ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಫಿರ್ಯಾದಿದಾರರಾದ ಸುಜಿತ್, ಪ್ರಾಯ: 32 ವರ್ಷ, ತಂದೆ: ಕಾಂತಪ್ಪ ಪೂಜಾರಿ, ವಾಸ: ಕಟ್ಟದ ಬೈಲು ಮನೆ, ಕುರಿಯ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿರವರು ದಿನಾಂಕ 20.08.2021ರಂದು ಮಧ್ಯಾಹ್ನ ಸದ್ರಿಯವರ ಮನೆಯಿಂದ ಕಟ್ಟಿಂಗ್ ಮಾಡಲೆಂದು ಸದ್ರಿಯವರ ಬಾಬ್ತು ಮೋಟಾರು ಸೈಕಲ್‌ನಲ್ಲಿ ಸಂಟ್ಯಾರು ಕಡೆಗೆ ಹೋಗುತ್ತಾ ಸಂಟ್ಯಾರು ಸೇತುವೆ ಮಲಾರು ರಸ್ತೆ ಬಳಿ ಮೋಟಾರು ಸೈಕಲ್‌ನ್ನು ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ಕೆಎ-21-ಆರ್-2429 ನೇ ಮೋಟಾರು ಸೈಕಲನ್ನು ಅದರ ಸವಾರನು ಸವಾರಿ ಮಾಡಿಕೊಂಡು ಸಂಟ್ಯಾರು ಸೇತುವೆಯಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಮಧ್ಯಾಹ್ನ ಸುಮಾರು 2.00 ಗಂಟೆಗೆ ಪುತ್ತೂರು ಕಡೆಯಿಂದ ಸಂಟ್ಯಾರು ಕಡೆಗೆ ಮಾಣಿ –ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎ-70-1556ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನತದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಕೆಎ-21-ಆರ್-2429 ನೇ ಮೋಟಾರು ಸೈಕಲಿನ ಹಿಂಬದಿಯ ಸೀಟಿನ ಗಾರ್ಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ನಿಯಂತ್ರಣ ತಪ್ಪಿ ಡಾಮಾರು ರಸ್ತೆಗೆ ಬಿದ್ದಾಗ, ಮೋಟಾರು ಸೈಕಲ್ ಸವಾರನನ್ನು ಟಿಪ್ಪರ್ ಲಾರಿಯು ಸುಮಾರು 30 ಅಡಿ ಮುಂದಕ್ಕೆ ಎಳೆದುಕೊಂಡು ಹೋಗಿ ನಿಂತಿರುತ್ತದೆ. ಫಿರ್ಯಾದಿದಾರರು ಮತ್ತು ಸಾರ್ವಜನಿಕರು ಮೋಟಾರು ಸೈಕಲ್ ಸವಾರನನ್ನು ಎಬ್ಬಿಸಿ ಉಪಚರಿಸಿ ನೋಡಿದಾಗ ಸದ್ರಿಯವರ ಎಡ ಕಾಲಿಗೆ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಆಂಬುಲೆನ್ಸ್ ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆಎದುಕೊಂಡು ಹೋದಲ್ಲಿ  ವೈದ್ಯರು ಮೋಟಾರು ಸೈಕಲ್ ಸವಾರನಿಗೆ ಚಿಕಿತ್ಸೆ ನೀಡಿ ಒಳ ರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 76/2021 ಕಲಂ: 279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆನಂದ ಮೂಲ್ಯ (51) ತಂದೆ; ಲೋಕಯ್ಯ ಮೂಲ್ಯ  ವಾಸ; ಮಾಕೆರೆಕೆರೆ    ಮನೆ, ಕುವೆಟ್ಟು  ಗ್ರಾಮ, ಬೆಳ್ತಂಗಡಿ  ಎಂಬವರ ದೂರಿನಂತೆ ಫಿರ್ಯಾದಿದಾರರ ತಮ್ಮ ಚಂದ್ರಶೇಖರ ಪ್ರಾಯ:42 ರವರು ಕೃಷಿ ಹಾಗೂ ಟೈಲರಿಂಗ್ ಕೆಲಸ  ಮಾಡಿಕೊಂಡಿದ್ದು ಪ್ರತಿದಿನ ಬೆಳಿಗ್ಗೆ ತಮ್ಮ ಅಡಿಕೆ ತೋಟದಲ್ಲಿ ವಾಕಿಂಗ್ ಹೋಗುವ ಅಭ್ಯಾಸವುಳ್ಳವರಾಗಿದ್ದು ದಿನಾಂಕ:20.08.2021 ರಂದು ಬೆಳಿಗ್ಗೆ 04.30 ಗಂಟೆಗೆ ಮನೆಯಿಂದ ವಾಕಿಂಗ್‌ ಗೆಂದು ಹೊರಟು ಹೋದವರು 06.00 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಅವರನ್ನು ಹುಡುಕಾಡಿದಾಗ ಮನೆಯ ಬಾಬ್ತು ಅಡಿಕೆ ತೋಟದಲ್ಲಿಯ ಕೆರೆಯ ನೀರಿನಲ್ಲಿ ಅವರ ಮೃತದೇಹವು ದೊರೆತಿದ್ದು ಮೃತರು ದಿನಾಂಕ:20.08.2021 ರಂದು ಬೆಳಿಗ್ಗೆ 04.30 ಗಂಟೆಯಿಂದ ಬೆಳಿಗ್ಗೆ 06.15 ಗಂಟೆಯ ಮಧ್ಯದ ಅವಧಿಯಲ್ಲಿ  ಅಡಿಕೆ ತೋಟದಲ್ಲಿ ವಾಕಿಂಗ್ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಕಾಲುಜಾರಿ ಕೆರೆ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂ: 24/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹೆಚ್‌.ಎಸ್. ವಿರೂಪಾಕ್ಷಪ್ಪ (51), ಕ್ಷೇತ್ರ ಶಿಕ್ಷಣಾಧಿಕಾರಿಯವರು, ಬೆಳ್ತಂಗಡಿ ಎಂಬವರ ದೂರಿನಂತೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಸಂತೆಕಟ್ಟೆ ಎಂಬಲ್ಲಿರುವ  ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಆವರಣದಲ್ಲಿ ದಿನಾಂಕ:19.08.2021 ರಂದು 18.00 ಗಂಟೆಯಿಂದ ದಿನಾಂಕ:20.08.2021 ರಂದು 08.00 ಗಂಟೆಯ ಮಧ್ಯದ ಅವಧಿಯಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ವಿಪರೀತ ಅಮಲು ಪದಾರ್ಥ ಸೇವನೆ ಮಾಡಿ ಮೂತ್ರ ವಿಸರ್ಜನೆಗೆಂದು ಹೋದ ಸಮಯ ಆಕಸ್ಮಿಕವಾಗಿ ಎಡವಿ ಕೆಳಗಡೆ ಕವುಚಿ ಬಿದ್ದು ಮೇಲೆ ಏಳಲು ಆಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂ: 25/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅರುಣ್ ಕುಮಾರ   ಪ್ರಾಯ 29 ವರ್ಷ, ತಂದೆ: ಪೂವಪ್ಪ ಗೌಡ ವಾಸ: ಪೊರ್ದೆಲು  ಮನೆ, ಕೊಂಬಾರು ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ.20.08.2021 ರಂದು ಕೆಂಜಾಳದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುವ ಸಮಯ ಪಿರ್ಯಾದುದಾರ ತಮ್ಮ ಅಶೋಕರವರು ದೂರವಾಣಿ ಕರೆಮಾಡಿ ನಮ್ಮ ತಂದೆಯವರು ನಾಳೆಯ ದಿನ ಮನೆಯಲ್ಲಿ ನಡೆಯುವ ಸೋನ ಶನಿವಾರ ಕಾರ್ಯದ ನಿಮಿತ್ತ ಪೂಜಾ ಕಾರ್ಯಕ್ಕಾಗಿ ಎಳನೀರು ತೆಗಯಲೆಂದು ಸಮಯ ಸುಮಾರು ಮಧ್ಯಾಹ್ನ 14.15 ಗಂಟೆಗೆ ನಮ್ಮ ಮನೆಯ ಬಳಿಯಿರುವ ತೆಂಗಿನ ಮರವನ್ನು ಹತ್ತಿ ಎಳನೀರು ಕೀಳುವ ಸಮಯ ತೆಂಗಿನ ಮರದಿಂದ ಆಕಸ್ಮಿಕವಾಗಿ ಕಾಲುಜಾರಿ ಸುಮಾರು 40 ಅಡಿ ಎತ್ತರದಿಂದ ಬಿದ್ದಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಪಿರ್ಯಾದಿದಾರರಿಗೆ ಅವರ ತಮ್ಮ ಅಶೋಕನು ತಿಳಿಸಿದಂತೆ ಪಿರ್ಯಾದಿದಾರರು ಕಡಬ ಸರ್ಕಾರಿ ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಪೂವಪ್ಪ ಗೌಡರನ್ನು  ಪರೀಕ್ಷಿಸಿದ ವೈದ್ಯರು ಸಮಯ ಸುಮಾರು ಮಧ್ಯಾಹ್ನ 14.56 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿದರು,ಸದ್ರಿ ಪೂವಪ್ಪ ಗೌಡ ರವರು ಪೂಜಾ ಕಾರ್ಯಕ್ಕಾಗಿ ತಮ್ಮ ಮನೆಯ ಬಳಿಯ ತೆಂಗಿನ ಮರದಿಂದ ಎಳನೀರು ಕೀಳುವ ಸಮಯ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವುದಾಗಿದ್ದು. ಈ ಬಗ್ಗೆ ಕಡಬ ಠಾಣಾ UDR NO: 16/2021ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-08-2021 09:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080