ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ನವಾಜ್ ಪ್ರಾಯ:29 ತಂದೆ: ಇಬ್ರಾಹಿಂ ವಾಸ:ಏಂತಾರು ಮನೆ ಕೊಯಿಲಾ  ಗ್ರಾಮ ಕಡಬ ತಾಲೂಕು ರವರು ದಿನಾಂಕ:15.08.2022 ರಂದು ಮನೆಯಲ್ಲಿರುವ ಸಮಯ ತನ್ನ ಮೊಬೈಲ್ ರಿಜಾರ್ಜ್ ಖಾಲಿಯಾಗಿದ್ದರಿಂದ ಮನೆಯ ಪಕ್ಕದಲ್ಲಿದ್ದ ಆರೋಪಿ ನೌಫಾಲ್ ಎಂಬಾತನ ಅಂಗಡಿಗೆ ಹೋಗಿ Phone Pay ಮೂಲಕ 50 ರೂಪಾಯಿ ರಿಜಾರ್ಜ್ ಮಾಡಲು ಕೇಳಿಕೊಂಡಾಗ ಅಂಗಡಿಯಲ್ಲಿದ್ದ ನೌಫಾಲ್‌ ಅಂಗಡಿಯಲ್ಲಿ ಕೆಲಸ ಮಾಡುವ ಹಿಂದಿ ಮಾತನಾಡುವ ಕೆಲಸಗಾರರು Phone Pay  ಇಲ್ಲ ಎಂದು ತಿಳಿಸಿದ್ದು ಬಳಿಕ  ಆತೂರು ಮಸೀದಿ ಬಳಿಯ ದಿಲ್ಫರ್ ಮೆಡಿಕಲ್‌ಗೆ ಹೋಗಿ 50 ರೂ Google Pay ರಿಜಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಿರುತ್ತಾರೆ ನಂತರ ಪಿರ್ಯಾದಿಯ ಅಣ್ಣ ರಹೀಂ ಎಂಬಾತನು ಪಿರ್ಯಾದಿದಾರರಿಗೆ ಫೋನ್‌ ಕರೆ ಮಾಡಿ ನೀನು ಯಾಕೇ ನೌಫಾಲ್ ಅಂಗಡಿಗೆ ರಿಜಾರ್ಜ್ ಮಾಡಿಸಲು ಹೋಗಿದ್ದು ಆತನು ನನಗೆ ಫೋನ್‌ ಮಾಡಿ ನಿನ್ನ ತಮ್ಮ ನನ್ನ ಅಂಗಡಿಗೆ ಯಾಕೆ ಬರೋದು ಎಂದು ನನಗೆ ಅವಾಚ್ಯವಾಗಿ ಬೈದನು ಎಂದು ತಿಳಿಸಿರುತ್ತಾನೆ ನಂತರ ಪಿರ್ಯಾದಿಯು ಆರೋಪಿ ನೌಫಾಲ್‌ ಎಂಬಾತನಿಗೆ ಪೋನ್‌ ಮಾಡಿ  ನನ್ನ ಅಣ್ಣ ರಹೀಂನಿಗೆ ನೀನು ಯಾಕೆ ಬೈದದ್ದು ಎಂದು ಕೇಳಿದಾಗ ನೀನು ಅಂಗಡಿಯ ಹತ್ತಿರ ಬಾ ಮಾತನಾಡಲು ಇದೆ ಎಂದು ಪಿರ್ಯಾದಿಯನ್ನು ಬರಮಾಡಿಕೊಂಡು ಬಳಿಕ ಆರೋಪಿತನು 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂದಿಸಿದ ಗಲಾಟೆಗೆ ಸಂಬಂದಿಸಿದಂತೆ ನನ್ನ ತಮ್ಮ ಸಿನಾನ್ ಬಗ್ಗೆ ನೀನು ಯಾಕೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಎಂದು ಹೇಳಿ ಬಳಿಕ ಪಿರ್ಯಾದಿಯ ಶರ್ಟ್ ಕಾಲರ್ ಹಿಡಿದು ಗಲಾಟೆ ಮಾಡಿ ನಂತರ ಅಂಗಡಿಯಲ್ಲಿಯೇ ಇದ್ದ ಚಾಕುವಿನಿಂದ ಪಿರ್ಯಾದಿಯ ಹೊಟ್ಟೆಗೆ ಚುಚ್ಚಿದಾಗ ಪಿರ್ಯಾದಿಗೆ ತೀವ್ರ ರಕ್ತಸ್ರಾವವಾಗಿ ತೀವ್ರಗಾಯವಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 69/2022 ಕಲಂ: ಕಲಂ:504,323,326,506  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಶಾಂತ್ ಕೆ  ಪ್ರಾಯ:23 ವರ್ಷ ತಂದೆ: ಕೂಸಪ್ಪ ಪೂಜಾರಿ, ವಾಸ: ಪಾಲೆದಡಿ ಮನೆ, ಬೆದ್ರಬೆಟ್ಟು, ಕನ್ಯಾಡಿ-1 ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆ ಕೂಸಪ್ಪ ಪೂಜಾರಿ ಪ್ರಾಯ:52 ವರ್ಷ ಎಂಬವರು ಮಾನಸಿಕವಾಗಿ ಅಸ್ವಸ್ಥದಿಂದಿದ್ದವರು ದಿನಾಂಕ:28.07.2022 ರಂದು ರಾತ್ರಿ 10.00 ಗಂಟಗೆ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿ:29.07.2022 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿಯವರು ಚಿಕಿತ್ಸೆಯಲ್ಲಿರುತ್ತಾ ದಿನಾಂಕ:15.08.2022 ರಂದು ಬೆಳಿಗ್ಗೆ 5.30 ಗಂಟೆಗೆ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ:  33/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೃಷ್ಣಪ್ಪ(38)ತಂದೆ: ಡೊಂಬಯ್ಯ ವಾಸ:ಪೇರಿ ದರ್ಖಾಸು  ಮನೆ, ಹೊಸಂಗಡಿ  ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಮ್ಮ ಆನಂದ(36) ಎಂಬವರು ಬೆಳ್ತಂಗಡಿ  ತಾಲೂಕು  ಹೊಸಂಗಡಿ  ಗ್ರಾಮದ ಪೇರಿ ದರ್ಖಾಸು  ಎಂಬಲ್ಲಿ ವಾಸವಾಗಿದ್ದು  ದಿನಾಂಕ 15.08.2022 ರಂದು ಮದ್ಯಾಹ್ನ 02.30 ಗಂಟೆಗೆ ಫಿರ್ಯಾದಿಯವರ ತಮ್ಮ ತನ್ನ ಎಲ್ಲಾ ಬಟ್ಟೆ ಬರೆಗಳನ್ನು ಬ್ಯಾಗೊಂದರಲ್ಲಿ ತುಂಬಿಸಿಕೊಂಡು ಹೋಗಿರುತ್ತಾನೆ, ಸುಮಾರು 03.00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಕ್ಕನ ಮಗ ಸಚಿನ್ ಎಂಬಾತನು ಆನಂದನು ಹೋದ ದಾರಿಯಲ್ಲಿ ಹೋಗುತ್ತಿರುವಾಗ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಸರಕಾರಿ ಗೇರುಬೀಜದ ಪಾಡಿಯ ಗೇರು ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದನ್ನು ಕಂಡು ಬೊಬ್ಬೆ ಹೊಡೆದಿದ್ದು, ಆ ಸಮಯ ಪಿರ್ಯಾದಿದಾರರು  ಅಲ್ಲಿಗೆ ಹೋಗಿ ನೋಡಿ ಆನಂದನ ಕುತ್ತಿಗೆಗೆ ಬಿಗಿದ್ದಿದ್ದ ಲುಂಗಿಯನ್ನು ಕತ್ತಿಯಿಂದ ತುಂಡು ಮಾಡಿ ತೆಗೆದು ಸ್ಥಳೀಯ ವಾಹನವೊಂದರಲ್ಲಿ ಮೂಡುಬಿದ್ರೆ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ:17-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಮೇಶ್ ಪಿ  (32)  ತಂದೆ: ಗುಮ್ಮಣ್ಣ ಗೌಡ, ವಾಸ: ಪೆಡ್ಯಣೆ   ಮನೆ ಕುಟ್ರುಪ್ಪಾಡಿ ಗ್ರಾಮ ಕಡಬ ತಾಲೂಕು ಎಂಬವರು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದು ಗ್ರಾಮ ಪಂಚಾಯತ್‌ ವತಿಯಿಂದ ದಿನಾಂಕ:15/08/2022 ರಂದು 75ನೇ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜಾರೋಹಣ  ಕಾರ್ಯಕ್ರಮಕ್ಕೆ ಕುಟ್ರುಪ್ಪಾಡಿ ಗ್ರಾಮದ ಗಂಗಾಧರಗೌಡ .ಎ ಪ್ರಾಯ:54 ವರ್ಷ ತಂದೆ: ವೀರಪ್ಪಗೌಡ  ಎಂಬವರನ್ನು ದ್ವಜ ವಂದನೆಗಾಗಿ ಆಹ್ವಾನಿಸಿದ್ದು ಸಮಯ 09.30 ಗಂಟೆಗೆ ದ್ವಜರೋಹಣ ಕಾರ್ಯಕ್ರಮದ ಸ್ಥಳದಲ್ಲಿ  ಗಂಗಾಧರಗೌಡರವರು ಕುಸಿದು ಬಿದ್ದಿದ್ದು  ಕೂಡಲೇ ಪಿರ್ಯಾದುದಾರರು ಮತ್ತು ಇತರರು ಸೇರಿಕೊಂಡು ಗಂಗಾಧರಗೌಡರವರನ್ನು ಉಪಚರಿಸಿ ನಂತರ ಖಾಸಗಿ ಕಾರಿನಲ್ಲಿ ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಪುತ್ತೂರು ಆಸ್ಪತ್ರೆಗೆ ಸಮಯ 10.30 ಗಂಟೆಗೆ ಕರೆದುಕೊಂಡು ಹೋಗಿ ಗಂಗಾದರಗೌಡರವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ  ವೈದ್ಯರು ಪರೀಕ್ಷಿಸಿ ನೋಡಲಾಗಿ ಗಂಗಾಧರಗೌಡರವರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 25/2022 ಕಲಂ:174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 16-08-2022 10:12 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080