ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಮರುದ್ದಿನ್ ಪ್ರಾಯ:27  ವರ್ಷ ತಂದೆ  ಇಬ್ರಾಹಿಂ ವಾಸ ; ಅಲೆಕ್ಕಾಡಿ   ಮನೆ ಗ್ರಾಮ; ಕಡಬ ಎಂಬವರ ದೂರಿನಂತೆ ದಿನಾಂಕ:16.03.2021 ರಂದು ಪಿರ್ಯಾದುದಾರರು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಖಾಸಗಿ ಕೆಲಸದ ನಿಮಿತ್ತ ಕಡಬ ಕಡೆಯಿಂದ ಹೊಸ್ಮಠ ಕಡೆಗೆ ರಾಜ್ಯ ಡಾಮಾರು ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಸಂಜೆ 6-20 ಗಂಟೆ ಸಮಯಕ್ಕೆ ಹೊಸ್ಮಠ ಕಾರ್ಕಾಳ ಕ್ರಾಸ್ ಬಳಿ ತಲುಪಿದಾಗ ಪಿರ್ಯಾದಿಯ ಎದುರಿನಿಂದ ಹೋಗುತ್ತಿದ್ದ ಸ್ಕೂಟರ್  ಸವಾರನು ತೀರಾ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಸ್ಕೂಟರ್ ರನ್ನು ಚಲಾಯಿಸಿದ ಪರಿಣಾಮ  ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆಯು ರಸ್ತೆಗೆ ಎಸೆಯಲ್ಪಟ್ಟಿದ್ದು  ಕೂಡಲೇ ಪಿರ್ಯಾದುದಾರರು ತನ್ನ ಬೈಕ್ ನ್ನು ನಿಲ್ಲಿಸಿ ಪರಿಚಯದ  ಪಾರುಕ್ ರವರೊಂದಿಗೆ ಹತ್ತಿರ ಹೋಗಿ ನೋಡಿ ಉಪಚರಿಸಿದ್ದಲ್ಲಿ  ಸ್ಕೂಟಾರ್ ಸವಾರ ಉಸ್ಮಾನ್ ಎಂದು ತಿಳಿದಿದ್ದು ಸ್ಕೂಟರ್ ನಂಬ್ರ  ನೋಡಲಾಗಿ KA-21-X-6114 ಅಗಿದ್ದು  ಸಹಸವಾರಳಾಗಿದ್ದವರನ್ನು ವಿಚಾರಿಸಲಾಗಿ ಅವರ ಹೆಸರು ಸುಮಯ್ಯ ಎಂಬುದಾಗಿ ತಿಳಿದಿದ್ದು ನಂತರ ಗಾಯಾಳುವನ್ನು ನೋಡಲಾಗಿ ಬಲಕಾಲಿನ ಭಾಗ ಹಾಗೂ ಎಡ ಕಾಲಿನ  ಮೊಣ ಗಂಟು. ಬಲಗೈ ಬುಜಕ್ಕೆ ರಕ್ತ ಗಾಯ ವಾಗಿದ್ದು  ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ  ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಹಿತ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 23/2021 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ:1

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ಥ ಬಾಲಕಿಗೆ ಆರೋಪಿ ಶೇಖರ ಗೌಡ ಎಂಬಾತನು ಸುಮಾರು 2 ತಿಂಗಳಿನಿಂದ ತಿಂಡಿ ಕೊಡುತ್ತೇನೆಂದು ಆಮಿಷವೊಡ್ಡಿ ನಿರ್ಜನ ಸ್ಥಳಗಳಲ್ಲಿ ಮತ್ತು ಆತನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಕಲಂ: ಕಲಂ: 354 ಐಪಿಸಿ ಮತ್ತು 8, 11 ಪೋಕ್ಸೋ ಆಕ್ಟ್ -2012 ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿ  ಜೇಮ್ಸ್ ಪ್ರಾಯ: 64 ವರ್ಷ, ವಾಸ: ನಿರ್ಮಲ್ ನಿಕೇತನ್‌ .ಎಪಿಎಂಸಿ ರೋಡ್‌ ಪುತ್ತೂರು ಕಸಬಾ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 12.03.2021 ರಂದು ಮನೆಗೆ ಬೀಗ ಹಾಕಿ ತನ್ನ ಪತ್ನಿಯೊಂದಿಗೆ ಕಡಬ ತಾಲೂಕಿನ ಶಿರಾಡಿ ಎಂಬಲ್ಲಿಗೆ ಹೋಗಿದ್ದು, ನಂತರ ದಿನಾಂಕ 15.03.2021 ರಂದು ಸಾಯಂಕಾಲ 6.00 ಗಂಟೆಗೆ ವಾಪಸು ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲು ತೆರೆದು ಒಳಗಡೆ ಹೋದಾಗ ಹಿಂಬದಿಯ ಬಾಗಿಲು ಜಖಂಗೊಂಡು, ತೆರೆದುಕೊಂಡಿದ್ದು,  ಫಿರ್ಯಾದಿದಾರರ ಪತ್ನಿ ಕಪಾಟುಗಳನ್ನು ನೋಡಿದಾಗ ದಾಖಲಾತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದು, ಒಟ್ಟು ರೂ 60,000/- ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ನ್ನು  ದಿನಾಂಕ 12.03.2021 ರಿಂದ ದಿನಾಂಕ 15.03.2021 ರ ಸಾಯಂಕಾಲ 6.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 19/2021 ಕಲಂ:  454,457,380 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-03-2021 12:03 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080