ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಿತೇಶ್ ದಾಸ್ ಪ್ರಾಯ 30ವರ್ಷ ತಂದೆ: ಶೀನಿವಾಸ ದಾಸ್ ವಾಸ: ಶೀ ಕಟೀಲ್ ಮನೆ ಪಳಕಳ ಪುತ್ತಿಗೆ ಗ್ರಾಮ ಮೂಡುಬಿದ್ರೆ ತಾಲೂಕು ರವರ ಅತ್ತೆ ರೇವತಿ (60) ರವರು ದಿನಾಂಕ: 17.10.2022 ರಂದು ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ರಸ್ತೆಯ ಒಂದು ಬದಿಯಿಂದ ಇನ್ನೂಂದು ಬದಿಗೆ ರಸ್ತೆಯನ್ನು ದಾಟಿ ರಸ್ತೆಯ ಅಂಚಿಗೆ ತಲುಪಿದಾಗ ಪುತ್ತೂರು ಕಡೆಯಿಂದ ಕೆಎ-12-ಕೆ-7635 ನೇ ಮೋಟಾರ್ ಸೈಕಲ್ನ್ನು ಅದರ ಸವಾರ ವೇದಮೂರ್ತಿ ಎಂಬವರು ಅಜಾಗರೂಕತೆ ಮತ್ತು ದುಡುಕಿನಿಂದ ರಸ್ತೆಯ ತೀರಾ ಎಡ ಬದಿಯ ಅಂಚಿಗೆ ಸವಾರಿ ಮಾಡಿ ರೇವತಿಯವರಿಗೆ ಅಪಘಾತ ವಾದ ಪರಿಣಾಮ ರೇವತಿರವರ   ಬಲ ಕಾಲಿಗೆ ತೀವ್ರ ತರಹದ ಗಾಯವಾದವರನ್ನು ರಝಾಕ್ ಎಂಬವರು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಬಳಿಕ ವೈಧ್ಯರ ಸೂಚನೆಯಂತೆ ರೇವತಿಯವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಮತ್ತು ಲತೀಶ ರವರು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 159/2022  ಕಲಂ: 279.338. ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು ಧರ್ಮಸ್ಥಳ ಪೊಲೀಸ್‌ ಠಾಣೆ ರವರು ದಿನಾಂಕ 18.10.2022 ರಂದು ಠಾಣಾ ಸಿಬ್ಬಂದಿಗಳೊಂದಿಗೆ ನಿಡ್ಲೆ ಗ್ರಾಮದ ಬೂಡಜಾಳು ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ತಲುಪಿದಾಗ ನಿಲ್ದಾಣದ ಹಿಂಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ಒಬ್ಬನ ಕೈಯಲ್ಲಿ ಗಾಜಿನ ಲೋಟದಲ್ಲಿ ಮದ್ಯವನ್ನು ಕುಡಿಯುತ್ತಿದ್ದು ವಿಚಾರಿಸಿಲಾಗಿ ಒಬ್ಬನು ಸಂಜೀವ ಪೂಜಾರಿ(57), ಎಂದು ಇನ್ನೊಬ್ಬನು ಶ್ರೀಕಾಂತ(54) ಎಂದು ತಿಳಿಸಿದ್ದು ಆತನ ಕೈಯಲ್ಲಿ ಪ್ಲಾಸ್ಟಿಕ್ ತೊಟ್ಟೆ ಇದ್ದು ಪರಿಶೀಲಿಸಿದಾಗ ತೊಟ್ಟೆಯ ಒಳಗೆ 180 ಎಮ್.ಎಲ್.ನ ಮದ್ಯ ತುಂಬಿದ MYSORE LANCER Whisky ಎಂಬ ಲೇಬಲ್ ಇರುವ ಬಾಟಲಿ-02 ಅಂದಾಜು ಮೌಲ್ಯ ರೂ 140/-ಆಗಬಹುದು ಹಾಗೂ ಅರ್ಧ ಖಾಲಿಯಾದ ಬಾಟಲಿ -01 ಹಾಗೂ ಗಾಜಿನ ಲೋಟ -01 ಇದ್ದು ಇವುಗಳಿಗೆ ಮೌಲ್ಯವಿರುವುದಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ 73/2022 ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚೇತನ್ ರಾಜ್, ಪ್ರಾಯ: 22 ವರ್ಷ, ತಂದೆ: ಶೇಷಪ್ಪ ನಾಯ್ಕ, ವಾಸ: ನಡುಗಲ್ಲು ಮನೆ, ನಾಲ್ಕೂರು ಗ್ರಾಮ, ಸುಳ್ಯ ತಾಲೂಕು ರವರು ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ನಡುಗಲ್ಲು ಮನೆ ಎಂಬಲ್ಲಿ ತಂದೆ, ತಾಯಿ, ಅಕ್ಕ ಮತ್ತು ಅಣ್ಣನೊಂದಿಗೆ ವಾಸವಾಗಿದ್ದು, ದಿನಾಂಕ:17-10-2022 ರಂದು ಸಂಜೆ ಸುಮಾರು 06:15 ಗಂಟೆಗೆ ಪಿರ್ಯಾದಿದಾರರ ಅಣ್ಣ ಚರಣ್ ರಾಜ್, ಪ್ರಾಯ: 26 ವರ್ಷ ಎಂಬವರು ಮನೆಯ ಹತ್ತಿರದ ತೋಟಕ್ಕೆ ಕೆಲಸಕ್ಕೆಂದು ಹೋದವರು ಅಲ್ಲೇ ಬಿದ್ದಿರುವುದನ್ನು ನೋಡಿ ಗಿರೀಶ್ ಕೆ ಎಂಬವರು ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ತೋಟಕ್ಕೆ ಹೋಗಿ ನೋಡಲಾಗಿ ಚರಣ್ ರಾಜ್ ರವರು ಅಂಗಾತ ಬಿದ್ದಿದ್ದು, ಕೂಡಲೇ ಆತನನ್ನು ಆಟೋ ರಿಕ್ಷಾದಲ್ಲಿ ಆತ್ಮರಾಮ್ ವಲ್ಪಾರೆಯವರು ಸುಳ್ಯದ ಕೆವಿಜಿ ಮೆಡಿಕಲ್ ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿ, ಅಲ್ಲಿನ ವೈದ್ಯರು ಪರೀಕ್ಷಿಸಿ ಚರಣ್ ರಾಜ್ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಮೃತ ಚರಣ್ ರಾಜ್ ರವರಿಗೆ ಹಿಂದಿನಿಂದಲೂ ಪಿಟ್ಸ್ ಕಾಯಿಲೆ  ಬರುತ್ತಿದ್ದು, ಅದಕ್ಕೆ ಔಷದಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ  18-2022  ಕಲಂ  174 IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ವೇದಾವತಿ (52)  ಗಂಡ: ತಂದೆ: ಭುಜಂಗ ಪೂಜಾರಿ ವಾಸ: 2-215 ಬೊಳ್ಳಾರಿ ಮನೆ , ತುಂಬೆ ಗ್ರಾಮ ಬಂಟ್ವಾಳ ತಾಲೂಕು  ರವರು ಗಂಡ ಭುಜಂಗ ಪೂಜಾರಿ ಹಾಗೂ ಮಗನೊಂದಿಗೆ ವಾಸವಾಗಿರುವುದಾಗಿದೆ, ಪಿರ್ಯಾದಿದಾರರು ಕೂಲಿ ಕೆಲಸ ಮಾಡಿಕೊಂಡಿದ್ದು, ಮಗ ಮಂಗಳೂರಿನಲ್ಲಿ ಪ್ಯಾಬ್ರಿಕೇಷನ್‌ ಕೆಲಸ ಮಾಡಿಕೊಂಡಿರುವುದಾಗಿದ . ಪಿರ್ಯಾದಿದಾರರ ಗಂಡ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಸುಮಾರು ಒಂದು ವರ್ಷದ ಹಿಂದೆ ಎಡಕಾಲಿನ ಹೆಬ್ಬೆರಳುಗಳ ಪಕ್ಕದ  ಬೆರಳಿನಲ್ಲಿ ಗ್ಯಾಂಗ್ರಿನ್‌  ಆಗಿ ಬೆರಳನ್ನು ಕತ್ತರಿಸಿ ತೆಗೆದಿರುವುದರಿಂದ ಅವರಿಗೆ ಕೆಲಸ ಮಾಡಲು ಆಗದೇ ಮನೆಯಲ್ಲಿಯೇ ಇರುತ್ತಿದ್ದು ಸಕ್ಕರೆ ಖಾಯಿಲೆಗೆ ಔಷದಿ ಸೇವಿಸುತ್ತಿದ್ದರು. ದಿನಾಂಕ: 18.10.2022 ರಂದು ಪಿರ್ಯಾದಿದಾರರು ಬೆಳಿಗ್ಗೆ 07.30 ಗಂಟೆಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಮಗನಿಗೆ ಮದ್ಯಾಹ್ನ ಕೆಲಸವಾದುದರಿಂದ ಪಿರ್ಯಾದಿದಾರರ ಗಂಡ ಮತ್ತು ಮಗ ಮನೆಯಲ್ಲಯೇ ಇದ್ದು, ಪಿರ್ಯಾದಿದಾರರು ಕೆಲಸ ಮುಗಿಸಿ ಸಂಜೆ 06.45 ಗಂಟೆಗೆ ಮನಗೆ ಬಂದಾಗ ಮನೆಯ ಎದುರಿನ ಬಾಗಿಲು ತೆರೆದಿದ್ದು, ಪಿರ್ಯಾದಿದಾರರು ಮನೆಯ ಒಳಗೆ ಬಂದು ಗಂಡನನ್ನು ಕರೆದಾಗ ಓಗೊಡದೇ ಇದ್ದು ಮನೆಯ ಲೈಟ್‌ ಹಾಕಿ ಮಲಗುವ ಕೋಣೆಯಲ್ಲಿ ನೋಡಿದಾಗ ಮನೆಯ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡಿರುವುದನ್ನು ಕಂಡು ಪಿರ್ಯಾದಿದಾರರು ಬೊಬ್ಬೆ ಹಾಕಿ ನೆರೆಕರೆಯವರಿಗೆ ಹಾಗೂ ಕೆಲಸಕ್ಕೆ ಹೋಗಿದ್ದ ಮಗನಿಗೆ ತಿಳಿಸಿರುವುದಾಗಿದೆ. ಪಿರ್ಯಾದಿದಾರರ ಗಂಡ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 54-2022 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪವನ್ ಎಸ್ ಶೆಟ್ಟಿ ತಂದೆ:ಸುಧಾಕರ ಶೆಟ್ಟಿ ಮುಡ್ಪಿನಡ್ಕ ಮನೆ ಬಡಗನ್ನೂರು ಗ್ರಾಮ ರವರು ನೀಡಿದ ದೂರಿನಂತೆ ಪುತ್ತೂರು ತಾಲೂಕು ಪುತ್ತೂರು ಕಸಬ ಗ್ರಾಮದ ದರ್ಬೆ ಯಲ್ಲಿ ರುವ ಮಂಗಳಾ ಎಂಟರ್ಪ್ರೈಸಸ್   ನ ಮಂಗಳಾ ಲಾಡ್ಜ್ ಗೆ ದಿನಾಂಕ 16.10.2022 ರಂದು ಬೆಳಿಗ್ಗೆ 6.55 ಗಂಟೆಗೆ ರವಿಶಂಕರ್ ಎಮ್ ಎಸ್ ಪ್ರಾಯ 51 ವರ್ಷ ಕೇರ್ ಆಫ್, ಸದಾಶಿವ ಎಮ್ ಎಸ್ ವಾಸ:,115/4 2 ನೇ ಪೋಲ್ ಗೋಪಾಲಪುರಂ 2 ನೇ ಅಡ್ಡರಸ್ತೆ ಮಾಗಡಿ ರಸ್ತೆ ಬೆಂಗಳೂರು ಉತ್ತರ ಬೆಂಗಳೂರು ಎಂಬವರು ರೂಮ್ ಬೇಕೆಂದು ಕೇಳಿ ಮಂಗಳ ಲಾಡ್ಜ್ ನ 3 ನೇ ಮಹಡಿಯಲ್ಲಿರುವ 413 ನಂಬರಿನ ರೂಮನ್ನು ಪಡೆದು ಬಾಡಿಗೆಗೆ ಇದ್ದವರು ಈ ದಿನ ದಿನಾಂಕ 18.10.2022 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಪಿರ್ಯಾದುದಾರರಿಗೆ ರೂಮ್ ಬಾಯ್ ಅವಿನಾಶ್ ಕರೆ ಮಾಡಿ ರೂಮ್ ನಂಬ್ರ 413 ನೇ ದರಲ್ಲಿಇದ್ದ ವ್ಯಕ್ತಿಯು ಬಾಗಿಲು ಹಾಕಿಕೊಂಡಿದ್ದು, ಎಷ್ಟೂ ಬಾಗಿಲು ಬಡಿದರೂ ತೆಗೆಯುದಿಲ್ಲವೆಂದು ತಿಳಿಸಿರುತ್ತಾನೆ. ಕೂಡಲೇ ಪಿರ್ಯಾದುದಾರರು ಲಾಡ್ಜ್ ಗೆ ಬಂದು ಬಾಗಿಲನ್ನು ಬಡಿದರೂ ಸಹ ಯಾವುದೇ ಪ್ರತಿಕ್ರಿಯೇ ಬಾರದೇ ಇದ್ದುದರಿಂದ ಸಂಶಯಗೊಂಡು ತುರ್ತು ಕರೆಯಾದ 112 ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಪೊಲೀಸುರು ಹೋಗಿ ಪಂಚರ ಸಮಕ್ಷಮ ಒಳಕೊಂಡಿಹಾಕಿದ ಬಾಗಿಲನ್ನು ಜೋರಾಗಿ ತಳ್ಳಿ ತೆರೆದು ನೋಡಿದಾಗ ಸದ್ರಿ ವ್ಯಕ್ತಿಯು ಕೊಠಡಿಯ ಪ್ಯಾನ್ ಗೆ  ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆ  ಯುಡಿಆರ್ ನಂಬ್ರ: 28/2022 ಕಲಂ: 174 [3][4] ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 19-10-2022 12:43 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080