ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹರೀಶ್ ಸಾಲಿಯಾನ್ ಪ್ರಾಯ: 51 ವರ್ಷತಂದೆ: ನೋಣಯ್ಯ  ಪೂಜಾರಿ ವಾಸ: ಕೊಯಿಲಾ ಮನೆ ಕೊಯಿಲಾ ಗ್ರಾಮ ಮತ್ತು ಅಂಚೆ , ಬಂಟ್ವಾಳ ತಾಲೂಕು  ರವರು ದಿನಾಂಕ 18-12-2021 ರಂದು  KA-19-EM-9615 ನೇ ಸ್ಕೂಟರ್ ನಲ್ಲಿ ಸವಾರಿ ಮಾಡಿಕೊಂಡು ಬಿ ಸಿ ರೋಡ್ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಸೊರ್ನಾಡು ಎಂಬಲ್ಲಿಗೆ ತಲುಪಿದಾಗ ಬಂಟ್ವಾಳ ಕಡೆಯಿಂದ KA-19-EG-7796 ಸ್ಕೂಟರ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿದ ಪರಿಣಾಮ ಎರಡೂ ಸ್ಕೂಟರ್ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಹಿಂಬದಿ ಕುತ್ತಿಗೆಗೆ, ಭುಜಕ್ಕೆ ಗುದ್ದಿದ ಗಾಯವಾಗಿರುವುದಲ್ಲದೆ ಬಲಕಾಲಿನ ಹೆಬ್ಬೆರಳಿಗೆ, ಬಲಕಣ್ಣಿನ ಹುಬ್ಬಿನ ಬಳಿ ತರಚಿದ ಗಾಯವಾಗಿರುತ್ತದೆ ಹಾಗೆಯೆ ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರನ ಮುಖಕ್ಕೆ,ತಲೆಗೆ ಗುದ್ದಿದ ಹಾಗೂ ರಕ್ತಗಾಯ,ಮೈ ಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 143/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅತೀಕ, 36 ವರ್ಷ, ಕೋಂ : ಸಮೀರ್, ವಾಸ: ನರ್ಲಡ್ಕ ಕಾಲನಿ, ಎಣ್ಮೂರು ಗ್ರಾಮ, ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 19-12-2021 ರಂದು 08-30 ಗಂಟೆಗೆ ಕಡಬ ತಾಲೂಕು ಎಣ್ಮೂರು ಗ್ರಾಮದ ನರ್ಲಡ್ಕ ಎಂಬಲ್ಲಿ ಕುಂಞಪ್ಪ ನಾಯ್ಕ ಎಂಬವರ ಬಾಬ್ತು ಹಳೆಯ ಶೌಚ ಹಾಗೂ ಸ್ನಾನ ಗೃಹ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಮಾಡುತ್ತಿರುವ ಸಮಯ ಕಟ್ಟಡದ ದಕ್ಷಿಣ ಬದಿಯ ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಿದ ಗೋಡೆ ಕುಸಿದು ಬಿದ್ದು ಅಲ್ಲಿ ಕೆಲಸಮಾಡಿಕೊಂಡಿದ್ದ ಬೀಪಾತುಮ್ಮ, 64ವರ್ಷ, ಕೋಂ ಮೊಹಮ್ಮದ್, ಹಾಗೂ ನೆಬಿಸಾ, 51ವರ್ಷ, ಕೋಂ: ರಶೀದ್ ಖಾನ್ ರವರು ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ  ವೈದ್ಯರು ಪರೀಕ್ಷಿಸಿ ಗಾಯಾಳುಗಳಾದ ನೆಬಿಸಾ ಹಾಗೂ ಬೀಪಾತುಮ್ಮರು ಮೃತಪಟ್ಟಿರುವುದಾಗಿ ಧೃಡಪಡಿಸಿದ್ದು, ಹಳೆ ಕಟ್ಟಡದ ಗೋಡೆಯು ಬಿರುಕು ಉಂಟಾಗಿ ವಾಲಿಕೊಂಡಿದ್ದರೂ, ಮಾಲಕ ಕುಂಞಪ್ಪ ನಾಯ್ಕರು ಯಾವುದೇ ಮುಂಜಾಗರೂಕತಾ ಕ್ರಮ ವಹಿಸದೇ ತೀರಾ ನಿರ್ಲಕ್ಷ್ಯತೆ ವಹಿಸಿ ಕಾರ್ಮಿಕರಿಂದ ಕೆಲಸ ಮಾಡಿಸಿರುವುದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ.C.PÀæ 65/2021 ಕಲಂ : 304(ಎ) ಐಪಿಸಿ.   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಉಮರುಲ್ಲಾ ಫಾರೂಕ್ (21) ತಂದೆ:ಶೇಕುಂಞ ವಾಸ:ಮುರ ಮನೆ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ:18-12-2021 ರಂದು ವಲಾಲು ಬಳಿಯಲ್ಲಿ ಶಾಮಿಯಾನ ಕೆಲಸ ಮುಗಿಸಿ ತನ್ನ ಮನೆಗೆ ಹೋಗುವರೇ ಮುಗೇರಡ್ಕ ನೇತ್ರಾವತಿ ನದಿಯನ್ನು ದಾಟಿ ಅಲ್ಲಿನ ಅಂಗಡಿಯಿಂದ  ಬೀಡಿ ಸಿಗರೇಟು ತೆಗೆದುಕೊಂಡು ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುರ ಮಣ್ಣು ರಸ್ತೆಯಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಸಮಯ ಪಿರ್ಯಾದಿದಾರರ ಹಿಂದಿನಿಂದ ಏಕಾಏಕಿ  ಗುರುತು ಪರಿಚಯವಿಲ್ಲದ ಸುಮಾರು ಎಂಟು ಜನರು ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದದಿಂದ ಬೈದು  ಒಬ್ಬ ವ್ಯಕ್ತಿ ಪಿರ್ಯಾದುದಾರರ ಬೆನ್ನಿಗೆ ಗುದ್ದಿದಾಗ ಪಿರ್ಯಾದುದಾರರು ನನಗೇಕೆ ಹೊಡಿಯುತ್ತೀರಿ ಎಂದು ಕೇಳಿದಾಗ ಅವರುಗಳು ಯಾವುದೇ ಮರು ಉತ್ತರ ನೀಡದೇ ಪುನಃ ಕೈಯಿಂದ ಗುದ್ದಿ ಅಂಗಿಯನ್ನು ಹರಿದು ಹಾಕಿ ನೆಲಕ್ಕೆ ಪಿರ್ಯಾದುದಾರರು ಬಿದ್ದಾಗ ಅವರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದುದಾರರ ಬಲ ಕಾಲಿನ ಮಂಡಿಯ ಕೆಲಭಾಗಕ್ಕೆ ಹೊಡೆದಾಗ ನೋವು ತಡೆಯಲಾರದೇ ಆರೋಪಿಗಳನ್ನು ದೂಡಿ ಪಿರ್ಯಾದುದಾರರು ಮುರ ಕಡೆಗೆ ಓಡುತ್ತಿರುವಾಗ ಅದೇ ರಸ್ತೆಯಲ್ಲಿ ಅಟೋ ರಿಕ್ಷಾ ವೊಂದು ಬರುತ್ತಿದ್ದುದನ್ನು ಕಂಡು ನಿಲ್ಲಿಸಿದಾಗ ಅದು ಪರಿಚಯದ ಮೋಹನ ರವರ ಅಟೋರಿಕ್ಷಾ ವಾಗಿದ್ದು ನನ್ನನ್ನು ಮನೆಗೆ ಬಿಡುವಂತೆ ಪಿರ್ಯಾದುದಾರರು ಹೇಳಿದ್ದಂತೆ ಮನೆಗೆ ಹೋದಾಗ ನೋವು ಅತಿಯಾಗಿದ್ದು  ಪಿರ್ಯಾದುದಾರರನ್ನು ತಂದೆ ತಾಯಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 165/2021 ಕಲಂ:143,147,148,504 323,324 ಜೊತೆಗೆ 149  ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚೈತ್ರೇಸ್ ಕೆ (19) ತಂದೆ:ಕೃಷ್ಣಪ್ಪ ವಾಸ:ಕನಪಾದೆ ಮನೆ, ನಾವೂರು ಗ್ರಾಮ ಬಂಟ್ವಾಳ ತಾಲೂಕು ರವರ ತಂದೆಯವರಾದ ಕೃಷ್ಣಪ್ಪ ಪ್ರಾಯ 40 ವರ್ಷ ತಂದೆ:ದಿ. ತಿಮ್ಮಪ್ಪ ಪೂಜಾರಿಯವರು ದಿನಾಂಕ: 18.12.2021 ರಂದು ಬೆಳಿಗ್ಗೆ 7.00 ಗಂಟೆಗೆ ಮನೆಯಿಂದ ಹೋದವರು ರಾತ್ರಿಯಾದರು ಮನೆಗೆ ಬಾರದೆ ಇದ್ದು ರಾತ್ರಿ ಅವರ ಪೋನ್ ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿದ್ದು ದಿನಾಂಕ:19.12.2021 ರಂದು ಅವರ ಗೆಳೆಯ ಶರೀಫ್ ರವರ ಮೋಬೈಲ್ ಪೋನ್ ಗೆ ವಿಜಯ್ ರವರು ಕರೆಮಾಡಿ ಕೇಳಿದಾಗ ಕೃಷ್ಣಪ್ಪರವರು ಕೃಷ್ಟೀಮಾ ಲಾಡ್ಜ್ ನಲ್ಲಿ ಉಳಿದುಕೊಂಡಿರುತ್ತಾರೆ, ಅವರನ್ನು ಕರೆದುಕೊಂಡು ಬರುತ್ತೆವೆಂದು ತಿಳಿಸಿದ್ದು ಸ್ವಲ್ಪ ಸಮಯದ ನಂತರ ಒಳಗಡೆಯಿಂದ ಚಿಲಕ ಹಾಕಿರುವುದಾಗಿ ತಿಳಿಸಿದಂತೆ ಪಿರ್ಯಾದುದಾರರು ಮತ್ತು ಅವರ ಕೆಲಸಗಾರರು ಮದ್ಯಾಹ್ನ 1.00 ಗಂಟೆಗೆ ಬಂದು ರೂಮ್ ನ ಬಾಗಿಲಿನ ಬೀಗವನ್ನು ಮುರಿದು ನೋಡಲಾಗಿ ಕೊನೆಯ ಒಳಗಡೆ ಬಟ್ಟೆಯ ಸಹಾಯದಿಂದ ಪ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ ತಂದೆಯವರಾದ ಕೃಷ್ಟಪ್ಪ ರವರ ವ್ಯವಹಾರದಿಂದ ನಷ್ಟ ಉಂಟಾಗಿ ಹಲವಾರು ಸಾಲಗಾರರಿಂದ ಸಾಲ ಪಡೆದು ಸಾಲವನ್ನು ಮರು ಪಾವತಿಸಲು ಆಗದೆ ಇದ್ದುದರಿಂದ ದಿನಾಂಕ:18.12.2021 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ:19.12.2021 ರಂದು ಮದ್ಯಾಹ್ನ 1.00 ಗಂಟೆಯ ಮಧ್ಯ ಅಮಲು ಪಧಾರ್ಥ ಸೇವಿಸಿ ಬಿ ಸಿ ರೋಡ್ ನ ಕೃಷ್ಟಿಮಾ ಲಾಡ್ಜನ ರೂಮಿನಲ್ಲಿ ಬಟ್ಟೆಯಿಂದ ಪ್ಯಾನಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 45-2021 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-12-2021 11:12 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080