ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಜಿತೇಂದ್ರ ಪಿ ಅರ್ (43) ತಂದೆ:ಪಿ ಎನ್ ರವಿರಾಜ್ , ವಾಸ: ಪರಪ್ಪು ಮನೆ, ಕಳೆಂಜ ಗ್ರಾಮ , ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 19-09-2021 ರಂದು ತನ್ನ ಬಾಬ್ತು ಕೆಎ 21 ಜಡ್ 3065 ನೇ   ಕ್ರೆಟ್ಟಾ ಕಾರಿನಲ್ಲಿ   ಗೆಳೆಯ ನವೀನ್ ರೊಂದಿಗೆ  ನಿಡ್ಲೆಯಿಂದ ಉಡುಪಿಗೆ ಹೋಗುತ್ತಾ ಸಂಜೆ ಸುಮಾರು 3.45 ಗಂಟೆಗೆ ಕಾರ್ಕಳ -ಗುರುವಾಯನಕೆರೆ ಹೆದ್ದಾರಿಯ  ಬೆಳ್ತಂಗಡಿ ತಾಲೂಕು ಸುಲ್ಕೇರಿ ಗ್ರಾಮದ ಜಂತಿಗೋಲಿ ಎಂಬಲ್ಲಿಗೆ ತಲುಪುವಾಗ್ಗೆ ಪಿರ್ಯಾದಿದಾರರ  ಎದುರಿನಿಂದ ಅಂದರೆ ನಾರಾವಿ ಕಡೆಯಿಂದ ಕಾರೋಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು  ಪರಿಣಾಮವಾಗಿ ಎರಡು ಕಾರು ರಸ್ತೆಯ ಬದಿಗೆ ಬಿದ್ದಿದ್ದು  ಪಿರ್ಯಾದಿದಾರರ ಎಡ ಹಣೆಗೆ ರಕ್ತಗಾಯ,ಎದೆಗೆ ಮತ್ತು  ಎಡಭುಜಕ್ಕೆ ಗುದ್ದಿದ ಗಾಯವಾಗಿದ್ದು ,ನವೀನನಿಗೆ ಮೊಣಗಂಟಿಗೆ ರಕ್ತಗಾಯ,ಎದೆಗೆ ಗುದ್ದಿದ  ಗಾಯವಾಗಿದ್ದು ,ಡಿಕ್ಕಿಹೊಡೆದ ಕಾರು  ಕೆಎ 02 ಜಡ್ 6570  ನೇ ಹೊಂಡಾ ಎಸೆಂಟ್ ಆಗಿದ್ದು ಅದರೊಳಗೆ ಇದ್ದ ಸುಮಾರು 5-6 ಪ್ರಯಾಣಿಕರಿಗೆ ಗಾಯವಾಗಿದ್ದು  ಅವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಲ್ಲಿಂದ ಕಳುಹಿಸಿಕೊಡಲಾಗಿದ್ದು  ಅವರ ಹೆಸರು ವಿಳಾಸ ತಿಳಿದಿರುವುದಿಲ್ಲ, ನವೀನನ್ನು ಚಿಕಿತ್ಸೆಯ ಹರೀಶ್ ರವರು ಅವರ ಬಾಬ್ತು ಕಾರಿನಲ್ಲಿ ಬೆನಕ ಆಸ್ಪತ್ರಗೆ ಕಳುಹಿಸಿಕೊಡಲಾಗಿದೆ.ಅಪಘಾತದಿಂದ  ಎರಡು ವಾಹನಗಳು ಜಖಂ ಗೊಂಡಿರುತ್ತದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 58-2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಾಸಿರುದ್ದೀನ್ ಪ್ರಾಯ 42 ವರ್ಷ ತಂದೆ: ಅಬ್ದುಲ್ ಖಾದರ್ ವಾಸ: ಕುಂಬ್ರ ಮನೆ, ಮತ್ತು ಅಂಚೆ ಒಳಮೊಗ್ರು ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 17.09.2021 ರಂದು ಮಧ್ಯಾಹ್ನ 1.00 ಗಂಟೆಗೆ ಪತ್ನಿಯ ಅಕ್ಕನ ಮಗನಾದ ಇಬ್ರಾಹಿಂ ಜಾವೇದ್ (14 ವರ್ಷ) ರವರೊಂದಿಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊಗರ್ಪಣೆ ಎಂಬಲ್ಲಿ ಮಸೀದಿಗೆ ಪ್ರಾರ್ಥನೆಗೆಂದು ಹೋಗಲು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎಡ ಬದಿ ರಸ್ತೆ ದಾಟಲು ರಸ್ತೆಯ ಬದಿ ನಿಂತಿದ್ದ ಸಮಯ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ನಂಬ್ರ ಆಲ್ಟೋ ಕಾರು ನಂಬ್ರ ಕೆಎ-05-ಎಂಎ-7344 ನೇದನ್ನು ಅದರ ಚಾಲಕ ಪ್ರಕಾಶ್ ಬಂಗಲೆಗುಡ್ಡೆ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಜೊತೆ ರಸ್ತೆ ಬದಿ ನಿಂತಿದ್ದ ಇಬ್ರಾಹಿಂ ಜಾವೆದ್ಗೆ ಡಿಕ್ಕಿ ಹೊಡುದರಿಂದ ಆತನು ರಸ್ತೆಗೆ ಬಿದ್ದವನ್ನು ಪಿರ್ಯಾದಿದಾರರು ಮತ್ತು ಇತರರು ಎಬ್ಬಿಸಿ ಉಪಚರಿಸಿ ನೋಡಲಾಗಿ ಇಬ್ರಾಹಿಂ ಜಾವೇದ್ ನ ತಲೆಯ ಮುಂಭಾಗ ಬಲ ಕೈಗೆ, ಬಲ ಭುಜಕ್ಕೆ, ಎಡ ಕೈ ಕೋಲು ಕೈಗೆ, ಮಣಿಗಂಟಿಗೆ, ಬಲಕಾಲು ಕೋಲು ಕಾಲಿಗೆ, ಹೊಟ್ಟೆ ಹಾಗೂ ಬೆನ್ನಿಗೆ ರಕ್ತಗಾಯವಾಗಿದ್ದು ಕೂಡಲೇ ಅಟೋರಿಕ್ಷಾದಲ್ಲಿ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಕೆವಿಜಿ ಆಸ್ಪತ್ರಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ, ದಿನಾಂಕ 18.09.2021 ರಂದು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆ  ಅ.ಕ್ರ 72/21 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ  ಅಭಿಷೇಕ್ ಪಿ (28) ತಂದೆ: ಶಿವರಾಮ್ ಪಿ ವಾಸ: ಪೆರಡಾನೆ ಮನೆ, ಬೇಳ ಪೋಸ್ಟ್ ಮತ್ತು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 18.09.2021 ರಂದು ತಮ್ಮ ಕುಟುಂಬ ಸಮೇತರಾಗಿ ತಮ್ಮ ಬಾಬ್ತು ಕಾರಿನಲ್ಲಿ ಸಂಪಾಜೆಯಿಂದ ಮಂಗಳೂರು ಕಡೆಗೆ ಹೋಗುವರೇ, ಸಮಯ ಸುಮಾರು 17:15  ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪೈಚಾರು ಹೆಚ್ ಪಿ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ, ಎದುರಿನಲ್ಲಿ ಪಿರ್ಯಾದುದಾರರ ತಮ್ಮ ಆದರ್ಶ ರಾಮ್ ಎಂಬಾತನು ತನ್ನ ಬಾಬ್ತು ಬೈಕ್ ನಂಬ್ರ ಕೆಎ 53 ಇಎಸ್ 3856 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಆರೋಪಿ ಕೆಎ 21 ಎಕ್ಸ್ 8491 ನೇದರ ಸವಾರ ಬಡುವ ಕುಂಞ ರವರು ತನ್ನ ಬಾಬ್ತು ಸ್ಕೂಟರ್ ನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಪೆಟ್ರೋಲ್ ಪಂಪ್ ನಿಂದ ಒಮ್ಮೆಲೆ ಮುಖ್ಯ ರಸ್ತೆಗೆ ಯಾವುದೇ ಸೂಚನೆ ನೀಡದೆ ಸವಾರಿ ಮಾಡಿಕೊಂಡು ಬಂದು ಆದರ್ಶರವರು ಸವಾರಿ ಮಾಡುತ್ತಿದ್ದ, ಬೈಕ್  ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಆದರ್ಶ ರಾಮ್ ಎಂಬಾತನು ಬೈಕ್  ಸಮೇತ ರಸ್ತೆಗೆ ಬಿದ್ದಿದ್ದು, ಆತನನ್ನು  ಪಿರ್ಯಾದುದಾರರು ಕಾರಿನಿಂದ ಇಳಿದು ಹೋಗಿ ಉಪಚರಿಸಿ ನೋಡಲಾಗಿ ಎಡಕಾಲಿಗೆ ರಕ್ತಗಾಯವಾದನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆದರ್ಶ ರಾಮ್ ನನ್ನು ಯೆನಾಪೋಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆ  ಅ.ಕ್ರ 73/21 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪಿರ್ಯಾದಿದಾರರಾದ ಅರುಣ್ ಪ್ರಕಾಶ್ ಕ್ರಾಸ್ತಾ ಪ್ರಾಯ 33 ವರ್ಷ ತಂದೆ: ಅಂಟೋನಿ ಕ್ರಾಸ್ತಾ ವಾಸ ದುಗ್ಗಲಡ್ಕ ಮನೆ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಅವರ ಚಿಕ್ಕಪ್ಪ ಎಡ್ವರ್ಡ್ ಕ್ರಾಸ್ತಾ  ರವರು ವಿಪರೀತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು, ದಿನಾಂಕ 19.09.2021 ರಂದು ಬೆಳಿಗ್ಗೆ 07.00 ಗಂಟೆ ಸಮಯಕ್ಕೆ ಮನೆಯಿಂದ ದುಗ್ಗಲ್ಲಡ್ಕ ಪೇಟೆಗೆ ಹೋಗಿದ್ದು ಮಧ್ಯಾಹ್ಬ ಸಮಯ ಸುಮಾರು 12.00 ಗಂಟೆಗೆ ಎಡ್ವರ್ಡ್ ರವರೊಂದಿಗೆ ಕೆಲಸ ಮಾಡುತ್ತಿರುವ ಕೃಷ್ಣಪ್ಪ ಗೌಡರವರ ಬಂದು ಪಿರ್ಯಾದಿದಾರರಿಗೆ ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ಕೊಳಂಜಿಕೋಡಿ ಮೋರಿಯ ಕೆಳಗೆ ರಸ್ತೆಯ ಬದಿ ನೀಡಿರಿನಲ್ಲಿ ಎಡ್ವರ್ಡ್ ಕವುಚಿ ಬಿದ್ದ ಸ್ಥಿತಿಯಲ್ಲಿ ಇದ್ದು ಮೃತಪಟ್ಟಿರುವುದಾಗಿ ಹೇಳಿದಂತೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಚಿಕ್ಕಪ್ಪ ಎಡ್ವರ್ಡ್ ರವರ ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿ ಇದ್ದು, ಚಿಕ್ಕಪ್ಪ ಚಿಕ್ಕಪ್ಪ ಎಡ್ವರ್ಡ್ ರವರು ಬೆಳಿಗ್ಗೆ 09.00 ಗಂಟೆಯಿಂದ 11.00 ಗಂಟೆಯ ಮಧ್ಯಾವಧಿಯಲ್ಲಿ ರಸ್ತೆಯ ಬದಿಯ ಮೋರಿಯಲ್ಲಿ ಕುಳಿತುಕೊಂಡಿರುವ ಸಮಯ ಆಕಸ್ಮಿಕವಾಗಿ ಕೊಳಂಜಿಕೋಡಿ ತೋಡಿಗೆ ಬಿದ್ದ ಪರಿಣಾಮ ನೀರಿನಿಂದ ಏಳಲಾಗದೇ ಉಸಿರುಗಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆ  ಯುಡಿಅರ್  ನಂಬ್ರ 39/21 ಕಲಂ 174 ಸಿಅರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-09-2021 11:06 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080