ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಂತ್‌ ಬಿ ಎನ್‌, ಪ್ರಾಯ 38 ವರ್ಷ, ತಂದೆ: ನಾರಾಯಣ ಪೂಜಾರಿ, ವಾಸ: ಬರಮೇಲು ಮನೆ, ಬಿಳಿಯೂರು ಗ್ರಾಮ, ಪೆರ್ನೆ ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 18-05-2021 ರಂದು 07-30 ಗಂಟೆಗೆ ಆರೋಪಿ ಕಾರು ಚಾಲಕ ಅರುಣ್‌ ಕುಮಾರ್‌ ಬಿ ಎಂಬವರು KA-21-N-9104 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಉಪ್ಪಿನಂಗಡಿ ದ್ವಿಪಥ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಪೆಟ್ರೋಲ್‌ ಪಂಪ್‌ ಬಳಿ ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಕಾರು ರಾಂಗ್‌ ಸೈಡ್‌ಗೆ ಹೋಗಿ, ಕಾರಿನ ಎಡಭಾಗವು ರಸ್ತೆ ಮಧ್ಯದ ಡಿವೈಡರ್‌ಗೆ ಅಪಘಾತವಾಗಿ, ಕಾರು ಬಲಭಾಗಕ್ಕೆ ಪಲ್ಟಿಯಾಗಿ ಗಂಭೀರ ಗಾಯಗೊಂಡ ಚಾಲಕ ಅರುಣ್‌ ಕುಮಾರ್‌ ಬಿ ರವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದು, ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿರುತ್ತದೆ.ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆ ಕಲಂ : 87/2021  ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವಾಜ್‌, ಪ್ರಾಯ 30 ವರ್ಷ, ತಂದೆ: ಪಿ.ಯು. ಮಹಮ್ಮದ್‌, ವಾಸ: 5-161/19, ಪನ್ನೀರ್‌ ಸೈಟ್‌ ಮನೆ, ಕೋಟೆಕಾರು ಗ್ರಾಮ, ದೇರಳಕಟ್ಟೆ ಅಂಚೆ, ಮಂಗಳೂರು ಎಂಬವರ ದೂರಿನಂತೆ ದಿನಾಂಕ 17-05-2021 ರಂದು 08-30 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಸತ್ಯನಾರಾಯಣ ಎಂಬವರು KA-19-EA-5410 ನೇ ನೋಂದಣಿ ನಂಬ್ರದ ಸ್ಕೂಟರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ತೆಂಕಿಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಪೂರ್ತಿ ರಾಂಗ್ ಸೈಡ್ಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರು  ದೇರಳಕಟ್ಟೆ ಕಡೆಯಿಂದ ಕುಂಬ್ರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-AD-2918 ನೇ ನೋಂದಣಿ ನಂಬ್ರದ ಲಾರಿಯ ಬಲಹಿಂಭಾಗದ ಚಕ್ರದ ಬಳಿ ಬಲವಾಗಿ ಅಪಘಾತವಾಗಿ ಸವಾರ ಸತ್ಯನಾರಾಯಣ ರವರು ರಸ್ತೆಗೆ ಬಿದ್ದು, ತಲೆಗೆ ಹಾಗೂ ಬಲಕೈಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  86/2021  ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಂಬವರ ದೂರಿನಂತೆ ಫಿರ್ಯಾಧಿದಾರರಾದ ಶ್ರೀಮತಿ ಶಾಹೀದಾ .ಪ್ರಾಯ: 32 ವರ್ಷ , ಗಂಡ : ಮುಹಮ್ಮದ್ ಆಶ್ರಫ್  ವಾಸ: ಮುರಿಯಾಳ  ಮನೆ,  ಉರುವಾಲು ಗ್ರಾಮ  ಬೆಳ್ತಂಗಡಿ ದಿನಾಂಕ: 14-05-2021 ರಂದು  ರಂಜಾನ್  ಹಬ್ಬದ  ಬಗ್ಗೆ ಫಿರ್ಯಾದಿದಾರರು  ತನ್ನ ತಾಯಿ ಮನೆಯಾದ  ಕಲ್ಲಡ್ಕಕ್ಕೆ ಹೋಗುವ ಸಮಯ ಬೆಳಗ್ಗೆ  7-30 ಗಂಟೆಗೆ  ಮನೆಯಲ್ಲಿ  ಚಿನ್ನಾಭರಣಗಳಾದ  5 ಪವನಿನ ಸಣ್ಣ ಪೆಂಡೆಂಟ್ ಇರುವ ಸರ ಹಾಗೂ  ಸುಮಾರು 4 ಗ್ರಾಂ ನ  ಉಂಗುರ ಮತ್ತು ನಗದು ಹಣ ರೂ 4,000/-ವನ್ನು  ಮರದ ಡ್ರಾವರ್ ನಲ್ಲಿ ಇಟ್ಟು ಲಾಕ್  ಮಾಡಿ  ಮುಂಬಾಗಿಲಿಗೆ  ಅಳವಡಿಸಿದ  ಗ್ರಿಲ್  ಬಾಗಿಲನ್ನು ಭದ್ರ ಪಡಿಸಿ ಹೋಗಿದ್ದು,  ಹಬ್ಬದ ಕಾರ್ಯಕ್ರಮ  ಮುಗಿದು   ಫಿರ್ಯಾಧಿದಾರರು ಈ ದಿನ  ತಾರೀಕು: 17-05-2021 ರಂದು ಬೆಳಗ್ಗೆ 11-15 ಗಂಟೆಗೆ  ಮನೆಗೆ  ಬಂದಾಗ ಮನೆಯ ಮುಂಬಾಗಿನ ಗ್ರಿಲ್ ಬಾಗಿಲಿನ ಲಾಕ್ ನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ  ಮುರಿದು  ಒಳಪ್ರವೇಶಿಸಿ  ಮನೆಯ ಕೋಣೆಯಲ್ಲಿದ್ದ  ಕಪಾಟಿನ  ಬಾಗಿಲನ್ನು  ತೆರೆದು ಬಟ್ಟೆ ಬರೆಗಳನ್ನು ಚಲ್ಲಾಪಿಲ್ಲಿಯಾಗಿ  ಹೊರಗೆ  ಎಸೆದು  ಹುಡುಕಾಡಿ ಮರದ ಡ್ರಾವರ್‌ ನ ಲಾಕ್ ನ್ನು ಮುರಿದು  ಅದರಲ್ಲಿಟ್ಟಿದ್ದ  ಚಿನ್ನಾಭರಣಗಳನ್ನು ಹಾಗೂ ನಗದನ್ನು  ಕಳ್ಳತನಮಾಡಿ  ಹೋಗಿದ್ದು, ಚಿನ್ನಾಭರಣದ  ಅಂದಾಜು ಒಟ್ಟು ಮೌಲ್ಯ ರೂ: 1,70,000/-ಅಗಬಹುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲಿಸ್ ಠಾಣೆ ಠಾಣಾ  ಅ.ಕ್ರ 47/2021 ಕಲಂ:454,457,380 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ದಿನಾಂಕ: 17.05.2021  ರಂದು ಸುಳ್ಯ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾರ ಹರೀಶ್‌ ರವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಆರೋಪಿಗಳು ಮಾನ್ಯ ಜಿಲ್ಲಾಧಿಕಾರಿಯವರು ಕೋವಿಡ್ -19  ಬಗ್ಗೆ ಹೊರಡಿಸಿದ ಆದೇಶದ ಉಲ್ಲಂಘನೆಯನ್ನು  ಮಾಡಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಆಡುತ್ತಿದ್ದು, ಆರೋಪಿಗಳಿಂದ ರೂ 1,700/- ಗಳನ್ನು ಮತ್ತು ಅವರ ಬಳಿಯಲ್ಲಿದ್ದ 52 ಕಾರ್ಡುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅಕ್ರ: 36/2021 Sec: 269, & Sec: 5(4) The karnataka Epidemic Diseases Act 2020, & Sec: 87 KP Act  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-05-2021 12:42 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080