ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರೋನಾಲ್ಡ್‌ ಸಿಕ್ವೇರಾ (44) ತಂದೆ: ರಿಚರ್ಡ್‌ ಸಿಕ್ವೇರಾ  ವಾಸ: ಬದ್ಯಾರು ಮನೆ ಪಡಂಗಡಿ ಅಂಚೆ & ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 17-04-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು  KA 21 W 9368 ನೇ ದ್ವಿ ಚಕ್ರ ವಾಹನದಲ್ಲಿ ಬದ್ಯಾರು – ಗುರುವಾಯನಕೆರೆ ರಸ್ತೆಯಲ್ಲಿ ಬೆಳ್ತಂಗಡಿ ಕಡೆಗೆ ಹೊರಟು ಸಮಯ ಸುಮಾರು ಸಂಜೆ 7:45 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಶಾರದ ನಗರ ಅರಮತಿ ಬೆಟ್ಟ ದ್ವಾರದ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರು ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಬದ್ಯಾರು ಕಡೆಗೆ KA 21 P 6043 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಬಲ ಕೈ ಮಣಿ ಗಂಟಿನ ಬಳಿ ಗುದ್ದಿದ ಗಾಯ ಹಾಗೂ ಬಲಕಾಲಿನ ತೋರು ಬೆರಳಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 59/2022 ಕಲಂ; 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 2

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್‌ ಫತ್ತಾಹ್‌‌ ಪ್ರಾಯ;21 ವರ್ಷತಂದೆ; ಮಹಮ್ಮದ್‌ ವಾಸ; ಬಟ್ಟಾಯಿ ಪಾದೆ ಮನೆ ನೆರಿಯಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ;16-04-2022 ರಂದು 13-00 ಗಂಟೆಗೆ ಬೆಳ್ತಂಗಡಿ ತಾಲೂಕು ನೆರಿಯಾಗ್ರಾಮದ ಅಣಿಯೂರು  ಎಂಬಲ್ಲಿ  ಪಿರ್ಯಾದುದಾರರ ಬಾಬ್ತು ಜಾಗದಲ್ಲಿ ತೆಂಗಿನ ಕಾಯಿಯನ್ನು ತೆಗೆದ ಬಳಿಕ   ನೆರೆಯ ಹಂಝ ಎಂಬವರ ಜೊತೆಯಲ್ಲಿ ಅಣಿಯೂರು ಪೇಟೆಯಲ್ಲಿ  ಇದ್ದ ಸಮಯ ನಿಜಾಮ,ಶರೀಫ್‌,ಅನ್ವರ್‌ ಎಂಬುವವರು  ಒಂದು ಮೋಟರ್‌  ಸೈಕಲ್‌ ನಲ್ಲಿ ಬಂದು ನಮ್ಮನ್ನು ನೋಡಿ  ತಡೆದು ನಿಲ್ಲಿಸಿ ಹಂಝ ಎಂಬುವವರಿಗೆ ಶರೀಪ್‌ ಎಂಬಾತನು ಕೈ ಯಿಂದ ಎದೆಗೆ ಮತ್ತು ಎಡ ಕೆನ್ನೆಗೆ ಹಲ್ಲೆ ನಡೆಸುವ ಸಮಯ ನಾನು ಹಂಝನಿಗೆ ಯಾಕೆ ಹೊಡೆಯುತ್ತೀರಿ ಎಂದು  ಕೇಳಿದಾಗ  ಅವಾಚ್ಯ ಶಬ್ದಗಳಿಂದ ಬೈದು ಶರೀಪ್‌ ಎಂಬಾತನು ಕೈ ಯಿಂದ ಮುಖಕ್ಕೆ ಗುದ್ದಿ ಕಾಲಿನಿಂದ ಎದೆಗೆ ಬೆನ್ನಿಗೆ ಸೊಂಟಕ್ಕೆ ತುಳಿದಾಗ  ನಿಜಾಮ್‌ ಎಂಬಾತನು ಆತನ ಕೈಯಲ್ಲಿ ಇದ್ದ  ಕ್ರಿಕೆಟ್‌ ಬ್ಯಾಟ್‌ ನಿಂದ ಬಲ ಕೈಗೆ ಕುತ್ತಿಗೆ ಬಳಿ ಹಲ್ಲೆ ನಡೆಸಿದಾಗ ಅನ್ವರ್‌ ಎಂಬಾತನು ಕೈ ಯಲ್ಲಿ ಒಂದು ಕತ್ತಿಯನ್ನು ಹಿಡಿದು  ನಿನ್ನನ್ನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಹಲ್ಲೆಯಿಂದಾಗಿ ಪಿರ್ಯಾದುದಾರರ ಮುಖಕ್ಕೆ,ಎದೆಗೆ, ಬೆನ್ನಿಗೆ, ಸೊಂಟಕ್ಕೆ,  ಬಲ ಕೈಗೆ, ಹಾಗೂ ಕುತ್ತಿಗೆ ಬಳಿ  ಗುದ್ದಿದ್ದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ  ಮಂಗಳೂರು   ವೆನ್‌ ಲಾಕ್‌  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 27/2022 ಕಲಂ:341, 323,324, 504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಶಮೀರ್ ತಾಯಿ:ಬೀಪಾತುಮ ವಾಸ:ಪನ್ಯ ಮನೆ, ಕೋಡಿಂಬಾಳ   ಗ್ರಾಮ ,ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆಯವರು ತೀರಿಕೊಂಡಿದ್ದು ತನ್ನ ತಾಯಿಯೊಂದಿಗೆ ವಾಸವಾಗಿರುತ್ತಾರೆ ಪಿರ್ಯಾದುದಾರರ ತಂದೆಯವರಿಗೆ 2 ಜನ ಪತ್ನಿಯರಿದ್ದು ಕೋಡಿಂಬಾಳ ಗ್ರಾಮದಲ್ಲಿ 13 ಎಕ್ರೆ ಕೃಷಿ ಜಮೀನನ್ನು ಹೊಂದಿರುತ್ತಾರೆ  ಸದ್ರಿ ಕೃಷಿ ಜಮೀನನ್ನು  ಪಿರ್ಯಾದುದಾರರ ತಾಯಿ ಮತ್ತು ತಂದೆಯವರು ಅಬಿವೃದ್ದಿಗೊಳಿಸಿರುತ್ತಾರೆ. ಈಗೀರುವಲ್ಲಿ ಪಿರ್ಯಾದುದಾರರ ತಂದೆಯ ಮೊದಲನೇ ಪತ್ನಿಯ ಮಗನಾದ ಅಬ್ದುಲ್‌ ಅಝೀಝ್ ಮತ್ತು ಆತನ ಪತ್ನಿ ಅಸೀಮಾ ಎಂಬವರು  ಪಿರ್ಯಾದುದಾರರ  ಮನೆಗೆ  ಬಂದು ಕೃಷಿ ಜಮೀನನ್ನು ನೀಡಬೇಕೆಂದು ಆಗಾಗ ಪೀಡಿಸುತ್ತಿದ್ದು ಅದರಂತೆ ಆಸ್ತಿಯನ್ನು ಬಾಯ್ದೆರೆಯಾಗಿ ಪಾಲು ಮಾಡಿಕೊಂಡಿರುತ್ತಾರೆ. ಬಳಿಕ ಪಿರ್ಯಾದುದಾರರು ತನ್ನ ಹಕ್ಕಿನ ಜಮೀನನ್ನು ಅನುಬೋಗಿಸಿಕೊಂಡಿರುತ್ತಾರೆ ಈಗಿರುವಾಗ ದಿನಾಂಕ:13.04.2022 ರಂದು ಮದ್ಯಾಹ್ನ 02.00 ಗಂಟೆ ಸಮಯಕ್ಕೆ ಆರೋಪಿತರಾದ ಅಬ್ದುಲ್‌ ಅಝೀಝ್ ಮತ್ತು ಆತನ ಪತ್ನಿ ಅಸೀಮಾ ಎಂಬವರು  ಕಾರೊಂದರಲ್ಲಿ ಬಂದು ಪಿರ್ಯಾದುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಬಳಿಕ 1ನೇ ಆರೋಪಿತನಾದ ಅಬ್ದುಲ್‌ ಅಝೀಝ್ ಎಂಬಾತನು ಪಿರ್ಯಾದುದಾರರಿಗೆ ಮನೆಯ ಅಂಗಳದಲ್ಲಿ ಕೈಯಿಂದ ಮುಖಕ್ಕೆ,ಬೆನ್ನಿಗೆ ಹೊಡೆದು, ಹೊಟ್ಟೆಗೆ ಕಾಲಿನಿಂದ ತುಳಿದು ಬೆನ್ನಿಗೆ ಹಲ್ಲಿನಿಂದ ಕಚ್ಚಿರುತ್ತಾರೆ ನಂತರ 2ನೇ ಆರೋಪಿತೆಯು ಸಹ ಕೈಯಿಂದ ಮುಖಕ್ಕೆ ಹೊಡೆದು ಹಲ್ಲೆ ಮಾಡಿರುತ್ತಾರೆ  ನಂತರ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ ತನ್ನ ತಾಯಿಯವರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ಈ ಸಮಯದಲ್ಲಿ ಆರೋಪಿತರು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಹಲ್ಲಿನಿಂದ ಕಚ್ಚಿದ ಪರಿಣಾಮ  ತೀವ್ರ ನೋವಾದ್ದರಿಂದ ಪಿರ್ಯಾದುದಾರರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 35/2022 ಕಲಂ. .448,323,325,504,506 R/W 34 Ipc    ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-04-2022 10:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080