ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಿಜ್ವಾನ್ ಶರೀಫ್(30) ತಂದೆ: ಮೊಹಮ್ಮದ್ ಶರೀಫ್, ವಾಸ: 146-8 , ಕುಂಡಾಲ ಮನೆ, ಜನ್ನತ್ತುಲ್ ಉಲಮ ಮದರಸ ಬಳಿ, ಅಡ್ಯಾರ್, ಕಣ್ಣೂರು ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 15-09-2021 ರಂದು ತನ್ನ ಪತ್ನಿ ಸಾನಿಯತ್, ಮಗ ಮೊಹಮ್ಮದ್ ರಿಷಾನ್ ನೊಂದಿಗೆ ಪಿರ್ಯಾದಿದಾರರ ಅಕ್ಕನ ಮನೆಯಾದ ಮಲ್ಲೂರು ಬದ್ರಿಯಾ ನಗರಕ್ಕೆ ಹೋದವರು ವಾಪಾಸು KA-19-AB-0200 ನೇ ಆಟೋರಿಕ್ಷಾದಲ್ಲಿ ಕುಳಿತುಕೊಂಡು ಮನೆ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಮೇರಮಜಲು ಗ್ರಾಮದ ಮಯ್ಯಡಿ ಎಂಬಲ್ಲಿಗೆ ತಲುಪಿದಾಗ ಮೇರಮಜಲು ಕಡೆಯಿಂದ KA-19-D-4398 ನೇ ಲಾರಿಯನ್ನು ಅದರ ಚಾಲಕ ಅನ್ವರ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಬರುತ್ತಿದ್ದ ಆಟೋರಿಕ್ಷಾದ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರ ಮಗ ಮೊಹಮ್ಮದ್ ರಿಷಾನ್ ನ ಬಲ ಹಾಗೂ ಎಡ ಕೈಯ ಮಣಿಗಂಟು, ಬೆರಳುಗಳಿಗೆ ಗುದ್ದಿದ ಹಾಗೂ ರಕ್ತಗಾಯ ಮತ್ತು ಮುಖಕ್ಕೆ ತರಚಿದ ಗಾಯಗೊಂಡವರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 95/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮುಫೀಜ್ ,ಪ್ರಾಯ: 28 ವರ್ಷ , ವಾಸ: ಕುಂಡಡ್ಕ ಮನೆ, ಕೌಕ್ರಾಡಿ ಗ್ರಾಮ ಕಡಬ ತಾಲೂಕು ರವರು ದಿನಾಂಕ: 16.09.2021 ರಂದು ಅವರ  ಬಾಬ್ತು ಮೋಟಾರ್ ಸೈಕಲ್ ನಲ್ಲಿ ನೆಲ್ಯಾಡಿ ಪೇಟೆಯಿಂದ ಸಾಮಾಗ್ರಿಗಳನ್ನು ಖರೀದಿ ಮಾಡಿ ಮನೆಯ ಕಡೆಗೆ ಅಂದರೆ ಮಂಗಳೂರು ಕಡೆಯಿಂದ ಹಾಸನ ಕಡೆಗೆ ರಾ.ಹೆ 75 ರಲ್ಲಿ ಹೋಗುತ್ತಿರುವಾಗ ಪಿರ್ಯಾದುದಾರರ ಎದುರುಗಡೆಯಿಂದ ಒಂದು ಮೊಟಾರು ಸೈಕಲ್ ಹೋಗುತ್ತಿದ್ದ ಸಮಯ ಪಿರ್ಯಾದುದಾರರ ಮೊಟಾರು ಸೈಕಲನ್ನು ಒಂದು ಟಾಟಾ ಎ.ಸಿ ವಾಹನವು ಓವರ್ ಟೇಕ್ ಮಾಡಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದುದಾರರ ಎದುರಗಡೆಯಿಂದ ಹೋಗುತ್ತಿದ್ದ ಮೊಟಾರು ಸೈಕಲ್ ಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಮೊಟಾರು ಸೈಕಲ್ ಸವಾರ ಮೊಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟನು ಕೂಡಲೇ ಪಿರ್ಯಾದುದಾರರ ಬಾಬ್ತು ಮೊಟಾರು ಸೈಕಲನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪಿರ್ಯಾದುದಾರರ ಪರಿಚಯದ ಶಕೀಲ್ ಅಹಮ್ಮದ್ ಹಾಗೂ ಇರ್ಫಾನ್ ಸೇರಿಕೊಂಡು ಆತನನ್ನು ಉಪಚರಿಸಿ ನೋಡಲಾಗಿ ಆತನು ಪ್ರಿನ್ಸ್ ಎಂಬವನಾಗಿದ್ದು ತಲೆಗೆ ಗಾಯವಾಗಿದ್ದವನನ್ನು ಪಿರ್ಯಾದುದಾರರು ಹಾಗೂ ಶಕೀಲ್ ಅಹಮ್ಮದ್ ಹಾಗೂ ಇರ್ಫಾನ್ ರವರುಗಳು  ಒಂದು ಅಂಬ್ಯುಲೆನ್ಸ್ ಮೂಲಕ ಮಂಗಳೂರು ಎಜೆ ಹಾಸ್ಪಿಟಲ್  ಕಳುಹಿಸಿಕೊಟ್ಟಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸು ಠಾಣಾ ಅ ಕ್ರ 89/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ರತ್ನವತಿ  ಪ್ರಾಯ 53 ವರ್ಷ ಗಂಡ ; ಪುರೊಷೋತ್ತಮ ಗೌಡ  ವಾಸ  ಕೊಳೆಸಾಗು  ಮನೆ ಬಂಟ್ರ ಗ್ರಾಮ ಕಡಬ ತಾಲೂಕು ದ. ಕ ಜಿಲ್ಲೆ ರವರು ಸಂಸಾರದೊಂದಿಗೆ ವಾಸಮಾಡಿಕೊಂಡಿದ್ದು ಬೀಡಿ ಕಟ್ಟುವ ಕೆಲಸವಾಗಿರುತ್ತಾದೆ ಪಿರ್ಯದುದಾರರು 20 ವರ್ಷದ ಹಿಂದೆ ಪುರುಷೋತ್ತಮ ಎಂಬುವರಿಗೆ ಮದುವೆ ಯಾಗಿದ್ದು ಮನೆ ಅಳಿಯನಾಗಿ ಪಿರ್ಯದುದಾರರ ಮನೆಯಲ್ಲಿ ಇದ್ದು. ಮದ್ಯ ವ್ಯಸನಿಯವಾಗಿರುತ್ತಾನೆ ಪ್ರತಿ ದಿವಸ ವಿಪರೀತ ಕುಡಿದು ಬಂದು ಮನೆಯಲ್ಲಿ ಮಕ್ಕಳಾದ ವೆಂಕಟೇಶ್ ಹಾಗೂ  ವಿಜೇತ್ ರವರಿಗೆ  ಅವಾಚ್ಯ ಶಬ್ದಗಳಿಂದ  ರಂಡೆ ಮಕ್ಕಳೇ ಸೂಳೆ ಮಕ್ಕಳೆ ಎಂದು ಬೈದು ಪಿರ್ಯಾದುದಾರರಿಗು ಹಲ್ಲೆ ನಡೆಸುತ್ತಿದ್ದರು ಮುಂದಕ್ಕೆ ಸರಿ ಹೋಗಬಹುದು ಎಂದು ತಿಳಿದು ಪಿರ್ಯದುದಾರರು ಯಾವುದೇ ದೂರು ನೀಡಿರುವುದಿಲ್ಲ. ಹಾಗೂ ಕಳೆದ ಒಂದು ವಾರದಿಂದ ಯಾವುದೇ ಕೆಲಸಕ್ಕೆ ಹೋಗದೆ ವಿಪರೀತ ಮದ್ಯ ಸೇವಿಸುತ್ತಿದ್ದು  ಈ ,ದಿನಾಂಕ:16.09.2021 ಸಮಯ 07-30 ಗಂಟೆಗೆ ಪಿರ್ಯಾದುದಾರರು ದನದ ಹಾಲು ಕರೆದು ಮನೆಯ ಒಳಗಡೆ ಬರುವಾಗ ಪಿರ್ಯಾದುದಾರರ ಗಂಡ ಪುರುಷೋತ್ತಮ ಕೈಯಲ್ಲಿ ಕತ್ತಿ ಹಿಡಿದು ಕತ್ತಿಯಿಂದ ಪಿರ್ಯದುದಾರರ ಬಲ ಭುಜಕ್ಕೆ ಕಡಿದು ಪಿರ್ಯದುದಾರರಿಗೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾನೆ. ನಂತರ ಹಲ್ಲೆಯ ಪರಿಣಾಮ ಪಿರ್ಯಾದುದಾರರ ಬಲ ಭುಜಕ್ಕೆ  ರಕ್ತ ಗಾಯವಾಗಿದ್ದು ಕೂಡಲೇ  ಪಿರ್ಯದುದಾರರು  ಅಲ್ಲಿಂದ ಹೆದರಿ  ಪಕ್ಕದ ಮನೆಯಾದ ಕಮಲರವರ ಮನೆಗೆ ಓಡಿ ಹೋಗಿದ್ದು  ಹಲ್ಲೆಯಿಂದ ರಕ್ತ ಗಾಯಗೊಂಡ  ಪಿರ್ಯಾದುದಾರರನ್ನು  ಕಮಲ ಮತ್ತು ಪಿರ್ಯದುದಾರರ ಮಗ ವೆಂಕಟೇಶ್  ರವರುಗಳು  ಉಪಚರಿಸಿ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕಡಬ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 73/2021 ಕಲಂ 504.324.506.   IPC. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜ್ ಕುಮಾರ್  ಆಹಾರ ನಿರೀಕ್ಷಕರು ಆಹಾರ ಶಾಖೆ ಬಂಟ್ವಾಳ ತಾಲೂಕು ರವರಿಗೆ ದಿನಾಂಕ: 16.09.2021 ರ ಅಪರಾಹ್ನ 2:35 ಗಂಟೆಗೆ ಸಿಕ್ಕ ಮಾಹಿತಿ ಮೇರೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕೊಡಂಗೆಕೋಡಿ ಎಂಬಲ್ಲಿನ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬಿ.ಸಿ.ರೋಡ್ ಕಡೆಗೆ ಸಾಗುತ್ತಿದ್ದ ಗೂಡ್ಸ್ ಕ್ಯಾರಿಯಾರ್ ಲಘು ವಾಹನ ಸಂಖ್ಯೆ: KA-19-B-9488 ನೇ ವಾಹನವನ್ನು ಆಹಾರ ಶಿರಸ್ತೇದಾರರ ನೇತೃತ್ವದಲ್ಲಿ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಉಚಿತ ಪಡಿತರ ಅಕ್ಕಿಗಳುಳ್ಳ ತಲಾ 50 ಕೆ.ಜಿ.ಯ 40 ಗೋಣಿ ಚೀಲಗಳನ್ನು(2ಟನ್) ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಸದ್ರಿ ಅಕ್ಕಿಗಳುಳ್ಳ ಗೋಣಿ ಚೀಲಗಳನ್ನು ವಶಪಡಿಸಿಕೊಂಡು ಹಾಳಾಗುವ ಹಿತದೃಷ್ಟಿಯಿಂದ ಬಿ.ಸಿ.ರೋಡಿನ ಕೆ.ಎಫ್.ಸಿ ಗೋದಾಮಿಗೆ ದಾಸ್ತಾನು ಇರಿಸಿರುವುದಾಗಿಯೂ, ಕಾನೂನು ಬಾಹಿರವಾಗಿ ಸಾಗಾಟ ಮಾಡಿದ KA-19-B-9488 ನೇ ವಾಹನವನ್ನು ವಶಪಡಿಸಿಕೊಂಡು ಚಾಲಕ ನೌಫಲ್ ಬಿನ್ ಯೂಸೂಫ್, 26 ವರ್ಷ ಬಸ್ತಿಗುಡ್ಡೆ ಮನೆ, ಸಜೀಪ ನಡು ಗ್ರಾಮ, ಬಂಟ್ವಾಳ ತಾಲೂಕು ಎಂಬಾತನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಬೇಕಾಗಿ ಕೋರಿಕೆಯಂತೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ. 109/2021 ಕಲಂ 3, 7 ESSENTIAL COMMODITIES ACT, 1955. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದನಂಜಯ ಕುಮಾರ್ ( 34) ರಾಮಕೃಷ್ಣ ನಾಯಕ್ ವಾಸ: ಎರ್ಮಟ್ಟಿ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ ಸುಳ್ಯ ತಾಲೂಕು ರವರು ನೆಲ್ಲೂರು ಕೆಮ್ರಾಜೆ ಗ್ರಾಮದ ಪಂಚಾಯತ್ ಉಪಾಧ್ಯಕ್ಷರಾಗಿದ್ದು,  ನೆಲ್ಲೂರು ಕೆಮ್ರಾಜೆ ಗ್ರಾಮದ ಬಸ್ಸ್ ನಿಲ್ದಾಣದಲ್ಲಿ ಸುಮಾರು ಅಂದಾಜು 55 ವರ್ಷದ ಒಬ್ಬ ವ್ಯಕ್ತಿಯು ಆಸ್ವಸ್ಥಗೊಂಡಿವರನ್ನು  ಪಿರ್ಯಾದುದಾರರು ಮತ್ತು ಸ್ಥಳಿಯರು ಸೇರಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಸದ್ರಿ ವ್ಯಕ್ತಿಯು  ದಿನಾಂಕ 15.09.2021 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದುದಾಗಿ ವೈದ್ಯರು ತಿಳಿಸಿರುತ್ತಾರೆ  ಮೃತ ಪಟ್ಟ ವ್ಯಕ್ತಿಯ ಹೆಸರು ವಿಳಾಸ ಪತ್ತೆಯಾಗದೇ ಇದ್ದುದರಿಂದ ಹೆಸರು ವಿಳಾಸ ಪತ್ತೆ ಮಾಡಿ ಮುಂದಿನ ಅಂತ್ಯ ಕ್ರಿಯೇಗೆ ಬಿಟ್ಟು ಕೋಡಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ದೂರಿನಂತೆ ಸುಳ್ಯ ಪೊಲೀಸ್‌ ಠಾಣಾ udr 38-2021 ಕಲಂ 174 Crpc. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-09-2021 11:28 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080