ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ: 2

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಶ್ವತ್ ವೈ ಯು, ಪ್ರಾಯ: 35 ವರ್ಷ, ತಂದೆ: ಉತ್ತಪ್ಪ ವೈ ಪಿ, ವಾಸ: ಯಳದಾಳು ಮನೆ, ಕಲ್ಮಕಾರು ಗ್ರಾಮ, ಸುಳ್ಯ ತಾಲೂಕು ರವರು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸದಸ್ಯನಾಗಿದ್ದು,  ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಿಲ್ ಡೌನ್ ಆಗಿರುವುದರಿಂದ ಪಂಚಾಯತ್ ವತಿಯಿಂದ ಕೋವಿಡ್ ಪಾಸಿಟಿವ್ ಬಂದ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವುದಾಗಿದೆ. ದಿನಾಂಕ: 16-06-2021 ರಂದು ಸಂಜೆ ಸುಮಾರು 4:00 ಗಂಟೆ ಸಮಯಕ್ಕೆ ಕೆಲವು ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವರೇ ಗ್ರಾಮಪಂಚಾಯತ್ ಸದಸ್ಯರಾದ ಮಾಧವ ಚಾಂತಾಳ ಮತ್ತು ಇತರ ಸದಸ್ಯರೊಂದಿಗೆ ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಯಲದಾಳ ಕಡೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಲ್ಲಿ ನೆರೆಕೆರೆಯ ವೇಧಾವತಿ ಗಂಡ: ದಿ|| ಪುರುಷೋತ್ತಮ ಮತ್ತು ಅವರ ಮಕ್ಕಳಾದ ಶುಭಕರ ಮತ್ತು ಸತೀಶ ಎಂಬುವವರು ರಸ್ತೆಯಲ್ಲಿ ಅಡ್ಡ ನಿಂತು ಕೈಯಲ್ಲಿ ಕತ್ತಿ ಹಿಡಿದು “ ಈ ರಸ್ತೆಯಲ್ಲಿ ಇನ್ನು ಮುಂದೆ ಓಡಾಡಿದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ: 35-2021 u/s   Sec  341, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶೈಲೇಶ್ ಅಂಬೆಕಲ್ಲು, ಪ್ರಾಯ: 53 ವರ್ಷ, ತಂದೆ: ದಿ|| ಶ್ರೀಪತಿಗೌಡ, ಗ್ರಾಮ ಪಂಚಾಯತ್ ಸದಸ್ಯರು ದೇವಚಳ್ಳ ಗ್ರಮ, ಸುಳ್ಯ ತಾಲೂಕು ರವರು ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ದಿನಾಂಕ: 18-06-2021 ರಂದು ಬೆಳಿಗ್ಗೆ 7:45 ಸಮಯಕ್ಕೆ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ತಳೂರು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೇಂದ್ರದಿಂದ ಸಾರ್ವಜನಿಕರಿಗೆ ಪಡಿತರ ವಿತರಣೆಯಾಗುತ್ತಿರುವ ಸಂದರ್ಭದಲ್ಲಿ ದೇವಚಳ್ಳ ಗ್ರಾಮದ ಅಂಬೆಕಲ್ಲು ನಿವಾಸಿಯಾದ ಹರ್ಷಿತ್ ಬಿನ್ ಕೇಶವಗೌಡ ರವರು ಪಡಿತರ ಕೇಂದ್ರಕ್ಕೆ ಮಾಸ್ಕ್ ಧರಿಸದೇ ಬಂದು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ. ಸದ್ರಿಯವರು ಎ ಪಿ ಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಪಡಿತರ ಬೇಡಿಕೆ ನೀಡದೇ ಇರುವುದರಿಂದ ಪಡಿತರ ವಿತರಿಸಲು ನಿಮಗೆ ಸಾಧ್ಯವಿಲ್ಲವೆಂದು ಅಧಿಕಾರಿಗಳು ಮತ್ತು ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ತಿಳಿಸಿದಾಗ ಸಾಮಾಜಿಕ ಅಂತರವಿಲ್ಲದೇ ಮಾಸ್ಕ್ ಧರಿಸದೇ ಕರ್ತವ್ಯಕ್ಕೆ ಅಡ್ಡಪಡಿಸುವುದರ ಜೊತೆಗೆ ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ: 36-2021  u/s   Sec  269, 506  ಐಪಿಸಿ ಮತ್ತು ಕಲಂ: 5(4) ಕರ್ನಾಟಕ ಸಾಂಕ್ರಾಮಿಕ ತಡೆ ಅಧಿನಿಯಮ-2020  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹನುಮಪ್ಪ ಗಾಜಿ ಶಾಖಾಧಿಕಾರಿ (ಪ್ರಭಾರ) ಮೆಸ್ಕಾಂ ಅಳದಂಗಡಿ ರವರು ನೀಡಿದ ದೂರಿನಂತೆ ದಿನಾಂಕ 13.06.2021 ರಂದು ರಾತ್ರೀ 20.30 ಗಂಟೆ ಸಮಯಕ್ಕೆ ಜಾನ್ ಡಿಸೋಜಾ ಎಂಬವರು ಬಡಗಕಾರಂದೂರು ಗ್ರಾಮದ ಅಳದಂಗಡಿ ಎಂಬಲ್ಲಿರುವ ನಮನ ಡಾಬದ ಸಮೀಪದಲ್ಲಿರುವ ನೀರಿನ ತೋಡಿಗೆ ಮೀನು ಹಿಡಿಯಲು ಹೋದಾಗ ಅವರಿಗೆ ಕರೆಂಟ್‌ ಪ್ರವಹಿಸುವ ಅನುಭವ ಅಗಿದ್ದು ಮರುದಿನ ಜಾನ್ ಡಿಸೋಜಾ ಮತ್ತು ಲೈನ್‌ ಮ್ಯಾನ್‌ ಮೋಹನ್‌ ಹಾಗೂ ಇತರರೊಂದಿಗೆ ಸದ್ರಿ ತೋಡಿನ ಬಳಿ ತೆರಳಿ ಪರಿಶಿಲಿಸಿದಾಗ ಆರೋಪಿತ ಸವೇರಾ ಪಿರೇರಾ ಎಂಬವನು ತನ್ನ ಬಾಬ್ತು ಪಂಪು ಶೆಡ್ಡಿನಿಂದ ಅನದಿಕೃತವಾಗಿ ವಿದ್ಯುತ್‌  ಹರಿಸಿರುವುದು ಕಂಡು ಬಂದಿದ್ದು  ದಿನಾಂಕ 15.06.2021 ರಂದು ಪಿರ್ಯಾದಿದಾರಿಗೆ  ಬಂದ ದೂರಿನಂತೆ ಅವರು ಹಾಗೂ ಲೈನ್‌ ಮ್ಯಾನ್‌ ಮೋಹನ್ ಮತ್ತು ಇಲಾಖಾ  ಸಹಾಯಕ ಕಾರ್ಯ ಪಾಲಕ ಇಂಜಿನಿಯರ್‌ ಆಗಿರುವ ಹೆಚ್‌ ಶಿವಶಂಕರ್‌  ರೊಂದಿಗೆ  ಸಂಜೆ 16.30 ಗಂಟೆಗೆ  ಸ್ಥಳಕ್ಕೆ  ಬೇಟಿ ನೀಡಿ ಪರೀಶಿಲಿಸಿದಾಗ ಆರೋಪಿತನು ತನ್ನ ಬಾಬ್ತು ಪಂಪ್‌ ಶೆಡ್‌ ಸ್ಥಾವರದಿಂದ ಕೇಬಲ್‌ ವಯರ್‌ ಮುಖಾಂತರ ಅನಧಿಕೃತವಾಗಿ ಶೆಡ್ಡಿನ ಪಕ್ಕದಲ್ಲಿರುವ ನೀರು ಹರಿಯುವ ತೋಡಿಗೆ ಅಡ್ಡಲಾಗಿ 2 ತಂತಿಯನ್ನು ಕಟ್ಟಿ ಅಪಾಯಕಾರಿಯಾಗುವಂತೆ  ಅದಕ್ಕೆ  ವಿದ್ಯುತ್‌ ಹಾಯಿಸಿ ಜನರ ಹಾಗೂ ಇತರ ಪ್ರಾಣಿಗಳ ಜೀವಕ್ಕೆ ಹಾನಿಯಾಗುವಂತೆ ಅಪರಾಧ ಎಸಗಿದ್ದು ಕಂಡು ಬಂದಿದ್ದು  ಮೇಲಾಧಿಕಾರಿಗಳ ನಿರ್ದೆಶನದಂತೆ ಸಾರ್ವಜನಿಕರ ಹಿತ ದೃಷ್ಟಿಯಿಂದ  ವಿದ್ಯುತ್‌ ಹಾಯಿಸಿದ ಕಪ್ಪು ಕೇಬಲನ್ನು ಕಳಚಿ  ಪಂಪ್‌ ಶೆಡ್ಡಿನಲ್ಲಿ ಇಟ್ಟಿದ್ದು  ಕಾನೂನು ಬಾಹಿರವಾಗಿ ಪಂಪ್‌ ಶೆಡ್ಡಿನಿಂದ  ತೋಡಿನ ನೀರಿಗೆ ವಿದ್ಯುತ್‌  ಪ್ರವಹಿಸುವಂತೆ  ಮಾಡಿ ಜನರ ಜೀವಕ್ಕೆ ಹಾನಿಯಾಗುವಂತಹ ಕೃತ್ಯವೆಸಗಿದ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 38 -2021 ಕಲಂ: 308 ಐಪಿಸಿ ಮತ್ತು 135 ಕರ್ನಾಟಕ ಎಲೆಕ್ಟ್ರಿಸಿಟಿ ಆಕ್ಟ್ 2003 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 19-06-2021 11:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080