ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನ್ ಕೆ ಪ್ರಾಯ 21 ವರ್ಷ ತಂದೆ:ದಿ|| ಕೊರಗಪ್ಪ ವಾಸ:ನಟ್ಟಿಬೈಲು ಮನೆ ಉಪ್ಪಿನಂಗಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ  ನವೀನ್ ಕೆ ರವರು ತನ್ನ ತಾಯಿಯಾದ ಶ್ರೀಮತಿ ಸೀತಾ ರವರ ನೊಂದಣಿ ಮಾಲಕತ್ವದ ಆಟೋ ರಿಕ್ಷಾ ನಂಬ್ರ ಕೆಎ.21.ಬಿ.9984 ನೇದರಲ್ಲಿ ಬಾಡಿಗೆ ಮಾಡಿಕೊಂಡು ದುಡಿಯುತ್ತೀದ್ದು, ದಿನಾಂಕ:18.06.2021 ರಂದು ಬೆಳಿಗ್ಗೆ 06.30 ಗಂಟೆಯಿಂದ ಮದ್ಯಾಹ್ನ 13.00 ಗಂಟೆಯ ತನಕ ಬಾಡಿಗೆ ಮಾಡಿ ನಂತರ ಆಟೋ ರಿಕ್ಷಾವನ್ನು ಪಿರ್ಯಾದಿದಾರರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ನಂತರ 21.00 ಗಂಟೆಗೆ ಮನೆಯ ಮುಂಭಾಗದಲ್ಲಿರುವ ರಿಕ್ಷಾ ನಿಲ್ಲಿಸುವ ಶೆಡ್ ನಲ್ಲಿ ನಿಲ್ಲಿಸಿ ಕೀಯನ್ನು ಮನೆಯೊಳಗೆ ಇಟ್ಟು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು,  ದಿನಾಂಕ:19.06.2021 ರಂದು ಬೆಳಿಗ್ಗೆ 06.30 ಗಂಟೆಗೆ ಎದ್ದು ಹೊರಗಡೆ ಬಂದಾಗ ಶೆಡ್ ನಲ್ಲಿದ್ದ ಆಟೋ ರಿಕ್ಷಾ ಇಲ್ಲದೆ ಇದ್ದು. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದ್ರಿ ಆಟೋ ರಿಕ್ಷಾದ ಅಂದಾಜು ಮೌಲ್ಯ ರೂ 1.33.000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ  58/2021 ಕಲಂ:379 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 3

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಣ್ಣಪ್ಪ  ಎಮ್‌ ಪ್ರಾಯ 28 ತಂದೆ: ಮಂಜುನಾಥ ವಾಸ: ಜಾಲಗುತ್ತು ಮನೆ , ನಾವರ ಗ್ರಾಮ ಬೆಳ್ತಂಗಡಿ ತಾಲೂಕು   ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 19.06.2021 ರಂದು 10.00 ಸಮಯಕ್ಕೆ ಬೆಳ್ತಂಗಡಿ ತಾಲೂಕು  ಪಿಲ್ಯ ಗ್ರಾಮದ ಪಾಡಿ ಪಿಲ್ಯ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿದಾರರು ಬಾಬ್ತು ಕೆಎ 03 ಎಮ್‌ 4163 ನೇ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ತನ್ನ   ಮುಂದಿನಿಂದ ಹೋಗುತ್ತಿದ್ದ ಮಾರುತಿ 800 ಕಾರನ್ನು ಓವರ್‌ ಟೇಕ್‌ಮಾಡಿ ಹೋದಾಗ ರಸ್ತೆಯಲ್ಲಿದ್ದ ನೀರು ಆಕಸ್ಮಿಕವಾಗಿ ಆರೋಪಿಗಳ ಕಾರಿಗೆ ಹಾರಿದ್ದು ಇದರಿಂದ  ಕೋಪಗೊಂಡ ಮಾರುತಿ 800 ಕಾರಿನ ಚಾಲಕ  ಪಿರ್ಯಾದಿದಾರರ ಕಾರನ್ನು ಓವರ್‌ ಟೇಕ್ ಮಾಡಿ ಪಿರ್ಯಾದಿದಾರರ  ಕಾರಿಗೆ ಅಡ್ಡಗಟ್ಟಿ ಕಾರಿನಿಂದ ಇಳಿದು ಬಂದು  ಪಿರ್ಯಾದಿದಾರರನ್ನು  ಉದ್ದೇಶಿಸಿ  ಆರೋಪಿಗಳು ಸಮಾನ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು 1 ನೇ ಆರೋಪಿಯು ಪಿರ್ಯಾದಿದಾರರ ಮೊಬೈಲನ್ನು ರಸ್ತೆಗೆ ಹೊಡೆದು ಜಖಂ ಗೊಳಿಸಿ ಸುಮಾರು 10,000 ರೂ ನಷ್ಟ ಪಡಿಸಿರುವುದಲ್ಲದೇ  ಕಬ್ಬಿಣದ ರಾಡ್‌ನಿಂದ ಹೊಡೆದು 2 ಕೈಗಳ ಬೆರಳಿಗೆ ರಕ್ತಗಾಯಗೊಳಿಸಿದ್ದು  2 ನೇ ಆರೋಪಿಯು ಪಿರ್ಯಾದಿದಾರರ ಎದೆಗೆ ಹಾಗೂ ತಲೆಗೆ ಕೈಯಿಂದ ಹೊಡೆದು ನೋವು ಉಂಟು ಮಾಡಿರುವುದಲ್ಲದೇ  ನೀನು ಯಾರಿಗೆ ಬೇಕಾದರೂ ಹೇಳಿಕೋ ನಿನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಆರೋಪಿಗಳು ಅವರ ಕಾರ್‌  ಕೆಎ02 ಎಮ್‌ 3548 ನೇ ಮಾರುತಿ ಕಾರಿನಲ್ಲಿ ಹೋಗಿರುತ್ತಾರೆ. ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಅಳದಂಗಡಿ ಸರಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಹೋರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 39 -2021 ಕಲಂ: 341,324,,323,504,506,427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಾದಿಕ್ ಬಳಂಜ ಪ್ರಾಯ 32 ವರ್ಷ ತಂದೆ: ಅಬ್ದುಲ್ಲ ವಾಸ: ಬಳಂಜ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 19.06.2021 ರಂದು 11.00 ಸಮಯಕ್ಕೆ ಬೆಳ್ತಂಗಡಿ ತಾಲೂಕು  ಪಿಲ್ಯ ಗ್ರಾಮದ ಪಿಲ್ಯ ಮಾರಿಗುಡಿ  ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿದಾರರು ಬಾಬ್ತು  ಕೆಎ 02 ಎಮ್ 3548 ಕಾರನ್ನು ಚಲಾಯಿಸಿಕೊಂಡು  ಮನೆಗೆ ಹೋಗುತ್ತಿರುವಾಗ ತನ್ನ ಹಿಂದಿನಿಂದ ಬರುತ್ತಿದ್ದ ಆರೋಪಿಯು  ಪಿರ್ಯಾದಿದಾರರ ಕಾರನ್ನು ಓವರ್‌ ಟೇಕ್‌ ಮಾಡುವಾಗ ರಸ್ತೆಯಲ್ಲಿದ್ದ ಮಳೆ ನೀರು ಪಿರ್ಯಾದಿದಾರರ ಕಾರಿಗೆ ಬಿದ್ದಿದ್ದು ಪಿರ್ಯಾದಿದರರು ಹಾರ್ನ್  ಹೊಡೆದಾಗ ಆರೋಪಿಯು ತಾನು ಚಲಾಯಿಸುತ್ತಿದ್ದ  ಕಾರನ್ನು ಪಿರ್ಯಾದಿದಾರರ ಕಾರಿಗೆ ಅಡ್ಡ ನಿಲ್ಲಿಸಿ ಇಳಿದು ಬಂದು ಅವ್ಯಾಚವಾಗಿ ಬೈದಿದ್ದು  ಆ ಸಮಯ ಕಾರಿನಿಂದ ಇಳಿದು ಬಂದ  ಪಿರ್ಯಾದಿದಾರರಿಗೆ ಮತ್ತು  ಸಿರಾಜ್‌ ನನ್ನು ಆರೋಪಿ ದೂಡಿ ಹಾಕಿ ಬಿದ್ದಲ್ಲಿಗೆ ಕಾಲಿನಿಂದ ತುಳಿದು ಕೈಯಿಂದ ಹೊಡೆದಿರುತ್ತಾರೆ. ಅಲ್ಲದೇ ಮುಂದಕ್ಕೆ ಈ ವಿಚಾರದಲ್ಲಿ ನನ್ನ ತಂಟೆಗೆ ಬಂದರೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಸಿ ತಾನು ಬಂದ ಕೆಎ 03 ಎಮ್‌ ಎಮ್‌ 4163 ನೇ ಕಾರಿನಲ್ಲಿ ಹೋಗಿರುತ್ತಾನೆ.  ಪಿರ್ಯಾದಿದಾರರಿಗೆ ಮತ್ತು ಸಿರಾಜ್‌ ರವರಿಗೆ ಆರೋಪಿ ಕಾಲಿನಿಂದ ತುಳಿದು ಕೈಯಿಂದ ಹೊಡೆದಿರುವುದರಿಂದ ಮೈಗೆ ಮತ್ತು ಎದೆಗೆ ನೋವಾಗಿದ್ದು ಅವರಿಬ್ಬರು ಬೆಳ್ತಂಗಡಿಯ ಅಭಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 40 -2021 ಕಲಂ: 341,323,504,506  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೇದಾವತಿ, ಪ್ರಾಯ: 62 ವರ್ಷ, ಗಂಡ: ದಿ|| ಪುರುಷೋತ್ತಮ ವಿಳಾಸ: ಕೊಮ್ಮೆ ಮನೆ, ಕಲ್ಮಕಾರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ  19-06-2021 ರಂದು  ಬೆಳಿಗ್ಗೆ 8-05 ಗಂಟೆಗೆ    ಅವರ ಇಬ್ಬರು ಮಕ್ಕಳೊಂದಿಗೆ ತೋಟಕ್ಕೆ ನಡೆದುಕೊಂಡು ಹೋಗುತ್ತಿರುವಾಗ  ಪಂಚಾಯತ್‌ ಸದಸ್ಯನಾದ  ಅಶ್ವತ್‌ ಯಲದಾಳು ಮತ್ತು ಅವನ ತಂದೆ ಉತ್ತಪ್ಪ ಗೌಡ ಯಲದಾಳು,  ಪ್ರಕಾಶ್‌ ಯಲದಾಳುರವರುಗಳು  ತಡೆದು ನಿಲ್ಲಿಸಿ ಅಶ್ವತ್‌ ಯಲದಾಳು “ನಾನು ಪಂಚಾಯತ್‌  ಸದಸ್ಯ  ಏನು ಬೇಕಾದರು ಮಾಡುತ್ತೇನೆ. ನನಗೆ ಅಧಿಕಾರ ಉಂಟು ಈಗಾಗಲೇ ಪೊಲೀಸ್‌ ದೂರು  ನೀಡಿದ್ದೇನೆ.  ನೀನು ಜಾಗ ಬಿಟ್ಟು ಕೋಡು ಇಲ್ಲದಿದ್ದರೆ ನಿನ್ನನ್ನು ಮತ್ತು ಎರಡು ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ”  ಎಂದು ಹೇಳುತ್ತಾ ದೊಣ್ಣೆಯಿಂದ  ಪಿರ್ಯಾದಿದಾರರಿಗೆ ಮತ್ತು ಮಕ್ಕಳಿಗೂ ಹಲ್ಲೆ ಮಾಡಿರುವುದಾಗಿದೆ.  ಅಲ್ಲದೇ ಪಿರ್ಯಾದಿದಾರರ ದೊಡ್ಡ ಮಗ ಶುಭಕರನಿಗೂ ಹಲ್ಲೆ ಮಾಡಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈಯ್ದಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣಾ ಅ.ಕ್ರ: 37-2021 u/s   Sec  324,341, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ  19.06.2021 ರಂದು ಸಮಯ  ಬೆಳಿಗ್ಗೆ 09.45 ಗಂಟೆಯ ವೇಳೆಗೆ ಬಂಟ್ವಾಳ ತಾಲೂಕು  ಬಿ ಮೂಡ ಗ್ರಾಮದ ಬಿ ಸಿ ರೋಡ್ ನ ಹೆರ್ಮಾನ್ ಕಾಂಪ್ಲೆಕ್ಸ್ ಎಂಬಲ್ಲಿಗೆ ತಲುಪಿದಾಗ ಸದ್ರಿ ಕಾಂಪ್ಲೆಕ್ಸ್ ನ ಟ್ರನ್ಜ್ ಚಪ್ಪಲಿ ಅಂಗಡಿಯನ್ನು ಸರಕಾರಿ ಆದೇಶವನ್ನು ಧಿಕ್ಕರಿಸಿ ಅಂಗಡಿಯನ್ನು ತೆರೆದು ಸಾಮಾಜಿಕ  ಅಂತರವನ್ನು ಕಾಪಾಡದೇ ಸರಕಾರವು ಕೋವಿಡ್ -19 ನಿಯಂತ್ರಣದ ಬಗ್ಗೆ ಹೊರಡಿಸಿದ ಮಾರ್ಗ ಸೂಚಿಯನ್ನು ಪಾಲಿಸದೇ ಉದ್ದೇಶಪೂರ್ವಕವಾಗಿ  ಒಂದಿಬ್ಬರು  ಗಿರಾಕಿಗಳನ್ನು ಸೇರಿಸಿ ವ್ಯಾಪಾರವನ್ನು ಮಾಡುತ್ತಾ ಹಾಗೂ ನಿಯಾಮಾಳಿಯಂತೆ   ಅಂಗಡಿಯನ್ನು ಮುಚ್ಚದೇ  ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದ್ರಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದತನನ್ನು ವಿಚಾರಿಸಿದಾಗ  ಆತನು ತನ್ನ ಹೆಸರು ಶೇಕ್ ಝಹೀರ್ , ಪ್ರಾಯ: 49 ವರ್ಷ, ತಂದೆ: ದಿ, ಶೇಖ್ ಉಸ್ಮಾನ್  , ವಾಸ:  ಪರ್ಲಿಯಾ  ಮನೆ, ಬಂಟ್ವಾಳ ಮೂಡಾ  ಗ್ರಾಮ, ಬಂಟ್ವಾಳ ತಾಲೂಕು ತಿಳಿಸಿದನು. ಸದ್ರಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲಿಕ ಶೇಖ್‌ ಜಹೀರ್ ನು ಜನರನ್ನು ಗುಂಪು ಸೇರಿಸಿಕೊಂಡು ಮನುಷ್ಯರ ಜೀವಕ್ಕೆ ಅಪಾಯಕಾರಿಯಾದ ಕರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಸರಕಾರ ವಿಧಿಸಿದ್ದ ನಿಷೇದಾಜ್ಷೆ ಜ್ಯಾರಿಯಲ್ಲಿರುವುದನ್ನು  ಉಲ್ಲಂಘಿಸಿ ಹಾಗೂ ಮಾರಕ ಸಾಂಕ್ರಮಿಕ ರೋಗವಾದ ಕರೋನಾ ವೈರಸ್ ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡ ಉದ್ದೇಶ ಪೂರ್ವಕವಾಗಿ ನಿಷೇದಾಜ್ಷೆಯನ್ನುಉಲ್ಲಂಘನೆ ಮಾಡಿ ಚಪ್ಪಲಿ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿ ಅಪರಾಧವೆಸಗಿರುವುದಾಗಿದೆ. ಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ/ಕ್ರ 70/2021 ಕಲಂ:  ಕಲಂ 5(1) ಕರ್ನಾಟಕ ಸಾಂಕ್ರಮಿಕ ರೋಗಗಳ  ಆಧ್ಯಾಧೇಶ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ  19.06.2021  ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ 20/2021 ಕಲಂ:  498(ಎ), 506 ಭಾದಂಸಂ ಮತ್ತು ಕಲಂ 3 ಮತ್ತು  4 ವರದಕ್ಷಿಣೆ ನಿಷೇಧ ಕಾಯ್ದೆ 1961ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: ‌1

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ:20-06-2021 ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 20/2021 ಕಲಂ : 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-06-2021 04:13 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080