ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವಿಚಂದ್ರ ಪ್ರಾಯ 37 ತಂದೆ:ಸೇಸಪ್ಪ ಮೂಲ್ಯ ವಾಸ:ಮುರಿಬೆಟ್ಟು ಮನೆ, ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರಾದ ರವಿಚಂದ್ರ ಎಂಬವರು ದಿನಾಂಕ:14-11-2021 ರಂದು ಸಂಜೆ 6.30 ಗಂಟೆಗೆ ತನ್ನ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗರಡಿ ಎಂಬಲ್ಲಿ ಮಂಜೆಶ್ವರ-ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಮಯ KA-19-MB-1793ನೇ ಕಾರು ಚಾಲಕ ಸತೀಶ್‌ರವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿದಾರರು ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿಗೆ ರಕ್ತಗಾಯ, ಬಲ ಕೈಮೊಣಗಂಟಿಗೆ,ತಲೆಯ ಹಣೆಗೆ,ಮುಖಕ್ಕೆ ಗಾಯವಾಗಿರುತ್ತದೆ. ಗಾಯಾಳು ಪುತ್ತೂರು ಹಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 148/2021  ಕಲಂ:279,337ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅನಿತ ವಿ ಮಡ್ಲೂರ್   ಪ್ರಾಯ:38 ವರ್ಷ ಗಂಡ; ಸತೀಶ್ ಚಂದ್ರ ನಾಯಕ್ ವಾಸ; #113,1st  ಬ್ಲಾಕ್  ,2nd ಸ್ಟೇಜ್  ನಾಗರಬಾವಿ ಬೆಂಗಳೂರು ಎಂಬವರ ದೂರಿನಂತೆ ದಿನಾಂಕ: 13-11-2021 ರಂದು ರಾತ್ರಿ 7.00 ಗಂಟೆಗೆ ಪಿರ್ಯಾದುದಾರರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮನೆಯವರಾದ  ಅಮ್ಮ ಚಿನ್ನಮ್ಮ, ಅಣ್ಣ ಮಂಜುನಾಥ ಅತ್ತಿಗೆ ರಶ್ಮಿ , ಮಕ್ಕಳು ತನಿಷ್ಕ, ಚಾರ್ವಿ ಸಂಬಂಧಿ ಬೀಮ್ಮವ್ವ , ಅಣ್ಣನ ಮಕ್ಕಳಾದ  ಅನೀಶ್ , ರವರೊಂದಿಗೆ  ಬಂದಿದ್ದು,  ಧರ್ಮಸ್ಥಳದ ವಸತೀ ಗೃಹ ಸಹ್ಯಾದ್ರಿಯಲ್ಲಿ  ರೂಮ್ ನಂಬ್ರ 1003,1004,1005 ಪಡೆದುಕೊಂಡು ಉಳಕೊಂಡಿದ್ದು  ರಾತ್ರಿ ಶ್ರೀ ದೇವರ ದರ್ಶನ ಪಡೆದು  ವಸತಿ  ಗೃಹಕ್ಕೆ ಬಂದು   ಕೊಠಡಿ ಸಂಖ್ಯೆ 1003 ರಲ್ಲಿ ಪಿರ್ಯಾದುದಾರರು ತನ್ನ ಮಕ್ಕಳು ಮತ್ತು ಸಂಬಂಧಿ ಬಿಮ್ಮವ್ವ ರವರ ಜೊತೆ ಉಳಕೊಂಡಿದ್ದು   ಪಿರ್ಯಾದುದಾರರ ಹ್ಯಾಂಡ್ ಬ್ಯಾಗ್ ನ್ನು ರೂಮ್ ನಲ್ಲಿದ್ದ ಟೇಬಲ್ ನಲ್ಲಿ ಇಟ್ಟಿದ್ದು  ರೂಮ್  ಬಾಗಿಲು ಚಿಲಕ ಹಾಕದೇ  ರಾತ್ರಿ ಸಮಯ  ಸುಮಾರು  12.00  ಗಂಟೆಗೆ ಮಲಗಿದ್ದು  ಮರುದಿನ ದಿನಾಂಕ;14-11-2021 ರಂದು ಪಿರ್ಯಾದುದಾರರು ಬೆಳಿಗ್ಗೆ ಎದ್ದು ನೋಡಿದಾಗ ಟೇಬಲ್  ಮೇಲೆ ಇಟ್ಟಿದ್ದ  ಹ್ಯಾಂಡ್ ಬ್ಯಾಗ್ ಕಳವಾಗಿರುತ್ತದೆ.  ಸದ್ರಿ ಕಳುವಾದ ಹ್ಯಾಂಡ್ ಬ್ಯಾಗ್ ನಲ್ಲಿ  ರೂ 5000/- ನಗದು,  ಪಾನ್ ಕಾರ್ಡ್, ಆಧಾರ ಕಾರ್ಡ, ಕೆನರಾ ಬ್ಯಾಂಕ್ ಎ ಟಿ ಎಮ್ ಕಾರ್ಡ್ -2, ಮತ್ತು ಕೆನರಾ ಬ್ಯಾಂಕಿನ  ಪಾಸ್ ಬುಕ್, ಚೆಕ್ ಬುಕ್  ಮನೆಯ ಕೀ ,ಕಬೋರ್ಡ್  ನ ಕೀ, ಪೋಸ್ ಆಪೀಸ್ ನ  ಎಸ್ ಎಸ್ ವೈ-2 ಪಾಸ್ ಬುಕ್ , ಎನ್ ಎಸ್ ಸಿ-1, ಪಾಸ್ ಬುಕ್ ಮತ್ತು ಕಛೇರಿಯ ಅಗತ್ಯದ ದಾಖಲೆಗಳು ಮತ್ತು ಪೆನ್ ಡ್ರೈ  ಇರುತ್ತದೆ.. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 74/2021 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ: 15-11-2021 ರಂದು ದ.ಕ ಮಹಿಳಾ ಪೊಲೀಸ್ ಠಾಣಾ ಅ.ಕ್ರ 42/2021 ಕಲಂ: 498(ಎ) 323, 324 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ:4 ಡಿ ಪಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದಲ್ ನಾಸಿರ್ ತಂದೆ; ದಿ;ಮಹಮ್ಮದ್. ಕಡಬ ತಾಲೂಕು  ಸವಣೂರು ಗ್ರಾಮ. ಮಾಂತೂರು ಎಂಬವರ ದೂರಿನಂತೆ ಕಡಬ ತಾಲೂಕು ಸವಣೂರು ಗ್ರಾಮದ ಕಂಞಾಲಿಮ್ಮ, 60 ವರ್ಷ,  ಕೋಂ: ದಿ|| ಅಹಮ್ಮದ್  ರವರು ಸುಮಾರು ಒಂದೂವರೆ ವರ್ಷ ಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರಿಗೆ  ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆ ಮತ್ತು ಮಂಗಳೂರಿನ ಮನಸ್ವಿನಿ ಆಸ್ಪತ್ರೆ ಯಿಂದ ಹೊರ ರೋಗಿ ಚಿಕಿತ್ಸೆ ಕೊಡಿಸುತ್ತಿದ್ದು, ದಿನಾಂಕ 15-11-2021 ರಂದು 04-30 ಗಂಟೆಗೆ ಕುಂಞಾಲಿಮ್ಮರವರು ಸ್ನಾನ ಮಾಡಲು ಒಲೆಯಲ್ಲಿ ಬಿಸಿ ನೀರು ಕಾಯಿಸಿ, ಬಿಸಿನೀರು ತುಂಬಿರುವ ಪಾತ್ರೆಯನ್ನು ಎತ್ತಿಕೊಂಡು ಬಚ್ಚಲು ಕೋಣೆಗೆ ಒಯ್ಯುತ್ತಿರುವ ವೇಳೆ , ಅನಾರೋಗ್ಯದ ಕಾರಣದಿಂದ ಅಥವಾ ಇನ್ಯಾವುದೋ ಕಾರಣದಿಂದ ಆಕಸ್ಮಿಕವಾಗಿ ಬಿಸಿ ನೀರು ತುಂಬಿದ್ದ ಪಾತ್ರೆ ಕೈ ಹಿಡಿತದಿಂದ ಜಾರಿ ಕೆಳಗೆ ಬಿದ್ದು ಬಿಸಿ ನೀರು ಮೈ-ಮೇಲೆ ಬಿದ್ದ ಪರಿಣಾಮ ಸುಟ್ಟ ಗಾಯಗಳು ಉಂಟಾಗಿ ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಬೆಳಗ್ಗೆ 08-30 ಗಂಟೆಗೆ  ಕುಂಞಾಲಿಮ್ಮ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಯುಡಿ ಆರ್ ನಂ; 27/2021ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-11-2021 10:29 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080