ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಯಾನಂದ, ಪ್ರಾಯ: 45 ವರ್ಷ ತಂದೆ: ತ್ಯಾಂಪು ಬೆಳ್ಚಡ , ವಾಸ: ಗೋವಿಂದ ತೋಟ ಮನೆ, ಕೊಡ್ಮಾಣ್ ಅಂಚೆ, ಪುದು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 17-09-2022 ರಂದು ಕೆಲಸ ಮುಗಿಸಿ ಮನೆಗೆ ಹೋಗಲು ಪರಿಚಯದ ಸತ್ಯರಾಜ್ ಎಂಬವರ KA-19-AB-1956 ನೇ ಆಟೋರಿಕ್ಷಾದಲ್ಲಿ ಬಂಟ್ವಾಳ ತಾಲೂಕು ಪುದು ಗ್ರಾಮದ ಕಡೆಗೋಳಿ ಆಟೋರಿಕ್ಷಾ ನಿಲ್ದಾಣದಲ್ಲಿ ಆಟೋರಿಕ್ಷಾವನ್ನು ಹತ್ತಿ ಕುಳಿತುಕೊಳ್ಳುವ ಮೊದಲೇ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾ ನಿಲ್ದಾಣದ ಕಂಬಕ್ಕೆ ಪಿರ್ಯಾದಿದಾರರ ಎಡಕಾಲು ಗುದ್ದಿ  ಎಡಕಾಲು ಮೊಣಗಂಟಿಗೆ ಗುದ್ದಿದ ನೋವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 109/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೋಲಿಸ್ ಉಪನಿರೀಕ್ಷಕರು ಬೆಳ್ಳಾರೆ ಪೊಲೀಸ್ ಠಾಣೆ ರವರು ದಿನಾಂಕ 19-09-2022 ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಬೊಟ್ಟತ್ತಾರು ಬಳಿಯ ಸಾರ್ವಜನಿಕ ಸ್ಥಳವಾದ ಅಣ್ಣು ಎಂಬುವರ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವಿಸಲು ಅವಕಾಶ ನೀಡುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸ್ಥಳಕ್ಕೆ ದಾಳಿಮಾಡಿ ಮಧ್ಯ ಸೇವಿಸುತ್ತಿದ್ದ ಆರೋಪಿತರಾದ ಹುಕ್ರಪ್ಪ, ಪ್ರಾಯ :40 ವರ್ಷ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವಿಸಲು ಅವಕಾಶ ಮಾಡಿದ ಅಂಗಡಿ ಮಾಲೀಕ ಅಣ್ಣು, ಎಂಬುವರನ್ನು ಹಾಗೂ ಸೇವಿಸಿ ಉಳಿದ ಮದ್ಯವನ್ನು ವಶಕ್ಕೆ ಪಡೆದುಕೊಂಡು ಬೆಳ್ಳಾರೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 74/2022 15(ಎ )ಜೊತೆಗೆ 32(3)ಕೆ. ಇ ಆಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಿನಿತಾ ಪ್ರಾಯ 38 ವರ್ಷ ಗಂಡ: ಕೃಷ್ಣ ನಾಯರ್ ವಾಸ: ಪರಿವಾರಕಾನ ಮನೆ, ಅರಮಬೂರು ಪೋಸ್ಟ್ ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ರವರ ತಂದೆ ಶಿವರಾಜ ಪ್ರಾಯ: 75 ವರ್ಷ, ತಂದೆ: ಶಂಕರನ್‌ ನಾಯರ್‌ ರವರು ಕಳೆದ ಸುಮಾರು 15 ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆ, ಬಿಪಿ. ಶುಗರ್ ಖಾಯಿಲೆಗಳಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಗುಣಮುಖವಾಗದೇ ಇದ್ದು, ತಮಗಿದ್ದ ಖಾಯಿಲೆಯಿಂದ ಬಳಲಿ ಬೇಗ ಸಾಯಬೇಕು ಎಂಬುದಾಗಿ ಆಗಾಗ ಮನೆಯಲ್ಲಿ ಹೇಳಿ ಕೊಂಡಿದ್ದು, ದಿನಾಂಕ 19.09.2022 ರಂದು ಬೆಳಿಗ್ಗೆ 11.00 ಗಂಟೆಗೆ  ಪಿರ್ಯಾದಿದಾರರು ಎಂದಿನಂತೆ  ಮನೆಯಿಂದ ಸುಳ್ಯ ರಥಬೀದಿಯಲ್ಲಿರುವ ತಮ್ಮ ಬಾಬ್ತು ಕೃಷ್ಣ ವೈಂಡಿಂಗ್ ಶಾಪ್‌ಗೆ ಬಂದಿದ್ದು, ಮಧ್ಯಾಹ್ನ 2.00 ಗಂಟೆಗೆ ಊಟಕ್ಕೆಂದು ವಾಪಾಸು ಮನೆಗೆ ಬಂದಾಗ ಮನೆಯಲ್ಲಿ ತಂದೆ ಶಿವರಾಜ ರವರು ಕಾಣಿಸದೇ ಇದ್ದು ಅವರನ್ನು  ಹುಡುಕಿಕೊಂಡು ಮನೆಯ ಪಕ್ಕದಲ್ಲಿರುವ ಹಳೆ ಮನೆಗೆ ಹೋದಾಗ ತಂದೆ ಶಿವರಾಜ ರವರು ಹಳೆ ಮನೆಯ ಒಳಗಡೆ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರ ತಂದೆ ಶಿವರಾಜರವರು ತಮಗಿದ್ದ ಖಾಯಿಲೆಯಿಂದ ಬೇಸತ್ತು ಜೀವನದಲ್ಲಿ ಮನನೊಂದು ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 41/22 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-09-2022 10:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080