ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶ್ರೀಮತಿ ಭಾರತಿ ಪ್ರಾಯ 37 ವರ್ಷ ಗಂಡ:ದಿ||ಹರೀಶ್ ವಾಸ:ಕುಳಾಲು ಮನೆ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ರವರು ತನ್ನ ಅತ್ತೆ ಶ್ರೀಮತಿ ಕಮಲರವರನ್ನು ದಿನಾಂಕ:16-08-2021 ರಂದು ತಮ್ಮ ಖಾಸಗಿ ಕೆಲಸದ ನಿಮಿತ್ತ ಬಂಟ್ವಾಳಕ್ಕೆ ಹೋಗಿ ಕೆಲಸ ಮುಗಿಸಿ ವಾಪಾಸು ಸಾಲೆತ್ತೂರಿಗೆ ಬಂದು ತಮ್ಮ ಮನೆಗೆ ಹೋಗುವರೆ KA-19-AB-1520ನೇ ಅಟೋರಿಕ್ಷಾವನ್ನು ಬಾಡಿಗೆಗೆ ಗೊತ್ತುಮಾಡಿ ಪಿರ್ಯಾಧಿ ಹಾಗೂ ಅವರ ಅತ್ತೆಯವರು ಸದ್ರಿ ಅಟೋರಿಕ್ಷಾದಲ್ಲಿ ಕುಳಿತುಕೊಂಡು ಅದರ ಚಾಲಕ ಪಿ ಜಯರಾಮರವರು ಅಟೋ ರಿಕ್ಷಾವನ್ನು ಸಾಲೆತ್ತೂರು-ಕನ್ಯಾನ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಅಗರಿ ಎಂಬಲ್ಲಿಗೆ ತಲುಪಿದಾಗ ಚಾಲಕ ಅಟೋ ರಿಕ್ಷಾವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ರಿಕ್ಷಾ ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಮಗುಚಿಬಿದ್ದ ಪರಿಣಾಮ ಪಿರ್ಯಾಧಿಯ ತಲೆಗೆ ಗುದ್ದಿದ ಗಾಯ, ಎಡ ಭುಜಕ್ಕೆ ಗಾಯ ,ಕಮಲರವರಿಗೆ ಎಡ ಕೈ ಕೋಲು ಕೈಗೆ ರಕ್ತಗಾಯ ,ಎಡಕಾಲಿನ ಮಣಿಗಂಟಿನ ಬಳಿ ರಕ್ತಗಾಯ ,ಎಡ ಕೈಭುಜಕ್ಕೆ ರಕ್ತಗಾಯವಾಗಿದ್ದು , ಚಾಲಕ ಜಯರಾಮರವರಿಗೆ ಸ್ವಲ್ಪ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 109/2021 ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಲೋಕೇಶ್ ಕುಮಾರ್  ಪ್ರಾಯ: 28 ವರ್ಷ ತಂದೆ: ಸುಂದರವಾಸ: ಪೈಪಾಲು ಮನೆ,ಚೇಳೂರು ಗ್ರಾಮ, ಬಂಟ್ವಾಳ ತಾಲೂಕು ರವರ ತಂದೆ ಸುಂದರ ರವರು ದಿನಾಂಕ 10-08-2021 ರಂದು ಬಂಟ್ವಾಳ ತಾಲೂಕು ಚೇಳೂರು ಗ್ರಾಮದ ಚೇಳೂರು ಪೈಪಾಲು ಎಂಬಲ್ಲಿ ಅಗತ್ಯ ಸಾಮಾನು ಖರೀದಿಸಿ ರಸ್ತೆ ದಾಟುತ್ತಿದ್ದ ಸಮಯ ಮುಡಿಪು ಕಡೆಯಿಂದ KA-19-EU-4666 ನೇ ಮೋಟಾರು ಸೈಕಲನ್ನು ಅದರ ಸವಾರ ತೇಜಸ್ ಎಂಬವರು ಸಹಸವಾರರಾದ ರಾಜೇಶ್ ಎಂಬವರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಂದೆ ಸುಂದರ ಎಂಬವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಗಲ್ಲಕ್ಕೆ, ಬಲಕಾಲಿಗೆ ರಕ್ತಗಾಯ ಮತ್ತು ತಲೆಗೆ ಮೈಕೈಗೆ ಗುದ್ದಿದ ನೋವಾಗಿದ್ದವರು ದೇರಳಕಟ್ಟೆ K.S ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 79/2021  ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜೇಶ್ (47) ತಂದೆ: ಐತ್ತಪ್ಪ ಪೂಜಾರಿ ವಾಸ: ಗೊರಡ್ಕ ಮನೆ, ಅಜ್ಜಾವರ ಗ್ರಾಮ ಸುಳ್ಯ ತಾಲೂಕು ರವರ ತಂದೆಯ, ತಂಗಿಯ ಮಗ ಅಮರನಾಥ (47) ಎಂಬಾತನು ಕೂಲಿ ಕೆಲಸ ಮಾಡುತ್ತಿದ್ದು, ದಿನಾಂಕ 18.08.2021  ರಂದು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿರುವ ವಿಶ್ವನಾಥ ರೈ, ಎಂಬುವರ ಬಾಬ್ತು ಜಾಗದಲ್ಲಿರುವ ತೆಂಗಿನ ಮರಕ್ಕೆ ತೆಂಗನ್ನು ತೆಗೆಯಲು ಹೋಗಿದ್ದು ಸಮಯ ಮರದಿಂದ ಕಾಲು ಜಾರಿ ಸುಮಾರು 15 ಅಡಿ ಎತ್ತರದಿಂದ ಕೆಳಗೆ ಬಿದ್ದು, ಸೃತಿ ಕಳೆದುಕೊಂಡವನನ್ನು, ಉಪಚರಿಸಿ ಚಿಕಿತ್ಸೆಯ ಬಗ್ಗೆ  ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಅಮರನಾಥನು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 60/2021 ಕಲಂ: 304(ಎ) ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದುದಾರರಾದ ಟಿ ರಮೇಶ್‌ ಬಾಬು ತಹಶೀಲ್ದಾರರು  ಪುತ್ತೂರು ತಾಲೂಕು ರವರ ತಾಲೂಕು ವ್ಯಾಪ್ತಿಗೆ ಬರುವ ಕಂದಾಯ ಇಲಾಖೆಗೆ ಸಂಬಂದಪಟ್ಟ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದಲ್ಲಿರುವ ನೇತ್ರಾವತಿ ನದಿ ತೀರದಲ್ಲಿರುವ ಕಂದಾಯ ಇಲಾಖೆಗೆ ಸೇರಿದ  ಸರಕಾರಿ ಪರಂಬೋಕು ಜಮೀನಿನಲ್ಲಿ ಅನದಿಕೃತವಾಗಿ ಇಂಗು ಗುಂಡಿಗಳನ್ನು ನಿರ್ಮಿಸಿ  ತ್ಯಾಜ್ಯ ನೀರನ್ನು ಪರಿಸರಕ್ಕೆ ಬಿಟ್ಟು  ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದು ಈ ಬಗ್ಗೆ ದಿನಾಂಕ: 27-07-2021ರಂದು ಕಂದಾಯ ನಿರೀಕ್ಷಕರು ಉಪ್ಪಿನಂಗಡಿ ಸ್ಥಳ ಪರಿಶೀಲನೆ ಮಾಡಿ ಪಿರ್ಯಾದಿದಾರರಿಗೆ ವರದಿ ನಿವೇದಿಸಿರುವುದು ಈ ಬಗ್ಗೆ  ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 76/2021  ಕಲಂ 269 277 IPC & 192(A)  KLR ACT 1964   ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಭಿದಾ ಬೇಗಂ , ಪ್ರಾಯ-35 ವರ್ಷ , ಗಂಡ- ಬಶೀರ್, ವಾಸ- ಗೋಳಿಯಂಗಡಿ ಮನೆ, ಕುಕ್ಕೇಡಿ ಗ್ರಾಮ ,ಬೆಳ್ತಂಗಡಿ ತಾಲೂಕು ರವರ ಮಗಳು ಆಯಿಶತುಲ್ ಅನಿಶಾಳಿಗೆ ಸರಿಯಾಗಿ ಕಣ್ಣು ಕಾಣದೇ ಇದ್ದು, ದಿನಾಂಕ 18/08/2021 ರಂದು 13-30 ಗಂಟೆಗೆ ಮನೆಯ ಎದುರು ಇರುವ ಬಾವಿಯ ದಂಡೆಯ ಅಡ್ಡದ ಪೈಪ್ ಗೆ ಬೆಡ್ ಶೀಟ್ ನ್ನು ಒಣಗಿಸಲು ಹಾಕುವಾಗ ಆಕಸ್ಮಿಕವಾಗಿ  ಬಾವಿಯ ನೀರಿಗೆ ಬೀಳುವುದನ್ನು ಕಂಡು ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ನೆರೆಯ ಅವಿಹ್ ಮತ್ತು ಮಜೀದ್ ರವರು ಬಂದು ಅವಳನ್ನು ಬಾವಿಯಿಂದ ತೆಗೆಯಲು ಪ್ರಯತ್ನಿಸಿದ್ದು ನೀರು ಜಾಸ್ತಿ ಇದ್ದುದರಿಂದ ತೆಗೆಯಲು ಸಾಧ್ಯವಾಗದೇ ಇದ್ದು ತಕ್ಷಣ ಅಗ್ನಿಶಾಮಕದವರನ್ನು ಕರೆಸಿ ನೀರಿನಿಂದ ಮೇಲಕ್ಕೆ ಎತ್ತಿದಾಗ ಅವಳು ಮೃತಪಟ್ಟಿರುತ್ತಾಳೆ, ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ:21-2021 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-08-2021 11:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080