ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಿನೇಶ್ ಪೂಜಾರಿ (38) ತಂದೆ: ಶಿವಪ್ಪ ಪೂಜಾರಿ ವಾಸ:ಕೈರೋಡಿ ಮನೆ, ಆರಂಬೋಡಿ ಗ್ರಾಮ       ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು  ನಿನ್ನೆ ದಿನ ದಿನಾಂಕ: 17.02.2022 ರಂದು ಬೆಳ್ತಂಗಡಿ ತಾಲೂಕು  ಆರಂಬೋಡಿ ಗ್ರಾಮದ ಗಿರಿ ಮೈದಾನದಿಂದ  ರಾತ್ರಿ ಸಮಯ ಸುಮಾರು 00-10 ಗಂಟೆಗೆ ಅವರು ಅವರ ಬಾಭ್ತು ಮೋಟಾರು ಸೈಕಲ್ ನಲ್ಲಿ ಹೊರಟಿದ್ದು ಅವರ  ಎದುರಿನಿಂದ  ಪಿರ್ಯಾದಿದಾರರ ಚಿಕ್ಕಮ್ಮನ ಮಗ ಪ್ರಶಾಂತನು ಆತನ  ಬಾಬ್ತು ಕೆ ಎ  19 ಹೆಚ್ ಹೆಚ್ 6488 ನೇ ಮೋಟಾರ್ ಸೈಕಲ್ ನಲ್ಲಿ ಆತನ  ತಾಯಿ ವಿನೋಧ ರವರನ್ನು  ಸಹಸವಾರಳಾನ್ನಾಗಿ ಕುಳ್ಳಿರಿಸಿಕೊಂಡು ಮನೆಯ ಕಡೆಗೆ ಹೋಗುತ್ತಾ ರಾತ್ರಿ ಸಮಯ ಸುಮಾರು 00.15 ಗಂಟೆಯ ಸಮಯಕ್ಕೆ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ಪೂಂಜಾ ದ್ವಾರದ ಬಳಿ ಇಳಿಜಾರು ರಸ್ತೆಗೆ ತಲುಪಿದಾಗ, ಪ್ರಶಾಂತನು  ಆತನು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನ್ನು  ವೇಗವಾಗಿ, ನಿರ್ಲಕ್ಷ್ಯತನದಿಂದ ಚಲಾಯಿಸಿದರಿಂದ ಮೋಟಾರ್ ಸೈಕಲ್ ಸ್ಕಿಡ್ ಯಾಗಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದ ಪರಿಣಾಮ ವಿನೋಧರವರಿಗೆ ತಲೆಗೆ ರಕ್ತ ಗಾಯವಾಗಿ ಕಿವಿ ಮತ್ತು ಮೂಗಿನಿಂದ ರಕ್ತ ಬರುತ್ತಿದ್ದು ಪ್ರಶಾಂತರವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತದೆ.  ವಿನೋದಾರವರು ಮಂಗಳೂರಿನ ಫೆಸ್ಟ್ ನ್ಯೂರೋ  ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿ ಇರುತ್ತಾರೆ. ಪ್ರಶಾಂತರವರಿಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು ಅವರು ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ  13-2022 ಕಲಂ :279,338,  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

 • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಾನವಿ (44 ವರ್ಷ), ಗಂಡ: ಸತೀಶ್ ಪೂಜಾರಿ, ಕೊನ್ನೆದು ಮನೆ, ಹೊಸಂಗಡಿ ಗ್ರಾಮ,ಬೆಳ್ತಂಗಡಿ ಎಂಬವರ ದೂರಿನಂತೆ ಆರೋಪಿತನು  ಪಿರ್ಯಾದಿಯ  ತಮ್ಮ ಲೋಕೇಶ್  ಎಂಬವರ  ಮದ್ಯೆ ನಡೆದ  ಗಲಾಟೆಯಲ್ಲಿ  ಲೋಕೇಶ್  ನ ಪರವಾಗಿ   ನ್ಯಾಯಾಲಯದಲ್ಲಿ  ಸಾಕ್ಷಿ  ನುಡಿದಿದ್ದಾರೆ   ಎಂಬ   ಪೂರ್ವ  ಉದ್ದೇಶದಿಂದ  ಆರೋಪಿತನು  ದಿನಾಂಕ :16-02-2022 ರಂದು  ರಾತ್ರಿ ಸುಮಾರು  10:00 ಗಂಟೆ  ಸಮಯಕ್ಕೆ  ಪಿರ್ಯಾದಿದಾರರ  ಮನೆಯಂಗಳಕ್ಕೆ   ಅಕ್ರಮ ಪ್ರವೇಶ  ಮಾಡಿ ಪಿರ್ಯಾದಿದಾರನ್ನು  ಮತ್ತು ಅವರ  ಗಂಡನನ್ನು ಉದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈದು ನಿಮ್ಮನ್ನು ಇವತ್ತು  ಕೊಲ್ಲದೇ ಬಿಡುವುದಿಲ್ಲ:, ಎಂದು ಹೇಳಿ  ಪಿರ್ಯಾದಿಯ   ಗಂಡನಿಗೆ ಮಾರಕ ಆಯುಧವಾದ   ಕತ್ತಿಯಿಂದ  ಕಡಿದು   ಉರುಡಾಟ ನಡೆಸಿದ ಸಮಯ ಪಿರ್ಯಾದಿದಾರರು  ಬಿಡಿಸಲು  ಹೋದಾಗ ಅವರಿಗೂ ಕತ್ತಿಯಿಂದ  ಹಲ್ಲೆ ನಡೆಸಿದ್ದು,  ಆ ಸಮಯ   ಪಿರ್ಯಾದಿದಾರರು  ಜೋರಾಗಿ  ಬೊಬ್ಬೆ  ಹಾಕಿದಾಗ  ನೆರೆ ಮನೆಯ  ರುಕ್ಮಯ್ಯ ಮತ್ತು ಸಂತೋಷ್  ರವರು  ಬರುವುದನ್ನು  ಕಂಡು  ಅವರನ್ನು   ಉದ್ದೇಶಿಸಿ ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳುವುದಾಗಿದೆ.  ಆರೋಪಿತನ   ಹಲ್ಲೆಯಿಂದ ಪಿರ್ಯಾದಿಯ    ಬಲ ಕೈಗೆ,  ರಕ್ತಗಾಯವಾಗಿದ್ದು , ಪಿರ್ಯಾದಿಯ  ಗಂಡನಿಗೆ ಮುಖಕ್ಕೆ , ಬೆನ್ನಿಗೆ,  ರಕ್ತ  ಗಾಯವಾಗಿದ್ದು, ಪ್ರಜ್ಞಾಹೀನರಾಗಿದ್ದು, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 12-2022 ಕಲಂ : 447, 324, 504, 506, 307 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: ೦2

 • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 17-02-2022 ರಂದು ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಅ.ಕ್ರ 17-2022 ಕಲಂ: 498( ಎ), 323, 506 ಜೊತೆಗೆ 34 ಐಪಿಸಿ ಮತ್ತು ಕಲಂ: 4 ಮುಸ್ಲೀಂ ಮಹಿಳಾ ಕಾಯ್ದೆ (ತಲಾಕ್  ಕಾಯ್ದೆ)   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ:    17.02.2022 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ  ಅ.ಕ್ರ: 08/2022  ಕಲಂ:415,417,418,420 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಲ್ಲಿಕಾ ಪ್ರಾಯ 32 ವರ್ಷ ತಂದೆ: ದಿ ಮೊನಪ್ಪ ಪುರುಷ ವಾಸ: ಮುಗ್ದಾಲ್ ಗುಡ್ಡೆ ಮನೆ  ಬಿಕಸಬಾ ಗ್ರಾಮ ಬೈಪಾಸ ರಸ್ತೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಅಣ್ಣನಾದ ಹರೀಶ ಪ್ರಾಯ 38 ವರ್ಷ ತಂದೆ: ದಿ ಮೊನಪ್ಪ ಪುರುಷ ವಾಸ: ಮುಗ್ದಾಲ್ ಗುಡ್ಡೆ ಮನೆ  ಬಿ ಕಸಬಾ ಗ್ರಾಮ ಈತನು ಬಿ ಕಸಬಾ ಗ್ರಾಮ ಬಡ್ಡಕಟ್ಟೆಯ ಸಶ್ಮಾನದಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಪಾನ ಚಟವನ್ನು ಅಂಟಿಸಿಕೊಂಡಿದ್ದು ಇದರಿಂದ ಖಾಯಿಲೆಗೆ ತುತ್ತಾಗಿದ್ದನು. ಮನೆಗೆ ಬಾರದೆ ಸಶ್ಮಾನದ ಎದುರುಗಡೆಯ ಇರುವ ಪರಮೇಶ್ವರ ರವರ ಬಾಬ್ತು ಗೂಡಂಗಡಿಯಲ್ಲಿ ರಾತ್ರಿ ಕಳೆಯುತ್ತಿದ್ದನು. ದಿನಾಂಕ 17-02-2022 ಬೆಳಿಗ್ಗೆ 07.47 ಗಂಟೆಗೆ ಬಡ್ಡಕಟ್ಟೆಯ ಪದ್ಮನಾಭರವರು ಕರೆ ಮಾಡಿ ಹರೀಶನು ಅಂಗಡಿಯಲ್ಲಿ ಮಲಗಿದ್ದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಹಾಗೂ ಪಿರ್ಯಾಧಿದಾರರು ತಾಯಿ ಸ್ಥಳಕ್ಕೆ ಬಂದು ನೋಡಿರುವುದಾಗಿದೆ ದಿನಾಂಕ 16-02-2022 ರಂದು ಸಂಜೆ 7.30 ಗಂಟೆಯಿಂದ ದಿನಾಂಕ 17-02-2022 ರ ಬೆಳಿಗ್ಗೆ 6.30 ಗಂಟೆಯ ಮಧ್ಯಾವಧಿಯಲ್ಲಿ ತನಗಿರುವ ಖಾಯಿಲೆಯಿಂದ ಇಲ್ಲವೇ ಹೃದಯಘಾತದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 12-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-02-2022 11:33 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080