ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ತಿಮ್ಮಯ್ಯ ಪ್ರಾಯ:51 ತಂದೆ ಕೊರಗಪ್ಪ,ವಾಸ: ಶಾರದ ಸರ್ವಿಸ್ ಸ್ಟೇಶನ್ ,ಗುಡ್ಡೆ ಅಂಗಡಿ, ಮೇಲ್ಕಾರ್, ಪಾಣೆಮಂಗಳೂರು, ಬಂಟ್ವಾಳ ತಾಲೂಕು. ರವರು ನೀಡಿದ ದೂರೇನೆಂದರೆ ದಿನಾಂಕ: 16.11.2021 ರಂದು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ನಂಬ್ರ ಕೆಎ.13.ಸಿ.8702 ನೇಯದನ್ನು ಅದರ ಚಾಲಕ ಟಿ. ಗೋಪಾಲ ರವರು ಕಲ್ಲಡ್ಕ ಕಡೆಯಿಂದ ಮಂಗಳೂರು ಕಡೆಗೆ ವೇಗವಾಗಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಿರ್ವ ಟವರ್ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ನಂಬ್ರ ಕೆಎ.21.ಎಲ್.9049 ನೇಯದಕ್ಕೆ ಡಿಕ್ಕಿ ಹೊಡೆದು  ಮುಂದಕ್ಕೆ ಚಲಿಸಿ ಜಂಕ್ಷನ್ ನಲ್ಲಿರುವ ಕಟ್ಟೆಗೆ ಲಾರಿ ಡಿಕ್ಕಿ ಹೊಡೆದು ನಿಂತಿದ್ದು, ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಲಾರಿಯ ಅಡಿಗೆ ಸಿಲುಕಿ ಜಖಂಗೊಂಡಿದ್ದು, ದ್ವಿಚಕ್ರ ವಾಹನ ಸವಾರ ಗಣೇಶ ಎಂಬವರು ರಟ್ಟಿ ರಸ್ತೆಗೆ ಬಿದ್ದು ತಲೆಗೆ, ಬೆನ್ನಿಗೆ ತೀವ್ರ ಗಾಯಗಳಾಗಿ  ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಡೆಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 126/2021  ಕಲಂ 279,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್ ಶಾಕೀರ್ ವಲಚ್ಚಿಲ್ ಪ್ರಾಯ: 35 ವರ್ಷ ತಂದೆ: ದಿ|| ಮೊಹಮ್ಮದ್ ವಾಸ: ವಳಚ್ಚಿಲ್ ಹಳೆಮನೆ ಅಡ್ಯಾರು ಗ್ರಾಮ ಮತ್ತು ಅಂಚೆ ಮಂಗಳೂರು ತಾಲೂಕು ರವರು ದಿನಾಂಕ 14.11.2021 ರಂದು  ತನ್ನ ಸಂಬಂಧಿಕರ ಮನೆಯಾದ ಉಪ್ಪಿನಂಗಡಿಗೆ  ಹೋಗಿ ಅಲ್ಲಿಂದ ವಾಪಾಸ್ಸು ಮನೆ ಕಡೆಗೆ  KA-49-M-6777 ನೇ ಇನ್ನೋವಾ ಕಾರನ್ನು ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 18.30 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ನರಹರಿ ನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ಕಲ್ಲಡ್ಕ ಕಡೆಯಿಂದ KA-19-P-3809 ನೇ ಟವೇರಾ ಕಾರನ್ನು ಅದರ ಚಾಲಕ ಪ್ರಶಾಂತ್ ಕುಮಾರ್ ರವರು ಅತೀ ವೇಗ ಅಜಾಗರೂಕತೆಯಿಂದ  ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಮುಂದಕ್ಕೆ  ಮುಗ್ಗರಿಸಿ  ಮುಂದಿನಿಂದ  ನಿಧಾನವಾಗಿ  ಹೋಗುತ್ತಿದ್ದ  KL -14-K-1374 ನೇ ಕಾರಿನ ಹಿಂಬದಿಗೆ  ಡಿಕ್ಕಿ ಹೊಡೆದು ಅಪಘಾತವಾಗಿದ್ದು. ಪರಿಣಾಮ ಮೂರೂ ಕಾರುಗಳು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 127/2021  ಕಲಂ 279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪವಿನ್ ಎನ್.ಸಿ ( 21 ವರ್ಷ), ತಂದೆ: ಚಂದ್ರಶೇಖರ್, ವಾಸ: ನಾರ್ಕೋಡು ಮನೆ, ಅಲೆಟ್ಟಿ ಅಂಚೆ & ಗ್ರಾಮ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 16-11-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಷಣ್ಮಖ ಎಂಬವರು KA-17-EE-2933 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಪತ್ರಾವೋ ಆಸ್ಪತ್ರೆ ಕಡೆಯಿಂದ ಹೆದ್ದಾರಿ ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪತ್ರಾವೋ ಸರ್ಕಲ್ ಬಳಿ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಪವಿನ್ ಎನ್.ಸಿ ಎಂಬವರು ಮಾಣಿ ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-43-V-4955ನೇಯ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಮೊಣ ಗಂಟಿಗೆ, ಎಡ ಕೈಯ ಭುಜಕ್ಕೆ ಗುದ್ದಿದ ಹಾಗೂ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಮೋಟಾರ್ ಸೈಕಲ್ ಸವಾರ ಷಣ್ಮಖರವರಿಗೂ ಗಾಯವಾಗಿರುತ್ತದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  144/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಫೀಕ್ ಕೆ ಪ್ರಾಯ 38 ವರ್ಷ, ತಂದೆ: ದಿ: ಅಬ್ದುಲ್ ಖಾದರ್,ವಾಸ: ಜನತಾ ಕಾಲೋನಿ, ಕುದ್ಮಾರು ಗ್ರಾಮ, ಕಡಬ ತಾಲೂಕು, ದ.ಕ. ಜಿಲ್ಲೆ ರವರು ದಿನಾಂಕ 17.11.2021 ರಂದು ಈ ಮೋಟಾರು ಸೈಕಲ್ ನಂಬ್ರ ಕೆಎ-21-ವೈ-0885 ನೇಯದರಲ್ಲಿ ಸಹಸವಾರರಾಗಿ ಕುಳಿತುಕೊಂಡು ಸವಾರ ಸೀತರಾಮ ಗೌಡ ರವರು ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಕುದ್ಮಾರು ಕಡೆಯಿಂದ ಎಡಮಂಗಲ ಕಡೆಗೆ ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಾ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಅಲೆಕ್ಕಾಡಿ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಓಮ್ನಿ ಕಾರು ನಂಬ್ರ ಕೆಎ-19-ಎನ್-1664 ನೇಯದನ್ನು ಅದರ ಚಾಲಕ ವಾಸಪ್ಪ ಗೌಡ  ರವರು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಒಂದು ವಾಹನವನ್ನು ಓವರ್ ಟೇಕ್ ಮಾಡಿ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಮೋಟಾರು ಸೈಕಲ್ ಸವಾರ ಸೀತರಾಮ ಗೌಡ ರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಯ ಎಡಭಾಗಕ್ಕೆ ಮಗುಚಿಬಿದ್ದ ಪರಿಣಾಮ ಮೋಟಾರು ಸೈಕಲ್ ಸವಾರ ಸೀತರಾಮ ಗೌಡ ರವರ ಬಲಕಾಲಿಗೆ ಗುದ್ದಿದ ನಮೂನೆಯ ಹಾಗೂ ರಕ್ತ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ 108 ನೇ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನ ಹಿತ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಫಿರ್ಯಾದಿದಾರರಿಗೆ ಸಣ್ಣ ಪುಟ್ಟ ತರಚಿದ ನಮೂನೆಯ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 59/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಯರಾಮ   ಪ್ರಾಯ: 52 ವರ್ಷ, ತಂದೆ: ದಿ|| ವೀರಪ್ಪ ಗೌಡ,  ವಾಸ: ಕುಳ್ನಾಡಿ ಮನೆ, ಏನೇಕಲ್ಲು ಗ್ರಾಮ ಕಡಬ  ತಾಲೂಕು, ದ.ಕ ಜಿಲ್ಲೆ ರವರು ನೀಡಿದ ದೂರೇನೆಂದರೆ ದಿನಾಂಕ: 17-11-2021 ರಂದು ಕಡಬ ತಾಲೂಕು ಏನೇಕಲ್ಲು ಗ್ರಾಮದ, ಕುಳ್ನಾಡಿ ಎಂಬಲ್ಲಿ ದಿನಾಂಕ: 16.11.2021 ರಂದು ರಾತ್ರಿ ಸುಮಾರು 8 ಗಂಟೆ ಸಮಯಕ್ಕೆ ಪಿರ್ಯಾದಿಯ ಬಾಬ್ತು ಸರ್ವೆ ನಂ:258/3 ನೇಯ ಪಟ್ಟಾ ಜಮೀನಿಗೆ ಎದ್ರಿ ಪ್ರಶಾಂತ, ಹರಿಶ್ಛಂದ್ರ, ಪಧ್ಮನಾಭ, ಶಿವರಾಮ, ವೆಂಕಟೇಶ, ಮೋಹನ, ಕಿಶೋರ, ಆಕಾಶ, ವಿಕಾಸ ,ಧರ್ಮಪಾಲ, ಗಿರಿಯಪ್ಪ, ವಾಸುದೇವ, ದೀಕ್ಷಿತ್, ಹೇಮಲತ, ಯಶೋಧ, ಕುಸುಮ, ಎಂಬುವವರು ಅಕ್ರಮವಾಗಿ ಪ್ರವೇಶ ಮಾಡಿ ಪಿರ್ಯಾದುದಾರರ ಜಮೀನಿನಲ್ಲಿರುವ ನಲವತ್ತು(40) ಅಡಿಕೆ ಗುಂಡಿಗಳನ್ನು ಮುಚ್ಚಿದ್ದು ಇದರಿಂದ ಪಿರ್ಯಾದಿದಾರರಿಗೆ  ಸುಮಾರು 8000/- ರೂ ಗಳಷ್ಟು ನಷ್ಟ ಉಂಟು ಆಗಿದ್ದು ಈ ಬಗ್ಗೆ ಪಿರ್ಯಾದಿದಾರರು ಕೇಳಿದಾಗ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದು ಇದರಿಂದ ಪಿರ್ಯಾದುದಾರರಿಗೆ ಜೀವ ಭಯವಾಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ ನಂಬ್ರ  : 85-2021 ಕಲಂ: 143,447,427,506 r/w 149 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆನಂದ ಪ್ರಾಯ 24 ವರ್ಷ ತಂದೆ: ಅನುಗ್ರಹಿತ್ ವಾಸ: ತಾರಾ ನಗರ ಗ್ರಾಮ ಮೂಡಾನ್ ಬುಜುರ್ಗು ಮೂಡಾ ಜುಬುರ್ಗು ತಾಲೂಕು ಖೇರಿ ನಿಗಾಸನ್ ಉತ್ತರಪ್ರದೇಶ ರವರು ಸುಮಾರು 10 ವರ್ಷಗಳಿಂದ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮ ಬಸ್ತಿಪಡ್ಪುವಿನಲ್ಲಿರುವ ಫರ್ನಿಚರ ಅಂಗಡಿಯಲ್ಲಿ ಕೆಲಸಮಾಡಿಕೊಂಡಿದ್ದು.  ಕಳೆದ 2 ತಿಂಗಳ ಹಿಂದೆ ಪಿರ್ಯಾಧಿದಾರರ ಅಣ್ಣನಾದ ಓಂಕಾರ ಪ್ರಾಯ 32 ವರ್ಷ ಉತ್ತರಪ್ರದೇಶದಿಂದ ಇಲ್ಲಿಗೆ ಬಂದು ಪಿರ್ಯಾಧಿದಾರರೊಂದಿಗೆ ವಾಸವಿರುವುದಾಗಿದೆ. ಪಿರ್ಯಾಧಿದಾರರ ಅಣ್ಣ ಕೆಲಸ ಮಾಡದೇ ಪ್ರತಿದಿನ ವಿಪರೀತ ಶರಾಬು ಕುಡಿಯುತ್ತಿದ್ದು,  ದಿನಾಂಕ 17-11-2021 ರಂದು ಬೆಳಿಗ್ಗೆ 9.30 ಗಂಟೆಗೆ ಬಿ ಸಿ ರೋಡ ಪೇಟೆಗೆ ಹೋಗಿ ವಿಪರೀತ  ಶರಾಬು ಕುಡಿದು ಮಧ್ಯಾಹ್ನ 12.20 ಗಂಟೆಗೆ ಫರ್ನಿಚರ ಅಂಗಡಿಯ ಹತ್ತಿರ ಇರುವ ರೂಮಿನ ಬಳಿ ಬಂದಿದ್ದು,  ಆ ಸಮಯ ಕುಸಿದು ಬಿದ್ದವನನ್ನು ಪಿರ್ಯಾಧಿದಾರರ ಹಾಗೂ ಕೆಲಸದವರು ಕೂಡಲೇ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆದುಕೊಂಡ ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಪಿರ್ಯಾಧಿದಾರರ ಅಣ್ಣ ವಿಪರೀತ ಶರಾಬು ಕುಡಿಯುತ್ತಿದ್ದು ಹೃದಯಸಂಬಂದಿ ಕಾಯಿಲೆಯಿಂದ ಆಥವಾ ಇನ್ನಾವುದೋ ಕಾಯಿಲೆಯಿಂದ ಕುಸಿದುಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 39-2021 ಕಲಂ  174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-11-2021 11:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080