ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಝಾಕರಿಯ ಮೊಹಮ್ಮದ್  ಪ್ರಾಯ:43 ವರ್ಷ ತಂದೆ:ದಿ|| ಮೊಹಮ್ಮದ್  ವಾಸ:ಪೆರ್ನೆ ಮನೆ ಪೆರ್ನೆಅಂಚೆ ಬಿಳಿಯೂರು ಗ್ರಾಮ ಬಂಟ್ವಾಳ ತಾಲೂಕು ರವರು ಬಿಲ್ಡಿಂಗ್ ಕಾಂಟ್ರ್ಯಾಕ್ಟ್ ದಾರರಾಗಿದ್ದು, ದಿನಾಂಕ 18.05.2021 ರಂದು ನಾಟೇಕಲ್ ಎಂಬಲ್ಲಿ ಕಟ್ಟಡದ ಕಾಮಗಾರಿಯನ್ನು ನೋಡಲು ತನ್ನ ಬಾಬ್ತು KA-19-EK-7277 ನೆ ಆಕ್ಟೀವಾ ಸ್ಕೂಟರಿನಲ್ಲಿ ಪೆರ್ನೆ ಕಡೆಯಿಂದ ನಾಟೇಕಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿಗೆ ತಲುಪಿದಾಗ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ KA-19-MH-8039 ನೇ ಕಾರನ್ನು ಅದರ ಚಾಲಕ ಅಬ್ದುಲ್ ಸಮದ್ ರವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೆ ಏಕಾಏಕಿ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ  ಬಿದ್ದು ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯ, ಎಡ ಕಾಲಿನ ತೊಡೆಗೆ ಬಲಕಾಲಿನ ಪಾದಕ್ಕೆ ತರಚಿದ ಗಾಯವಾಗಿರುತ್ತದೆ ಅಲ್ಲದೇ ಅದೇ ಸಮಯ ಕಲ್ಲಡ್ಕ ಕಡೆಯಿಂದ KA-21-Q-1195 ನೇ  ಮೋಟಾರ್ ಸೈಕಲ್ ಸವಾರ ಅಬ್ದುಲ್ ಆರೀಸ್ ರವರು ಈ  ಅಪಘಾತವನ್ನು ನೋಡಿ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿಯು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೊಲಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ ಕ್ರ : 48/2021 ಕಲಂ : 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು, ವೇಣೂರು ಪೊಲೀಸ್ ಠಾಣೆ ರವರು ರೌಂಡ್ಸ್ ನಲ್ಲಿ ಇದ್ದ ಸಮಯ ಕುತ್ಲೂರು ಗ್ರಾಮದ ಕುಕ್ಕುಜೆ ಶ್ರೀ ನಿಧಿ ಎಂಬ ಅಂಗಡಿಯ ಮುಂಭಾಗದ ಜಗಲಿಯಲ್ಲಿ 2 ಜನರು ಕುಳಿತು ಅಕ್ರಮವಾಗಿ ಮದ್ಯ ಸೇವಿಸುತ್ತಿರುವ ಬಗ್ಗೆ ದೊರೆತ ಮಾಹಿತಿ ಯಂತೆ ಠಾಣಾ ಸಿಬ್ಬಂದಿಗಳು ಪಂಚಾಯತುದದಾರರ ಜೊತೆ ಹೋಗಿ ನೋಡಿದಾಗ ಇಬ್ಬರು ವ್ಯಕ್ತಿಗಳು ಅಂಗಡಿಯ ಮುಂಭಾಗದ ಜಗಲಿಯ ಮೇಲೆ ಕುಳಿತು ಅಕ್ರಮವಾಗಿ ಮದ್ಯ ಸೇವಿಸುತ್ತಿದ್ದು ಪೊಲೀಸರನ್ನು ನೋಡಿ ಅವರ ಪೈಕಿ ಒಬ್ಬ ಅಪರಿಚಿತ ವ್ಯಕ್ತಿ ಸ್ಥಳದಿಂದ ಓಡಿ ಹತ್ತಿರದ ಕಾಡು ಪ್ರದೇಶದಲ್ಲಿ ತಪ್ಪಿಸಿಕೊಂಡಿದ್ದು ಇನ್ನೊಬ್ಬ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ಕೇಳಲಾಗಿ ಸಂಜೀವ ಪೂಜಾರಿ (50) ಎಂದು ತಿಳಿಸಿದ್ದು ಓಡಿ ಹೋದ ಆರೋಪಿ ತನಗೆ ಅಪರಿಚಿತನಾಗಿದ್ದು ಆತನು  ಎಲ್ಲಿಂದಲೋ ತಂದ ಮದ್ಯವನ್ನು ಸೇವಿಸಲು ನೀರು ಹಾಗೂ ಗ್ಲಾಸ್ ಕೊಡುವಂತೆ ತಿಳಿಸಿ ತನಗೂ ಆತನು ಮದ್ಯ ಸೇವಿಸಲು ನೀಡಿರುವುದಾಗಿ ತಿಳಿಸಿದ್ದು ಆರೋಪಿಗಳು ಅಕ್ರಮವಾಗಿ ಮದ್ಯ ಸೇವಿಸಿದ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 33/2021 ಕಲಂ:  15 (ಎ) 32(3) ಕೆ.ಇ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-05-2021 11:10 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080