ಅಪಘಾತ ಪ್ರಕರಣ: ೦4
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುರೇಶ್ ಕೊಟ್ಯಾನ್, ಪ್ರಾಯ:36 ತಂದೆ: ದಿ|| ಪೂವಪ್ಪ ಪೂಜಾರಿ ವಾಸ;ಮಾಣಿಮಜಲುಮನೆ, ನರಿಕೊಂಬು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 07:40 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ನರಹರಿ ಪರ್ವತ ಹತ್ತಿರ ತಲುಪಿದಾಗ ಫಿರ್ಯಾದಿದಾರರ ಮುಂದಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದ TS-08-UJ-6666 ನೇ ಪಿಕಪ್ ಅನ್ನು ಅದರ ಚಾಲಕ ತಿರುವು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಕಲ್ಲಡ್ಕ ಕಡೆಯಿಂದ ಮೆಲ್ಕಾರ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA-19-ES-9853 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು ಪರಿಣಾಮ ಮೋಟಾರ್ ಸೈಕಲ್ ಸವಾರ ವಿಜಿತ್ ರವರು ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಹಿಂಬದಿ ತಲೆಗೆ ಗುದ್ದಿದ ಗಾಯ, ಎಡ ಕೈ ಗೆ ಗುದ್ದಿದ ಹಾಗೂ ತರಚಿದ ಗಾಯ, ಬಲ ಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ದೇಹದ ಇತರ ಭಾಗಗಳಿಗೆ ಗುದ್ದಿದ ಹಾಗೂ ತರಚಿದ ಗಾಯಗಳಾಗಿದ್ದು, ಗಾಯಾಳು ವಿಜಿತ್ ರವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 09:44 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 07/2023 ಕಲಂ 279,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪದ್ಮನಾಭ ಭಂಡಾರಿ ಪ್ರಾಯ: 65 ವರ್ಷ ತಂದೆ: ದಿ|| ನಾರಾಯಣ ಭಂಡಾರಿ ವಾಸ: ಕುಡಾಲ್ ಗುತ್ತು ಮನೆ, ಕುಡಾಲ್ ಮೇರ್ಕಳ ಗ್ರಾಮ ಮತ್ತು ಅಂಚೆ ಮಂಜೇಶ್ವರ ತಾಲೂಕು ಕಾಸರಗೋಡು ಜಿಲ್ಲೆ ರವರು ಅವರ ಪತ್ನಿಯೊಂದಿಗೆ ದಿನಾಂಕ 16-01-2023 ರಂದು ಫಿರ್ಯಾದಿದಾರರ ಪತ್ನಿಯ ಬಾಬ್ತು KA-21-P-4740 ನೇ ಕಾರ್ ನಲ್ಲಿ ಬಂಟ್ವಾಳದ ಭಂಟರ ಭವನದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಮನೆಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು 14:00 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಪಾಣೆಮಂಗಳೂರು ಸೇತುವೆ ತಲುಪಿದಾಗ ಫಿರ್ಯಾದಿದಾರ ಮುಂದೆ ಹೋಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಒಮ್ಮಲೇ ನಿಲ್ಲಿಸಿದ್ದು , ಫಿರ್ಯಾದಿದಾರರು ಕೂಡಲೇ ಅವರ ಬಾಬ್ತು ಕಾರನ್ನು ನಿಧಾನವಾಗಿ ನಿಲ್ಲಿಸಿದ ಕೂಡಲೇ ಫಿರ್ಯಾದಿದಾರರ ಕಾರಿನ ಹಿಂಬದಿಯಿಂದ ಅಂದರೆ ಬಿಸಿರೋಡ್ ಕಡೆಯಿಂದ KA 19 AC 8602 ನೇ ಟ್ಯಾಂಕರ್ ಲಾರಿಯನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿಯ ಗ್ಲಾಸ್, ಹಿಂಬದಿ ಬಂಪರ್, ಹಿಂಬದಿ ಇಂಡಿಕೇಟರ್ ಸಂಪೂರ್ಣವಾಗಿ ಜಖಂಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 08/2023 ಕಲಂ 279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಭಾಸ್ಕರ (36) ವರ್ಷ. ತಂದೆ: ಲಿಂಗಪ್ಪ ಸಾಲಿಯಾನ್. ವಾಸ: #3-80/3 ಕೂಡೂರು ಮನೆ, ಸಜಿಪಮೂಡ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು. ರವರು ದಿನಾಂಕ 16-01-2023 ರಂದು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಕೆಲಸ ಮುಗಿಸಿ ಮನೆ ಕಡೆಗೆ ಹೋಗುತ್ತಿರುವ ಸಮಯ ಸುಮಾರು ರಾತ್ರಿ 7:30 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿಗೆ ತಲುಪಿದಾಗ ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಮಾರ್ನಬೈಲು ಕಡೆಯಿಂದ KA-20-MB-1960 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮುಂದಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದ KA-19-D-0615 ನೇ ಆಟೋರಿಕ್ಷಾಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ಅರ್ಚನಾ, ಅಕ್ಷತಾ, ಶೇಖರ್, ಚಂದ್ರಹಾಸ ಹಾಗೂ ಆಟೋರಿಕ್ಷಾ ಚಾಲಕ ಸುರೇಶ್ ಎಂಬವರಿಗೆ ಗಾಯ ನೋವುಗಳಾಗಿರುವುದಲ್ಲದೆ ಅಪಘಾತಪಡಿಸಿದ ಕಾರು ಚಾಲಕನಿಗೂ ಗಾಯ ನೋವುಗಳಾಗಿ ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 09/2023 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಝೀನತ್, ಪ್ರಾಯ 21 ವರ್ಷ, ಗಂಡ: ಮೊಹಮ್ಮದ್ ಆಶೀಪ್, ವಾಸ: ಗೋಳಿಕಟ್ಟೆ ಮನೆ, ಚಾರ್ಮಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 29-12-2022 ರಂದು ಅಡ್ಡೂರು ಎಂಬಲ್ಲಿರುವ ತನ್ನ ಬಾಡಿಗೆ ಮನೆಯಿಂದ ತನ್ನ ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಎಂಬಲ್ಲಿಗೆ ತನ್ನ ಗಂಡನೊಂದಿಗೆ ದ್ವಿಚಕ್ರ ವಾಹನ KA19HH8639 ನೇದರಲ್ಲಿ ತನ್ನ ಗಂಡ ಸವಾರಿ ಮಾಡುತ್ತಾ ತಾನು ಸಹಸವಾರಳಾಗಿ ಕುಳಿತುಕೊಂಡು ಸಂಜೆ 5.30 ಗಂಟೆಗೆ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಬಸವನಗುಡಿ ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ಗಂಡ ದ್ವಿಚಕ್ರ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ರಸ್ತೆಗೆ ಅಡ್ಡಲಾಗಿ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಒಮ್ಮೆಲೇ ಬ್ರೇಕ್ ಹಾಕಿದಾಗ ದ್ವಿಚಕ್ರ ವಾಹನ ಸ್ಕಿಡ್ ಆಗಿ ಫಿರ್ಯಾದಿದಾರರು ಹಾಗೂ ದ್ವಿಚಕ್ರ ವಾಹನ ಸವಾರ ದ್ವಿಚಕ್ರ ವಾಹನದೊಂದಿಗೆ ಕಚ್ಚಾ ಮಣ್ಣು ರಸ್ತೆಗೆ ಬಿದ್ದವರನ್ನು ಅಲ್ಲಿದ್ದ ಸಾರ್ವಜನಿಕರು ಎತ್ತಿ ಉಪಚರಿಸಲಾಗಿ ಫಿರ್ಯಾದಿದಾರರಿಗೆ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ದ್ವಿಚಕ್ರ ವಾಹನ ಸವಾರ ಮೊಹಮ್ಮದ್ ಆಶೀಪ್ ರವರಿಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಫಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಅಲ್ಲಿದ್ದ ಸಾರ್ವಜನಿಕರು ವಾಹನವೊಂದರಲ್ಲಿ ಬೆಳ್ತಂಗಡಿ ಅಭಯಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ನೀಡಿರುತ್ತಾರೆ. ಫಿರ್ಯಾದಿದಾರರ ಗಂಡ ಯಾವುದೇ ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ 04/2023 ಕಲಂ: 279, 338 IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦3
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಆಶಾ. ಡಿ ಪ್ರಾಯ 38 ವರ್ಷ, ಗಂಡ ಬಾಲಕೃಷ್ಣನಾಯ್ಕ ವಾಸ ರಣೆಗೋಲಿ ಮನೆ ಕಳಿಯಾ ಗ್ರಾಮ, ಬೆಳ್ತಂಗಡಿ ತಾಲೂಕು ರವರು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಎಂಬಲ್ಲಿರುವ ಬಿ.ಎಸ್.ಎನ್ ಎಲ್ ಸಂಸ್ಥೆಯ ಉಪಕೇಂದ್ರದಲ್ಲಿ ಕಿರಿಯ ದೂರಸಂಪರ್ಕ ಅಧಿಕಾರಿಯಾಗಿದ್ದು ಈ ಕೇಂದ್ರದಲ್ಲಿರಿಸಿದ್ದ ಉಪಯುಕ್ತಕ್ಕೆ ಬಾರದ ಒಟ್ಟು 24 ಎಕ್ಸೈಡ್ 1000 ಎ.ಹೆ್‌ಚ್ ಬ್ಯಾಟರಿಗಳ ಪೈಕಿ ಸುಮಾರು 8,0000/ - ಮೌಲ್ಯದ ಒಟ್ಟು 16 ಎಕ್ಸೈಡ್ 1000 ಎ.ಹೆ್‌ಚ್ ಬ್ಯಾಟರಿಗಳನ್ನು ದಿನಾಂಕ: 14-01-2023 ರ 18.00 ಗಂಟೆಯಿಂದ ದಿನಾಂಕ: 16-01-2023 ರ ಬೆಳಿಗ್ಗೆ 9.30 ಗಂಟೆಯ ಮಧ್ಯೆ ಉಪಕೇಂದ್ರದ ಮುಖ್ಯ ದ್ವಾರದ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಕಳವು ಮಾಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 02/2023 ಕಲಂ: 454, 457,380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಟಿ.ಬಿ ಬಸವಲಿಂಗಪ್ಪ ಪ್ರಾಯ 49 ವರ್ಷ ತಂದೆ:ಬುರುಡಯ್ಯ ವಾಸ:ತರುವೆ ಗ್ರಾಮ ಕೊಟ್ಟಗೆಹಾರ ಅಂಚೆ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ರವರು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಎಂಬಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸುಮಾರು 02 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ರಿ ಶಾಲೆಯ ಕೊಠಡಿ ನಂಬ್ರ 4 ರಲ್ಲಿ ಶಾಲೆಗೆ ಸಂಬಂದಿಸಿದ ಕಂಪ್ಯೂಟರ ಮತ್ತು ಅದರ ಯು.ಪಿ.ಎಸ್, ಪ್ರಿಂಟರ್ ಹಾಗೂ ಅದಕ್ಕೆ ಸಂಬಂದಿಸಿದ ಬ್ಯಾಟರಿಗಳನ್ನು ಮತ್ತು ಯು.ಪಿ.ಎಸ್ ನ ಮೇಲೆ ಇನ್ವರ್ಟರ್ ನ್ನು ಇರಿಸಲಾಗಿತ್ತು. ದಿನಾಂಕ:14.01.2023ರ ಶನಿವಾರ ಸಂಜೆ 5.00 ಗಂಟೆಯ ವೇಳೆಗೆ ಸದ್ರಿ ಕೊಠಡಿ ಹಾಗೂ ಶಾಲಾ ಕೊಠಡಿಗಳಿಗೆ ಬೀಗ ಹಾಕಿ ಭದ್ರಪಡಿಸಿ ತೆರಳಿದ್ದು. ದಿನಾಂಕ:16.01.2023 ರಂದು ಬೆಳಿಗ್ಗೆ 08.30 ಗಂಟೆಗೆ ಶಾಲೆಗೆ ಬಂದ ಶಿಕ್ಷಕರು ಒಬ್ಬರು ಪರಿಶೀಲಿಸಿದಾಗ ಕಂಪ್ಯೂಟರ್ ಕೊಠಡಿಯ ಶೆಟರ್ ಬಾಗಿಲಿಗೆ ಹಾಕಿದ್ದ ಬೀಗಗಳ ಕೊಂಡಿಯನ್ನು ಯಾವುದೋ ಆಯುಧದಿಂದ ತುಂಡರಿಸಿರುವುದು ಕಂಡು ಪಿರ್ಯಾದಿದಾರರಿಗೆ ಪೋನ್ ಮಾಡಿ ತಿಳಿಸಿ. ಅವರು ಬಂದು ಪರಿಶೀಲಿಸಿ ಸದ್ರಿ ಬಾಗಿಲಿನ ಪಕ್ಕದ ಕಿಟಕಿಯ ಮುಖಾಂತರ ಇಣುಕಿ ನೋಡಿದಾಗ ಕೊಠಡಿಯಲ್ಲಿರುವ ಬ್ಯಾಟರಿಗಳು ಕಳವಾಗಿರುವುದು ಕಂಡು ಬಂದು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ. ಬಾಗಿಲು ತೆರೆದು ನೋಡಿದಾಗ ಕೊಠಡಿ ಒಳಗೆ 2 ರೇಕ್ ಗಳಲ್ಲಿ ಇರಿಸಿದ್ದ ಕಂಪ್ಯೂಟರ್ ಗೆ ಸಂಬಂದಿಸಿದ ಒಟ್ಟು 16 ಬ್ಯಾಟರಿಗಳು ಮತ್ತು ಅದರ ಪಕ್ಕದಲ್ಲೇ ಇದ್ದ ಯು.ಪಿ.ಎಸ್ ನ ಮೇಲೆ ಇರಿಸಿದ್ದ ಇನ್ವರ್ಟರ್ 1 ಕಳವಾಗಿರುವುದು ಕಂಡು ಬಂತು. ಸದರಿ ಕೊಠಡಿಯಲ್ಲಿರುವ ಉಳಿದ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿರುತ್ತದೆ. ಕಳವಾದ 16 ಬ್ಯಾಟರಿ ಮತ್ತು ಇನ್ವರ್ಟರ್ ಅಂದಾಜು ಮೌಲ್ಯ 30,000/- ರೂ ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 05/2023 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹಿಮಕರ ಕೆ ಪ್ರಾಯ 49 ವರ್ಷ ತಂದೆ: ಬಾಲಣ್ಣ ಗೌಡ ವಾಸ: ಕುರುಂಜಿ ಮನೆ, ವಿವೇಕಾನಂದ ಸರ್ಕಲ್ ಬಳಿ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ಎಂಬಲ್ಲಿ ಒಂದು ಎಕರೆ ತೋಟ ಹೊಂದಿದ್ದು, ಸದ್ರಿ ತೋಟದಲ್ಲಿ ಆರ್‌ಸಿಸಿ ಮತ್ತು ಪ್ರತ್ಯೇಕವಾಗಿ ಗೋಡೌನ್ ಇದ್ದು, ಈ ಬಾರಿ ಕಾಳುಮೆಣಸಿಗೆ ಸೂಕ್ತ ಬೆಲೆ ಇಲ್ಲದೇ ಇದ್ದುದರಿಂದ ಗೋಡೌನ್‌ನಲ್ಲಿ ಪಿರ್ಯಾದಿದಾರರಿಗೆ ಸಂಬಂಧಿಸಿದ ಸುಮಾರು 25-30 ಕೆ.ಜಿ ತೂಕದ ಗೋಣೆ ಚೀಲಗಳಲ್ಲಿ ಒಣಗಿಸಿದ ಕಾಳು ಮೆಣಸುಗಳನ್ನು ಹಾಗೂ ಪಿರ್ಯಾದಿದಾರರ ಹೆಂಡತಿಯ ತಂದೆ ಅರಂತೋಡಿನ ನಾಗಪ್ಪ ಗೌಡರವರು ಮನೆಯಲ್ಲಿ ಶೇಖರಣೆ ಮಾಡಲು ಜಾಗ ಇಲ್ಲದೇ ಇದ್ದುದರಿಂದ ಪಿರ್ಯಾದಿದಾರರ ಗೋಡೌನ್‌ನಲ್ಲಿ 25-30 ಕೆಜಿ ತೂಕದ ಗೋಣಿ ಚೀಲದಲ್ಲಿ ತುಂಬಿಸಿ ಇಟ್ಟಿದ್ದು, ಗೋಡೌನ್‌ನಲ್ಲಿ ಒಟ್ಟು 160 ಕೆಜಿ ತೂಕದ ಕಾಳು ಮೆಣಸು, 30 ಗೋಣಿ ಚೀಲ ಅಡಿಕೆ, ಸ್ವಿಲ್ ಎಂಬ ಕಂಪೆನಿಯ ಮರ ಕಟಾವು ಮಾಡುವ ಮೆಷಿನ್, ಹುಲ್ಲು ಕಟಾವು ಮಾಡುವ ಕಿಸಾನ್ ಕ್ರಾಫ್ಟ್ ಕಂಪೆನಿಯ ಯಂತ್ರವನ್ನು ಇಟ್ಟು ಗೋಡೌನ್‌ನ ಬಾಗಿಲಿನ ಬೀಗ ಹಾಕಿ ಬೀಗದ ಕೀಯನ್ನು ಗೋಡೌನ್‌ನ ಬದಿಯಲ್ಲಿರುವ ಕಿಟಕಿಯ ಒಳಬದಿಯಲ್ಲಿ ಇಟ್ಟಿರುವುದಾಗಿದೆ. ದಿನಾಂಕ 14.01.2023 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿದಾರರು 5 ಕೆ.ಜಿ ಕಾಳುಮೆಣಸನ್ನು ಗೋಡೌನ್‌ನ ಒಳಗೆ ಇಟ್ಟು ಬಾಗಿಲಿಗೆ ಬೀಗ ಹಾಕಿ ಕೀಯನ್ನು ಯಾವಾಗಲೂ ಇಡುವ ಕಿಟಕಿಯ ಬದಿಯಲ್ಲಿ ಇಟ್ಟಿದ್ದು, ದಿನಾಂಕ 16.01.2023 ರಂದು ಬೆಳಿಗ್ಗೆ 11.00 ಗಂಟೆಗೆ ನೋಡಿದಾಗ ಗೋಡೌನ್‌ನಲ್ಲಿ ಇಟ್ಟಿದ್ದ ರೂ 76, 800/- ರೂ ಬೆಲೆಬಾಳುವ ಸುಮಾರು 160 ಕೆ.ಜಿ ತೂಕದ 8 ಗೋಣಿ ಚೀಲ ಕಾಳು ಮೆಣಸು, ಮರಕಟಾವು ಮಾಡುವ ಯಂತ್ರ ಹಾಗೂ ಸುಮಾರು 8000 ರೂ ಮೌಲ್ಯದ ಹುಲ್ಲು ಕಟಾವು ಮಾಡುವ ಹಳೆಯ ಯಂತ್ರ ಕಾಣಿಸದೇ ಇದ್ದು, ದಿನಾಂಕ 14.01.2023 ರ ಸಂಜೆ 5.00 ಗಂಟೆಯಿಂದ ದಿನಾಂಕ 16.01.2023 ರ ಬೆಳಿಗ್ಗೆ 11.00 ಗಂಟೆ ಮಧ್ಯೆ ಯಾರೋ ಕಳ್ಳರು ಗೋಡೌನ್ ನ ಬಾಗಿಲಿನ ಬೀಗ ತೆಗೆದು ಒಳ ಪ್ರವೇಶಿಸಿ ಗೋಡೌನ್‌ನಲ್ಲಿ ಇಟ್ಟಿದ್ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ 94,800/- ಆಗಬಹುದು ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 06/2023 ಕಲಂ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಕಲ್ಯಾಣಿ(48) ಮದ್ವ ಮನೆ, ಕಾವಳಪಡೂರು ಗ್ರಾಮ, ಬಂಟ್ವಾಳ ತಾಲೂಕು ರವರು ಗಂಡ, ಮಗ ವೆಂಕಪ್ಪ, ಮಗಳು ಅನಿತಾ ಳೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ.. ಪಿರ್ಯಾದಿದಾರರ ಗಂಡ ಅಸೌಖ್ಯದಿಂದ ಇದ್ದು ಮನೆಯಲ್ಲಿ ಇರುವುದಾಗಿದೆ. ಪಿರ್ಯಾದಿದಾರರ ಮಗ ವೆಂಕಪ್ಪನು ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಕೆಲವೊಮ್ಮೆ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದನು, ಅಂತೆಯೇ ದಿನಾಂಕ 06-01-2023 ರಂದು ಬೆಳಿಗ್ಗೆ 7.30 ಗಂಟೆಗೆ ಪಿರ್ಯಾದುದಾರರು ಕೂಲಿ ಕೆಲಸಕ್ಕೆ ಹೋಗಿದ್ದು ಮಗ ವೆಂಕಪ್ಪ ಮತ್ತು ಗಂಡ ಮನೆಯಲ್ಲಿಯೇ ಇದ್ದರು. ಸಂಜೆ 7.30 ಗಂಟೆಗೆ ಪಿರ್ಯಾದಿದಾರರು ಕೆಲಸ ಮುಗಿಸಿ ಮನೆಗೆ ಬಂದಾಗ ಮಗ ವೆಂಕಪ್ಪ ಮನೆಯಲ್ಲಿದ್ದು ಹೊಟ್ಟೆ ನೋವು ಎಂದು ಹೇಳುತ್ತಿದ್ದು ಆಗ ಪಿರ್ಯಾದಿಧಾರರು ಮತ್ತು ನೆರೆಯ ಸಂದೀಪ ಆತನನ್ನು ಔಷದಿಗೆಂದು ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮಗ ವೆಂಕಪ್ಪ ವಿಷ ಸೇವನೆ ಮಾಡಿದ್ದಾನೆ ನೀವು ಕೂಡಲೇ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದಂತೆ ಪಿರ್ಯಾದುದಾರರು ಕೂಡಲೇ ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆಯಲ್ಲಿದ್ದು ದಿನಾಂಕ 07-01-2023 ರಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯಲ್ಲಿದ್ದವನು ದಿನಾಂಕ 15-01-2023 ರಂದು ಸಂಜೆ 5.59 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 01/2023 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.