ಅಪಘಾತ ಪ್ರಕರಣ: ೦4
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುನಾದ್ ಎಸ್ ಭಟ್ ಪ್ರಾಯ.21 ವರ್ಷ ತಂದೆ: ಶ್ರೀನಿವಾಸ ಭಟ್ ವಾಸ: ದೆವಸ್ಯೆ ಮನೆ, ನಿಡ್ಪಳ್ಳಿ ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 18-05-2022 ರಂದು ಆರೋಪಿ ಕಾರು ಚಾಲಕ ಉಮ್ಮರಬ್ಬ ಎಂಬವರು KA-44-6866 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು ಪೇಟೆ ಒಳ ರಸ್ತೆಯಿಂದ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬ ಗ್ರಾಮದ ತೆಂಕಿಲ ಎಂಬಲ್ಲಿ, ಒಮ್ಮೇಲೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ನೆಹರು ನಗರ ಕಡೆಯಿಂದ ಬೆಟ್ಟಂಪಾಡಿ ಕಡೆಗೆ ಸುದರ್ಶನ್ ಶೆಟ್ಟಿ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ KA-21-EB-6586 ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಕಾರು ಅಪಘಾತವಾಗಿ, ರಸ್ತೆಗೆ ಎಸೆಯಲ್ಪಟ್ಟ ಸುದರ್ಶನ್ ಶೆಟ್ಟಿ ಯವರಿಗೆ ಎಡಕೈ, ಎಡಕಾಲು ಹಾಗೂ ಬೆನ್ನಿಗೆ ಗಾಯವಾಗಿದ್ದು, ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 94/2022 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುಂದರ ಪ್ರಾಯ. 61 ವರ್ಷ ತಂದೆ: ದಿ. ಕೊರಗಪ್ಪ ವಾಸ: ಸಿ.ಟಿ ಗುಡ್ಡೆ ಮನೆ, ಮಂಜಲ್ಪಡ್ಪು ನೆಹರೂನಗರ ಅಂಚೆ, ಕಬಕ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 17-05-2022 ರಂದು ಆರೋಪಿ ಕಾರು ಚಾಲಕ ದಿನೇಶ್ ಗೌಡ ಎಂಬವರು KA-21-N-5535 ನೇ ನೋಂದಣಿ ನಂಬ್ರದ ಕಾರಿನಲ್ಲಿ ಅಶೋಕ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಹರು ನಗರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಎಂಬಲ್ಲಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯನ್ನು ದಾಟುತ್ತಿದ್ದ ಪಿರ್ಯಾದುದಾರರ ತಮ್ಮ ರಾಜಶೇಖರ್ ರವರಿಗೆ ಕಾರು ಅಪಘಾತವಾಗಿ, ಗಾಯಗೊಂಡವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೋಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 95/2022 ಕಲಂ:279, 337 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ. ರಾದಾಕೃಷ್ಣ ಪಾಟಾಳಿ ಪ್ರಾಯ.55 ವರ್ಷ ತಂದೆ: ರಾಮ ಪಾಟಾಳಿ ವಾಸ: ಬಡಕ್ಕಾಯೂರು ಮನೆ, ಬಡಗನ್ನೂರು ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 18-05-2022 ರಂದು ಆರೋಪಿ ಸ್ಕೂಟರ್ ಸವಾರ ಸುದೀಪ ಎಂಬವರು KA-21-Y-6591 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಸುಹಾನ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು-ಪರ್ಲಡ್ಕ-ಫಿಲೋಮಿನಾ ಕಾಲೇಜು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಫಿಲೊಮೀನಾ ಕಾಲೇಜು ಕಡೆಯಿಂದ ಪರ್ಲಡ್ಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಶಾಲೆಯ ಎದುರು, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಬಿ. ರಾದಾಕೃಷ್ಣ ಪಾಟಾಳಿರವರು ಪುತ್ತೂರು ಪೇಟೆ ಕಡೆಯಿಂದ ನಿಡ್ಪಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಒಮ್ನಿ ಕಾರು ನೋಂದಣಿ ನಂಬ್ರ KA-21-M-6234ನೇ ಒಮ್ನಿ ಕಾರಿಗೆ ಅಪಘಾತವಾಗಿ, ಸ್ಕೂಟರ್ ಸವಾರ ಮತ್ತು ಸಹ ಸವಾರ ಸ್ಕೂಟರ್ ಸಮೇತ ರಸ್ತೆಯ ಬದಿಗೆ ಬಿದ್ದು, ಆರೋಪಿ ಸ್ಕೂಟರ್ ಸವಾರ ಸುದೀಪ ರವರಿಗೆ ತಲೆಗೆ ಹಾಗೂ ಮುಖಕ್ಕೆ ಗಾಯ ಮತ್ತು ಸಹಸವಾರ ಸುಹಾನ್ ರವರಿಗೆ ಕೈಗೆ ಗಾಯವಾಗಿ, ಚಿಕಿತ್ಸೆ ಬಗ್ಗೆ ಅಟೋರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಆರೋಪಿ ಸ್ಕೂಟರ್ ಸವಾರ ಸುದೀಪ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕಳುಹಿಸಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 96/2022 ಕಲಂ:279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಲಲಿತ (50) ಗಂಡ:ಲಿಂಗಪ್ಪ ಬೈರ ವಾಸ: ಹಳೆಮುಂಡ್ಲ ಮನೆ ಕಟ್ಟೆಮಜಲು ಕೌಕ್ರಾಡಿ ಗ್ರಾಮ ಕಡಬ ತಾಲೂಕು ರವರು ದಿನಾಂಕ:17.05.2022 ರಂದು ತನ್ನ ಪತಿ ಲಿಂಗಪ್ಪ ಬೈರ ರವರೊಂದಿಗೆ ಮೊಟಾರು ಸೈಕಲ್ ನಂಬರ್ KA-21-V-4298 ನೇದರಲ್ಲಿ ಸಹ ಸವಾರೆಯಾಗಿ ಕುಳಿತುಕೊಂಡು ಧರ್ಮಸ್ಥಳ-ಪೆರಿಯಶಾಂತಿ ರಾಜ್ಯ ಹೆದ್ದಾರಿಯ ಕಾಫಿನಬಾಗಿಲು ಕಡೆಯಿಂದ ಕೊಕ್ಕಡ ಕಡೆಗೆ ಹೋಗುತ್ತಿರುವಾಗ 17-30 ಗಂಟೆಯ ವೇಳೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಸೈಂಟ್ ಜಾನ್ ಬ್ಯಾಪಿಸ್ಟ್ ಚರ್ಚ್ ಬಳಿ ತಲುಪಿದಾಗ ಫಿರ್ಯಾಧಿದಾರರ ಎದುರುಗಡೆಯಿಂದ ಅಂದರೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ KA-20-MD-8162 ನೇ ನಂಬ್ರದ ಕಾರನ್ನು ಅದರ ಚಾಲಕ ಅಕ್ಷತ್ ಎಂಬಾತನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾಂಗ್ ಸೈಡ್ ನಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರು ಸಹಸವಾರರಾಗಿ ಕುಳಿತುಕೊಂಡಿದ್ದ ಮೊಟಾರು ಸೈಕಲ್ ಗೆ ಡಿಕ್ಕಿಯಾದ ಪರಿಣಾಮ ಸವಾರ ಫಿರ್ಯಾಧಿದಾರರ ಪತಿ ಲಿಂಗಪ್ಪರವರ ಬಲ ಕಾಲಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 59/2022 ಕಲಂ:279.338 ಭಾದಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦2
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಫಿಲ್ (18) ರೊಟ್ಟಿಗುಡ್ಡೆ ಮನೆ , ತುಂಬೆ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 17.05.2022 ರಂದು ಕೂಲಿ ಕೆಲಸ ಮುಗಿಸಿಕೊಂಡು ಪರಂಗಿಪೇಟೆಯಿಂದ ಮೋಟಾರು ಸೈಕಲ್ ನಲ್ಲಿ ಹೋಗುತ್ತಿದ್ದಾಗ ಕಡೆಗೋಳಿ ದ್ವಾರ ತಲುಪಿದಾಗ ಪಿರ್ಯಾದುದಾರರ ಮೊಬೈಲ್ ಗೆ ಹುಸೈನ್ ಎಂಬವನಿಂದ ಪೋನ್ ಕರೆ ಬಂದಿದ್ದು ಕಡೆಗೋಳಿ ದ್ವಾರದ ಬಳಿ ಬೈಕನ್ನು ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದ ಸಮಯ ಕಡೆಗೋಳಿ ಪರಿಸರದ ಪಿರ್ಯಾದುದಾರರಿಗೆ ಪರಿಚಯವಿರುವ ಮೂರು ಜನ ಯುವಕರು ಪಿರ್ಯಾದುದಾರರ ಬಳಿ ಬಂದು ಮೊಬೈಲ್ ಎಳೆಯಲು ನೋಡಿ ನಮ್ಮ ಏರಿಯಾದಲ್ಲಿ ಇಷ್ಟು ಹೊತ್ತಿಗೆ ನಿನಗೆ ಎನೂ ಕೆಲಸ ಎಂದು ಹೇಳಿ ನನ್ನ ಅಂಗಿಯನ್ನು ಹಿಡಿದು ಅಲ್ಲಿಯೇ ಇದ್ದ ಅಂಗಡಿಯೊಂದರ ಬಳಿಗೆ ಕರೆದುಕೊಂಡು ಹೋಗಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಅವರು ಮೂವರೂ ಕೈಯಿಂದ ಹಲ್ಲೆ ನಡೆಸಿ ಅವರಲ್ಲಿ ಒಬ್ಬಾತ ಅಲ್ಲಿಯೇ ಇದ್ದ ಮರದ ತುಂಡಿನಿಂದ ಪಿರ್ಯಾದುದಾರರ ಮುಖಕ್ಕೆ ಕೆನ್ನೆಗೆ ಎದೆಯ ಭಾಗಕ್ಕೆ ತಲೆಗೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 34/2022 ಕಲಂ: 504,506,323,324 r/w 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರಕ್ಷಾ ಆರ್ ಹೆಗ್ಡೆ , ಪ್ರಾಯ: 27 ವರ್ಷ ಗಂಡ: ಸುಮೇಶ್ , ವಾಸ: ಶ್ರೀ ರಕ್ಷಾ ನಿಲಯ , ಉರ್ಲಾಂಡಿ ಬೈಪಾಸ್ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಎಂಬವರ ಮನೆಯ ಹತ್ತಿರದಲ್ಲಿರುವ ಪಿರ್ಯಾದಿದಾರರ ದೊಡ್ಡಪ್ಪನ ಮಗ ತಿರುಮಲಾಕ್ಷ ಹೆಗ್ಗಡೆ ಎಂಬವರ ಮನೆಯಿದ್ದು ಅವರಿಗೂ ಪಿರ್ಯಾದಿದಾರರ ಮನೆಯವರಿಗೂ ಜಾಗದ ವಿಚಾರದಲ್ಲಿ ತಕರಾರು ಇರುತ್ತದೆ. ದಿನಾಂಕ 18.05.2022 ರಂದು ಅವರ ಮನೆಯಲ್ಲಿ ಮಗಳಿಗೆ ಊಟ ಮಾಡಿಸುತ್ತಿದ್ದ ವೇಳೆ ತಿರುಮಲಾಕ್ಷನು ಪಿರ್ಯಾದಿದಾರರ ಮನೆಯ ಹಿಂದಿನ ಬಾಗಿಲನ್ನು ದೂಡಿ ಒಳಬಂದು ನಿನ್ನ ಅಣ್ಣ ರಕ್ಷಿತ್ ಎಲ್ಲಿದ್ದಾನೆ ? ಅವನು ಹೊರಗೆ ಬಂದ್ರೆ ಅವನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿದ್ದು, ಆಗ ಫಿರ್ಯಾದಿದಾರರು ಮನೆಯಿಂದ ಹೊರಗೆ ನಡಿ ಎಂದು ಹೇಳುತ್ತಾ ಎದುರು ಹೋದಾಗ ಪಿರ್ಯಾದಿದಾರರನ್ನು ದೂಡಿದ್ದು ಪಿರ್ಯಾದಿದಾರರು ಕೆಳಗೆ ಬಿದ್ದು , ನಂತರ ಸಾವರಿಸಿ ಎದ್ದಾಗ ತಿರುಮಲಾಕ್ಷನು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದು ಕಾಲಿನಿಂದ ಸೊಂಟಕ್ಕೆ ತುಳಿದನು. ಪಿರ್ಯಾದಿದಾರರು ಪುನಃ ಕೆಳಗೆ ಬಿದ್ದಾಗ ಆತನು ಪಿರ್ಯಾದಿದಾರರ ಜುಟ್ಟು ಹಿಡಿದು ಆತನ ಕೈಯಲ್ಲಿದ್ದ ನೈಲ್ ಕಟ್ಟರ್ ತರಹದ ಸಾಧನದಿಂದ ಬಲ ರಟ್ಟೆಗೆ ಬಲವಾಗಿ ಗೀರಿದ್ದು ಪಿರ್ಯಾದಿದಾರರು ಏಳುವಾಗ ಕುತ್ತಿಗೆಗೆ ಕೈ ಹಾಕಿದ್ದು , ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಎರಡೆಲೆಯ ಚಿನ್ನದ ಕರಿಮಣಿ ಸರ ತಾಯತ ಸಮೇತ ತುಂಡಾಗಿ ಕೆಳಗೆ ಬಿದ್ದಿದ್ದು , ಆರೋಪಿಯು ತುಂಡಾದ ಕರಿಮಣಿಸರ ಹಾಗೂ ತಾಯತವನ್ನು ತನ್ನ ಪ್ಯಾಂಟಿನ ಕಿಸೆಯಲ್ಲಿ ಹಾಕಿಕೊಂಡಿದ್ದು , ಪಿರ್ಯಾದಿದಾರರು ಕೇಳಿದರೂ ಕೊಡದೇ ಇದ್ದು , ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿ ಕೂಗಿಕೊಂಡಾಗ ಇನ್ನು ಮುಂದಕ್ಕೆ ನನ್ನ ಸುದ್ದಿಗೆ ಬಂದರೆ ನಿಮ್ಮನ್ನು ಎಲ್ಲರನ್ನು ಮುಗಿಸದೇ ಬಿಡುವುದಿಲ್ಲ ಎಂದು ಹೇಳಿ ಜೀವಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 36/2022 ಕಲಂ: 448,504,354,323,324,427,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಶ್ವ ಕೆ ಪ್ರಾಯ:29 ವರ್ಷ ತಂದೆ: ಕೆಂಚಪ್ಪಗೌಡ ವಾಸ; ಆಹಾರ ನಿರೀಕ್ಷಕರು ತಾಲೂಕು ಕಛೇರಿ ಬೆಳ್ತಂಗಡಿ ,ಬೆಳ್ತಂಗಡಿ ತಾಲೂಕು ರವರು ದಿನಾಂಕ 18-05-2022 ರಂದು ಪೊಲೀಸ್ ಉಪನಿರೀಕ್ಷಕರು ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿ ಇರುವ ಸಮಯ ಅನ್ನ ಬಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಚಾರ್ಮಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವಾಹನವನ್ನು ತಪಾಸಣೆ ಮಾಡುತ್ತಿರುವ ಸಮಯ ಉಜಿರೆ ಕಡೆಯಿಂದ ಮೂಡಿಗೆರೆ ಕಡೆಗೆ ಹೋಗುವ ಕೆಎ 19 ಸಿ 5086 ಸಂಖ್ಯೆ ಬೋಲೆರೋ ಪಿಕಫ್ ಅನ್ನು ತಡೆದು ನಿಲ್ಲಿಸಿ ಸದ್ರಿ ಬೋಲೆರೋ ವಾಹನ ಚಾಲಕನನ್ನು ವಿಚಾರಿಸಲಾಗಿ ವಿನಯ್ ಪ್ರಾಯ:23 ವರ್ಷ ತಂದೆ : ವಿಜಯ್ ಕುಮಾರ್ ಎಮ್ ಎಮ್ ಮುತ್ತಿಗೆಪುರ ಗ್ರಾಮ ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಎಂದು ಹೆಸರು ವಿಳಾಸ ತಿಳಿಸಿದ್ದು ನಂತರ ಬೋಲೆರೋ ಪಿಕಫ್ ನಲ್ಲಿ ಎನಿದೆ ಎಂದು ಕೇಳಿದಾಗ ಅನ್ನಭಾಗ್ಯ ಅಕ್ಕಿ ಇರುವುದಾಗಿ ತಿಳಿಸಿದ್ದು ಈ ಬಗ್ಗೆ ಯಾವುದಾದರೂ ಪರವಾನಿಗೆ ಇದೆ ಎಂದು ಕೇಳಲಾಗಿ ಯಾವುದೇ ರೀತಿಯ ದಾಖಲಾತಿಗಳನ್ನು ನೀಡಿರುವುದಿಲ್ಲ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ತಾಲೂಕು ಆಹಾರ ನೀರೀಕ್ಷಕರು ಬೆಳ್ತಂಗಡಿ ತಾಲೂಕು ರವರಿಗೆ ದೂರವಾಣಿ ಮೂಲಕ ವಿಚಾರವನ್ನು ತಿಳಿಸಿದ್ದು ನಂತರ ಸ್ಥಳಕ್ಕೆ ಎರಡು ಜನ ಪಂಚರನ್ನು ಬರಮಾಡಿಕೊಂಡು ಸಮಯ 4:00 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ವಾಹನದಲ್ಲಿ ಇರುವ ಅಕ್ಕಿಯನ್ನು ಪರಿಶೀಲಿಸಲಾಗಿ ಸದ್ರಿ ಅಕ್ಕಿಯು 2022 ನೇ ಮೇ ತಿಂಗಳ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಯ ಸರಬರಾಜು ನೀಡಿರುವ ಅಕ್ಕಿಗೆ ಹೋಲಿಕೆ ಇರುವುದು ಕಂಡುಬರುತ್ತದೆ. ಸದ್ರಿ ವಾಹನದಲ್ಲಿ 59 ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತಲಾ 50 ಕೆ ಜಿ ಅಕ್ಕಿ ತುಂಬಿದ ಅಕ್ಕಿ ಮತ್ತು 14 ಪ್ಲಾಸ್ಟಿಕ್ ಗೋಣಿ ಚೀಲಗ:ಳಲ್ಲಿ ತಲಾ 25 ಕೆ ಜಿ ತುಂಬಿದ ಅಕ್ಕಿಯಂತೆ ಒಟ್ಟು 33 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು ಸದ್ರಿ ಪತ್ತೆಯಾದ ಅಕ್ಕಿಯ ಅಂದಾಜು ಮೌಲ್ಯ 49500 ರೂಪಾಯಿ ಹಾಗೂ ಸಾಗಾಟಕ್ಕೆ ಬಳಸಿದ ಬೋಲೆರೋ ಪಿಕಫ್ ನ ಮೌಲ್ಯ 500000 ರೂ ಮೌಲ್ಯ ಆಗಿದ್ದು ಸದ್ರಿ ಅಕ್ಕಿಯನ್ನು ಅಕ್ರಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಕಂಡು ಬಂದಿರುತ್ತದೆ, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ .ಕ್ರ 40-2022 ಕಲಂ : 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ1955 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.