ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯ (40), ತಂದೆ: ದಿ. ನಾದೆಲ, ವಾಸ: ಸುದೆರ್ದು ಸುದೆಬರಿ ಮನೆ, ಬಡಗಕಾರಂದೂರು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ: 10-06-2021 ರಂದು ಕೂಲಿ ಕೆಲಸದ ಬಗ್ಗೆ ಸುಲ್ಕೇರಿಮೊಗ್ರು ಕಡೆ ಹೋಗುತ್ತಾ ಬೆಳಿಗ್ಗೆ 08.30 ರ ಸುಮಾರಿಗೆ ಸುಲ್ಕೇರಿಮೊಗ್ರು ಗ್ರಾಮದ ಕೈಪುಲ ಎಂಬಲ್ಲಿಗೆ ತಲುಪುವಾಗ್ಗೆ ಸುಲ್ಕೇರಿಮೊಗ್ರು ಕಡೆಯಿಂದ ಕೆಎ 21 ಡಬ್ಲ್ಯು 8312 ನೇ ದ್ವಿಚಕ್ರ ವಾಹನವನ್ನು ಶ್ರೀನಿವಾಸ ಎಂಬಾತನು ಸಂಜೀವ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ  ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಎದುರಿನಲ್ಲಿ  ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿದ್ದು, ಪರಿಣಾಮವಾಗಿ ಹಿಂಬದಿ ಸವಾರ ಸಂಜೀವನ ಎಡಕಣ್ಣಿನ ಹಾಗೂ ಎಡತಲೆಯ ಭಾಗಕ್ಕೆ ರಕ್ತ ಗಾಯ ಹಾಗೂ ದ್ವಿಚಕ್ರ ವಾಹನ ಸವಾರನಿಗೆ ಎಡಕಾಲು ಮತ್ತು ಎಡಕೈ ತಟ್ಟಿಗೆ ತರಚಿದ ಗಾಯವಾಗಿದ್ದು, ಸಂಜೀವರವನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 15-06-2021 ರಂದು ರಾತ್ರಿ 23.30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ : 37/2021 ಕಲಂ : 279, 304 (ಎ) ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವನಜ ಎ ವಾಸ: ಜಾರತ್ತಾರು ಮನೆ, ಆರಿಯಡ್ಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರ ತಮ್ಮ 20 ವರ್ಷ ಪ್ರಾಯದ ಕರುಣಾಕರ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 12.06.2021 ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿ ಬಂದು ಊಟ ಮಾಡಿ ರಾತ್ರಿ 10.00 ಗಂಟೆಗೆ ಮಲಗಿದ್ದು ಪಿರ್ಯಾದಿದಾರರು ದಿನಾಂಕ 13.06.2021 ರಂದು ಬೆಳಿಗ್ಗೆ 06.00 ಗಂಟೆಗೆ ಎದ್ದು ನೋಡಿದಾಗ ಕರುಣಾಕರ ಮನೆಯಲ್ಲಿ ಕಾಣಿಸದೇ ಇದ್ದು, ಆತನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ ಅಫ್‌ ಆಗಿದ್ದು, ತಮ್ಮನ ಬಗ್ಗೆ ನೆರೆಕರೆಯವರಲ್ಲಿ ಮತ್ತು ಸ್ನೇಹಿತರಲ್ಲಿ ಹಾಗೂ ಆತನು ಕೆಲಸ ಮಾಡುವ ಕಡೆಗಳಲ್ಲಿ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ಲಭ್ಯವಾಗದಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಆ.ಕ್ರ 51/20  ಕಲಂ: ಮನುಷ್ಯ  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

ಸುಬ್ರಮಣ್ಯ ಪೊಲೀಸ್ ಠಾಣೆ : ದಿನಾಂಕ: 09-06-2021 ರಂದು ದೇವಚಳ್ಳ ಗ್ರಾಮದ ಮುಂಡೋಡಿ ನಿವಾಸಿ ಉದಯ್ ಕುಮಾರ್ ಎಂಬಾತನು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿರುವುದಲ್ಲದೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಗುರು ಪ್ರಸಾದ್, ಪಂಚಾಯತ್ ಅಭಿವೃದ್ದಿ ಅಧಿಕಾರಿ, ದೇವಚಳ್ಳ ಗ್ರಾಮ, ಸುಳ್ಯ ರವರು ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 34-2021 u/s   Sec  269, 353, 506 IPC and Sec 5(4) Karnataka EpidemicDiseases Act ನಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 16.06.2021 ರಂದು ಸಮಯ ಬೆಳಿಗ್ಗೆ 10.25 ಗಂಟೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಸೂಪರ್ ಬಜಾರ್ ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರಿನ  ಅಂಗಡಿ ಮಾಲೀಕ   ತನ್ನ ಅಂಗಡಿಯನ್ನು ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಪಾಡದೇ 6-7 ಗಿರಾಕಿಗಳನ್ನು ಸೇರಿಸಿ ವ್ಯಾಪಾರವನ್ನು ಮಾಡುತ್ತಿರುವುದು  ಕಂಡು ಬಂದಿರುತ್ತದೆ. ಸದ್ರಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತನು ತನ್ನ ಹೆಸರು ಮುಸ್ತಾಫಾ ಪ್ರಾಯ 48 ವರ್ಷ.ತಂದೆ ದಿ.ಹಸನ್ ಬಾವ ವಾಸ:ಗುಡ್ಡೆಯಂಗಡಿ,ಪಾಣೆಮಂಗಳೂರು ಗ್ರಾಮ ಬಂಟ್ವಾಳ ತಾಲೂಕು  ಎಂದು ತಿಳಿಸಿರುತ್ತಾನೆ. ಸದ್ರಿ ಸೂಪರ್ ಮಾರ್ಕೇಟ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕ ಮುಸ್ಥಾಫಾ ರವರು  ಜನರನ್ನು ಸೇರಿಸಿಕೊಂಡು ಮನುಷ್ಯರ ಜೀವಕ್ಕೆ ಅಪಾಯಕಾರಿಯಾದ ಕರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಸರಕಾರ ವಿಧಿಸಿದ್ದ ನಿಷೇದಾಜ್ಞೆ ಜ್ಯಾರಿಯಲ್ಲಿರುವುದನ್ನು ಉಲ್ಲಂಘಿಸಿ ಹಾಗೂ ಮಾರಕ ಸಾಂಕ್ರಾಮಿಕ ರೋಗವಾದ ಕೊರೋನಾ ವೈರಸ್ ಸೋಂಕು ಹರಡುವ ಸಂಭವವಿದೆ  ಎಂದು ತಿಳಿದೂ ಕೂಡ ಉದ್ದೇಶ ಪೂರ್ವಕವಾಗಿ ನಿಷೇದಾಜ್ಞೆಯನ್ನು  ಉಲ್ಲಂಘನೆ ಮಾಡಿ ಸಮಯ ಮೀರಿ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 69/2021 ಕಲಂ: 269. ಐಪಿಸಿ ಮತ್ತು ಕಲಂ 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾಧೇಶ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಕಡಬ ಪೊಲೀಸ್ ಠಾಣೆ : ದಿನಾಂಕ : 16-06-2021 ರಂದು ಕಡಬ ಠಾಣಾ ಅ ಕ್ರ  ನಂಬ್ರ: 44/2021 ಕಲಂ :  376(2) (n) 506 .IPC And U/s - 5.6 POCSO ACT- 2012ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೌಶಿಕ್ (19) ತಂದೆ ಗರೀಶ್ ಪೂಜಾರಿ, ತಜಂಕ್ ಮನೆ, ಕರ್ಪೆ ಗ್ರಾಮ ಎಂಬವರ ದೂರಿನಂತೆ ದಿನಾಂಕ 30.05.2021 ರಂದು ಬೆಳಿಗ್ಗೆ ಪಿರ್ಯಾದುದಾರರ ತಂದೆ ಗಿರೀಶ್ ಪೂಜಾರಿರವರು ಕೂಲಿ ಕೆಲಸಕ್ಕೆಂದು   ನೆರೆಯ ದೇವಪ್ಪ ಪೂಜಾರಿರವರ  ಮನೆಗೆ ಹೋಗಿದ್ದವರು , ಸುಮಾರು 11.00 ಗಂಟೆಯ ಸಮಯಕ್ಕೆ ಗಿರೀಶ್ ಪೂಜಾರಿರವರು ತಲೆಯ ಮೇಲೆ ಗೊಬ್ಬರವನ್ನು ಹೊತ್ತುಕೊಂಡು ಹೋಗುವ ಸಮಯ ಕಾಲು ಜಾರಿ   ಬಿದ್ದಿರುವುದಾಗಿ  ಪಿರ್ಯಾದುದಾರರಿಗೆ ಕರೆ ಬಂದ ಕೂಡಲೇ ಪಿರ್ಯಾದುದಾರರು ದೇವಪ್ಪರವರ ತೋಟಕ್ಕೆ ಹೋದಾಗ  ಗಿರೀಶ್ ರವರು ಕುತ್ತಿಗೆ ನೋವಾಗುತ್ತಿದೆ.ಎಂದು ಕೂಗುತ್ತಿದ್ದವರನ್ನು ಕೂಡಲೇ ಬಿ ಸಿ ರೋಡ್ ಸೋಮಾಯಾಜಿ ಆಸ್ಪತ್ರೆಗೆ ಕರೆತಂದಲ್ಲಿ  ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು  ಹೋಗುವಂತೆ ಸಲಹೆ ನೀಡಿದ್ದು ಅದರಂತೆ ತಂದೆಯವರನ್ನು ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದು ಪಿರ್ಯಾದುದಾರರ ತಂದೆ  ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ನಿನ್ನೆ ದಿನ ದಿನಾಂಕ 15.06.2021 ರ ರಾತ್ರಿ 9.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ .ಪಿರ್ಯಾದುದಾರರ ತಂದೆಯವರು ತಲೆಯ ಮೇಲೆ ಗೊಬ್ಬರವನ್ನು ಹೊತ್ತುಕೊಂಡು ಹೋಗುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ತೀವ್ರತರದ ಒಳಗಾಯದಿಂದ ಮೃತಪಟ್ಟಿದ್ದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 21/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಿನ್ನಮ್ಮ (60) ಗಂಡ: ಕೇಪಣ್ಣ ನಾಯ್ಕ ವಾಸ: ದೇವರಗುಂಡಿ ಮನೆ, ತೋಡಿಕಾನ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಮಗ ಜಯರಾಮ (30) ಎಂಬಾತನು ದಿನಾಂಕ 16.06.2021 ರಂದು ಬೆಳಿಗ್ಗೆ 07:30  ಗಂಟೆಯಿಂದ 09:00 ಗಂಟೆಯ ಮಧ್ಯ ಸುಳ್ಯ ತಾಲೂಕು ತೋಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿರುವ ತಮ್ಮ ಮನೆಯ ಕೊಟ್ಟಿಗೆಯಲ್ಲಿ ನೀರು ತರಲು ಬಳಸುವ ಪ್ಲಾಸ್ಟಿಕ್ ಪೈಪ್ ನ ಒಂದು ತುದಿಯನ್ನು ಕೊಟ್ಟಿಗೆಯ ಅಡ್ಡಕ್ಕೆ ಮತ್ತು ಇನ್ನೊಂದು ತುದಿಯನ್ನು ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 24/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವಪ್ಪ ನಾಯ್ಕ  ಪ್ರಾಯ 40 ವರ್ಷ ತಂದೆ: ದಿ|| ನಾರಾಯಣ ನಾಯ್ಕ್ ಪದಡ್ಕ ಮನೆ, ಪಡುವನ್ನೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ 45 ವರ್ಷ ಪ್ರಾಯದ ಪಿ. ವಸಂತ ನಾಯ್ಕರವರು ದಿನಾಂಕ 14.06.2021 ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬಂದು ಊಟ ಮಾಡಿ ಮಲಗಿದ್ದು ರಾತ್ರಿ ಸುಮಾರು 10.00 ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದು, ನಂತರ ಮನೆಗೆ ಬಾರದೇ ಇದ್ದುದರಿಂದ ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿ ಹುಡುಕಾಡಿದಾಗ ಸಿಗದೇ ಇದ್ದು ದಿನಾಂಕ 16.06.2021 ರಂದು ಮಧ್ಯಾಹ್ನ ಸುಮಾರು 2.00 ಗಂಟೆಗೆ ಪಿರ್ಯಾದಿದಾರರ ಚಿಕ್ಕಮ್ಮ ಸುಶೀಲರವರು ಪಿರ್ಯಾದಿದಾರರ ಮೊಬೈಲ್ ಫೋನಿಗೆ ಕರೆ ಮಾಡಿ ಅಣ್ಣ ವಸಂತನ ಮೃತದೇಹವು ಪಡುವನ್ನೂರು ಗ್ರಾಮದ ಪದಡ್ಕ ಮಹಾಲಿಂಗ ನಾಯ್ಕ್‌ರವರ ಬಾಬ್ತು ಅಡಿಕೆ ತೋಟದಲ್ಲಿರುವ ನೀರು ತುಂಬಿದ ಬಾವಿಯಲ್ಲಿ ತೇಲಾಡುತ್ತಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಅಣ್ಣ ವಸಂತ ನಾಯ್ಕರವರ ಮೃತದೇಹವು ಬಾವಿಯಲ್ಲಿ ತೇಲಾಡುತ್ತಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯುಡಿಅರ್ ನಂಬ್ರ 22/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-06-2021 01:39 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080