ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪ್ರಕರಣದಲ್ಲಿ ನೊಂದ ಬಾಲಕಿಯು ದ್ವೀತೀಯ ಪಿ ಯು ಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು 2 ವರ್ಷಗಳ ಹಿಂದೆ ಸ್ನೇಹಿತೆಯ ಮದುವೆಯು ಕಿನ್ನಿಗೋಳಿಯಲ್ಲಿ ನಡೆಯುವ ಸಂದರ್ಭ ಕಿನ್ನಿಗೊಳಿ ಕೊಲ್ಲೂರು ವಾಸಿ ಆರೋಪಿಯ ಪರಿಚಯವಾಗಿ ಇಬ್ಬರೂ ಮೊಬೈಲ್ ನಲ್ಲಿ ಅನ್ಯೋನ್ಯವಾಗಿ ಮಾತನಾಡಿಕೊಂಡಿರುತ್ತಾರೆ. ಹೀಗಿರುತ್ತಾ ಜುಲೈ 2021 ರಲ್ಲಿ ಆದಿತ್ಯವಾರ  ಬಾಲಕಿಯು ಆರೋಪಿಯ ಮನೆಗೆ ಹೋಗಿದ್ದಾಗ ಅಲ್ಲೆ ಪಕ್ಕದಲ್ಲಿರುವ ಆತನ ಅಣ್ಣನ ಖಾಲಿಯಿರುವ ಮನೆಗೆ ಪಿರ್ಯಾಧಿಯನ್ನು ಕರೆದುಕೊಂಡು ಹೋಗಿ ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ ನಡೆಸಿರುತ್ತಾನೆ. ಆ ನಂತರ ಇಬ್ಬರೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, ದಿನಾಂಕ 24-10-2021 ರಂದು ಕಾಲೇಜಿಗೆ ರಜೆಯಿದ್ದು, ಆ ದಿನವೂ ನೊಂದ ಬಾಲಕಿಯು ಆರೋಪಿಯ ಮನೆಗೆ ಹೋಗಿದ್ದಾಗ ಮದುವೆಯಾಗುತ್ತೇನೆಂದು ನಂಬಿಸಿ ಮತ್ತೆ ಅತ್ಯಾಚಾರ ಮಾಡಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ  ಕಲಂ: 376 ಐಪಿಸಿ ಹಾಗೂ ಕಲಂ: 4, 6 POCSO ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಗೌತಮ್ ಪ್ರಾಯ 24 ವರ್ಷ ತಂದೆ: ವೆಂಕಟೇಶ ಮೂರ್ತಿ  ವಾಸ: ಮಿತ್ತಕಟ್ಟ ಮನೆ ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ರವರು ಎಂದಿನಂತೆ ದಿನಾಂಕ 18-05-2022 ರಂದು ರಾತ್ರಿ 20.00 ಗಂಟೆಗೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಮಿತ್ತಕಟ್ಟ ಎಂಬಲ್ಲಿರುವ ಮನೆಯ ಪಕ್ಕದಲ್ಲಿರುವ ರಸ್ತೆಯ ಹತ್ತಿರ KL-14-N-2593 TVS Wego ವಾಹನವನ್ನು  ನಿಲ್ಲಿಸಿ ಮನೆಗೆ ಹೋಗಿರುತ್ತಾರೆ. ದಿನಾಂಕ: 19-05-2022 ರಂದು ಬೆಳಿಗ್ಗೆ 7.00 ಗಂಟೆಗೆ ಹಾಲಿನ ಡೈರಿಗೆ ಹಾಲನ್ನು ಕೊಂಡು ಹೋಗಲು ಸದ್ರಿ ವಾಹನದ ಬಳಿ ಬಂದಾಗ ಯಾರೋ ಕಿಡಿಗೇಡಿಗಳು ಸದ್ರಿ ವಾಹನವನ್ನು ಪೆಟ್ರೋಲ್ ಹಾಕಿ ಸುಟ್ಟಿರುವುದು ಕಂಡು ಬಂದಿರುತ್ತದೆ. ಇದರಿಂದಾಗಿ ಸುಮಾರು ಅಂದಾಜು 20,000 ರೂ ನಷ್ಟವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 51/2022  ಕಲಂ: 435, 427 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 20-05-2022 01:25 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080