ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ರಫೀಕ್‌ ಪ್ರಾಯ 42 ವರ್ಷ ತಂದೆ:ಅಬೂಬಕ್ಕರ್ ವಾಸ:ಕೆಲಗಿನ ಪೆಟೆ ,ಬಂಟ್ವಾಳ ಕಸಬ ಗ್ರಾಮ ಬಂಟ್ವಾಳ ತಾಲೂಕು ದ.ಕ ರವರ ಸ್ನೇಹಿತರಾದ ಮೊಹಮ್ಮದ್‌ ಫೈಝಿರವರ ಬಾಬ್ತು ಕೆಎ-70-ಹೆಚ್‌-8170 ನೇ ಮೋಟಾರ್ ಸೈಕಲ್‌ನಲ್ಲಿ ಮೊಹಮ್ಮದ್‌ ಅನ್ಸಾರ್ ರವರು ಸಹಸವಾರರಾಗಿ ಕುಳಿತುಕೊಂಡು ದಿನಾಂಕ:15-08-2022 ರಂದು ಬಂಟ್ವಾಳ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳ ಕಟೆಯಿಂದ ಗಡಿಯಾರ ಕಡೆಗೆ ಹೋಗುತ್ತಿರುವ ಸಮಯ ರಾತ್ರಿ 11.45 ಗಂಟೆಗೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೊಳಿ ಎಂಬಲ್ಲಿ ತಲುಪಿದಾಗ ಮೋಟಾರು ಸೈಕಲ್‌ ಸವಾರ ಎದುರಿನಿಂದ ಬರುತ್ತಿರುವ ವಾಹನಗಳನ್ನು ಕಂಡು ಅಜಾಗರೂಕತೆ ಮತ್ತು ದುಡುಕಿನಿಂದ ಸವಾರಿ ಮಾಡಿದ್ದು. ಮೋಟಾರು ಸೈಕಲ್‌ ಹತೋಟಿ ತಪ್ಪಿ ಸ್ಕೀಡ್‌ ಆಗಿ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಮೊಹಮ್ಮದ್‌ ಅನ್ಸಾರ್‌ರವರ ಎಡ ಕೈಗೆ ರಕ್ತಗಾಯ ಹಾಗೂ ಇತರ ಭಾಗಗಳಿಗೆ ತರಚಿದಗಾಯವಾಗಿರುತ್ತದೆ. ಅಲ್ಲದೇ ಮೊಹಮ್ಮದ್‌ ಫೈಝಿರವರ ಮೈಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಒಂದು ಅಂಬುಲೆನ್ಸನಲ್ಲಿ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಮೊಹಮ್ಮದ್‌ ಅನ್ಸಾರ್‌ರವರನ್ನು ಒಳರೋಗಿಯಾಗಿ ಮೊಹಮ್ಮದ್‌ ಫೈಝಿರವರನ್ನು ಹೊರರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ, ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 131/2022 ಕಲಂ : 279,337  ಬಾಧಂಸಂ       ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್ ಇಫಾಝ್, ಪ್ರಾಯ 22 ವರ್ಷ, ತಂದೆ: ಬಿ ಕೆ ಹಸನಬ್ಬ, ವಾಸ: 6-118ಎ, ಸಂಜಯನಗರ ಮನೆ, ಕೋರ್ಟ್ ರಸ್ತೆ, ಬೆಳ್ತಂಗಡಿ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 18-08-2022 ರಂದು 23:00 ಗಂಟೆಗೆ ಆರೋಪಿ KSRTC ಬಸ್‌ ಚಾಲಕ ಜಾಫರ್‌ ಸಾಬಾ ಮುಲ್ಲಾ ಎಂಬವರು KA-01-F-9343 ನೇ ನೋಂದಣಿ ನಂಬ್ರದ KSRTC ಬಸ್ಸನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಸೀದಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಪಂಜಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EN-5976 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಬಸ್‌ ಅಪಘಾತವಾಗಿ ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಮೊಣಗಂಟಿಗೆ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯ ಮತ್ತು ಎಡಕಾಲಿನ ಪಾದಕ್ಕೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  132/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸೌಮ್ಯ, ಪ್ರಾಯ 32 ವರ್ಷ, ಗಂಡ: ದಿನೇಶ್ ಶೆಟ್ಟಿ, ವಾಸ: ಕುಂಟಲಕಟ್ಟೆ ಮನೆ, ಇಳಂತಿಲ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 18-08-2022 ರಂದು 18:45 ಗಂಟೆಗೆ ಆರೋಪಿ ಪಿಕಪ್‌ ವಾಹನ ಚಾಲಕ ಸಂದೀಪ್‌ ಎನ್‌ ಎಂಬವರು KA-21-b-0172 ನೇ ನೋಂದಣಿ ನಂಬ್ರದ ಪಿಕಪ್ ವಾಹನವನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಹೆಚ್‌.ಎಂ.ಅಡಿಟೋರಿಯಂ ಹಾಲ್‌ ಬಳಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಉಪ್ಪಿನಂಗಡಿ ಕಡೆಯಿಂದ ಇಳಂತಿಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-5401 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಪಿಕಪ್‌ ವಾಹನ ಅಪಘಾತವಾಗಿ ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ತಲೆಗೆ, ಎರಡೂ ಕೈಗಳ ಭುಜಕ್ಕೆ, ಬಲಕೋಲು ಕೈಗೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ಬಲಕಾಲಿನ ಕೋಲು ಕಾಲಿಗೆ ತರಚಿದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  133/2022  ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸೀತಮ್ಮ, ಪ್ರಾಯ: 44 ವರ್ಷ, ಗಂಡ: ದೇವಿದಾಸ್ ಎಂ. ವಾಸ: ಮಾಲ್ದಡ್ಕ ಮನೆ, ಉಜಿರೆ ಗ್ರಾಮ ಬೆಳ್ತಂಗಡಿ ತಾಲೂಕು ರವರು ದ.ಕ.ಜಿ.ಪ.ಹಿ.ಪ್ರಾ ಶಾಲೆ ಚಾರ್ಮಾಡಿ ಬೆಳ್ತಂಗಡಿ ತಾಲೂಕು ಇದರ ಪ್ರಭಾರ ಮುಖ್ಯೋಪಾದ್ಯಾಯರಾಗಿದ್ದು ದಿನಾಂಕ: 17.08.2022 ರಂದು ಸಂಜೆ 4.00 ಗಂಟೆಗೆ ಶಾಲೆ ಮುಗಿಸಿ ಶಾಲೆಯ ಎಲ್ಲಾ ಕೋಣೆಗಳಿಗೆ ಬೀಗ ಹಾಕಿ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದು, ದಿನಾಂಕ: 18.08.2022 ರಂದು ಮದ್ಯಾಹ್ನ ಸುಮಾರು 1.30 ಗಂಟೆಗೆ ಶಾಲೆಯ ಹಳೆಯ ಸಾಮಾಗ್ರಿಗಳನ್ನು ಇಡುವ ಕೋಣೆಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು, ಕೋಣೆಯ ಒಳಗೆ ಇಟ್ಟಿದ್ದ ಹಳೆಯ ಊಟದ ಸ್ಟೀಲ್ ತಟ್ಟೆಗಳು ಸುಮಾರು 100, ಗುಂಡೆಸೆತದ ಕಲ್ಲುಗಳು-2, ಲೇ ಜಿಮ್ಸ್ ಗಳು 40, ಹಳೆಯ ಪಾತ್ರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಹಳೆಯ ಸಾಮಾಗ್ರಿಗಳ ಅಂದಾಜು ಮೌಲ್ಯ ರೂ 5,000/- ಆಗಬಹುದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ .ಕ್ರ 57-2022  ಕಲಂ: 457, 380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-08-2022 10:14 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080