ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಯು.ಪಿ.  ಇಬ್ರಾಹೀಂ. ಪ್ರಾಯ: 47 ವರ್ಷ ತಂದೆ: ದಿ|| ಯು.ಪಿ.ಖಾದರ್  ವಾಸ: ಅಡ್ಡೂರು ಸರ್ಕಾರಿ ಶಾಲಾ ಬಳಿ ಮನೆ, ಅಡ್ಡೂರು ಗ್ರಾಮ ಮತ್ತು ಅಂಚೆ,  ಮಂಗಳೂರು ತಾಲೂಕು ರವರು ದಿನಾಂಕ 18-05-2022 ರಂದು ಅಡ್ಡೂರಿನಲ್ಲಿದ್ದ ಸಮಯ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ಸೇತುವೆ ಬಳಿ ಅಪಘಾತವಾದ ಬಗ್ಗೆ ಮಾಹಿತಿ ತಿಳಿದು  ಹೋಗಿ ನೋಡಲಾಗಿ ಉತ್ತರ ಪ್ರದೇಶ ಮೂಲದ ಪತ್ರು ರಾಜ್ಬರ್ ಎಂಬವರು ವಾಹನ ಅಪಘಾತದಿಂದಾಗಿ ತಲೆಗೆ, ಮುಖಕ್ಕೆ ಹಾಗೂ ಬಲಕಾಲಿನ ತೊಡೆಗೆ ತೀರ್ವ ಗಾಯಗೊಂಡು ರಸ್ತೆಯಲ್ಲಿ ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ಚಿಕಿತ್ಸೆಯಲ್ಲಿರುತ್ತಾ ಈ ದಿನ ದಿನಾಂಕ 20.05.2022 ರಂದು ಬೆಳಿಗ್ಗೆ 08:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ. ಅ.ಕ್ರ 55/2022 ಕಲಂ: 279,304(A) ಐಪಿಸಿ ಮತ್ತು 134(A&B) ಮತ್ತು 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹರ್ಷಿತ್ , ಪ್ರಾಯ 24 ವರ್ಷ, ಕೋಂಮೋನಪ್ಪ ಗೌಡ , ವಾಸ:  ಬೊಳ್ಳಮೆ ಮನೆ ನರಿಮೊಗರು ಗ್ರಾಮ  ಪುತ್ತೂರು ತಾಲೂಕು ರವರು ದಿನಾಂಕ  20-05-2022 ರಂದು ತನ್ನ ಬಾಬ್ತು  ಮೋಟಾರ್ ಸೈಕಲ್ ನಂ ಕೆಎ19-ಇಎನ್ -5336 ನೇದರಲ್ಲಿ  ಕೆಲಸದ ನಿಮಿತ್ತ ಹೋಗುತ್ತಿರುವಾಗ ಕಡಬ ತಾಲೂಕು ಸವಣೂರು ಗ್ರಾಮದ ಕನ್ನಡಕುಮೇರು ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎಡಬದಿಯಿಂದ  ನೋಂದಣಿಯಾಗದ ನಂಬರ್ ಪ್ಲೇಟ್ ಇಲ್ಲದ ಆಲ್ಟೋ 800 ಕಾರನ್ನು ಅದರ  ಚಾಲಕ ಪ್ರಸಾದ್ ಎಂಬವರು  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಆಕಸ್ಮಿಕವಾಗಿ ರಸ್ತೆಗೆ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದಾಗ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ  ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈ ತೋಳಿಗೆ ,ಕಿಬ್ಬೊಟ್ಟೆಯ ,ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತಗಾಯ ವಾಗಿದ್ದು ಸದ್ರಿ ಕಾರು ಚಾಲಕರು ಉಪಚರಿಸಿ ಕಾರೊಂದರಲ್ಲಿ ಸವಣೂರಿನ ವೈಧ್ಯರಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರ ತಂದೆ ಮೋನಪ್ಪ ಗೌಡರು ಕಾರಿನಲ್ಲಿ ಪುತ್ತೂರಿನ  ಹಿತ ಆಸ್ಪತ್ರೆಗೆ ಕರೆದುಕೊಂಡು ಹೋದವರನ್ನು ವೈಧ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 45/2022 ಕಲಂ : 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೊಹಮ್ಮದ್ ತೌಸಿಫ್ (32) ನ್ಯೂ ಸ್ಠಾರ್ ಮಂಜಿಲ್ ಮನೆ ಸಂಗಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ರವರ ಮನೆಯ ಕಾರ್ ಪಾರ್ಕಿಂಗ್ ನಲ್ಲಿ ಇರಿಸಿದ  ಸುಮಾರು 8 ಗೋಣಿ ಸುಲಿಯದ ಅಡಿಕೆಯನ್ನು ದಿನಾಂಕ 13.05.2022 ರಂದು 23.00 ಗಂಟೆಯಿಂದ ದಿನಾಂಕ 14.05.2022 ರಂದು ಬೆಳಿಗ್ಗೆ 7.00 ಗಂಟೆಯ ಮಧ್ಯೆ  ಯಾರೋ ಕಳ್ಳರು   ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ  ಅಡಿಕೆಯ ಒಟ್ಟು ಮೌಲ್ಯ ರೂ ಸುಮಾರು 1,00,000/- ಆಗಬಹುದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 35/2022 ಕಲಂ: 379 IPC , ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೆ ಎಂ ಮಹಮ್ಮದ್‌ ಪ್ರಾಯ 60 ವರ್ಷ ತಂದೆ:ದಿ||ಅಬ್ದುಲ್‌ ಖಾದರ ವಾಸ:ಕಟ್ಟೆ ಮನೆ, ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:19-5-2022 ರಂದು ತಮ್ಮ ಮನೆಗೆ ಬೀಗ ಹಾಕಿ ಮನೆಯವರೊಂದಿಗೆ ಸಜೀಪನಡು ಗ್ರಾಮದ ಗೋಳಿಪಡ್ಡುದಲ್ಲಿರುವ ತಮ್ಮ ತಂಗಿಯ ಮನೆಗೆ  ಹೋಗಿದ್ದು. ನಂತರ ದಿನಾಂಕ 20-5-2022 ರಂದು ತಂಗಿಯ ಮನೆಯಿಂದ ಹೆಂಡತಿ ಮಕ್ಕಳೊಂದಿಗೆ ತಮ್ಮ ಮನೆಯಾದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಎಂಬಲ್ಲಿಗೆ ಬಂದಾಗ ಸಂಜೆ ಸಮಯ ಸುಮಾರು 4-00 ಗಂಟೆಗೆ ಬಂದು ಬೀಗ ತೆಗೆದು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ತುಂಬ ಬಟ್ಟೆಗಳು ಚಲ್ಲಾಪಿಲ್ಲಿಯಾಗಿದ್ದು. ಮನೆಯ ಮಾಡಿನ ಹಂಚು ತೆಗೆದಿರುವುದು ಕಂಡು ಬಂತು ನಂತರ ಪಿರ್ಯಾಧಿದಾರರು ಮಲಗುವ ಕೋಣೆಗೆ ಹೋಗಿ ನೋಡಲಾಗಿ ಗಾದ್ರೇಜ್‌ ಬಾಗಿಲು ತೆರೆದಿರುವುದು ಕಂಡು ಬಂತು ಅದರಲ್ಲಿದ್ದ ಸುಮಾರು 5 ಪವನ್‌ ತೂಕದ್‌ ನಕ್ಲೇಸ್‌-01, ಸುಮಾರು 1 ಪವನ್‌ ತೂಕದ ಸರ-01, ಸುಮಾರು ಅರ್ದ ಪವನ್‌ ತೂಕದ ಉಂಗುರ-01, ಹಾಗೂ ಗಾದ್ರೇಜ್‌ ಪಕ್ಕದಲ್ಲಿದ್ದ ಮೇಜಿನ ಡ್ರಾವರ್ ಒಳಗೆ ಇದ್ದ 5000/- ನಗದು ಹಣವನ್ನು ಯಾರೋ ಕಳ್ಳರೂ ಮನೆಯ ಹಿಂಬದಿಯ ಹಂಚು ತೆಗೆದು ಒಳಗೆ ಪ್ರವೇಶ ಮಾಡಿ ಯಾವುದೋ ಆಯುಧದಿಂದ ಬಲತ್ಕಾರವಾಗಿ ಗಾದ್ರೇಜ್‌ನ್ನು ಮೀಟಿ ತೆಗೆದು ಹಣ ಮತ್ತು ಚಿನ್ನಾಭರಣವನ್ನು ಕಳ್ಳತನ ಮಾಡಿರುವುವುದಾಗಿದೆ. ಕಳ್ಳತನವಾದ ಚಿನ್ನಾಭರಣಗಳ ಮೌಲ್ಯ 1,40,000/- ರೂ ಆಗಬಹುದು ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 77/2022 ಕಲಂ: 454, 457, 380 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಿನೇಶ್ ಆಚಾರ್ಯ (43) ಸಿದ್ದಕಟ್ಟೆ ಮನೆ, ಸಂಗಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ರವರ ಅಣ್ಣನಾದ ಜಗದೀಶ್  ರವರು ಸಿದ್ದಕಟ್ಟೆಯಲ್ಲಿ ಜ್ಯುವೆಲರಿ ಶಾಪ್ ಇಟ್ಟುಕೊಂಡು  ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 19.05.2022 ರಂದು ಪಿರ್ಯಾದಿದಾರರ ಮನೆಯಲ್ಲಿ  ರಾತ್ರಿ ದೈವದ  ಕಾರ್ಯಕ್ರಮ ಇದ್ದು ಪಿರ್ಯಾದುದಾರರ ಅಣ್ಣನಾದ ಜಗದೀಶ್ ರವರಿಗೆ ಎದೆ  ನೋವು ಕಾಣಿಸಿಕೊಂಡಿದ್ದು ಅವರನ್ನು ಪಿರ್ಯಾದುದಾರರು ಮತ್ತು  ಜಗದೀಶ್ ರವರ ಮಗ ಶ್ರವಣ್ ರವರು ಸಿದ್ದಕಟ್ಟೆಯ ಕ್ಲಿನಿಕ್  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದು ನಂತರ ಜಗದೀಶ್ ರವರಿಗೆ ಸ್ವಲ್ಪ ಸಮಯದ ನಂತರ ಎದೆ  ನೋವು  ಕಾಣಿಸಿಕೊಂಡಿದ್ದು  ಅವರನ್ನು ಮೂಡಬಿದ್ರೆಯ ಆಳ್ವಾಸ್  ಆಸ್ಪತ್ರೆಗೆ ಕರೆದುಕೊಂಡು  ಹೋದ ಸಮಯ  ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಪಿರ್ಯದುದಾರರ ಅಣ್ಣನಿಗೆ ಈ ಮೊದಲು ಎದೆ ನೋವು ಉಸಿರಾಟದ  ತೊಂದರೆ ಇದ್ದು ಈ ಬಗ್ಗೆ  ವೈದ್ಯರಿಂದ  ಔಷದ ಮಾಡುತ್ತಿದ್ದು  ಅಂತೆಯೇ  ದಿನಾಂಕ 19.05.2022 ರಂದು  ಜಗದೀಶವರಿಗೆ ಉಸಿರಾಠದ ತೊಂದರೆ  ಕಾಣಿಸಿಕೊಂಡ ಪರಿಣಾಮ ಅವರನ್ನು ಚಿಕಿತ್ಸೆ ಗೆ ಕರೆದುಕೊಂಡು ಹೋದ ಸಮಯ ಹೃದಯಘಾತವಾಗಿಯೋ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಯು ಡಿ ಆರ್  ನಂ 28/2022 ಕಲಂ:174 ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ ಪ್ರಾಯ:39 ವರ್ಷ ಗಂಡ: ಪ್ರೇಮ್ ಕುಮಾರ್ ವಾಸ: 2-117 ಇರ್ದೆ ಮನೆ ಮತ್ತು ಗ್ರಾಮ ಪುತ್ತೂರು ತಾಲೂಕು ರವರು ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಸೂರಂಬೈಲ್ ಎಂಬಲ್ಲಿ ಸೋಮಪ್ಪ ರೈ ಯವರ ಬಾಬ್ತು ಬಾಡಿಗೆ ಕಟ್ಟಡದಲ್ಲಿ ಸುಮಾರು 9 ತಿಂಗಳಿನಿಂದ ಗಂಡ ಪ್ರೇಮ್ ಕುಮಾರ್ ಮತ್ತು ಮಕ್ಕಳೊಂದಿಗೆ ವಾಸ್ತವ್ಯ ಮಾಡಿಕೊಂಡಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿರುವುದಾಗಿದೆ. ದಿನಾಂಕ:19-05-2022 ರಂದು ಮಕ್ಕಳು ಕಡಬದಲ್ಲಿರುವ  ಫಿರ್ಯಾದುದಾರರ ತಾಯಿ ಮನೆಗೆ  ಹೋಗಿದ್ದು, ಮನೆಯಲ್ಲಿ ಫಿರ್ಯಾದುದಾರರ ಗಂಡ ಪ್ರೇಮ್ ಕುಮಾರ್ ರಾತ್ರಿ ಸಮಯ ಊಟಮಾಡಿದ ನಂತರ ಮಾತನಾಡುತ್ತಾ, ಈಗ ನಮಗೆ ಕೆಲಸ ಸಿಗುತ್ತಿಲ್ಲ, ತಾನು ಕೆಲವು ಜನರಿಂದ ಕೈಸಾಲ ಪಡೆದುಕೊಂಡಿದ್ದು, ಅವರಿಗೆ ಹಣವನ್ನು ಹಿಂತಿರುಗಿಸಲು ತೊಂದರೆ ಆಗುತ್ತಿದ್ದು, ನಾನು ಇನ್ನು ಬದುಕಿ ಪ್ರಯೋಜನವಿಲ್ಲವೆಂದು ಹೇಳುತ್ತಿದ್ದವರು, ಫಿರ್ಯಾದುದಾರರು ವಾಸ್ತವ್ಯವಿದ್ದ ಮನೆಯ ಪಕ್ಕದ ರೂಮಿನ  ಪಕ್ಕದ ಜಗಲಿ(ಹೊರಾಂಗಣ)ಯಲ್ಲಿ ಮಲಗಿಕೊಂಡರು. ಫಿರ್ಯಾದುದಾರರು ದಿನಾಂಕ:20-5-2022 ರಂದು ಬೆಳಿಗ್ಗೆ 6.30 ಗಂಟೆಗೆ ಎದ್ದು ಗಂಡನನ್ನು ಕೂಗಿ  ಕರೆಯಲು ಅವರು ಬಾಗಿಲಿಗೆ ಚಿಲಕ ಹಾಕಿಕೊಂಡಿದ್ದು, ಗಂಡನು ಫಿರ್ಯಾದುದಾರರ  ಕರೆಗೆ ಸ್ಪಂದನೆ ನೀಡದೇ ಇದ್ದುದರಿಂದ  ಫಿರ್ಯಾದಿದಾರರು ಮನೆಯ ಹಿಂದಿನ ಕಿಟಕಿಯ ಮೂಲಕ ನೋಡಿದಾಗ ಪ್ರೇಮ್ ಕುಮಾರ್ ರವರು ಫಿರ್ಯಾದುದಾರರು ಬಳಸುವ ನೇರಳೆ ಬಣ್ಣದ ಸೀರೆಯಿಂದ ತೆಂಗಿನ ಮರದ ಪಕ್ಕಾಸಿಗೆ ಸೀರೆಯನ್ನು ಕುಣಿಕೆಮಾಡಿಕೊಂಡು ನೇಣುಹಾಕಿ ನೇತಾಡುತ್ತಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿ ಗಂಡನ ದೇಹವನ್ನು ಕೆಳಗಿಳಿಸಿ ನೋಡಿದಾಗ ಯಾವುದೇ ಚಲನೆ ಕಂಡುಬಾರದೆ ಇರುವುದಾಗಿದ್ದು, ಫಿರ್ಯಾದಿದಾರರ ಗಂಡ ಪ್ರೇಮ್ ಕುಮಾರ್ ರವರು ರಬ್ಬರ್ ಟ್ಯಾಪಿಂಗ್ ಕೆಲಸ ಸಿಗದೆ  ಕೈಸಾಲವನ್ನು ತೀರಿಸಲು ಸಾಧ್ಯವಾಗದೆ ಇರುವುದರಿಂದ ಮನನೊಂದು ದಿನಾಂಕ:19-05-2022 ರಂದು ರಾತ್ರಿ 9.30  ಗಂಟೆಯಿಂದ ದಿನಾಂಕ:20-5-2022 ರ ಬೆಳಿಗ್ಗೆ 6.30 ಗಂಟೆಯ ಮಧ್ಯೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಯು.ಡಿಆರ್  : 16/2022  ಕಲo: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-05-2022 10:58 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080