ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮುಸ್ತಾಫ (28), ತಂದೆ: ದಿ. ಇಸ್ಮಾಯಿಲ್, ಕಾನರ್ಪ ಮನೆ, ಕಡಿರುದ್ಯಾವರ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 11-02-2022 ರಂದು ಅವರ ಬಾಬ್ತು ನೊಂದಾಣಿಯಾಗದ ಹೊಸ ಟಾಟಾ ಇಂಟ್ರಾ ವಾಹನವನ್ನು ಕಾಜೂರು ಕಡೆಯಿಂದ ಸೋಮಂತಡ್ಕ ಕಡೆಗೆ ಚಲಾಯಿಸಿಕೊಂಡು ಹೊಗುತ್ತಿರುವ ಸಮಯ ಸುಮಾರು ರಾತ್ರಿ 7.00 ಗಂಟೆಗೆ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಲ್‌ ಪಲ್ಕೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಕಾಜೂರು ಕಡೆಯಿಂದ ಸೊಮಂತಡ್ಕ ಕಡೆಗೆ ಕೆಎ 70 ಇ 1309 ನೇ ದ್ವಿಚಕ್ರ ವಾಹನದಲ್ಲಿ ಅದರ ಸವಾರ ಅಬಿಷೇಕ ಸಹಸವಾರಳಾದ ಪಿಲೋಮಿನಾ ಎಂಬವರನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ನೊಂದಾಣಿಯಾಗದ ಹೊಸ ಟಾಟಾ ಇಂಟ್ರಾ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಅಬಿಷೇಕ್‌ ರವರಿಗೆ ಎಡಕಾಲಿಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರು ಫಾಧರ್‌ಮುಲ್ಲಾರ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 28/2022 ಕಲಂ; 279,337ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುನೀಲ್ ಕುಮಾರ್  ತಂದೆ: ಸತ್ಬೀರ್ ಸಿಂಗ್ ವಾಸ: 96/1 ನೇ ಮುಖ್ಯ ರಸ್ತೆ ನಿಸರ್ಗ ಬಡಾವಣೆ ಹೊಸಕೋಟೆ ತಾಲೂಕು ಬೆಂಗಳೂರು ಗ್ರಾಮಾಂತರ ಎಂಬವರ ದೂರಿನಂತೆ ಪಿರ್ಯಾದಿರವರು ಹೀರಾಲಾಲ್ ಸುಖ್ ಲಾಲ್ ಟ್ರಾನ್ಸ್ ಪೋರ್ಟ್ ಕಂಪೆನಿ ಉದಯಪುರ ರಾಜಸ್ತಾನ ನರಸಾಪುರ ಇಂಡಸ್ಟ್ರಿಯಲ್ ಏರಿಯ ನರಸಾಪುರ ಗ್ರಾಮ ಮತ್ತು ಸಂದೂರು ತಾಲೂಕು ಕೋಲಾರ ಜಿಲ್ಲೆ ಶಾಖೆಯ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 03-02-2022 ರಂದು ಪಿರ್ಯಾದಿದಾರರ ಸಂಸ್ಥೆಯ ಮಹಾರಾಷ್ಟ್ರದ ಜಲಂಗಾವ್ ಶಾಖೆಯಿಂದ ಪಿ.ವಿ.ಸಿ ಕಾಲಂ ಪೈಪುಗಳನ್ನು ಪಿರ್ಯಾದಿದಾರರ ಸಂಸ್ಥೆಗೆ ಸೇರಿದ ಎನ್ ಎಲ್ 01 ಎಎ 6235 ನೇ ನಂಬರಿನ ಕಂಟೇನರ್ ಲಾರಿಯಲ್ಲಿ ಹೇರಿ ಅದನ್ನು ಪುತ್ತೂರಿಗೆ ಕಳುಹಿಸಿರುತ್ತಾರೆ. ಸದ್ರಿ ಕಂಟೇನರ್ ಲಾರಿಯನ್ನು ಆರೋಪಿಯು ಜಲಂಗಾವ್ ನಿಂದ ಪುತ್ತೂರಿಗೆ ಚಾಲನೆ ಮಾಡುತ್ತಿದ್ದುಲಾರಿಯು ದಿನಾಂಕ: 10-02-2022 ರೊಳಗೆ ಪುತ್ತೂರು ತಲುಪಬೇಕಾಗಿತ್ತು, ಆದರೆ ಸದ್ರಿ ಕಂಟೇನರ್ ಲಾರಿಯ ಚಾಲಕನಾಗಿದ್ದ ಆರೋಪಿಯಿಂದ ಪಿರ್ಯಾದುದಾರರಿಗೆ ದಿನಾಂಕ: 12-02-2022 ರವರೆಗೆ ಯಾವುದೇ ಮಾಹಿತಿ ದೊರಕದಿದ್ದಾಗ ಪಿರ್ಯಾದಿದಾರರು ಸದ್ರಿ ಲಾರಿಯನ್ನು ಜಿ.ಪಿ.ಎಸ್ ಮುಖಾಂತರ ಹುಡುಕಿದಾಗ ಲಾರಿಯು ಶಿರಾಡಿಯಲ್ಲಿ ಪತ್ತೆಯಾಗಿರುತ್ತದೆ. ಪಿರ್ಯಾದಿದಾರರು ಶಿರಾಡಿಗೆ ಹೋಗಿ ನೋಡಲಾಗಿ ಕಂಟೇನರ್ ಲಾರಿಯು ಶಿರಾಡಿಯಲ್ಲಿ ಇದ್ದು ಆರೋಪಿಯು ಕಂಟೇನರ್ ಲಾರಿಯನ್ನು ತ್ಯಜಿಸಿ ಪರಾರಿಯಾಗಿರುತ್ತಾನೆ ಸದ್ರಿ ಕಂಟೇನರ್ ಲಾರಿಯನ್ನು ಪುತ್ತೂರಿಗೆ ತೆಗೆದುಕೊಂಡು ಬಂದು  ದಿನಾಂಕ: 12-02-2022 ರಂದು ರಾತ್ರಿ ಸದ್ರಿ ಕಂಟೇನರ್ ಲಾರಿಯನ್ನು ತೆರೆದು ನೋಡಿದಾಗ ಅದರಲ್ಲಿದ್ದ ಅಂದಾಜು 1,80,000/- ಮೌಲ್ಯದ ಪಿ.ವಿ.ಸಿ ಕಾಲಂ ಪೈಪುಗಳನ್ನು ಆರೋಪಿಯು ಕಳ್ಳತನ ಮಾಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ: 07/2022  ಕಲಂ: 379   ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಕಡಬ ಪೊಲೀಸ್ ಠಾಣೆ : ದಿನಾಂಕ: 16.02.2022 ರಂದು ಕಡಬ ಠಾಣೆಯಲ್ಲಿ ಅ.ಕ್ರ 14/2022 ಕಲಂ. 4.5 ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಅದ್ಯಾದೇಶ -2020 ಹಾಗೂ  ಕಲಂ ; 66(1) 192(A) IMV ACT-1988   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ ಪ್ರಾಯ: 32 ತಂದೆ: ದಿ/ಸುಬ್ಬ ನಾಯ್ಕ್ ವಾಸ: ಪರ್ಪಕರಿಯ ಮನೆ ಪೇರ್ಲ ಕಾಸರಗೋಡು ಎಂಬವರ ದೂರಿನಂತೆ ಪಿರ್ಯಾದಿರವರ ಆಣ್ಣ ಸುಂದರರವರು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ 13.02.2022 ರಂದು ಬಾಡಿಗೆಗೆ ಹೋಗುತ್ತೇನೆಂದು ತನ್ನ ಹೆಂಡತಿಯಲ್ಲಿ ಹೇಳಿ ಆಟೋ ರಿಕ್ಷಾದಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆಗೆ ಮನೆಯಿಂದ ಹೊರಟು ಹೋದವರು ಮೊಬೈಲನ್ನು ಕೂಡಾ ಮನೆಯಲ್ಲಿಯೇ ಬಿಟ್ಟು ಹೋಗಿದ್ದು, ಸಂಜೆಯಾದರೂ ಮನೆಗೆ ಬಾರದೇ ಇದ್ದುದ್ದರಿಂದ ಗಾಬರಿಗೊಂಡು ಸುಂದರರವರ ಹೆಂಡತಿ ಮರುದಿನ ದಿನಾಂಕ 14.02.2022 ರಂದು ಸುಂದರರವರು ಕಾಣೆಯಾಗಿರುವ ಬಗ್ಗೆ ದಿನಾಂಕ 14.02.2022 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು,  ಸದ್ರಿ ದೂರಿನ ಆಧಾರದಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರುದಿನ ಬೆಳಿಗ್ಗೆ ಫಿರ್ಯಾದಿದಾರರಿಗೆ 08.30 ಗಂಟೆಗೆ ದೂರವಾಣಿ ಕರೆ ಬಂದಂತೆ ಆರ್ಯಾಪು ಗ್ರಾಮದ ಬೊಳ್ಳಾಣ ಎಂಬಲ್ಲಿರುವ ಸರಕಾರಿ ಅಕೇಶಿಯಾ ತೋಪಿಗೆ ಹೋಗಿ ನೋಡಿದಾಗ  ಸುಂದರರವರ ಆಟೋ ರಿಕ್ಷಾವು ಒಂದು ಬದಿಗೆ ವಾಲಿಕೊಂಡಂತೆ ನಿಂತುಕೊಂಡಿದ್ದು, ರಿಕ್ಷಾದ ಒಳಗೆ ಚಾಲಕನ ಸೀಟಿನಲ್ಲಿ ಸುಂದರನ ತಲೆಯು ಹಿಂದಕ್ಕೆ ವಾಲಿಕೊಂಡಂತೆ ಕುಳಿತುಕೊಂಡ ಭಂಗಿಯಲ್ಲಿ ನಿಶ್ಚಲ ಸ್ಥಿತಿಯಲ್ಲಿರುವುದಾಗಿ ಕಂಡು ಬಂದಿದ್ದು, ದೇಹದಲ್ಲಿ ಯಾವುದೇ ಚಲನೆಯಿರುವುದು ಕಂಡು ಬಂದಿರುವುದಿಲ್ಲ. ಸುಂದರರವರು ಸುಮಾರು 1 ತಿಂಗಳಿನಿಂದ ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟವನ್ನು ಹೊಂದಿದ್ದು ಇದೇ ವಿಷಯದಲ್ಲಿ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 13.02.2022 ರಂದು ಮಧ್ಯಾಹ್ನ 3.00 ಗಂಟೆಯಿಂದ ದಿನಾಂಕ 16.02.2022 ರಂದು ಬೆಳಿಗ್ಗೆ 08.30 ಗಂಟೆಯ ನಡುವೆ ಯಾವುದೋ ವಿಷ ಪದಾರ್ಥ ಸೇವಿಸಿದ್ದರಿಂದಲೋ ಅಥವಾ ಇನ್ನಾವುದೋ ದೈಹಿಕ ತೊಂದರೆಯಿಂದಲೋ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಯುಡಿಆರ್ ನಂಬ್ರ 05/2022 ಕಲಂ 174, ಸಿಆರ್.ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಂದರ ಗೌಡ   ಪ್ರಾಯ: 61 ವರ್ಷ, ತಂದೆ: ತಿಮ್ಮಯ್ಯ ಗೌಡ  ವಾಸ: ನೆಲ್ಲಜಾಲು  ಮನೆ , ಕುಂತೂರು  ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 08/02/2022 ರಂದು ಪಿರ್ಯಾದಿದಾರರ ತಮ್ಮನಾದ ವಿಶ್ವನಾಥ ಗೌಡ ಎಂಬುವರ ಸಂಬಂದ ಪಟ್ಟ ಬೋರ್ ವೆಲ್ ನಲ್ಲಿ ಪಿರ್ಯಾದುದಾರರು ಹಾಗೂ ವಿಶ್ವನಾಥ ಗೌಡ ಮತ್ತು ಇತರ ಕೆಲಸಗಾರರೊಂದಿಗೆ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಪಂಪನ್ನು ತೆಗೆಯುವರೇ , ಬೋರ್ ವೆಲ್ ನ ಹತ್ತಿರ  2 ಕಂಬಗಳನ್ನು  ಹಾಕಿ ಅದಕ್ಕೆ ಅಡ್ಡವಾಗಿ ಅಡಿಕೆ ಮರದ ಕಂಬವನ್ನು  ಹಾಕಿ  ಹಗ್ಗದ ಸಹಾಯದಿಂದ ಪಂಪನ್ನು ಮೇಲಕ್ಕೆ ಎತ್ತುವ ಸಮಯದಲ್ಲಿ ಕೆಲಸಗಾರರು ಹಾಗೂ ಪಿರ್ಯಾದುದಾರರು  ಹಗ್ಗವನ್ನು ಎಳೆಯುತ್ತಿದ್ದ  ಸಮಯ ಮಧ್ಯಾಹ್ನ 12-30 ಗಂಟೆಗೆ  ಪಿರ್ಯಾದುದಾರರ ತಮ್ಮ ವಿಶ್ವನಾಥ ಗೌಡನು ಬೋರ್ ವೆಲ್ ಸಮೀಪವೆ ನಿಂತಿದ್ದ  ಸಮಯ  ಅಕಸ್ಮಿಕ ವಾಗಿ ಹಗ್ಗ ತುಂಡಗಿ ಅಡ್ಡವಾಗಿ ಹಾಕಿದ್ದ  ಅಡಿಕೆ ಮರವು ವಿಶ್ವನಾಥ ಗೌಡರ ತಲೆಯ ಮೇಲೆ  ಬಿದ್ದ ಪರಿಣಾಮ  ತಿರ್ವ ಸ್ವರುಪದ ರಕ್ತಗಾಯವಾಗಿ ಮಾತನಾಡದೇ ಇರುವ ಸ್ಥಿತಿಯಲ್ಲಿ ಇದ್ದು ಕೂಡಲೇ 108 ಅಂಬ್ಯುಲೆಸ್ ನಲ್ಲಿ  ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಅ್ವಸ್ವತ್ರೆಗೆ  ಕರೆದುಕೊಂಡು ಹೋಗಿದ್ದು.  ಅಲ್ಲಿನ ವೈಧ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ  ಮಂಗಳೂರಿನ ವೆನ್ ಲಾಕ್ ಅಸ್ವತ್ರೆಗೆ ಒಳರೋಗಿಯಾಗಿ ದಾಖಾಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿನಾ ದಿನಾಂಕ 16-02-2022  ಮದ್ಯಾಹ್ನ 13-57 ಗಂಟೆಗೆ ವಿಶ್ವನಾಥ ಗೌಡರು ಮೃತ ಪಟ್ಟಿರುವುದ್ದಗಿದ್ದು.ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;07/2022 ಕಲಂ. 174 Crpc   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-02-2022 10:36 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080