ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗುರು ಸುಬ್ರಹ್ಮಣ್ಯ ಪ್ರಸಾದ್‌, ಪ್ರಾಯ 20 ವರ್ಷ ತಂದೆ: ದಿ|| ಶ್ರೀ ರಾಮ ಭಟ್‌ ಸಿ, ವಾಸ: ಚಕ್ಕಣಿಕೆ ಮನೆ, ಪುತ್ತಿಗೆ ಗ್ರಾಮ, ಕುಂಬಳೆ, ಮಂಜೇಶ್ವರ ತಾಲೂಕು, ಕೇರಳ ರಾಜ್ಯ ರವರು ನೀಡಿದ ದೂರಿನಂತೆ ದಿನಾಂಕ 19-01-2022 ರಂದು ಆರೋಪಿ  ಸ್ಕೂಟರ್‌ ಸವಾರ ಅಖಿಲ್‌ ಎಂಬವರು KA-21- EB-7532 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಅಶೋಕ ಆಚಾರ್ಯ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು, ದರ್ಬೆ-ಅಶ್ವಿನಿ ಸರ್ಕಲ್‌ ಸಾರ್ವಜನಿಕ ದ್ವಿಪಥ ಡಾಮಾರು ರಸ್ತೆಯಲ್ಲಿ ದರ್ಬೆ ಕಡೆಯಿಂದ ಏಕಮುಖ ರಸ್ತೆಯಾಗಿ ಅಶ್ವಿನಿ ಸರ್ಕಲ್‌ ಕಡೆಗೆ  ಸವಾರರಿಬ್ಬರೂ ಹೆಲ್ಮೆಟ್‌ ಧರಿಸದೇ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ದರ್ಬೆ ಎಂಬಲ್ಲಿ ಫಿಲೋಮಿನಾ ಕಾಲೇಜ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಶಾಶ್ವತಿ ಎ.ಎಸ್‌ ಎಂಬವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಅಶ್ವಿನಿ ಸರ್ಕಲ್‌ ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KL-14-X-7760 ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ, ಎರಡೂ ವಾಹನಗಳ ಸವಾರರು ಮತ್ತು ಸಹಸವಾರರು ವಾಹನಗಳ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ಕೋಲು ಕಾಲಿಗೆ, ಬಲಕೈಯ ಬೆರಳಿಗೆ ರಕ್ತಗಾಯ, ಎಡಭುಜಕ್ಕೆ ಗುದ್ದಿದ ನೋವಾಗಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  11/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶ್ರಫ್‌ ಪಿ (42), ತಂದೆ: ಬೀರಾನ್‌ ಕುಂಞಿ ವಾಸ: ಶಾಂತಿನಗರ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬವರು  ದಿನಾಂಕ: 20.01.2022 ರಂದು ಬೆಳಿಗ್ಗೆ ಬದ್ರುದ್ದೀನ್‌ ಎಂಬವರ ಬಾಬ್ತು ಕಾರು KA21N8922 ನೇದರಲ್ಲಿ  ಸಹಪ್ರಯಾಣಿಕರಾಗಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಪೈಚಾರಿನಿಂದ ಪುತ್ತೂರು ಕಡೆಗೆ ಹೊರಟು ಸಮಯ ಸುಮಾರು 9:15 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಕನಕಮಜಲು ಭಜನಾ ಮಂದಿರದ ಬಳಿ ತಲುಪುತ್ತಿದ್ದಂತೆ  ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಒಂದು ಟೋಯಿಂಗ್‌ ವಾಹನವನ್ನು ಅದರ ಬಾಬ್ತು ಚಾಲಕರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆತನ ತಪ್ಪು ಬದಿಯಾದ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾಧಿದಾರರ ಎರಡೂ ಕಾಲುಗಳ ಮೊಣಗಂಟಿಗೆ, ಬಲಕೈ, ಮಣಿಗಂಟಿಗೆ, ಎದೆಗೆ ಗುದ್ದಿದ ಹಾಗೂ ರಕ್ತಗಾಯ, ಕಾರುಚಾಲಕ ಬದ್ರುದ್ದೀನ್‌ ರವರ ಎಡಭುಜ ಹಾಗೂ ಕುತ್ತಿಗೆ ಬಳಿ ಗಾಯ, ಮುನೀರ್‌ ರವರ ಬಲ ಅಂಗೈ, ಬೆನ್ನಿಗೆ ರಕ್ತಗಾಯವಾಗಿದ್ದು, ಅಪಘಾತ ಸಮಯ ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿ ಹಾಗೂ ಇತರರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ  ದಾಖಲಿಸಿದ್ದು, ಅಪಘಾತ ಪಡಿಸಿದ ಟೋಯಿಂಗ್‌ ವಾಹನದ ನೋಂದಾಣಿ ಸಂಖ್ಯೆ KA19AA7311 ಆಗಿದ್ದು, ಅದರ ಚಾಲಕನ ಹೆಸರು ವೆಂಕಟ್ರಮಣ ಎಂಬುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 11/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲಿಲ್ಲಿ ಬಿ ಎಸ್ ಪ್ರಾಯ 62 ವರ್ಷ ಗಂಡ: ಶ್ರೀಧರ ವಾಸ: ಕುಳತ್ತಬೆಟ್ಟು ಮನೆ ಬಂಟ್ವಾಳ ಮೂಡ ಗ್ರಾಮ ಬಂಟ್ವಾಳ ತಾಲೂಕು ರವರು ಬಿ ಮೂಡ ಗ್ರಾಮದ ಕುಳತ್ತ ಬೆಟ್ಟು ಎಂಬಲ್ಲಿ ವಾಸವಾಗಿದ್ದು, ಕಳೆದ 3-4 ದಿನಗಳಿಂದ ಪಿರ್ಯಾಧಿದಾರರ ಮನೆಯ ಶೌಚಾಲಯದ ಗುಂಡಿ ದುರಸ್ಥಿ ಹಾಗೂ ಇತರೆ ಕೆಲಸ ಮಾಡಲು ಪ್ರಾರಂಭಿಸಿದಾಗ ಪರಿಚಯದ ಸದಾಶಿವ ಬಂಗೇರ ಎಂಬುವರು ದಿನಾಂಕ 17-01-2022 ರಂದು ಪಿ ಬಿ ಹಬೀಬ್ ಎಂಬವರೊಂದಿಗೆ ಸೇರಿ ಪಿರ್ಯಾಧಿದಾರರ ಮನೆಯ ಹತ್ತಿರ ಬಂದು ಸದ್ರಿ ಮನೆಯ ಯಾವುದೇ ದುರಸ್ತಿ ಹಾಗೂ ಇತರೆ ಕಾರ್ಯಗಳನ್ನು ಮಾಡಿದರೆ ಜಾಗ್ರತೆ ಇಲ್ಲಿಂದ ಜಾಗ ಖಾಲಿ ಮಾಡಬೇಕು, ಹಿಂದನ ಜಾಗಕ್ಕೆ ಹೋಗಲು ಹೊಸತಾಗಿ ರಸ್ತೆ ಮಾಡುತ್ತೇವೆ ಎಂದು ಹೇಳುತ್ತಾ ಪಿರ್ಯಾಧಿದಾರರಿಗೆ ಸದ್ರಿ ಜಾಗದಿಂದ ಓಕ್ಕಲೆಬ್ಬಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 08/2022  ಕಲಂ: 447, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕಲಂ: 504 ಬಾಧಂಸಂ  ಮತ್ತು ಕಲಂ: 3(1)(s)The SC & ST (Prevention of Atrocities) Amendment Bill, 2015) ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಮಣ್ಣ ಸಫಲ್ಯ ಪ್ರಾಯ 66 ವರ್ಷ ತಂದೆ ಲೇ.ಗಿರಿಯಪ್ಪ ಸಫಲ್ಯ ವಾಸ ಜೋಗಿಬೆಟ್ಟು ಮನೆ ಶಂಬೂರು ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣ ಬೂಬಾ ಸಫಲ್ಯ ಪ್ರಾಯ 75  ವರ್ಷ ರವರು ವಿವಾಹವಾಗಿದ್ದು ಬೂಬಾ ಸಫಲ್ಯ ರವರ ಹೆಂಡತಿ ಮತ್ತು ಮಕ್ಕಳು  ಸುಮಾರು 25 ವರ್ಷಗಳ ಹಿಂದೆ ಸಂಸಾರದಲ್ಲಿ ಸರಿ ಹೋಗದೇ ಶಂಬೂರು ಗ್ರಾಮದ ಮುಂಡಜೋರ ಎಂಬಲ್ಲಿ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ. ಮೃತ ಬೂಬಾರವರು ಜೋಗಿಬೆಟ್ಟುನಲ್ಲಿರುವ ಸ್ವಂತ ಜಾಗದಲ್ಲಿಯೇ ಟಾರ್ಪಲ್ ನಿಂದ ನಿರ್ಮಿಸಿದ ಶೆಡ್ ನಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದವರಾಗೆ ಕಾಣುತ್ತಿದ್ದು  ಯಾವಾಗಲೋ ಒಮ್ಮೆ ಪಿರ್ಯಾದುದಾರರ ಮನೆಗೆ ಬಂದು ಊಟ ತಿಂಡಿ ಮಾಡಿ ಹೋಗುತ್ತಿದ್ದು ಈ ಸಮಯ ಮನೆಯಲ್ಲಿ ನನಗೆ ಹೆಂಡತಿ ಮಕ್ಕಳು ಯಾರೂ ಬೇಡ ನಾನು ಒಬ್ಬೊಂಟಿಯಾಗಿ ಜೀವನ ಮಾಡುತ್ತೆನೆ ಎಂದು ಹೇಳುತ್ತಿದ್ದವರು ಹೀಗಿರುತ್ತಾ ಕಳೆದ ವರ್ಷ ಡಿಸೆಂಬರ್ 13 ರಂದು ಪಿರ್ಯಾದುದಾರರ ಅಕ್ಕನ ಮಗನ ಮದುವೆಗೆ ಬಿ ಸಿ ರೋಡ್ ಗೆ ಹೋಗಿ ಬಂದಿದ್ದು ನಂತರ ನಂತರ ಡಿಸೆಂಬರ್ 14.ರಂದು ಅಕ್ಕ ಸೇಸಮ್ಮ ರವರ ಮನೆಗೆ ಹೋಗಿ ಬಂದಿದ್ದು ನಂತರ ದಿನದಲ್ಲಿ ಮನೆ ಕಡೆಗೆ ಬಂದಿರುವುದಿಲ್ಲ . ಪಿರ್ಯಾದುದಾರರ ಅಣ್ಣ ಬೂಬಾರವರು ವಾಸ ಮಾಡುತ್ತಿದ್ದು ಮನೆಯ ಪಕ್ಕ ವಿಜಯ ಫರ್ನಾಂಡೀಸ್  ರವರ  ಹಟ್ಟಿ ಇದ್ದು, ದಿನಾಂಕ 19.01.2022 ಸಾಯಾಂಕಾಲ 6.30 ಗಂಟೆಗೆ ವಿಜಯ ಫರ್ನಾಂಡೀಸ್ ರವರು ದನಗಳಿಗೆ ಹುಲ್ಲು ಹಾಕುವ ಸಮಯ ವಾಸನೆ ಬರುತ್ತಿರುವುದಾಗಿ ಪಿರ್ಯಾದುದಾರರ ಮನೆಗೆ ಬಂದು ತಿಳಿಸಿದ್ದು ಕೂಡಲೇ ಪಿರ್ಯಾದುದಾರರು ಮೃತ ಬೂಬಾರವರು ವಾಸಿಸುತ್ತಿದ್ದ ಸ್ಥಳಕ್ಕೆ ಬಂದು ನೋಡಲಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟಾರ್ಪಲ್ ನ ಶೆಡ್ ಬಿದ್ದಿದ್ದು ಎತ್ತಿ ನೋಡಿದ್ದಲ್ಲಿ  ಬೂಬಾ ಸಫಲ್ಯ ರವರು ಮಲಗಿದ್ದಲ್ಲಿಯೇ ಮೃತಪಟ್ಟ ಹಾಗೆ ಕಂಡು ಬಂದಿದ್ದು  ಅವರ ಮೈ ಮೇಲೆ ಹುಳುಗಳು ಹರಿದಾಡುವುದು ಕಂಡು ಬಂದಿರುವುದಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಮದುವೆ ಮತ್ತು ಸಂಕ್ರಮಣ ಕಾರ್ಯಕ್ರಮಕ್ಕೆ ಹೋದವರು ಮನೆಗೆ ಬಂದು ಮಲಗಿದವರು ಅಥವಾ ನಂತರ ದಿನಗಳಲ್ಲಿ ಮಲಗಿದವರು ಅಲ್ಲೆ ಹೊಟ್ಟೆಗೆ ಊಟ ತಿಂಡಿ ಇಲ್ಲದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು ಡಿ ಆರ್ 06-2022 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-01-2022 12:18 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080