ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೋಮಶೇಖರ.ಜಿ.ಸಿ ಪ್ರಾಯ: 32 ವರ್ಷ ತಂದೆ: ಚಂದ್ರಪ್ಪ ವಾಸ: ಗುಡ್ಡದ ತೆರಣ್ಯ ಗ್ರಾಮ, ಶಾಂತಿ ಗ್ರಾಮ ಹೋಬಳಿ, ಅಂಕಪುರ ಅಂಚೆ, ಹಾಸನ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 17-12-2021 ರಂದು K.S.R.T.C ಬಸ್ಸ್ ನಂಬ್ರ KA-19F-3490 ನೇಯದನ್ನು ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12: 25 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ ಎಂಬಲ್ಲಿಗೆ ತಲುಪಿದಾಗ ಬೆಳ್ತಂಗಡಿ ಕಡೆಯಿಂದ KA-19-AC-4270 ನೇ TATA ACE ವಾಹನವನ್ನು ಅದರ ಚಾಲಕ ಜಮಾಲುದ್ದೀನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ವಾಹನಗಳೆರಡು ಜಖಂಗೊಂಡು ಅಪಘಾತದಲ್ಲಿ ಪಿರ್ಯಾದಿದಾರರ ಎಡಕೈ ತಟ್ಟಿಗೆ ರಕ್ತಗಾಯವಾಗಿದ್ದು TATA ACE ವಾಹನದ ಚಾಲಕ ಜಮಾಲುದ್ದೀನ್ ರವರ ಎಡಕಾಲಿಗೆ, ಹಣೆಗೆ ಹಾಗೂ ದೇಹದ ಇತರ ಭಾಗಗಳಿಗೆ ತರಚಿದ ರಕ್ತಗಾಯವಾಗಿದ್ದು ಗಾಯಗೊಂಡ ಪಿರ್ಯಾದಿದಾರರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿಯೂ ಜಮಾಲುದ್ದೀನ್ರವರನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 141/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವೆಂಕಪ್ಪ ಪ್ರಾಯ 58 ವರ್ಷ ತಂದೆ:ರಾಮ ನಾಯಕ ವಾಸ:ಕಾಗೆಕಾನ ಮನೆ, ಬರಿಮಾರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:16-12-2021 ರಂದು ಕೆಲಸ ಮುಗಿಸಿಕೊಂಡು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎಡಬದಿಯ ಕಚ್ಚಾಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ರಾತ್ರಿ 8.00 ಗಂಟೆಯ ಸಮಯಕ್ಕೆ ಮಾಣಿ ಗ್ರಾಮದ ಪ್ರಶಾಂತ್‌ ವೈನ್‌ ಶಾಪ್‌ ಎದುರು ತಲುಪಿ ಎಡಗಡೆಯಿಂದ ಬಲಗಡೆಗೆ ಅಂದರೆ ಪ್ರಶಾಂತ್‌ ವೈನ್‌ ಶಾಪ್‌ ಕಡೆಗೆ ರಸ್ತೆ ದಾಟುವಾಗ ಮಾಣಿ ಕಡೆಯಿಂದ ಕಲ್ಲಡ್ಕ ಕಡೆಗೆ ಬರುತ್ತಿದ್ದ ಕೆಎ-19-ಎಂಬಿ-7345ನೇ ಕಾರಿನ ಚಾಲಕ ಶಂಕರ್ ನಾರಾಯಣ ಭಟ್‌ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾಧಿದಾರರಿಗೆ ಡಿಕ್ಕಿಪಡಿಸಿರುತ್ತಾರೆ. ಪಿರ್ಯಾಧಿ ಕಾರಿನ ಗ್ಲಾಸಿಗೆ ಎಸೆಯಲ್ಪಟ್ಟು ನಂತರ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ತಲೆಯ ಎದುರಿನ ಭಾಗಕ್ಕೆ ರಕ್ತಗಾಯ ಹಾಗೂ ಎಡಕಾಲಿನ ಕೋಲುಕಾಲಿಗೆ ಮತ್ತು ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ಸಾರ್ವಜನಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 164/2021  ಕಲಂ:279,337 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರೀಶ.ಪಿ, ಬಿನ್: ಬಾಬು ಗೌಡ, ವಾಸ: ಧರ್ಮಶ್ರೀ ನಿಲಯ, ತೋಟದಡ್ಕ ಮನೆ, ಪುಣ್ಚಪ್ಪಾಡಿ ಗ್ರಾಮ, ಕಡಬ ತಾಲೂಕು.ಎಂಬವರ ದೂರಿನಂತೆ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಧರ್ಮಶ್ರೀ ನಿಲಯ ತೋಟದಡ್ಕ ಮನೆ ವಾಸಿ ಬಾಬು ಗೌಡ, ಪ್ರಾಯ 68 ವರ್ಷ, ತಂದೆ: ದಿ|| ಕೂಸಪ್ಪ ಗೌಡ ಎಂಬವರು ಎಂದಿನಂತೆ ಈ ದಿನ ದಿನಾಂಕ 17-12-2021 ರಂದು ಬೆಳಗ್ಗೆ ಎದ್ದು ಹಟ್ಟಿಯನ್ನು ಸ್ವಚ್ಚಗೊಳಿಸಿ ದನಗಳಿಗೆ ಹುಲ್ಲು ಹಾಕಿ ಬಳಿಕ ಅವರ ಬಾಬ್ತು ತೋಟದಲ್ಲಿರುವ ಕೆರೆಯ ಮೆಟ್ಟಿಲಿನ ಹುಲ್ಲು ತೆಗೆಯುವ ಕೆಲಸ ಮಾಡುತ್ತಿರುವ ವೇಳೆ 08-00 ಗಂಟೆಯಿಂದ 09-00 ಗಂಟೆಯ ಮಧ್ಯೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಈಜಲು ಬಾರದೇ ನೀರಿನಲ್ಲಿ ಮುಳುಗಿದ್ದವರನ್ನು ಅಗ್ನಿಶಾಮಕ ದಳದವರು ಬಂದು ಮೇಲಕ್ಕೆತ್ತಿ ನೋಡಿದಾಗ ಮೃತಪಟ್ಟಿರುತ್ತಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ.  ಯುಡಿಆರ್ ನಂ 33/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೀರ್ತನ, 18 ವರ್ಷ, ತಂದೆ: ವಯ್ಯಾಪುರಿ, ಸಿ.ಕೂಪ್ ಸಿ.ಆರ್.ಸಿ ಮನೆ, ಐವರ್ನಾಡು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ವಯ್ಯಾಪುರಿ, 55 ವರ್ಷ ರವರು ದಿನಾಂಕ 17-12-2021 ರಂದು ಸಂಜೆ 5-00 ಗಂಟೆಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿರುವುದನ್ನು ಕಂಡು ಪಿರ್ಯಾದಿದಾರರು ನೆರೆಕರೆಯವರಿಗೆ ತಿಳಿಸಿ 108 ಅಂಬುಲೆನ್ಸ್ ವಾಹನವನ್ನು ಕರೆಸಿ ಸದ್ರಿ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಂಜೆ 6-10 ಗಂಟೆಗೆ ಸುಳ್ಯ ಸರಕಾರಿ ಆಸ್ಪತ್ರೆಯ ವೈದ್ಯರು ವಯ್ಯಾಪುರಿಯವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಯುಡಿಆರ್ ನಂ 34/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೊರಗಪ್ಪ ಶೆಟ್ಟಿ , ಪ್ರಾಯ: 76 ವರ್ಷ, ತಂದೆ: ದಿ. ಉಗ್ಗಪ್ಪ ಶೆಟ್ಟಿ , ವಾಸ: ದೇಂತಾರು ಮನೆ , ಕೋಡಿಂಬಾಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಾರರ ಮಗ ನವೀನ್‌ ಶೆಟ್ಟಿ (39 ವರ್ಷ) ಎಂಬವರು ದಿನಾಂಕ 16.12.2021 ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೆ ಕೆಲಸ ಮಾಡಲು ಹೋಗಿ ವಾಪಸು ಮನೆಗೆ ಬಂದು ರಾತ್ರಿ ಮಲಗಿಕೊಂಡಿದ್ದವರನ್ನು, ಫಿರ್ಯಾದಿದಾರರು ರಾತ್ರಿ  10.30 ಗಂಟೆಗೆ ಬಂದು ವಿಚಾರಿಸಿದಾಗ ತಾನು ದೇವಸ್ಥಾನದಲ್ಲಿ ಕೆಲಸ ಮಾಡಿ ಮನೆಗೆ ಬರುವಾಗ ದಾರಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ್ದು, ದಿನಾಂಕ 17.12.2021 ರಂದು ಬೆಳಿಗ್ಗೆ ನವೀನನು ತಲೆ ನೋವು ತಡೆಯಲು ಆಗುವುದಿಲ್ಲವಾಗಿ ತಿಳಿಸಿದಂತೆ, ಆತನನ್ನು ಕೂಡಲೇ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ  ಕರೆದುಕೊಂಡು ಬಂದಿದ್ದು ,10.30 ಗಂಟೆಗೆ  ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ: 33/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-12-2021 10:05 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080