ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಿನೇಶ್, ಪ್ರಾಯ 26 ವರ್ಷ, ತಂದೆ:  ಸುಂದರ, ವಾಸ: ನಯನಾಡು ಮನೆ, ಪಿಲಾತ ಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20-03-2021 ರಂದು 08-30 ಗಂಟೆಗೆ ಆರೋಪಿ ಕಾರು ಚಾಲಕ ಮಹಮ್ಮದ್ ತಸೀರ್ ಎಂಬವರು KA-19-MF-4315 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಪೂರ್ತಿ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಸುಧಾಕರ ಎಂಬವರು ಸವಾರರಾಗಿ ಲೋಕಯ್ಯ ಹಾಗೂ ರವೀಂದ್ರರವರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಂಟ್ವಾಳ ಕಡೆಯಿಂದ ಕೊಕ್ಕಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-19-EJ-5266 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ಗೆ ಕಾರು ಅಪಘಾತವಾಗಿ ಸವಾರ ಮತ್ತು ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆ ಬದಿಗೆ ಎಸೆಯಲ್ಪಟ್ಟು, ಸವಾರ ಸುಧಾಕರ ಹಾಗೂ ಸಹಸವಾರರಾದ ಲೋಕಯ್ಯ ಮತ್ತು ರವಿಂದ್ರರವರಿಗೆ ಬಲಕಾಲುಗಳಿಗೆ ಗಂಭೀರ ತರಹದ ಗಾಯಗಳಾಗಿ ಚಿಕಿತ್ಸೆಗೆ ಒಂದು ಅಂಬುಲೆನ್ಸ್ನಲ್ಲಿ ಪ್ರಕಾಶರವರು ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  49/2021 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುಂಡಲಿಕ ತಂದೆ: ಹನುಮಂತಪ್ಪ ನಾಯ್ಕಳ ಪ್ರಾಯ 55 ವರ್ಷ ತಂದೆ: ದಿ ಹನುಮಂತಪ್ಪ ವಾಸ: ಕೋಡಿಹಾಳ ಗ್ರಾಮ ಹುನುಗುಂದ ತಾಲೂಕು ಬಾಗಲಕೋಟೆ ಎಂಬವರ ದೂರಿನಂತೆ ಪಿರ್ಯಾಧಿದಾರರು ಬಿ ಮೂಡ ಗ್ರಾಮ ಬಿ ಸಿ ರೋಡಿನ ಪದ್ಮಾ ಕಾಂಪ್ಲೇಕ್ಸ್ನಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯವನ್ನು ನಡೆಸುತ್ತಿದ್ದು ದಿನಾಂಕ 18-03-2021 ರಂದು ಹಗಲು ಹೊತ್ತಿನಲ್ಲಿ ಓರ್ವ ಗಂಡಸು ಕರೆ ಮಾಡಿ ಮೂಡಬಿದ್ರೆಯಿಂದ ಮಾತನಾಡುತ್ತಿದ್ದು ಹೆಸರು ರಾಘವೇಂದ್ರನೆಂದು ಜ್ಯೋತಿಷ್ಯ ಕೇಳಲು ಬರಬೇಕಿದೆ ರಾತ್ರಿ 7.30 ಗಂಟೆಗೆ ಇರುತ್ತಿರೋ ಎಂದು ವಿಚಾರಿಸಿದ್ದು, ಆಗ ಪಿರ್ಯಾಧಿದಾರರು ಬೆಳಿಗ್ಗೆಯಿಂದ ಸಂಜೆ 5.00 ಗಂಟೆಯ ತನಕ ಎಂದು ಹೇಳಿರುತ್ತಾರೆ. ದಿನಾಂಕ 20-03-2021 ರಂದು ಮಧ್ಯಾಹ್ನ 2 ರಿಂದ 3 ಗಂಟೆಯ ಮಧ್ಯೆ 2 ದಿನಗಳ ಹಿಂದೆ ಕರೆಮಾಡಿದ ರಾಘವೇಂದ್ರ ಎಂದು ಹೆಸರು ಹೇಳಿದ ಓರ್ವ ಗಂಡಸು ಹಾಗೂ ಹೆಂಗಸು ಜ್ಯೋತಿಷ್ಯಾಲಯಕ್ಕೆ ಬಂದು ಕೋಣೆಯಲ್ಲಿರುವ ಎದುರುಗಡೆ ಚೇಯರ್ ನಲ್ಲಿ ಕುಳಿತುಕೊಂಡರು, ಆಗ ಪಿರ್ಯಧಿದಾರರು ಅವರಿಬ್ಬರ ಹೆಸರು, ಹುಟ್ಟಿದ್ದ ದಿನಾಂಕ ಕೇಳಿ ಜ್ಯೋತಿಷ್ಯ ಹೇಳಲು ಪ್ರಾರಂಭಿಸಿದ್ದಾಗ, ಸದ್ರಿ ಗಂಡಸು ಆತನ ಕೈಯಲ್ಲಿರುವ ಚೀಲದೊಳಗಿನಿಂದ ಕಬ್ಬಿಣದ ರಾಡ್ ನ್ನು ತೆಗೆದು ಏಕಾಏಕಿ ಪಿರ್ಯಾಧಿದಾರರ ಬಲಬದಿ ಕೆನ್ನೆ, ಬಲಕಿವಿಯ ಬಳಿ, ತಲೆಗೆ ಯದ್ವ ತದ್ವ ಹೊಡೆದನು ಆಗ ಪಿರ್ಯಾಧಿದಾರರು ಬೊಬ್ಬೆ ಹೊಡೆದು ಕುಸಿದು ಬಿದ್ದರು, ನಂತರ  ಪದ್ಮಾ ಕಾಂಪ್ಲೇಕ್ಸ್ನ  ಮಾನ್ಯೇಜರ್ ಹಾಗೂ ಇತರ ಸಹಾಯದಿಂದ ಚಿಕಿತ್ಸೆಗೆ ಆಸ್ವತ್ರೆಗೆ ದಾಖಲಿಸಲಾಗಿರುತ್ತದೆ. ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 35-2021 ಕಲಂ:  448, 324 ಜೊತೆ ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-03-2021 09:47 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080