ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಟಿ, ಸುಲೈಮಾನ್ಪ್ರಾಯ; 40 ವರ್ಷತಂದೆ; ಅಬ್ದುಲ್ ಖಾದರ್ ವಾಸ;ಪಟ್ಟೆಕೋಡಿ  ಮನೆ, ಜೆಮ್ ಸ್ಕೂಲ ಬಳಿ, ಗೋಳ್ತಮಜಲು ಗ್ರಾಮ, ಕಲ್ಲಡ್ಕ ಬಂಟ್ವಾಳ ತಾಲೂಕು ರವರ ತಂದೆ  ಅಬ್ದುಲ್ ಖಾದರ್ ರವರು  ದಿನಾಂಕ;18.03.2021 ರಂದು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿ ಪಿರ್ಯಾದಿದಾರರ ಅಂಗಡಿಗೆ ಬರುವರೇ ರಸ್ತೆಯನ್ನು ದಾಟಿ ರಸ್ತೆ ಬದಿಗೆ ತಲುಪುತ್ತಿದಂತೆ ವಿಟ್ಲ ಕಡೆಯಿಂದ KA 19 X 1411 ನೇ ಮೋಟರ್ ಸೈಕಲ್ ನ್ನು ಅದರ ಸವಾರ ನಿಕ್ಷಿತ್ ರವರು  ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ  ತೀರ ಬದಿಗೆ ಚಲಾಯಿಸಿಕೊಂಡು ಬಂದು   ಅಬ್ದುಲ್ ಖಾದರ್ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಅಬ್ದುಲ್ ಖಾದರ್ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯಗೊಂಡವರು ಚಿಕಿತ್ಸೆ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 31/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಂತೋಷ್‌ ಕುಮಾರ್‌  ರವರು ನೀಡಿದ ದೂರಿನಂತೆ ದಿನಾಂಕ: 16-03-2021 ರಂದು ಸಾಮಾಜಿಕ ಜಾಲತಾಣವೊಂದರಲ್ಲಿ ಪಿರ್ಯಾದುದಾರರನ್ನು ಒಂದು ನಿರ್ದಿಷ್ಠ ಸಮುದಾಯಕ್ಕೆ ಎತ್ತಿಕಟ್ಟುವಂತಹ ಬರಹವನ್ನು ಪ್ರಸಾರ ಪಡಿಸಿ ಇಂಟರ್ ನೆಟ್‌ ಮುಖೇನ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವುದಾಗಿ ದೂರು ನೀಡಿದಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಕಲಂ: 504, 505(2) 506, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಮಾನಾಥ ಪ್ರಾಯ 36 ವರ್ಷ ತಂದೆ: ದಿ ಸುಬ್ಬ ಪೂಜಾರಿ ವಾಸ: ಮಿತ್ತಲ ಕೋಡಿ ಮನೆ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣನಾದ ನಾಗೇಶ ರವರು ಮದುವೆಯಾಗದೇ ಇದ್ದು, ಹಲವು ವರ್ಷಗಳಿಂದ ಮಧ್ಯಪಾನ ಮಾಡಿಕೊಂಡಿದ್ದರು ಮಾನಸಿಕ ಸ್ತೀಮಿತ ಕಳೆದುಕೊಂಡು ಮನೆಯಲ್ಲಿ ಎಲ್ಲರೊಂದಿಗೆ ಗಲಾಟೆ ಮಾಡಿಕೊಂಡಿದ್ದು ದಿನಾಂಕ 18-03-2021 ರಂದು ರಾತ್ರಿ 10.30 ಕ್ಕೆ ಊಟ ಮಾಡಿ ಟಿ.ವಿ ನೋಡಿನಲ್ಲಿ ರೊಮಿನಲ್ಲಿ ಮಲಗುತ್ತೇನೆಂದು ಹೇಳಿ ರೊಮಿಗೆ ಹೋದವರು ರಾತ್ರಿ 11.15 ಗಂಟೆಗೆ ರೊಮಿನಲ್ಲಿ ಶಬ್ದ ಕೇಳಿ ಪಿರ್ಯಾಧಿದಾರರು ಹೋಗಿ ನೋಡಿದಾಗ ಅಣ್ಣ ನಾಗೇಶನು ಮನೆಯ ಪಕ್ಕಾಸಿಗೆ ಲುಂಗಿ ಹಾಗು ಬೈರಾಸು ಸೇರಿಸಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 11-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಮತಿ ಪ್ರಾಯ 33 ವರ್ಷ ಗಂಡ ರವಿ ಮಾಲಬೆ ಮನೆ ಸರಪಾಡಿ ಬಂಟ್ವಾಳ ತಾಲೂಕು ರವರ ಸುಮಾರು 2 ½ ವರ್ಷದ ಹಿಂದೆ ಕಲ್ಮಡ್ಕ ನಿವಾಸಿ ಆದ ರವಿಯವರನ್ನು ಮದುವೆ ಆಗಿದ್ದು ಮದುವೆ ಆದ ನಂತರನು ಪಿರ್ಯಾದುದಾರರ ಮನೆಯಲ್ಲಿ ವಾಸವಾಗಿದ್ದು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರು ದಿನಾಂಕ 17.03.2021 ರಂದು ಬೆಳಿಗ್ಗೆ ,ಮೆಲ್ಕಾರ್ ಆರ್ ಟಿ ಓ ಕಛೇರಿಗೆ ಹೋಗಿ ಮಧ್ಯಾಹ್ನ 3.30 ಕ್ಕೆ ಮನೆಗೆ ಬಂದಿದ್ದು, ಆ ಸಮಯ ಚಹಾ ಮಾಡಿ ಕೊಟ್ಟಿದ್ದು, ನಂತರ ಪಿರ್ಯಾದುದಾರರ ಗಂಡನಿಗೆ ಸುಮಾರು 4 ಗಂಟೆಯ ಸಮಯಕ್ಕೆ ಕೆಮ್ಮು ಬಂದಿದ್ದು ಆ ಸಮಯ ಪಿರ್ಯಾದುದಾರರ ಗಂಡ ಶೋಕೇಸ್ ನಲ್ಲಿಟ್ಟಿದ್ದ  ಶಿರಫ್ ನ್ನು ಕುಡಿದಿದ್ದು ಸ್ವಲ್ಪ ಹೊತ್ತಿನ ಸಮಯ ಹೊಟ್ಟೆ ನೋವು  ಆಗುತ್ತಿದೆ ನಾನು ಶಿರಫ್ ಬದಲು ಬೇರೆ ಏನೊ  ಕುಡಿದಿದ್ದೇನೆ ಎಂದು ಹೇಳಿದ್ದು ಕೂಡಲೇ ಪಿರ್ಯಾದುದಾರರು ಹೋಗಿ ನೋಡಲಾಗಿ ಶಿರಫ್ ಪಕ್ಕದಲ್ಲಿ ಇಟ್ಟಿದ್ದ ಹುಲ್ಲು ನಾಶ ಮಾಡಲು ತಂದಿದ್ದ ಕೀಟ ನಾಶಕ ಕುಡಿದಿರುವುದು ಕಂಡು ಬಂದಿದ್ದು ತಕ್ಷಣ ಪಿರ್ಯಾದುದಾರರು ಕುಡಿಯಲು ಅಡಿಕೆ ನೀರನ್ನು ಕೊಟ್ಟು ವಾಂತಿ ಮಾಡಿಸಿ ನಂತರ ಪಿರ್ಯಾದುದಾರರ  ಚಿಕ್ಕಪ್ಪ ನವರು ಬಂದು ಕಾರಿನಲ್ಲಿ ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಹೆಚ್ಚಿನ ಚಿಕಿತ್ಸೆಗೆ ವೆನ್ ಲಾಕ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಮೇರೆಗೆ ಮೃತ ರವಿಯವರನ್ನು ಕರೆದುಕೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದು ,ಚಿಕಿತ್ಸೆಯಲ್ಲಿದ್ದವರು ದಿನಾಂಕ 19.03.2021 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 13/2021 ಕಲಂ   174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಣೇಶ ಪ್ರಾಯ:44 ವರ್ಷ ತಂದೆ: ದಿ/ ಚಂದಪ್ಪ ಗೌಡ ವಾಸ: ನೇತ್ರಾವತಿ ಮನೆ  ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ:19-03-2021 ರಂದು  ಬೆಳಿಗ್ಗೆ ಅಂಗಡಿಯಿಂದ  ಮನೆಗೆ ಹೋಗುವ ಸಮಯ ಬೆಳ್ತಂಗಡಿ ತಾಲೂಕು  ಧರ್ಮಸ್ಥಳ ಗ್ರಾಮದ ಮಣ್ಣಸಂಕ ಬಳಿ  ಅರಣ್ಯ ಪ್ರದೇಶದಲ್ಲಿ ಚಾಕೋಟೆ ಮರದ ಗೆಲ್ಲಿಗೆ ಹಗ್ಗವನ್ನು ಕಟ್ಟಿ ನೇಣುಬಿಗಿದ ಸ್ಥಿತಿಯಲ್ಲಿ ಸುಮಾರು 60-65 ವರ್ಷ ಪ್ರಾಯದ ಗಂಡಸು ವ್ಯಕ್ತಿಯ ಮೃತದೇಹವು ಕಂಡುಬಂದಿರುತ್ತದೆ..ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:20/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 20-03-2021 11:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080