ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಮೇಶ್‌ ಎಂ, ಪ್ರಾಯ 32 ವರ್ಷ, ತಂದೆ: ದಿ|| ಪಿ.ಎನ್‌ ಮೋಹನ್‌, ವಾಸ: ಲಿಂಗನಗುಡ್ಡೆ ಮನೆ, ಶಿವನಗರ, ಮಂಜಲ್ಪಡ್ಪು ಅಂಚೆ, ಕಬಕ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 16-03-2022 ರಂದು 18-00 ಗಂಟೆಗೆ ಆರೋಪಿ ಕಾರು ಚಾಲಕ ಸದ್ದಾಂ ಹುಸೈನ್‌ ಎಂಬವರು KA-21-Z-5245 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ  ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ,  ಪಿರ್ಯಾದುದಾರರು ಚಾಲಕರಾಗಿ, ಯೋಗೀಶ್‌ ಆಚಾರ್ಯ ಮತ್ತು ರವಿ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಶಾಂತಿನಗರ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-C-3002 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಪಿರ್ಯಾದುದಾರರಿಗೆ ಹಣೆಗೆ, ಬಲಕೈಯ ಮಣಿಗಂಟಿಗೆ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಮತ್ತು ಯೋಗೀಶ್‌ ಆಚಾರ್ಯ ರವರಿಗೆ ಬಲಕಣ್ಣಿನ ಬಳಿ ರಕ್ತಗಾಯ, ದವಡೆಗೆ ಗುದ್ದಿದ ಗಾಯ ಹಾಗೂ ರವಿಯವರಿಗೆ ಎಡಕಾಲಿನ ಹೆಬ್ಬೆರಳಿಗೆ, ಬಲಕೈಯ ಮಣಿಗಂಟಿಗೆ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ. ಮೂರೂ ಜನ ಗಾಯಾಳುಗಳು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  51/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪೀಟರ್‌ ಡಿʼಕುನ್ಹ ಪ್ರಾಯ 65 ವರ್ಷ, ತಂದೆ: ದಿ|| ಸೆಬಾಸ್ಟಿಯನ್‌ ಡಿʼಕುನ್ಹ, ವಾಸ:  3-2, ಬೆದ್ರಾಳ ಮನೆ, ನರಿಮೊಗರುಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 16-03-2022 ರಂದು 17-45 ಗಂಟೆಗೆ ಆರೋಪಿ ಕಾರು ಚಾಲಕ ಸಮೀರ್‌ ಎಂಬವರು KL-60-K-700 ನೇ ನೋಂದಣಿ ನಂಬ್ರದ ಕಾರನ್ನು ಮರದ ಮಿಲ್‌  ಕಡೆಯ ಒಳರಸ್ತೆಯಿಂದ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಬೆದ್ರಾಳ ಮರದ ಮಿಲ್‌ ಬಳಿ  ಹೆದ್ದಾರಿಯಲ್ಲಿ ಹೋಗುವ  ವಾಹನಗಳನ್ನು ಗಮನಿಸದೇ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ಪಿರ್ಯಾದುದಾರರಾದ ಪೀಟರ್‌ ಡಿʼಕುನ್ಹ ಎಂಬವರು ಪುತ್ತೂರು ಕಡೆಯಿಂದ ಬೆದ್ರಾಳ ಕಡೆಗೆ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-H-6806 ನೇ ನೋಂದಣಿ ನಂಬ್ರದ M-80 ಮೋಟಾರ್‌ ಸೈಕಲಿಗೆ ಅಪಘಾತವಾಗಿ ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಹಣೆಗೆ, ಎರಡು ಕಾಲುಗಳಿಗೆ, ಬಲ ಕಣ್ಣಿನ ಬಳಿ ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  52/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಂದಕುಮಾರ್ ಎಂ ಬಿ ಪ್ರಾಯ 57 ವರ್ಷ ತಂದೆ: ಬಾನು ಎಂ ವಾಸ: ಹಾರಾಂಗಿ ಮನೆ ಮತ್ತು ಅಂಚೆ ಹುಲುಗುಂದ ಗ್ರಾಮ ಕುಶಾಲನಗರ ಹೋಬಳಿ ಸೋಮವಾರಪೇಟೆ ಕೊಡಗು ಎಂಬವರ ದೂರಿನಂತೆ ಪಿರ್ಯಾದಿರವರು ಹುಣಸೂರು ಕೆಎಸ್‌ಅರ್‌ಟಿಸಿ ಬಸ್ ಘಟಕದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 17.03.2022 ರಂದು ಕಣ್ಣಿನ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಸುಳ್ಯ ಬಸ್‌ ನಿಲ್ದಾಣದಿಂದ ಸುಬ್ರಹ್ಮಣ್ಯದಿಂದ ಗುಂಡ್ಲುಪೇಟೆಗೆ ಕಡೆಗೆ ಹೋಗುವ ಕೆಎಸ್‌ಅರ್‌ಟಿಸಿ ಬಸ್ ನಂಬ್ರ ಕೆಎ-10-ಎಫ್-0406 ನೇದರಲ್ಲಿ ವಾಪಾಸು ಊರಿಗೆ ಪ್ರಯಾಣಿಸುತ್ತಿದ್ದ ಸಮಯ ಸುಮಾರು 12.00 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಗಡಿಕಲ್ಲು ಎಂಬಲ್ಲಿಗೆ ತಲುಪಿದಾಗ ಕೆಎಸ್‌ಅರ್‌ಟಿಸಿ ಬಸ್ಸನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಎಡಬದಿಗೆ ಚಲಾಯಿಸಿ ಎಡಬದಿಯಲ್ಲಿದ್ದ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ರಸ್ತೆಯ ಬದಿಯಲ್ಲಿದ್ದ ನೀರಿನ ಕಣಿಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಸೊಂಟಕ್ಕೆ, ಎದೆ ,ಎಡಕಾಲು ತೊಡೆಗೆ ಗುದ್ದಿದ ಗಾಯ, ತಲೆಗೆ ನೋವಿನ ಗಾಯವಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದ್ದಲ್ಲದೇ ಚಾಲಕ ನಿರ್ವಾಹಕನಿಗೂ ಗಾಯವಾಗಿದ್ದು, ಗಾಯಾಳುಗಳನ್ನು ಅಲ್ಲಿ ಸೇರಿದ ಸ್ಥಳಿಯರು ಉಪಚರಿಸಿ ಸುಳ್ಯ ಕೆವಿಜಿ ಆಸ್ಪತ್ರೆ ಮತ್ತು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು,.ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  32/2022  ಕಲಂ:  279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಂಜುನಾಥ ಆಚಾರ್ಯ ಪ್ರಾಯ:35 ವರ್ಷ ತಂದೆ; ಪ್ರಭಾಕರ ಆಚಾರ್ಯ ವಾಸ; ಮಿತ್ತೊಟ್ಟು ಮನೆ ಮುಂಡಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ ತಮ್ಮ  ಮನೋಹರ (31) ಎಂಬವರು ದಿನಾಂಕ:16-02-2022 ರಂದು ಮನೆಯಲ್ಲಿಯೇ ಮರದ ಕೆಲಸ ಮಾಡುತ್ತಿದ್ದು 16.00 ಗಂಟೆಗೆ  ಗಮ್ ತರಲೆಂದು ಸೋಮಂನತಡ್ಕ ಪೇಟೆಗೆ   ಪಿರ್ಯಾದುದಾರರ ಬಾಬ್ತು  active Honda grew color scooter ನಂಬ್ರ ಕೆಎ 70 ಇ 8365 ನೇದರಲ್ಲಿ   ಹೋಗಿದ್ದು ತಡವಾದರೂ ಮರಳಿ ಮನೆಗೆ ಬಾರದಿದ್ದಾಗ ಆತನ ಮೊಬೈಲ್ ನಂಬ್ರ  7338618835 ಗೆ ಕರೆಮಾಡಿದರೂ ಸ್ವೀಕರಿಸದೆ ಇದ್ದು ನೆರೆಕರೆ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ..ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 21-2022  ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪುಪ್ಪ ಯಂ  (32) ಗಂಡ:ಚಂದ್ರಶೇಖರ ಬಿ ವಾಸ: ಮಣಿಯಂಪಾರೆ ಮನೆ ಪೆರ್ಲ, ಕಾಸರಗೋಡು ಎಂಬವರ ದೂರಿನಂತೆ ಪಿರ್ಯಾದಿದಾರರು ಜಾಕಿ ಕಂಪೆನಿಯಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ:17-03-2022 ರಂದು ಕಂಪೆನಿಯ ಮ್ಯಾನೇಜರ್ ಮೆಹಬೂಬ್ ಶರೀಫ್ ರವರೊಂದಿಗೆ ಪುತ್ತೂರಿನ ರಿಲಾಯನ್ಸ್ ಅಂಗಡಿಗೆ ಮಂಗಳೂರಿನಿಂದ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಹೋಗುತ್ತಿರುವಾಗ, ಮಧ್ಯಾಹ್ನ 12.00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ತಲುಪಿದಾಗ, ಅಪರಿಚಿತ 2-3 ವ್ಯಕ್ತಿಗಳು ಪಿರ್ಯಾದಿದಾರರ ಮತ್ತು ಅವರ ಜೊತೆಯಲ್ಲಿದ್ದ ಮೆಹಬೂಬ್ ರವರ ಹೆಸರನ್ನು ಕೇಳಿ, ಇನ್ನು ಮುಂದಕ್ಕೆ ಜೊತೆಯಲ್ಲಿ ಹೋಗಬಾರದೆಂದು ಬೆದರಿಸಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಬಸ್ಸಿನಿಂದ ಕೆಳಗೆ ಇಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 30/2022  ಕಲಂ: 341, 506, ಜೊತೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಿರಾಜ್ (31) ತಂದೆ:ಅಬ್ದುಲ್ ಹಮೀದ್  ವಾಸ: ಪಿಲ್ಲಂಗೋಳಿ   ಮನೆ, ಅಂಗಾರಕರಿಯ ಆರಂಬೋಡಿ   ಗ್ರಾಮ ಬೆಳ್ತಂಗಡಿ  ಎಂಬವರ ದೂರಿನಂತೆ ಫಿರ್ಯಾದಿದಾರರ ತಮ್ಮ   ಜಾಫರ್  ಸಪ್ವಾನ್ (28) ಎಂಬಾತನು  ಇತ್ತೀಚೆಗೆ ಸುಮಾರು  6 ತಿಂಗಳಿನಿಂದ  ಮಾನಸಿಕ ಖಿನ್ನತೆಗೆ  ಒಳಪಟ್ಟು ಮಂಗಳೂರು ಅನಿಲ್ ಕಕ್ಕುಂಜೆ ಮನೋರೋಗ ತಜ್ಞರಿಂದ  ಚಿಕಿತ್ಸೆ ಪಡೆಯುತ್ತಿದ್ದವನು ದಿನಾಂಕ: 17-03-2022 ರಂದು  ಮಧ್ಯಾಹ್ನ 2:55 ಗಂಟೆಯಿಂದ 3:30 ಗಂಟೆಯ  ಮದ್ಯ  ಅವಧಿಯಲ್ಲಿ  ಮಾನಸಿಕ ಖಿನ್ನತೆಯಿಂದ  ಬೆಳ್ತಂಗಡಿ  ತಾಲೂಕು ಆರಂಬೋಡಿ  ಗ್ರಾಮದ   ಅಂಗರಕರಿಯ  ಫಲ್ಗುಣಿ  ನದಿ  ನೀರಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 07-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-03-2022 11:18 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080