ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್.ಎ, ಪ್ರಾಯ 40 ವರ್ಷ, ತಂದೆ: ಅಬ್ದುಲ್ಲ, ಚಾಮತ್ತಡ್ಕ ಮನೆ, ಪೆರಾಬೆ ಗ್ರಾಮ, ಕಡಬ ತಾಲೂಕು ರವರು ದಿನಾಂಕ.07.11.2021ರಂದು ಟ್ಯಾಂಕರ್ ಚಾಲಕನಾಗಿ ಮಂಗಳೂರಿಗೆ ಕೆಲಸಕ್ಕೆ ಹೋಗಿದ್ದು, ಪಿರ್ಯಾದುದಾರರ ಪತ್ನಿ ಶ್ರೀಮತಿ ಶಾಹಿದಾ ರವರ ತಾಯಿಗೆ ಅನಾರೋಗ್ಯ ಇದ್ದುದರಿಂದ ಅವರನ್ನು ನೋಡಲು ದಿನಾಂಕ.07.11.2021 ರಂದು ತನ್ನ ಮನೆಯಿಂದ ಸಂಬಂಧಿ ಕೆ.ಪಿ.ಅಬ್ದುಲ್ ಬಶೀರ್ ರವರ ಬಾಬ್ತು ಕೆಎ-21-ಇಎ-0545ನೇ ದ್ವಿಚಕ್ರ ವಾಹನದಲ್ಲಿ ಸಹಸವಾರಿಣಿಯಾಗಿ ಕುಳಿತುಕೊಂಡು ಹೋಗುತ್ತಾ ಕಡಬ ತಾಲೂಕು ಆಲಂಕಾರು ಗ್ರಾಮದ ಬುಡೇರಿಯಾ ಕ್ರಾಸ್ ಎಂಬಲ್ಲಿಗೆ ತಲುಪಿದಾಗ ಕೆ.ಪಿ.ಅಬ್ದುಲ್ ಬಶೀರ್ ರವರು ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರವನ್ನು ಸವಾರಿ ಮಾಡಿ, ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ರಸ್ತೆಗೆ ಬಿದ್ದ ಶಾಹಿದಾರವರು ಎಡಕೈ ಭುಜ ಮತ್ತು ಹೆಗಲಿಗೆ ಗಾಯ ಗೊಂಡವರನ್ನು ಪ್ರತ್ಯಕ್ಷದರ್ಶಿಯಾದ ಅಬ್ದುಲ್ ಹಕೀಂ ಎಂಬವರು ಅವರ ಕಾರಿನಲ್ಲಿ ಪುತ್ತೂರು ಸಿ.ಟಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ವಿಚಾರ ತಿಳಿದು ಪಿರ್ಯಾದುದಾರರು ಪುತ್ತೂರು ಸಿ.ಟಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಗೆ ಕರೆರದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 95/2021 ಕಲಂ. 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ.ಬಿ. ಅಬ್ದುಲ್ ರಝಾಕ್ ( 51 ವರ್ಷ), ತಂದೆ: ದಿ|| ಕೆ ಇಬ್ರಾಹಿಂ, ವಾಸ: ಬೊಟ್ಟು ಮನೆ, ಕೆಬಿಎಸ್, ಜೋಕಟ್ಟೆ ಅಂಚೆ, ತೋಕೂರು  ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರೇನೇಂದರೆ ದಿನಾಂಕ 17-11-2021 ರಂದು 13-30 ಗಂಟೆಗೆ ಆರೋಪಿ ಕಾರು ಚಾಲಕ ಹಬೀಬ್ ರೆಹಮಾನ್ ಎಂಬವರು KA-19-MJ-5446 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಕಾರಿನ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ಟೇಕ್ ಮಾಡಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ,  ಪಿರ್ಯಾದುದಾರರ ಅಣ್ಣ ಮೊಹಮ್ಮದ್ ಇಸ್ಮಾಯಿಲ್ ರವರು ಚಾಲಕರಾಗಿ, ಆಸ್ಮಾ, ಇಬ್ರಾಹಿಂ ಸಲೀಲ್ ಮತ್ತು ಅಜರುದ್ದೀನ್ ರವರು ಪ್ರಯಾಣಿಕರಾಗಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-19-AA-0307 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಮೊಹಮ್ಮದ್ ಇಸ್ಮಾಯಿಲ್ ರವರಿಗೆ ಎಡಕೈ ಮತ್ತು ಎಡತೊಡೆಗೆ ಗುದ್ದಿದ ಗಾಯ, ಆಸ್ಮಾರವರಿಗೆ ಬಲಕೈಗೆ ಗುದ್ದಿದ ನೋವು, ಇಬ್ರಾಹಿಂ ಸಲೀಲ್  ರವರಿಗೆ ಕುತ್ತಿಗೆಯ ಎಡಭಾಗಕ್ಕೆ ತರಚು ಗಾಯ ಮತ್ತು ಅಜರುದ್ದೀನ್ರವರಿಗೆ ಹಣೆಗೆ ರಕ್ತಗಾಯವಾಗಿ, ಚಿಕಿತ್ಸೆ ಬಗ್ಗೆ  ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಪಘಾತದಿಂದ ಕಾರು ಮತ್ತು ಅಟೋರಿಕ್ಷಾ ಜಖಂಗೊಂಡಿರುತ್ತದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  145/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಿ ಪಿ ಸಾಬೀರ್ ಅಹ್ಮದ್ ಪ್ರಾಯ 35 ವರ್ಷ ತಂದೆ: ಜಿ ಪಿ ಉಸ್ಮಾನ ಅನಾಸ್ ಮಂಝೀಲ್ ಅಡ್ಡೂರು ಗ್ರಾಮ  ಮಂಗಳೂರು ತಾಲೂಕು ರವರು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮೊಡಂಕಾಪು ದೀಪಿಕಾ ಪ್ರೌಢ ಶಾಲಾ ಹತ್ತಿರ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿದ್ದು ದಿನಾಂಕ 11-11-2021 ರಂದು ಸಂಜೆ 6.00 ಗಂಟೆಗೆ ವ್ಯಾಪಾರ ಮುಗಿಸಿ ಕೊಂಡು ಮನೆಗೆ ಹೋಗಿದ್ದು ದಿನಾಂಕ 13-11-2021 ರಂದು ಬೆಳಿಗ್ಗೆ 7.00 ಗಂಟೆಗೆ ಬಂದು ನೋಡುವಾಗ ಕಬ್ಬಿನ ಜ್ಯೂಸ್ ಮಾಡುವ ಮಿಷಿನ್ ಇಲ್ಲದೇ ಇದ್ದು  ಸದ್ರಿ ಪರಿಸರದಲ್ಲಿ ಹುಡುಕಾಡಿದಲ್ಲಿ ಸಿಗದೇ ಇದ್ದು. ದಿನಾಂಕ 11-11-2021 ರಂದು ಸಂಜೆ 6.00 ಗಂಟೆಯಿಂದ ದಿನಾಂಕ 13-11-2021 ರಂದು ಬೆಳಿಗ್ಗೆ 7.00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಬ್ಬಿನ ಜ್ಯೂಸ್ ಮಾಡುವ ಮಿಷಿನ್ ಅಂದಾಜು ಮೌಲ್ಯ 40,000/- ರೂ ಆಗಿರುತ್ತದೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 131/2021  ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಶ್ವನಾಥ ಗೌಡ, ಪ್ರಾಯ 46 ವರ್ಷ, ತಂದೆ: ಬಾಬು ಗೌಡ, ವಾಸ; ಇದಿಂಗಳ ದರ್ಖಾಸು ಮನೆ,  ಮಲೆ ಬೆಟ್ಟು ಕೊಯ್ಯೂರು ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮನೆಯಾದ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಇದಿಂಗಳ ದರ್ಖಾಸ್ತು ಮಲೆಬೆಟ್ಟು ಎಂಬಲ್ಲಿ ದಿನಾಂಕ:17-11-2021 ರಂದು  ಬೆಳಿಗ್ಗೆ 08-45 ಗಂಟೆಯಿಂದ 14-00 ಗಂಟೆಯ ಮದ್ಯಧ ಅವಧಿಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಹಿಂಬದಿಯ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ತೆಗೆದು ಮನೆಯ ಒಳ ಪ್ರವೇಶಿಸಿ  ಗೋಡ್ರೇಜ್ ನ ಒಳಗೆ ಪರ್ಸಿನಲ್ಲಿ ಇರಿಸಿದ್ದ ಕೀಯನ್ನು ಉಪಯೋಗಿಸಿಕೊಂಡು ಗೋಡ್ರೇಜ್ ನಲ್ಲಿದ್ದ  ಸುಮಾರು 42 ಗ್ರಾಂ ತೂಕದ 1,26,000/- ರೂ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ನಗದು ರೂ 500/-ವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವು ಆದ ಸೊತ್ತಿನ ಒಟ್ಟು ಮೌಲ್ಯ 1,26,500/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ  97/2021 ಕಲಂ: 454,380 ಐ.ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 4

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪೊಲೀಸ್ ನಿರೀಕ್ಷಕರು  ಬಂಟ್ವಾಳ ನಗರ ಪೊಲೀಸ್ ಠಾಣೆ ರವರು ಇಲಾಖಾ ವಾಹನದಲ್ಲಿ  ಸಿಬ್ಬಂದಿಗಳೊಂದಿಗೆ ದಿನಾಂಕ 18-11-2021 ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ ಕೆ.ಎಸ್.ಆರ್.ಟಿ.ಸಿ. ಡಿಪ್ಪೋದ ಬಳಿ ಇಲಾಖಾ ವಾಹನವನ್ನು ನಿಲ್ಲಿಸಿ ಜುಗಾರಿ ಆಡುತ್ತಿದ್ದಾರೆ ಎಂಬ ಮಾಹಿತಿ ಬಂದ ಜಾಗವಾದ ಕೆ.ಎಸ್.ಆರ್.ಟಿ.ಸಿ ಡಿಪ್ಪೋದ ಹಿಂಭಾಗ ಪೊನ್ನೋಡಿ ಎಂಬಲ್ಲಿಯ ಗುಡ್ಡಜಾಗದಲ್ಲಿ ನೆಲದ ಮೇಲೆ ಪ್ಲಾಸ್ಟಿಕ್ ತೊಟ್ಟೆಯನ್ನು ಹಾಕಿ ಸುತ್ತಲು ಸುಮಾರು ಜನ ಪುರುಷರು ಕುಳಿತುಕೊಂಡು ಮದ್ಯದಲ್ಲಿ ಇಸ್ಪೀಟು ಎಲೆಗಳನ್ನು ಹಾಕುತ್ತಾ ಹಣವನ್ನು ಪಣವಾಗಿಟ್ಟು ಆಟವಾಡುತ್ತಿದ್ದುದನ್ನು ಕಂಡ ಪಿರ್ಯಾಧಿದಾರರು ಹಾಗೂ  ಸಿಬ್ಬಂದಿಯವರು ಎಸ್ಪೀಟು ಆಟ ಆಡುತ್ತಿದ್ದವರನ್ನು 1. ಜಾಕೀರ್ ಅಹಮ್ಮದ್ 2. ಸಂಶುದ್ದೀನ್, 3. ದೀರಾಜ್, 4. ಅಬ್ದುಲ್ ಅಝೀಜ್, 5.ಮೊಹಮ್ಮದ್ ಸಿರಾಜ್, 6. ಅಬೂಬಕ್ಕರ್, 7. ಮೊಹಮ್ಮದ್, 8. ಅಬ್ದುಲ್ ಹಮೀದ್, ಎಂಬವರನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಠಾಣಾ ಅ.ಕ್ರ. 132/2021  ಕಲಂ: 87 ಕೆ ಪಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 18.11.2021 ರಂದು  ಕಲಂ:  354(A) ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕಲಂ:376(2),(ಎಫ್) (ಎನ್), 506 ಐಪಿಸಿ ಮತ್ತು ಕಲಂ:5,6 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯಶೋದ.ಬಿ.ಪಿ, ಪ್ರಾಯ 40 ವರ್ಷ, ಕೋಂ: ರಮೇಶ, ವಾಸ: ಕಾಯಂದೂರು ಮನೆ, ಮರ್ದಾಳ ಅಂಚೆ, ಬಂಟ್ರ ಗ್ರಾಮ, ಕಡಬ ತಾಲೂಕು ರವಬರು ನೀಡಿದ ದೂರಿನಂತೆ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಪೂವಾ ಎಂಬಲ್ಲಿ ಪಿರ್ಯಾದಿದಾರರ ಗಂಡ ರಮೇಶ ಎಂಬವರ ಹೆಸರಿನಲ್ಲಿ ಪಿತ್ರಾರ್ಜಿತವಾಗಿ ಬಂದ ಅಡಿಕೆ ತೋಟ ಹಾಗೂ ಲಗ್ತಿ ಕುಮ್ಕಿ ಜಮೀನು ಇರುತ್ತದೆ. ಈ ಜಮೀನಿನ ಪಾಲು ವಿಂಗಡಣೆಯ ವಿಚಾರದಲ್ಲಿ ಪಿರ್ಯಾದಿದಾರರ ಗಂಡ ರಮೇಶ ಹಾಗೂ ಅವರ ಅಣ್ಣ ವೆಂಕಪ್ಪರ ಮಧ್ಯೆ ಸುಮಾರು 3 ವರ್ಷಗಳಿಂದ ತಕರಾರು ಇರುತ್ತದೆ. ಇದೇ ಧ್ವೇಷದಿಂದ ಪಿರ್ಯಾದಿದಾರರ ಗಂಡನ ಅಣ್ಣ ವೆಂಕಪ್ಪ, ವೆಂಕಪ್ಪರ ಪತ್ನಿ ರೇವತಿ, ಮಗಳು ಅಕ್ಷಿತಾ, ಪರಿಚಯದವರಾದ ಈಶ್ವರ ಗೌಡ ಪಾಲೆಚ್ಚಾರು, ದಾಮೋದರ ಕೆಮ್ಮತ್ತಡ್ಕ, ಜತ್ತಪ್ಪ ಗೌಡ ಈಶ್ವರ ಮಂಗಲ, ದಯಾನಂದ ಕೆಮ್ಮತ್ತಡ್ಕ ಹಾಗೂ ಇತರ ಸುಮಾರು 20 ಮಂದಿ ಸೇರಿ ದಿನಾಂಕ 17-11-2021 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರ ಗಂಡನ ಬಾಬ್ತು ಕುಮ್ಕಿ ಜಮೀನಿನಲ್ಲಿರುವ 94 ಸಿ ರಂತೆ ನಿರ್ಮಿಸಿದ ಮನೆಯ ಒಳಗೆ ಅಕ್ರಮ ಪ್ರವೇಶಮಾಡಿ ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಎಳೆದು ಹಾಕಿ, ಮನೆಯನ್ನು ಕೆಡವಿ ಕಟ್ಟಡದ ಹಂಚು, ಸಿಮೆಂಟ್ ಶೀಟು, ಹಾಗೂ ಇಟ್ಟಿಗೆಗಳನ್ನು ಲಾರಿ ನಂ KL08U-0100 ನೇಯದ್ದರಲ್ಲಿ ತುಂಬಿಸಿ ಕೊಂಡು ಹೋಗಿದ್ದು, ಆ ವೇಳೆ ಪಿರ್ಯಾದಿದಾರರು ಆರೋಪಿಗಳ ಕೃತ್ಯವನ್ನು ವಿಡಿಯೋ ಮಾಡುತ್ತಿರುವಾಗ ವೆಂಕಪ್ಪ ಗೌಡ ರು ಗೇರು ಮರದ ಗೆಲ್ಲಿನಿಂದ ಪಿರ್ಯಾದಿದಾರರ ಎಡ ಕೈಗೆ ಹೊಡೆದು ನೋವುಂಟು ಮಾಡಿದ್ದು ಗಾಯಾಳು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ  ಕಡಬ ಸಮುದಾಯ ಆರೋಗ್ಯಕೇಂದ್ರದಲ್ಲಿ ಒಳರೋಗಿಯಾಗಿ ದಾಖಲಾಗಿರುವುದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 60/2021, ಕಲಂ 143, 147, 448, 323, 427, 324 ಜೊತೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 19-11-2021 10:55 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080