ಅಪಘಾತ ಪ್ರಕರಣ: ೦4
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ತೀರ್ಥಗೌಡ ಎಂ ಬಿ (37) ಚಾಲಕ/ನಿರವಾಹಕ ಬ್ಯಾಡ್ಜ ನಂಬ್ರ 1368/10521 ಕೆಎಸ್ಆರ್ಟಿಸಿ ಪುತ್ತೂರು ವಿಭಾಗ ರವರು ಕೆಎಸ್ಆರ್ಟಿಸಿ ಬಸ್ಸು ನಂಬ್ರ ಕೆಎ-21-ಎಫ್-0077ನೇದ ಚಾಲಕರಾಗಿ ದಿನಾಂಕ:18-11-2021 ರಂದು ಬಸ್ಸನ್ನು ಚಲಾಯಿಸುತ್ತಾ ಅನಂತಾಡಿಗೆ ಹೋಗಿ ವಾಪಾಸು ಕೊಡಾಜೆ ಕಡೆಗೆ ಬರುತ್ತಿರುವಾಗ ಕರಿಂಕ ಎಂಬಲ್ಲಿಗೆ ಬಸ್ಸು ತಲುಪಿದಾಗ ಕೊಡಾಜೆ ಕಡೆಯಿಂದ ಕೆಎ-20-ಕ್ಯೂ-5546ನೇ ಸುಜುಕಿ ಮ್ಯಾಕ್ಸ 100 ಬೈಕನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಸ್ಕೀಡ್ ಆಗಿ ಬಸ್ಸಿನ ಡೀಸೆಲ್ ಟ್ಯಾಂಕ್ ಬಳಿ ಡಿಕ್ಕಿ ಹೊಡೆಯಿತು. ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನ ಹಿಂಬದಿ ಸವಾರರಾಗಿ ಕುಳಿತ್ತಿದ್ದ ನವೀನ್ ಎಂಬವರಿಗೆ ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 149/2021 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ.ಬಿ. ಅಬ್ದುಲ್ ರಝಾಕ್ ( 51 ವರ್ಷ), ತಂದೆ: ದಿ|| ಕೆ ಇಬ್ರಾಹಿಂ, ವಾಸ: ಬೊಟ್ಟು ಮನೆ, ಕೆಬಿಎಸ್, ಜೋಕಟ್ಟೆ ಅಂಚೆ, ತೋಕೂರು ಗ್ರಾಮ, ಮಂಗಳೂರು ತಾಲೂಕು ರರು ನೀಡಿದ ದೂರಿನಂತೆ ದಿನಾಂಕ 18-11-2021 ರಂದು 16-45 ಗಂಟೆಗೆ ಆರೋಪಿ ಪಿಕಪ್ ವಾಹನ ಚಾಲಕ ನವೀನ್ ಕೆ ಎಂಬವರು KA-19-B-8542 ನೇ ನೋಂದಣಿ ನಂಬ್ರದ ಪಿಕಪ್ ವಾಹನವನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಹಾಗೂ ಅವರ ಅಕ್ಕಂದಿರಾದ ಆಯಿಷಾ ಮತ್ತು ಸುಮಯ್ಯ ರವರು ಪ್ರಯಾಣಿಕರಾಗಿ, ಅಣ್ಣ ನೌಷಾದ್ ರವರು ಚಾಲಕರಾಗಿ ಉಪ್ಪಿನಂಗಡಿ ಕಡೆಯಿಂದ ಆದರ್ಶನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-9637 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಪಿರ್ಯಾದುದಾರರಿಗೆ ಹಣೆಗೆ, ಎರಡು ಕಾಲಿಗೆ ಗುದ್ದಿದ ಗಾಯ, ಸುಮಯ್ಯರವರಿಗೆ ಹಣೆ ಮತ್ತು ತಲೆಗೆ ಗುದ್ದಿದ ಗಾಯ ಮತ್ತು ಆಯಿಷಾರವರಿಗೆ ಎದೆಗೆ, ಬಲಕೈಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳಿಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 146/2021 ಕಲಂ: 279 ,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚನಿಯಪ್ಪ ಎಂ. ಪ್ರಾಯ: 50 ವರ್ಷ, ತಂದೆ: ದಿ| ಚೋಮ, ವಾಸ: ಮಣಿಯೂರು ಮನೆ, ಅಡುರು ಗ್ರಾಮ, ಕಾದರಗೋಡು ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ರವರು ದಿನಾಂಕ: 18.11.2021 ರಂದು ಪತ್ನಿ ಭಾಗಿಯವರನ್ನು ಜೊತೆಯಲ್ಲಿ ಸಹಸವಾರನಾಗಿ ಕುಳ್ಳಿರಿಸಿಕೊಂಡು ಸುಬ್ರಹ್ಮಣ್ಯಕ್ಕೆ ಕೆಎಲ್-14-ಟಿ-9470 ನೇ ಸ್ಕೂಟರ್ನಲ್ಲಿ ಸವಾರಿ ಮಾಡಿಕೊಂಡು ಕಾವು-ಪಳ್ಳತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸುತ್ತಿರುವ ಸಮಯ ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ಎಂಬಲ್ಲಿಗೆ ತಲುಪಿದಾಗ, ಕಾವು ಕಡೆಯಿಂದ ಅಟೋರಿಕ್ಷಾವೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದು ರಿಕ್ಷಾವನ್ನು ನಿಲ್ಲಿಸದೇ ಹೋಗಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಫಿರ್ಯಾದಿದಾರರು ರಸ್ತೆಯ ಬಲಬದಿಗೆ ಬಿದ್ದಿದ್ದು, ಫಿರ್ಯಾದಿಯ ಪತ್ನಿ ರಸ್ತೆಯ ಎಡಭಾಗಕ್ಕೆ ಬಿದ್ದಿದ್ದು, ನಂತರ ಹಿಂಬದಿಯಿಂದ ಬರುತ್ತಿದ್ದ ಚಾಲಕರೊಬ್ಬರು 108 ಆಂಬ್ಯುಲೆನ್ಸ್ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಕ್ರ: 103/2021 ಕಲo: 279, 337, 338 ಐಪಿಸಿ. ಕಲಂ: 134(ಎ) & (ಬಿ) ಐಎಂವಿ ಕಾಯ್ದೆ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಶರೀಫ್ (36) ತಂದೆ: ಕೆ ಹೆಚ್ ಅಬ್ದುಲ್ ಖಾದರ್ ವಾಸ: ಜಟ್ಟಿಪಳ್ಳ ಮನೆ, ಸುಳ್ಯ ಕಸಬ ಗ್ರಾಮ ರವರು ದಿನಾಂಕ 18.11.2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ, ಅಂಚೆ ಕಛೇರಿಯ ಬಳಿಯಲ್ಲಿರುವ ಬಿ.ಎಂ..ಎ ತರಕಾರಿ ಅಂಗಡಿಯ ಎದುರು ನಿಂತುಕೊಂಡಿರುವ ಸಮಯ ಅದೇ ಸಮಯದಲ್ಲಿ ಹೋಲ್ ಸೇಲ್ ಗ್ರಾಹಕ ವಿಲ್ಸನ್ ಪೌಲ್ ಎಂಬುವವರು ಸಹ ನಿಂತುಕೊಂಡಿದ್ದರುವ ಸಮಯ ಕೆಎ 21 ಜೆ 2618 ನೇ ಮೋಟಾರ್ ಸೈಕಲ್ ಸವಾರ ರವಿ ಎಂಬಾತನು ಸಹಸವಾರ ಶಶಿಕುಮಾರ್ ಎಂಬಾತನು ಕುಳ್ಳಿರಿಸಿಕೊಂಡು ಸುಳ್ಯದ ಶ್ರೀರಾಮ್ ಪೇಟೆಯಿಂದ ಜ್ಯೋತಿ ಸರ್ಕಲ್ ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ವಿಲ್ಸನ್ ರವರಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ವಿಲ್ಸನ್ ರವರು ರಸ್ತೆಗೆ ಬಿದ್ದು, ಎಡಕಣ್ಣಿಗೆ ಹಾಗೂ ಬಲಕಾಲಿಗೆ,ಎದೆಗೆ ಗಾಯವಾದವರನ್ನು ಪಿರ್ಯಾದುದಾರರು ಮತ್ತು ಅಲೇ ಇದ್ದ ಸ್ಥಳೀಯರು ಉಪಚರಿಸಿ ಸುಳ್ಯ ಸರ್ಕಾರಿ ಕರೆದುಕೊಂಡು ಹೋಗಿ ನಂತರ ವೈದ್ಯರ ಸಲಹೆ ಮೇರೆಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಮತ್ತು ಅಲ್ಲಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣೆ ನಂಬ್ರ 87/20212 ಕಲಂ 279.337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಶಾಂತ (58 ವರ್ಷ) ಗಂಡ: ಕಾಂತಪ್ಪ ವಾಸ: ಅಲೆಪ್ಪಾಡಿ ಮನೆ, ಕೊಡಂಬೆಟ್ಟು ಗ್ರಾಮ ಬಂಟ್ವಾಳ ತಾಲೂಕು ರವರಿಗೂ ಆರೋಪಿಗಳ ಪೈಕಿ ಶ್ರೀಮತಿ ಕಲ್ಯಾಣಿ ಪುಜಾರಿ ಎಂಬವರಿಗೂ ದಾರಿಯ ವಿಚಾರದಲ್ಲಿ ಈ ಹಿಂದಿನಿಂದಲೂ ತಕರಾರು ಇದ್ದು, ಇದೇ ವಿಚಾರದಲ್ಲಿ ದಿನಾಂಕ: 18.11.2021 ರಂದು ಮದ್ಯಾಹ್ನ 13.45 ಗಂಟೆಗೆ ಬಂಟ್ವಾಳ ತಾಲೂಕು ಕೊಡಂಬೆಟ್ಟು ಗ್ರಾಮದ ಅಲೆಪ್ಪಾಡಿ ಎಂಬಲ್ಲಿ ಆರೋಪಿಗಳಾದ 1) ಶ್ರೀಮತಿ ಜಾನಕಿ 2) ಕಲ್ಯಾಣಿ 3) ಹರೀಶ್ 4) ನವೀನ್ 5)ಜನಾರ್ಧನ ಚಂಡ್ತಿಮಾರ್ 6) ಶೇಖರ ಕುಕ್ಕೇಡಿ 7) ಉಮೇಶ್ ಕೃಷ್ಣಾಪುರ 8) ಲೋಕೇಶ್ ದೋಟ 9) ಉಮಾನಾಥ್ ದೋಟ 10) ವೀರೇಂಧ್ರ ದೋಟ 11) ಅಪ್ಪಿ 12) ಜಯಂತಿ 13) ವಿಶ್ವನಾಥ 14) ಉದಯ ಕುಂಡೋಳಿ 15) ಚೆಲುವಯ್ಯ 16) ಗಂಗಯ್ಯ ಎಡ್ತೂರು 17) ಸುದರ್ಶನ 18) ಸಂತೋಷ್ 19) ಅಶ್ವಿನಿ ಲೋಬೋ 20) ಕಾಶ್ಮೀರ ಲೋಬೋ ರವರು ತಕರಾರು ಇರುವ ಸ್ಥಳದಲ್ಲಿ ದಾರಿ ಮಾಡುವರೇ ಜೆಸಿಬಿಯೊಂದಿಗೆ ಬಂದು, ಬೇಲಿಯನ್ನು ಕಿತ್ತು ಎಸೆದು ದಾರಿ ಮಾಡುತ್ತಿರುವಾಗ ಪಿರ್ಯಾಧಿದಾರರು ಆಕ್ಷೇಪಿಸಿದ್ದಕ್ಕೆ ಆರೋಪಿಗಳು ಸಮಾನ ಉದ್ದೇಶಿತರಾಗಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂಧ ಬೈದು ಆರೋಪಿಗಳ ಪೈಕಿ ಜಾನಕಿ ಎಂಬವರು ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿದಾಗ ಪಿರ್ಯಾದಿದಾರರು ನೆಲಕ್ಕೆ ಬಿದ್ದು, ಕಾಲಿಗೆ ತಲೆಗೆ ಗುದ್ದಿದ ಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಪಿರ್ಯಾಧಿಯ ಮಕ್ಕಳಾದ ಪ್ರದೀಪ್ ಮತ್ತು ಗುರುಮೂರ್ತಿ ರವರು ವಾಮದಪದವು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎನಪೋಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 82/2021 ಕಲಂ: 143, 147, 323, 504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ರೇವತಿ. ಪಿ , ಪ್ರಾಯ 50 ವರ್ಷ, ಕೋಂ: ವೆಂಕಪ್ಪ ಗೌಡ, ವಾಸ: ಪೂವಾ ಮನೆ, ಪಣ್ಚಪ್ಪಾಡಿ ಗ್ರಾಮ, ಕಡಬ ತಾಲೂಕು. ರವರ ಗಂಡ ವೆಂಕಪ್ಪ ಗೌಡ ಎಂಬವರ ಹೆಸರಿನಲ್ಲಿರುವ ಜಮೀನಿನಲ್ಲಿ ಜೋರಾಗಿ ಶಬ್ದ ಕೇಳಿಬಂದು ಪಿರ್ಯಾದಿದಾರರು ಅವರ ಗಂಡ ಮತ್ತು ಮಗಳೊಂದಿಗೆ ಅಲ್ಲಿಗೆ ಹೋದಾಗ ಅಲ್ಲಿ ಪಿರ್ಯಾದಿದಾರರ ಗಂಡನ ತಮ್ಮ ರಮೇಶ್ ಗೌಡ ಅವರ ಪತ್ನಿ ಯಶೋದಾ , ಮತ್ತು ಅವರ ಮಕ್ಕಳಾದ ಪ್ರೀತೇಶ ಹಾಗೂ ಮಾನ್ಯ ಮತ್ತು ಪೂವಪ್ಪ ಗೌಡ ಎಂಬವರು ಒಟ್ಟು ಸೇರಿ ಕೆಲಸ ಮಾಡಿಕೊಂಡಿದ್ದು ಅಲ್ಲಿಗೆ ಪಿರ್ಯಾದಿದಾರರು ಮತ್ತು ಇತರರು ಹೋಗುವುದನ್ನು ಕಂಡು ಆರೋಪಿತರೆಲ್ಲರೂ ದೊಣ್ಣೆ ಹಿಡಿದು ಪಿರ್ಯಾದಿದಾರರು ಮತ್ತು ಮನೆಯವರನ್ನು ಓಡಿಸಿಕೊಂಡು ಬಂದು ಅವರ ಪೈಕಿ ಶ್ರೀಮತಿ ಯಶೋದಾರವರು ದೊಣ್ಣೆಯಿಂದ ಪಿರ್ಯಾದಿದಾರರ ಎಡ ಭುಜದ ಮೇಲ್ಬಾಗಕ್ಕೆ ಹೊಡೆದುದಲ್ಲದೇ ಪಿರ್ಯಾದಿದಾರರ ಕೂದಲಿನ ಜುಟ್ಟನ್ನು ಹಿಡಿದೆಳೆದು ನೋವುಂಟು ಮಾಡಿರುತ್ತಾರೆ. ಬಳಿಕ ಪಿರ್ಯಾದಿದಾರರು ಮತ್ತು ಇತರರು ಹೆದರಿ ಮನೆಗೆ ಬಂದಿದ್ದು ನಂತರ ಅರ್ಧ ಗಂಟೆಯ ಬಳಿಕ ಪಿರ್ಯಾದಿದಾರರ ಮೊಬೈಲ್ ಫೋನ್ ಗೆ ಯಾವುದೋ ಅಪರಿಚಿತ ನಂಬರಿನಿಂದ ಯಾರೋ ಕರೆ ಮಾಡಿ ನೀವು ಮನೆಯಿಂದ ಹೊರಗಡೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 61/2021 ಕಲಂ 143, 147, 447 ,324,323, 506, ಜೊತೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಿರೀಶ್ ,ಪ್ರಾಯ:32 ವರ್ಷ ತಂದೆ; ನಾರಯಣ ಪೂಜಾರಿ ವಾಸ; ಮಲ್ಲರ್ ಮಾಡಿ ನೇತ್ರಾವತಿ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ಶ್ರೀ ಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೇಕ್ಸ್ ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ;- 16-11-2021 ರಂದು ರಾತ್ರಿ 08.30 ಗಂಟೆಗೆ ಧರ್ಮಸ್ಥಳ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೇಕ್ಸ್ ಬಳಿ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಅಪರಿಚಿತ ವ್ಯಕ್ತಿ ಪ್ರಾಯ ಸುಮಾರು 35 ರಿಂದ 40 ವರ್ಷದವರು ಅಸೌಖ್ಯದಿಂದ ನರಳಾಡುತ್ತಿದ್ದನ್ನು ಕಂಡು ಕೂಡಲೇ 108 ಆಂಬುಲೆನ್ಸ್ ಗೆ ಕರೆ ಮಾಡಿ ಆತನನ್ನು ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿದ್ದು 108 ಆಂಬುಲೇನ್ಸ್ ನವರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 18/11/2021 ರಂದು ರಾತ್ರಿ 09.33 ಗಂಟೆಗೆ ಮೃತ ಪಟ್ಟದ್ದಾಗಿರುತ್ತದೆ, ಮೃತನು ಯಾವೂದೋ ಖಾಯಿಲೆಯಿಂದ ಬಳಲುತ್ತಿದ್ದವನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟದ್ದಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್ 55/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.