ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಾಫಿ ಪ್ರಾಯ 48 ವರ್ಷ, ತಂದೆ: ದಿ|| ಅಬ್ದುಲ್ಲ, ವಾಸ: ಅಝಾದ್ ನಗರ  ಮನೆ, ಮುಲ್ಲರಪಟ್ನ, ಅರಳ  ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ 18-04-2022 ರಂದು ಬೆಳಿಗ್ಗೆ ಮಸೀದಿಗೆ ಹೋಗಿ ವಾಪಾಸು ಮನೆ ಕಡೆಗೆ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 06:00 ಗಂಟೆಗೆ ಬಂಟ್ವಾಳ ತಾಲೂಕು ಅರಳ ಗ್ರಾಮದ ಮುಲ್ಲರಪಟ್ನ ಮಸೀದಿ ಬಳಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದ ಸ್ವಿಚ್ ಆಫ್ ಮಾಡಲು ನಿಂತಿದ್ದ ಸಾರಮ್ಮ ಎಂಬವರಿಗೆ ಕುಪ್ಪೆಪದವು ಕಡೆಯಿಂದ KA 20 B 2194 ನೇ ಲಾರಿಯನ್ನು ಅದರ ಚಾಲಕ ಉಮೇಶ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಸಾರಮ್ಮ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ ಗುದ್ದಿದ ರಕ್ತ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 44/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಿಥುನ್ ಪೂಜಾರಿ  ಪ್ರಾಯ 33 ವರ್ಷ, ತಂದೆ: ನಾರಾಯಣ ಪೂಜಾರಿ ವಾಸ: ದೇವಸ್ಯ ಮನೆ, ಗೋಳ್ತಮಜಲು ಗ್ರಾಮ,ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ 17-04-2022 ರಂದು ರಾತ್ರಿ ಮನೆಯಲ್ಲಿದ್ದ ಸಮಯ ಸಾರ್ವಜನಿಕರಿಂದ ಮಾಣಿಮಜಲಿನ ವ್ಯಕ್ತಿಯೊಬ್ಬರಿಗೆ ಅಪಘಾತವಾಗಿ ಗಾಯಗೊಂಡು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದ ಬಗ್ಗೆ ಫೋನ್ ಕರೆ ಬಂದಂತೆ ಫಿರ್ಯಾದಿದಾರರು ಸದ್ರಿ ಆಸ್ಪತ್ರೆಗೆ ಹೋಗಿ ನೋಡಿದಾಗ ಪರಿಚಯದ ಮೋಹನ್ ದಾಸ್ ಎಂಬವರಾಗಿದ್ದು ಅವರ ಬಲ ಕೈ, ಬಲ ಕಾಲು, ತಲೆಗೆ ಗಾಯಗೊಂಡಿದ್ದು ಅವರು ಸರಿಯಾಗಿ ಮಾತನಾಡದೆ ಇದ್ದು ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ, ಈ ಅಪಘಾತವು ಮೋಹನ್ ದಾಸ್ ರವರು KA-21-L-940 ನೇ ಸ್ಕೂಟರ್ ನಲ್ಲಿ ಮೆಲ್ಕಾರ್ ನಿಂದ ಕಲ್ಲಡ್ಕ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 23:30 ಗಂಟೆಗೆ ಬಂಟ್ವಾಳ ತಾಲೂಕು, ಗೋಳ್ತಮಜಲು ಗ್ರಾಮದ ಕೃಷ್ಣಕೋಡಿ ಎಂಬಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹವನ್ನು ನಿಲ್ಲಿಸದೆ ವಾಹನ ಸಮೇತ ಪರಾರಿಯಾಗಿದ್ದು.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 45/2022 ಕಲಂ 279,337 ಐಪಿಸಿ & 134(ಎ&ಬಿ) 187 ಮೋ ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಸ್‌. ಚಿದಂಬರಂ,  ಪ್ರಾಯ: 39 ವರ್ಷ, ತಂದೆ: ಸುಬ್ರಮಣಿವಾಸ: ನಂ.12, ಹಯತ್‌ ನಗರ, ಆನಂದಪಟ್ಟಿ ರಸ್ತೆ, ತಿರುಪತ್ತುರ್‌ ತಮಿಳುನಾಡು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 17.04.2022 ರಂದು ಮಂಗಳೂರಿನಿಂದ ಪಿರಿಯಾಪಟ್ಟಣಕ್ಕೆಂದು ಹೊರಟು ತನ್ನ ಬಾಬ್ತು ಲಾರಿ ನಂಬ್ರ TN34Q7225 ನೇದನ್ನು ಚಲಾಯಿಸಿಕೊಂಡು ಮಾಣಿ ಮೈಸೂರು  ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು 23:20 ಗಂಟೆಗೆ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಕಾರೊಂದನ್ನು ಅದರ ಬಾಬ್ತು ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿ  ಪಿರ್ಯಾದಿದಾರರ ಲಾರಿಯ ಬಲಬದಿ ಮಧ್ಯಕ್ಕೆ ಡಿಕ್ಕಿ ಪಡಿಸಿದ್ದು, ಪಿರ್ಯಾದಿದಾರರು ತನ್ನ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಬಂದು ನೋಡಿದಲ್ಲಿ ಕಾರಿನಲ್ಲಿ ಐದು ಜನರಿದ್ದು, ಕಾರಿನಲ್ಲಿದ್ದವರನ್ನು ಕೆಳಗಿಳಿಸಿ ಉಪಚರಿಸಿ ನೋಡಲಾಗಿ ಅವರಿಗೆ ಗುದ್ದಿದ ಹಾಗೂ ರಕ್ತಗಾಯಗಳಾಗಿದ್ದು, ಕಾರಿನಲ್ಲಿದ್ದವರು ಚಿಕಿತ್ಸೆಯ ಬಗ್ಗೆ ವಾಹನವೊಂದರಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ತೆರಳಿರುತ್ತಾರೆ. ಡಿಕ್ಕಿ ಉಂಟು ಮಾಡಿದ ಕಾರನ್ನು ನವೀನ ಎಂಬಾತನು ಚಲಾಯಿಸಿಕೊಂಡಿರುವುದಾಗಿ ತಿಳಿದು ಬಂದಿದ್ದು, ಅಪಘಾತದ ಸಮಯ ಎರಡು ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 44/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ವಿಜಯ ಲಕ್ಷ್ಮೀ 55 ವರ್ಷ ಗಂಡ;ಜಯ ಕುಮಾರ್ ವಾಸ; ಶಿವಾಜಿ ನಗರ ಕನಕಗಿರಿ ಗ್ರಾಮ ಮತ್ತು ಅಂಚೆ ಗಂಗಾವತಿ ತಾಲೂಕು ಎಂಬವರ ದೂರಿನಂತೆ ದಿನಾಂಕ;17-04-2022 ರಂದು ಪಿರ್ಯಾದುದಾರರು ತನ್ನ ಗಂಡ, ತಂಗಿ ಸುರೇಖಾ, ತಂದೆ ಚಿದಾನಂದ ರವರೊಂದಿಗೆ ಕಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಟಿದ್ದು ಬೆಳ್ತಂಗಡಿ ತಾಲೂಕು ಕೊಕ್ಕಡ ಬಳಿ ತಲುಪಿದಾಗ ಸದ್ರಿ ಕಾರು ಹಾಳಾಗಿದ್ದು ನಂತರ ಅವರೆಲ್ಲರೂ ಧರ್ಮಸ್ಥಳಕ್ಕೆ ಬರುವ  ಟೂರಿಸ್ಟ್‌  ಜೀಪಿನಲ್ಲಿ  ಶ್ರೀ ಕ್ಷೇತ್ರಕ್ಕೆ ಬಂದಿದ್ದು ದೇವರ ದರ್ಶನ ಮುಗಿಸಿ ವಾಪಾಸು ಕೊಕ್ಕಡಕ್ಕೆ ಹೋಗುವ ಟೂರಿಸ್ಟ್‌ ಜೀಪಿನಲ್ಲಿ  ಹೋಗುತ್ತಿದ್ದ ಸಮಯ  ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯಕ್ಕೆ  ನಿಡ್ಲೆ ಗ್ರಾಮದ ಆದಿತ್ಯ ಹೋಟೆಲ್‌ ಬಳಿ ತಲುಪಿದಾಗ ಪಿರ್ಯಾದುದಾರರ ಬಳಿ ಇದ್ದ ವ್ಯಾನಿಟಿ ಬ್ಯಾಗ್‌ ಇಲ್ಲದೇ ಇದ್ದು  ಸದ್ರಿ ಬ್ಯಾಗನಲ್ಲಿ ಸುಮಾರು ಒಂಬತ್ತು ಸಾವಿರ ಬೆಲೆಬಾಳುವ MI2 ಮೊಬೈಲ್‌  ಹಾಗೂ ಸುಮಾರು  ಇಪ್ಪತ್ತೊಂದು ಸಾವಿರ  ನಗದು ಇದ್ದು ಸದ್ರಿ ಬ್ಯಾಗನ್ನು  ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 28/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:17-04-2022 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಜಂಕ್ಷನ್‌ ನ ಬಸ್‌ ಸ್ಟ್ಯಾಂಡ್‌ ಬಳಿ ಧಾರ್ಮಿಕ ಧ್ವಜವೊಂದನ್ನು ಕಿಡಿಗೇಡಿಗಳು ಹಾನಿ ಮಾಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ 29/2022 ಕಲಂ: 427,295 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-04-2022 10:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080