ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಆಸಿಫ್‌ ಎನ್‌ ಎ , ಪ್ರಾಯ 38 ವರ್ಷ, ತಂದೆ: ಕೆ ಅಬ್ದುಲ್ಲ, ವಾಸ:  1-11 ಕೆ, ಸಣ್ಣಪದವು ಮನೆ, ಪಜೀರು  ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 15-07-2021 ರಂದು 23-00 ಗಂಟೆಗೆ ಆರೋಪಿ ಲಾರಿ ಚಾಲಕ ಶಾಕೀರ್‌ ಎಂಬವರು KA-17-B-9465 ನೇ ನೋಂದಣಿ ನಂಬ್ರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ  ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಆನೆಬೈಲು ಎಂಬಲ್ಲಿ ರಸ್ತೆಯ ಪೂರ್ತಿ ರಾಂಗ್‌ ಸೈಡ್‌ಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿರ್ಯಾದುದಾರರು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಏರು ರಸ್ತೆಯಲ್ಲಿ  ಚಲಾಯಿಸಿಕೊಂಡು ಹೋಗುತ್ತಿದ್ದ  KA-20-AA-1455 ನೇ ನೋಂದಣಿ ನಂಬ್ರದ  ಲಾರಿಯ ಮುಂಭಾಕ್ಕೆ ಅಪಘಾತವಾಗಿ ಎರಡೂ ವಾಹನಗಳು ಜಖಂಗೊಂಡಿರುವುದಲ್ಲದೇ, ಆರೋಪಿ ಚಾಲಕನ ಎಡಕಾಲಿಗೆ ಗಾಯ, ಅದರಲ್ಲಿದ್ದ ಮಧು ಎಂಬವರಿಗೆ ಕೈಗೆ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಅವರಿಬ್ಬರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಶಾಕಿರ್‌ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕಳುಹಿಸಿರುತ್ತಾರೆ.  ಪಿರ್ಯಾದುದಾರರ ಲಾರಿಯ ಕ್ಲೀನರ್‌ ಮಹಮ್ಮದ್‌ ನೌಫಾನ್‌ರವರಿಗೆ ಬಲಕೈಗೆ ಗುದ್ದಿದ ನೋವಾಗಿದ್ದು, ನೋವು ಉಲ್ಭಣಿಸಿದ ಕಾರಣ ಈ ದಿನ ದೇರಳಕಟ್ಟೆ ಕೆ.ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  96/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನಿತಿನ್ ಕೆಜೆ (21) ತಂದೆ:ದಿ ಜಾನ್ಸನ್ ವಾಸ:ಕೊಪ್ಪ ಮನೆ ನೆಲ್ಯಾಡಿ ಗ್ರಾಮ ಕಡಬ ತಾಲೂಕು ಎಂಬವರು ದಿನಾಂಕ 16-07-2021 ರಂದು  ಉದನೆಯ ಬರೋಡ ಬ್ಯಾಂಕ್ ಗೆ ತನ್ನ ಮೋಟಾರು ಸೈಕಲ್ ನಲ್ಲಿ ಬ್ಯಾಂಕ್ ಕೆಲಸದ ನಿಮಿತ್ತಾ ಹೋಗಿದ್ದು, ನಂತರ ಬ್ಯಾಂಕ್ ಕೆಲಸ ಮುಗಿಸಿ ವಾಪಾಸ್ಸು ನೆಲ್ಯಾಡಿ ಕಡೆಗೆ ರಾ.ಹೆ 75 ರಲ್ಲಿ ತನ್ನ ಮೋಟಾರ್ ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಂಜೆ 4.00 ಗಂಟೆಯ ವೇಳೆಗೆ ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಬಳಿಯ ಅಡ್ಕಾರ್ ಜಾಲ್ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಗುಂಡ್ಯ ಕಡೆಯಿಂದ ನೆಲ್ಯಾಡಿ ಕಡೆಗೆ ಒಂದು ಮೋಟಾರು ಸೈಕಲ್ ನಂಬ್ರ KA-09-HL-6598 ನೇದರಲ್ಲಿ  ಇಬ್ಬರು ವ್ಯಕ್ತಿಗಳು ಹೋಗುತ್ತಿದ್ದು ಇದೇ ಸಮಯ ಮಂಗಳೂರು ಕಡೆಯಿಂದ ಗುಂಡ್ಯ ಕಡೆಗೆ ಬರುತ್ತಿದ್ದ KSRTC ಬಸ್ ನಂಬ್ರ KA-13-F-2315 ನೇದನ್ನು  ಅದರ ಚಾಲಕನು ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿದರ ಪರಿಣಾಮ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-09-HL-6598 ನೇ ಮೋಟಾರು ಸೈಕಲ್ ಗೆ ಡಿಕ್ಕಿಯಾಯಿತು.ಪರಿಣಾಮ ಮೋಟಾರು ಸೈಕಲ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮೋಟಾರು ಸೈಕಲ್ ಸಮೇತಾ ರಸ್ತೆಗೆ ಎಸೆಯಲ್ಪಟ್ಟು ಈ ಪೈಕಿ ಮೋಟಾರು ಸೈಕಲ್ ನಲ್ಲಿದ್ದ ಒಬ್ಬ ವ್ಯಕ್ತಿಯು ಮೃತಪಟ್ಟು ಮೋಟಾರು ಸೈಕಲ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮತ್ತು ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು   ಅಪಘಾತಪಡಿಸಿದ  KSRTC ಬಸ್ ನಂಬ್ರ KA-13-F-2315 ನೇದನ್ನು  ಅದರ ಚಾಲಕನು ಬಸ್ಸನ್ನು ಅಪಘಾತದ ಸಮಯ ಅಪಘಾತದ ಸ್ಥಳದಲ್ಲಿ ನಿಲ್ಲಿಸದೇ ಮುಂದಕ್ಕೆ  ಚಲಾಯಿಸಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆ ಅ.ಕ್ರ 192/16 ಕಲಂ: 279,337 ಐಪಿಸಿ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಫೆಲಿಕ್ಸಿ ಡಿಸೋಜಾ, ಪ್ರಾಯ: 58 ವರ್ಷ, ತಂದೆ: ಸೆಬಾಸ್ಟಿನ್‌ ಡಿಸೋಜಾ, ವಾಸ: ಕಾಜಲ ಮನೆ, ಪಿಲಾತಬೆಟ್ಟು ಗ್ರಾಮ, ನೈನಾಡು ಅಂಚೆ, ಬಂಟ್ವಾಳ ಎಂಬವರ  ಬಾವ ಜಾನ್‌ ಫೆರ್ನಾಂಡಿಸ್‌ ರವರ ಪತ್ನಿ ಹಾಗೂ ಮಗ ಅಸೌಖ್ಯದಿಂದ ಈ ಹಿಂದೆ ಮೃತಪಟ್ಟಿದ್ದು ಈ ವಿಚಾರದಲ್ಲಿ ಜಾನ್‌ ಫೆರ್ನಾಂಡಿಸ್‌ರವರು ಮಾನಸಿಕವಾಗಿ ನೊಂದು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಸುಮಾರು 3 ತಿಂಗಳ ಹಿಂದೆ ಜಾನ್‌ ಫೆರ್ನಾಂಡಿಸ್‌ರವರು ತನ್ನ ಜಮೀನನನ್ನು ಮಾರಾಟ ಮಾಡಿ ಬಳಿಕ ಬಂಟ್ವಾಳ ತಾಲೂಕು, ಪಿಲಾತಬೆಟ್ಟು ಗ್ರಾಮದ, ನೈನಾಡು ಎಂಬಲ್ಲಿರುವ ಫಿರ್ಯಾಧಿದಾರರ ಮನೆಯಲ್ಲಿ ವಾಸ್ತವ್ಯವಿದ್ದವರು ದಿನಾಂಕ: 16.07.2021 ರಂದು ಬೆಳಿಗ್ಗೆ 06:00 ಗಂಟೆಗೆ ಫಿರ್ಯಾಧಿದಾರರ ಮನೆ ಸಮೀಪವೇ ವಾಸವಿರುವ ಅವರ ಚಿಕ್ಕಪ್ಪ ಅಲೆಕ್ಸ್‌ ಎಂಬವರ ಮನೆಗೆ ಮೊಬೈಲ್‌ ಚಾರ್ಜ್‌ ಮಾಡಲು ಹೋಗಿದ್ದವರು ಅಲ್ಲಿಂದ ವಾಪಾಸು ಮನೆಗೆ ಹೋಗುತ್ತೇನೆ ಎಂದು ಅಲ್ಲಿದ್ದವರಲ್ಲಿ ತಿಳಿಸಿ ಮನೆ ಕಡೆ ಹೊರಟವರು ಬಳಿಕ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 47/2021 ಕಲಂ: ಮನುಷ್ಯ ಕಾಣೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 17-07-2021 03:17 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080