ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಾಲಸುಬ್ರಮಣ್ಯ , ಪ್ರಾಯ 41 ವರ್ಷ,ತಂದೆ: ಕೆ. ಸುರೇಂದ್ರ ಮಯ್ಯ. ವಾಸ: 13/6 ಡಿ ರೈಲ್ವೆ ಓವರ್ ಬ್ರಿಡ್ಜ್ ಸಮೀಪ  ಬಿ ಮೂಡ ಗ್ರಾಮ ಜೋಡು ಮಾರ್ಗ ಅಂಚೆ   ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆಯವರಾದ ಕೆ. ಸುರೇಂದ್ರ ಮಯ್ಯ ರವರು ದಿನಾಂಕ:06.02.2022 ರಂದು ತನ್ನ ಬಾಬ್ತು KA 19 EN 8912 ನೇ ಸ್ಕೂಟರ್ ನಲ್ಲಿ ಪಾಣೆಮಂಗಳೂರಿನಿಂದ ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 13.40 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಬಿ ಸಿ ರೋಡ್  ಲಯನ್ಸ್ ಕ್ಲಬ್ ನ  ಎದುರು ತಲುಪಿದಾಗ ಸ್ಕೂಟರ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸ್ಕಿಡ್  ಆಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಎಡಕಣ್ಣಿನ ಹುಬ್ಬಿನ ಬಳಿ ಎಡಕಾಲಿನ ಮೊಣಗಂಟಿಗೆ ಬಲಕೈ ತಟ್ಟಿಗೆ ತರಚಿದ ಗಾಯಗೊಂಡವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು  S C S ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರು ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 18.02.2022 ರಂದು ಬೆಳಿಗ್ಗೆ 08.57 ಗಂಟೆಗೆ  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 25/2022 ಕಲಂ 279,304 ( A) IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೊರಗಪ್ಪ (43) ತಂದೆ: ಚನ್ನು ಮುಗೇರ ವಾಸ: ಪೊಯ್ಯಲೆ ಮನೆ ಶಿರ್ಲಾಲು ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 18-02-2022 ರಂದು ಸುರೇಶ್‌ ಎಂಬುವರು ಅವರ ಬಾಬ್ತು KA21 V 3212 ನೇ ದ್ವಿ ಚಕ್ರ ವಾಹನದಲ್ಲಿ ಶಿರ್ಲಾಲು ಕಡೆಯಿಂದ ಬೆಳ್ತಂಗಡಿ ಕಡೆಗೆ ಹೊರಟು ದ್ವಿ ಚಕ್ರ ವಾಹನವನ್ನು ವೇಣೂರು-ಗುರುವಾಯನಕೆರೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 8:00 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಶಕ್ತಿನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿ ಚಕ್ರ ವಾಹನ ಸವಾರ ಒಮ್ಮೆಲೆ ಬ್ರೆಕ್‌ ಹಾಕಿದ ಪರಿಣಾಮ ಸವಾರನ ಹತೋಟಿ ತಪ್ಪಿ ವಾಹನ ಸಮೇತ ರಸ್ತೆಗೆ ಬಿದ್ದು ಸವಾರನ ಎಡಕಣ್ಣಿನ ಬಳಿ ತಲೆಗೆ, ಎಡಕಾಲಿಗೆ ಗುದ್ದಿದ ಗಾಯಗೊಂಡು ಗುರುವಾಯನಕೆರೆಯ ಅಭಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಹೋಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 29/2022 ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಯತ್ನ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆರತಿ ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಕಾರಿ ವ್ಯವಾಸಾಯಿಕ ಬ್ಯಾಂಕ್ ಸಿದ್ದಕಟ್ಟೆ ಸಂಗಬೆಟ್ಟು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರು ಸಿದ್ದಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದಲ್ಲಿ ಸುಮಾರು17ವರ್ಷಗಳಿಂದ ಉದ್ದೋಗದಲ್ಲಿದ್ದು, ಪ್ರಸ್ತುತ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು ಸದ್ರಿ  ಸಂಘದಲ್ಲಿ ಬ್ಯಾಂಕಿಂಗ್, ಪಡಿತರ ವಿತರಣೆ ಹಾಗೂ ರಸಗೊಬ್ಬರ ಹಾಗೂ ಕ್ರಿಮಿನಾಶಕ ವಸ್ತುಗಳ ವ್ಯವಹಾರ ನಡೆಯುತ್ತಿರುತ್ತದೆ. ಸಂಸ್ಥೆಯು ಸುಮಾರು 65 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀದಿನ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯ ವರೆಗೆ ವ್ಯವಹಾರ ನಡೆಸುಸುತ್ತಿರುವುದಾಗಿದೆ.ಸಂಘದ ಎಲ್ಲಾ ಕಡೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಿನಾಂಕ: 17.02.2022 ರಂದು ಎಂದಿನಂತೆ ಬೆಳಿಗ್ಗೆ ಸಂಘಕ್ಕೆ ಬಂದು ವ್ಯವಹಾರ ನಡೆಸಿ ಸಂಜೆ 5.00 ಗಂಟೆಗೆ ವ್ಯವಹಾರ ಮುಗಿದ ನಂತರ ಲೆಕ್ಕಾಚಾರ ಮಾಡಿ 5.30 ಗಂಟೆಗೆ ಬೀಗ ಹಾಕಿ ಹೋಗಿರುವುದಾಗಿದೆ. ದಿನಾಂಕ: 18.02.2022 ರಂದು ಬೆಳಿಗ್ಗೆ 7.00 ಗಂಟೆ ಸಮಯಕ್ಕೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಪ್ರಭುರವರು ಪಿರ್ಯಾದುದಾರರಿಗೆ  ಫೋನ್ ಮಾಡಿ ನಮ್ಮ ಸಿದ್ದಕಟ್ಟೆ ವ್ಯವಸಾಯಿಕ ಸಹಕಾರಿ ಸಂಘಕ್ಕೆ ಯಾರೋ ಕಳ್ಳರು ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದುದಾರರು  ಮನೆಯಿಂದ ಹೊರಟು ಸಂಸ್ಥೆಗೆ ಸಿಬ್ಬಂದಿ ಹಾಗೂ ಅಧ್ಯಕ್ಷರ ಜೊತೆಯಲ್ಲಿ ಹೋಗಿ ನೋಡಿದಾಗ ಸಂಸ್ಥೆಯ ಎದುರಿನ ಕಬ್ಬಿಣದ ಗ್ರಿಲ್ ಶಟರನ್ನು ಎರಡೂ ಕಡೆಯಿಂದ ಎಳೆದು ಅದರ ಮದ್ಯದಿಂದ ಒಳಪ್ರವೇಶಿಸಿ ಕಬ್ಬಿಣದ ರೋಲಿಂಗ್ ಶಟರ್ ಪಟ್ಟಿಯನ್ನು ಸುಮಾರು 1 ಅಡಿ ಎತ್ತರಕ್ಕೆ ಯಾವುದೋ ಸಾಧನದಿಂದ ಮೀಟಿ ಸಂಘದ ಒಳಪ್ರವೇಶಿಸಿ ಕ್ಯಾಶ್ ಡ್ರಾಯರ್ ನ ಬೀಗವನ್ನು , ಯಾವುದೋ ಸಾಧನದಿಂದ ಮುರಿದು ನಂತರ ಗೋದ್ರೇಜ್ ಬೀಗವನ್ನು ಯಾವುದೋ ಸಾಧನದಿಂದ ಮುರಿದು ಅದರ ಒಳಗೆ ಅಕೌಂಟ್ಸ್ ಬುಕ್ ಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿ, ಅಲ್ಲದೆ ಇತರ ಕ್ಯಾಶ್ ಡ್ರಾಯರ್ ನ್ನು ಕೂಡಾ ತೆರೆದು ಕಳ್ಳತನಕ್ಕೆ ಪ್ರಯತ್ನಿಸಿದುದಲ್ಲದೆ, ಕಳ್ಳತನಕ್ಕೆ ಉಪಯೋಗಿಸಿದ ಸುತ್ತಿಗೆಯು ಡ್ರಾಯರ್ ನ ಮೇಲ್ಬಾಗದಲ್ಲಿ ಇರಿಸಿರುತ್ತಾರೆ. ಅಲ್ಲದೆ ಸಂಸ್ಥೆಯ ಪಕ್ಕದಲ್ಲಿದ್ದ ಪಡಿತರ ಕಟ್ಟಡದ ಬೀಗವನ್ನು ಯಾವುದೋ ಸಾಧನದಿಂದ ಮುರಿದು ಗೋಡೆಯನ್ನು ಕೊರೆದು ಕಳ್ಳತನಕ್ಕೆ ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 14/2022 ಕಲಂ 454 457 380 511 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-02-2022 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080