿ ಮನೆ ಮನೆ, ಕರಿಯಂಗಳ  ಗ್ರಾಮ, ಬಂಟ್ವಾಳ  ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 14-03-2022 ರಂದು ಕುಂತೂರಿನಲ್ಲಿ ಸಂಬಂದಿಕರ ಮನೆಯಲ್ಲಿ ಹರಕೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುವರೇ ಪಿರ್ಯಾದುದಾರರು ತನ್ನ ಕಾರಿನಲ್ಲಿ ಹಾಗೂ ಪಿರ್ಯಾದಿಯ ಭಾವ ಅಬ್ದುಲ್ ರಶೀದ್ ಮತ್ತು ಹರ್ಷದ್ ಮೋಟಾರ್ ಸೈಕಲ್ ನಂಬ್ರ KA-19-HF-8883 ನೇದರಲ್ಲಿ  ಕಡಬ – ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ರಾಮಕುಂಜ ಗ್ರಾಮದ  ಗೋಳಿತ್ತಡಿ  ಎಂಬಲ್ಲಿಗೆ ರಾತ್ರಿ ಸಮಯ 19-30 ಗಂಟೆಗೆ  ತಲುಪಿದಾಗ  ಏಣಿತ್ತಡ್ಕ ಕಡೆಯಿಂದ  ಗೋಳಿತ್ತಡಿ ಕಡೆಗೆ  KA-19-EE-1430 ನೇ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ಗೆ ಯಾವುದೇ ಸೂಚನೆ ನೀಡದೆ  ರಾಜ್ಯ ಹೆದ್ದರಿಯ ಡಾಮಾರು ರಸ್ತೆಗೆ  ಏಕಾಏಕಿಯಾಗಿ ನುಗ್ಗಿಸಿ  ಫಿರ್ಯಾದುದಾರರ ಭಾವ  ಅಬ್ದುಲ್ ರಶೀದ್ ಚಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಹೋಡೆದ ಪರಿಣಾಮ  ಎರಡು ಮೋಟಾರ್ ಸೈಕಲ್ ಸವಾರರು ಡಾಮರು ರಸ್ತೆಗೆ ಬಿದ್ದಿದು. ನಂತರ ಕೂಡಲೇ ಪಿರ್ಯಾದುದಾರರು ತನ್ನು ಚಲಾಯಿಸುತ್ತಿದ್ದ ಕಾರನ್ನು ನಿಲ್ಲಿಸಿ  ಎರಡು ಬೈಕಿನ ಗಾಯಳುಗಳನ್ನು ಉಪಚಾರಿಸಿ ಪಿರ್ಯಾದಿಯ ಕಾರಿನಲ್ಲಿಯೇ ಅಬ್ದುಲ್ ರಶೀದ್ ಮತ್ತು ಹರ್ಷದ್ ಎಂಬವರನ್ನು ಚಿಕಿತ್ಸೆಯ  ಬಗ್ಗೆ  ಮಗಳೂರು ದೇರಳಕಟ್ಟೆ ಯಾನಪೋಯ ಆಸ್ವತ್ರೆಗೆ ಮತ್ತು ಡಿಕ್ಕಿ ಉಂಟು ಮಾಡಿದ ಮೋಟಾರ್ ಸೈಕಲ್ ಸವಾರನಿಗೆ 108 ಅಂಬ್ಯುಲೇನ್ಸ್ ನಲ್ಲಿ ಆಸ್ವತ್ರೆಗೆ ಕೊಂಡು ಹೋಗಿದ್ದು ನಂತರ ಗಾಯಳುಗಳಾದ ಅಬ್ದುಲ್ ರಶೀದ್ ನನ್ನು ವೈದ್ಯರು ಪರಿಕ್ಷೀಸಿ ಒಳಾರೋಗಿಯಾಗಿ ದಾಖಾಲು ಮಾಡಿ  ಸಹಸವಾರನಾದ  ಹರ್ಷದ್ ನನ್ನು ಸಣ್ಣ ಪುಟ್ಟ ಗಾಯವಾದ ಕಾರಣ ಹೋರರೋಗಿಯಾಗಿ ದಾಖಾಲು ಮಾಡಿ ಚಿಕಿತ್ಸೆ ಕೊಟ್ಟು ಕಳುಹಿಸಿರುತ್ತಾರೆ  ಈ ಅಪಘಾತದಿಂದ ಅಬ್ದುಲ್ ರಶೀದ್ ಗೆ  ಹಣೆಯ ಬಲಭಾಗ  ಮೂಗಿಗೆ ತಲೆಗೆ ಗುದ್ದಿದ ನೋವು  ಉಂಟಾಗಿರುತ್ತಾದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 24/2022 ಕಲಂ. 279,337   IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನೀಲಯ್ಯ ಮೂಲ್ಯ, ಪ್ರಾಯ: 60 ವರ್ಷ, ತಂದೆ: ದಿ. ಚೆನ್ನಪ್ಪ ಮೂಲ್ಯ, ವಾಸ: ಮಾವಿನಕಟ್ಟೆ ಮನೆ, ಚೆನ್ನೈತ್ತೋಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 14-03-2022 ರಂದು ಬಂಟ್ವಾಳ ಕ್ಕೆ ಹೋದವರು ವಾಪಾಸು ತನ್ನ ಮನೆಗೆ ಮಹಾಲಸಾ ಬಸ್ಸುನಂಬ್ರ  KA20C5044 ನೇದರಲ್ಲಿ ಹೊರಟು ಸಂಜೆ 4.00 ಗಂಟೆಗೆ ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿಗೆ ತಲುಪಿದಾಗ ಬಸ್ಸು ನಿಲ್ಲಿಸಿದ್ದು, ಈ ಸಮಯ ಫಿರ್ಯಾದಿದಾರರು ಬಸ್ಸಿನಿಂದ ಇಳಿಯುತ್ತಿದ್ದಂತೆ ಬಸ್ಸಿನ ನಿರ್ವಾಹಕನಾದ ಜನಾರ್ಧನ ಭಂಡಾರಿಯು  ನಿರ್ಲಕ್ಷ್ಯತನದಿಂದ ಬಸ್ಸನ್ನು ಮುಂದೆ ಚಲಾಯಿಸಲು ಚಾಲಕ ನೇಮುರವರಿಗೆ ಸೂಚನೆ ಕೊಟ್ಟ ಮೇರೆಗೆ ಚಾಲಕನು  ಒಮ್ಮೆಲೇ ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಫಿರ್ಯಾದಿದಾರರು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ಬಿದ್ದು ಅವರ ಕಾಲಿನ ಎಡತೊಡೆಗೆ ಗುದ್ದಿದ ನೋವಾಗಿದ್ದು, ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 19/2022 ಕಲಂ: 279,  337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

 • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜನಾರ್ಧನ ಕೆ ಪ್ರಾಯ: 48 ವರ್ಷ, ನಾರಾಯಣ ದಾಸ್ ಕೆ,ನೆಟ್ಟಾರು ಮನೆ, ಬೆಳ್ಳಾರೆ ಗ್ರಾಮ, ಸುಳ್ಯ  ಎಂಬವರ ದೂರಿನಂತೆ ಪಿರ್ಯಾದುದಾರರ ಪತ್ನಿ ಅನುರಾಧ ಎಂಬವರ ತಂದೆ ರಾಜಪ್ಪ (65) ರವರು ಪಿರ್ಯಾದುದಾರರೊಂದಿಗೆ ಸುಮಾರು 7-8 ವರ್ಷಗಳಿಂದ ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ವಾಸವಾಗಿದ್ದು ಅವರು ಈ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಅಸೌಖ್ಯದಿಂದ್ದು ಹೊರಗಡೆ ಹೋಗದೇ ಹೆಚ್ಚಾಗಿ ಮನೆಯಲ್ಲಿಯೇ ಇರುತ್ತಿದ್ದರು. ದಿನಾಂಕ:06/03/2022 ರಂದು ಬೆಳಗ್ಗೆ 9.00 ಗಂಟೆಗೆ ಪಿರ್ಯಾದಾರರು ಪತ್ನಿ ಮತ್ತು ಮಕ್ಕಳೊಂದಿಗೆ ಗೇರುಕಟ್ಟೆಯಲ್ಲಿರುವ ತನ್ನ ಭಾವನ ಮಗನ ನಾಮಕರಣಕ್ಕೆ ಮಾವ ರಾಜಪ್ಪರವರನ್ನು  ಒಬ್ಬರನ್ನೇ ಮನೆಯಲ್ಲಿ  ಬಿಟ್ಟು ಹೋಗಿದ್ದು, ಪಿರ್ಯಾದುದಾರರು ಕಾರ್ಯಕ್ರಮ ಮುಗಿಸಿ ರಾತ್ರಿ 11:30 ಗಂಟೆಗೆ ವಾಪಾಸು ಮನೆಗೆ ಬಂದು ನೋಡಲಾಗಿ ರಾಜಪ್ಪ ರವರು ಮನೆಯಲ್ಲಿ ಇರದೇ ಇದ್ದು,  ಸುತ್ತ ಮುತ್ತ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಅಲ್ಲದೇ ನಂತರ ಸಂಬಂಧಿಕರಲ್ಲಿ ಹಾಗೂ ಇತರ ಕಡೆಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಹುಡುಕಾಡಿ ಈ ವರೆಗೆ ಪತ್ತೆಯಾಗದಿದ್ದು, ಈ ಬಗ್ಗೆ ಬೆಳ್ಳಾರೆ  ಪೊಲೀಸ್ ಠಾಣೆ. ಅ. ಕ್ರ20/2022 ಕಲಂ : ಗಂಡಸು  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಭುವನೇಶ್ವರಿ ರೈ ವಾಸ: ಜಕ್ರಿಬೆಟ್ಟು ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:15-03-2022 ರಂದು ಬೆಳಿಗ್ಗೆ 11.20 ಗಂಟೆಗೆ ಸುಮಾರು 10 ರಿಂದ 12 ಮಂದಿ ಗೂಂಡಾಗಳೊಂದಿಗೆ ಪಿರ್ಯಾದಿದಾರರ ಮನೆ ಅಂಗಳಕ್ಕೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಅಂಗಳದಲ್ಲಿದ್ದ ಹೂವಿನ ಕಟ್ಟೆ ಮತ್ತು ಕಂಪೌಂಡ್ ನ್ನು ನೆಲಸಮಗೊಳಿಸಿ ಕಂಪೌಂಡ್ ನಲ್ಲಿದ್ದ ಕಬ್ಬಿಣದ ಗೇಟು ಮತ್ತು ಕೆಂಪು ಕಲ್ಲುಗಳನ್ನು ಬೊಲೇರೋ ಪಿಕಪ್ ನಲ್ಲಿ ಕದ್ದು ಕೊಂಡು ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಪಿರ್ಯಾದಿದಾರರ ಗಂಡ ಶ್ರೀಧರರವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 28/2022  ಕಲಂ: 143, 147, 447, 427, 504, 506, 379 ಜೊತೆಗೆ 149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇಜಪ್ಪ ಪೂಜಾರಿ,ಪ್ರಾಯ 50 ವರ್ಷ,ತಂದೆ ಗೋವಿಂದ ಪೂಜಾರಿ,ವಾಸ: ಜೋಗಿಬೆಟ್ಟು ಮನೆ,ವಿಟ್ಲ ಕಸಬಾ ಗ್ರಾಮ,ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:14-03-2022 ರಂದು ವಿಟ್ಲ ಕಸಬ ಗ್ರಾಮದ ಮುಗೇರು ದೈವದ ಕೋಲ ನೋಡಿ ಮನೆಗೆ ವಾಪಸು ಬರುತ್ತಿರುವಾಗ ರಾತ್ರಿ 11.00 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಜೋಗಿಬೆಟ್ಟು ಎಂಬಲ್ಲಿಗೆ ತಲುಪಿದಾಗ ಆಪಾದಿತರುಗಳು ಪಿರ್ಯಾಧಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಆಪಾದಿತರ ಪೈಕಿ ಭಾಸ್ಕರ ಎಂಬವನು ಪಿರ್ಯಾಧಿದಾರರಿಗೆ ಕೈಯಿಂದ ಹೊಡೆದನು, ಗೋಪಾಲ ಎಂಬಾತನು ಕತ್ತಿಯಿಂದ ಹೊಡೆದು ರಕ್ತಗಾಯ ಮಾಡಿದ್ದು, ಯೋಗೀಶ್‌ ಎಂಬಾತನು ದೊಣ್ಣೆಯಿಂದ ಬಲ ಕೈ ಕೋಲು ಕೈಗೆ ಹಾಗೂ ಎಡ ಕಾಲಿನ ಕೋಲು ಕಾಲಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ಅದೇ ದಾರಿಯಲ್ಲಿ ಬರುತ್ತಿದ್ದ ಪಿರ್ಯಾಧಿ ಪರಿಚಯದ ರುಕ್ಮಯ್ಯ ಹಾಗೂ ರಮಾನಾಥರವರು ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಓಡಿ ಹೋಗಿರುತ್ತಾರೆ ಹಲ್ಲೆಗೊಳಗಾದ ಪಿರ್ಯಾಧಿದಾರರನ್ನು ಚಿಕಿತ್ಸೆಯ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 45/2022 ಕಲಂ:341,323,324,504,506 ಜೊತೆಗೆ34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ದಿನಾಂಕ: 15-03-2022 ರಂದು  ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 44/2022 ಕಲಂ: 504,324,354,506 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-03-2022 10:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080