ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಂಕರಪ್ಪ ಹಂಚಿನಾಳ  ಪ್ರಾಯ: 33 ವರ್ಷ,ತಂದೆ: ಪವಾಡಪ್ಪ ಹಂಚಿನಾಳ , ವಾಸ:ಯರಗಲ್ ಗ್ರಾಮ ಮತ್ತು  ಅಂಚೆ ಮುದ್ದೆಬಿಹಾಳ್  ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ:20.07.2021 ರಂದು ಪಿರ್ಯಾದುದಾರರು ಧರ್ಮಸ್ಥಳ ಘಟಕದಿಂದ KA-19-F-3282 ನೇ KSRTC ಬಸ್ಸು ವಾಹನದಲ್ಲಿ  ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಹೋಗುವರೇ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬೆಳಗ್ಗೆ 11-50 ಗಂಟೆಗೆ ಹೊರಟು  ಧರ್ಮಸ್ಥಳ- ಮರ್ದಾಳ- ಕುಕ್ಕೆ ಸುಬ್ರಹ್ಮಣ್ಯ  ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿಗೆ ಸಮಯ ಮದ್ಯಾಹ್ನ 13-05 ಗಂಟೆಗೆ ತಲುಪಿದಾಗ ಅದೇ ರಸ್ತೆಯಲ್ಲಿ  ಎದುರುಗಡೆಯಿಂದ ಅಂದರೆ ಕುಕ್ಕೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವೀಪ್ಟ್ ಡಿಸೈರ್ ಕಾರೊಂದರ ಚಾಲಕನು ತೀರಾ ಅಜಾಗರುಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ತೀರ ರಸ್ತೆಯ ಬಲಬದಿಗೆ ಬಂದು ಪಿರ್ಯಾದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ  KA-19-F-3282 ನೇ KSRTC ಬಸ್ಸಿನ ಎದುರು  ಬಲಬದಿಗೆ ರಭಸವಾಗಿ ಬಂದು ಗುದ್ದಿ ಡಿಕ್ಕಿಯುಂಟು ಮಾಡಿದ್ದು ತಕ್ಷಣ  ಪಿರ್ಯಾದುದಾರರು ಚಲಾಯಿಸುತ್ತಿದ್ದ KSRTC ವಾಹನವನ್ನು ನಿಲ್ಲಿಸಿ ನೋಡಲಾಗಿ ಕಾರಿನ ಮುಂಬಗ ಜಖಂಗೊಂಡಿದ್ದು ನಂತರ ಪಿರ್ಯಾದುದಾರು ಹಾಗೂ ಅಲ್ಲಿಯೇ ಸೇರಿದ್ದ ಸಾರ್ವಜನಿಕರು ಕಾರಿನಲ್ಲಿದ್ದ ಪ್ರಯಾಣಿಕರನ್ನು ಉಪಚಾರಿಸಿ ನೋಡಲಾಗಿ ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಹಾಗೂ ಕಾರಿನಲ್ಲಿದ್ದ ಇತರ  ಜನರಿಗೂ ಸಣ್ಣ ಪುಟ್ಟ ಗಾಯವಾಗಿರುತ್ತಾದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 57/2021  ಕಲಂ 279 337.  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: ದಿನಾಂಕ 20.07.2021 ಪಿರ್ಯಾದಿದಾರರು ವಿಷಕಂಠಯ್ಯ, ಪ್ರಾಯ 65 ವರ್ಷ, ತಂದೆ: ದಿ||ಜವರೇಗೌಡ, ವಾಸ: ಮನೆ ನಂಬ್ರ 503, ಬಿ.ಡಿ.ಎ.ಫ್ಲ್ಯಾಟ್, ವಳಗೇರಹಳ್ಳಿ, ಕೆಂಗೇರಿ, ಮೈಸೂರು ರಸ್ತೆ, ಬೆಂಗಳೂರು ಎಂಬವರು ತನ್ನ ಹೆಂಡತಿ ರತ್ನ, ಮಗ ರಘು ಮತ್ತು ಮಂಜು, ಸಂಬಂಧಿ ಜ್ಯೋತಿ, ಜ್ಯೋತಿಯ ಮಗಳಾದ ಸೋನಿಕಾಳೊಂದಿಗೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವರೇ ಕಾರು ನಂಬ್ರ KA-09-MA-2883 ನೇದರಲ್ಲಿ ಪ್ರಯಾಣಿಸುತ್ತಾ, ರಘು ಕಾರನ್ನು ಚಲಾಯಿಸಿಕೊಂಡು ಧರ್ಮಸ್ಥಳ-ಪೆರಿಯಶಾಂತಿ-ಸುಬ್ರಹ್ಮಣ್ಯ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 10.45 ಗಂಟೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿಗೆ ತಲುಪಿದಾಗ ಎದುರು ಕಡೆಯಿಂದ ಅಂದರೆ ಪೆರಿಯಶಾಂತಿ ಕಡೆಯಿಂದ ಧರ್ಮಸ್ಥಳ ಕಡೆಗೆ KA-02-AE-5938 ನಂಬರಿನ ಕಾರನ್ನು ಅದರ ಚಾಲಕ ಸೋಮಶೇಖರ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾದ ಕಾರಣ ಎರಡು ಕಾರುಗಳು ಕೂಡಾ ಜಖಂಗೊಂಡು, ಎರಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಎಂಬವರ ದೂರಿನಂತೆ .ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 70/2021 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಂಗಾಧರಗೌಡ ಕೆ ಪ್ರಾಯ 61 ವರ್ಷ ತಂದೆ:ದಿ||ಚನ್ನಪ್ಪಗೌಡ ವಾಸ:ಕಾಯರಮಾರು ಮನೆ, ವಿಟ್ಲ ಕಸಬ  ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ  ಮಗ ಚಂದ್ರಶೇಖರ್‌ ಪ್ರಾಯ 41 ವರ್ಷರವರು ಸುಮಾರು 02 ವರ್ಷದಿಂದ ಸಕ್ಕರೆ ಖಾಯಿಲೆ ಬಳಲುತ್ತಿದ್ದು. ಸದ್ರಿ ಕಾಯಿಲೆಗೆ ಪುತ್ತೂರು ಆದರ್ಶ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದನು. ಇತ್ತೀಚೆಗೆ 04 ದಿನದಿಂದ ಸಕ್ಕರೆ ಖಾಯಿಲೆ ಹೆಚ್ಚಾಗಿ ವಾಂತಿ ಬೇಧಿ ಪ್ರಾರಂಭವಾಗಿ ವಿಟ್ಲದಲ್ಲಿರುವ ಹೆಗ್ಡೆ ಕ್ಲೀನಿಕ್‌ನಿಂದ  ಚಿಕಿತ್ಸೆ ಪಡೆಯುತ್ತಿದ್ದನು. ದಿನಾಂಕ:20-07-2021 ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಕಾಯರಮಾರು ಮನೆಯಲ್ಲಿರುವಾಗ ವಾಂತಿಬೇದಿ, ಹೊಟ್ಟೆನೋವು ಜಾಸ್ತಿಯಾಗಿ ನಿತ್ರಾಣವಾಗಿ ಪಿರ್ಯಾಧಿದಾರರ ಬಳಿ ಹೇಳಿದಾಗ ಸುಮಾರು 15.30 ಗಂಟೆಗೆ ಸ್ಥಳಿಯ ವಿಟ್ಲದ ಒಂದು ಅಂಬುಲೆನ್ಸನಲ್ಲಿ ಚಂದ್ರಶೇಖರನನ್ನು ಆತನ ಹೆಂಡತಿ ರೂಪಾರವರು ಕರೆದುಕೊಂಡು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದಾಗ ಸುಮಾರು 16-45 ಗಂಟೆಗೆ ಹೋದಾಗ ಅಲ್ಲಿಯ ವೈದ್ಯೆರು ಪರಿಕ್ಷೀಸಿ ನೋಡಲಾಗಿ  ಚಂದ್ರಶೇಖರ ಪ್ರಾಯ 41 ವರ್ಷ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 18/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಶವಂತ (33) ತಂದೆ: ಚಿನ್ನಪ್ಪ ಗೌಡ ವಾಸ: ಮೂರುರು ಮನೆ, ಮಡೆಕೋಲು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 20.07.2021 ರಂದು ಸಮಯ ಸುಮಾರು 18:30 ಗಂಟೆಗೆ ದೇವರಗುಂಡದ ಕೇಪಣ್ಣ ಗೌಡರ ಬಾಬ್ತು ಪಂಪ್ ಸೇಡ್ ಹತ್ತಿರ ನದಿಯ ನೀರು ಬಂದಿರುವುದನ್ನು ನೋಡಲು ತೂಗು ಸೇತುವೆ ಬಳಿ ಹೋಗುವರೇ ಸುಳ್ಯ ತಾಲೂಕು ಮಂಡೆಕೂಲು ಗ್ರಾಮದ ಪಂಜಿಕಲ್ಲು ಪಯಸ್ವಿನಿ ನದಿಯ ದಡದಲ್ಲಿ ಸುಮಾರು 30 ರಿಂದ 35 ವರ್ಷದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದ ಅಪರಿಚಿತ ಗಂಡಸು ಮೃತ ಪಟ್ಟ ಸ್ಥಿತಿಯಲ್ಲಿ ಮಗುಚಿ ಬಿದ್ದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಯು ಡಿ ಅರ್ ನಂಬ್ರ 29/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-07-2021 02:08 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080