ಅಪಘಾತ ಪ್ರಕರಣ: ೦4
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಖರ್, ಪ್ರಾಯ 45 ವರ್ಷ, ತಂದೆ: ಪದ್ಮಯ್ಯ ಗೌಡ, ವಾಸ: ಮ.ನಂ: II 225/2, ಓಲ್ಡ್ ಗೇಟ್, ಭಾರತ್ ಪೆಟ್ರೋಲ್ ಪಂಪ್ ಬಳಿ, ಕಸಬಾ ಗ್ರಾಮ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 19-09-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಅವಿನಾಶ್ ಎಂಬವರು KA-21-W-1062 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಉಪ್ಪಿನಂಗಡಿ-ಹಿರೇಬಂಡಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹಿರೇಬಂಡಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ದಾಸರಮೂಲೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರು ಮೋಟಾರ್ ಸೈಕಲ್ನ ಮುಂದುಗಡೆಯಿಂದ ಹಿರೇಬಂಡಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-P-7907 ನೇ ನೋಂದಣಿ ನಂಬ್ರದ ಕಾರಿಗೆ, ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿಯಾಗಿ, ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಮೊಣಕಾಲಿನ ಬಳಿ ಗುದ್ದಿದ ಹಾಗೂ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 116/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಬ್ರಾಹೀಂ, 54 ವರ್ಷ, ತಂದೆ: ಉಮ್ಮರ್ ವಾಸ: ಪರಪ್ಪು ಸೈಟ್ ಮನೆ, ಇರಾ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ :19-09-2021 ರಂದು ಬಂಟ್ವಾಳ ತಾಲೂಕು ಇರಾ ಗ್ರಾಮದ ಪರಪ್ಪು ಎಂಬಲ್ಲಿ ತನ್ನ ಪ್ಲಾಟಿನ ಬಳಿ ನಿಂತುಕೊಂಡಿದ್ದ ಸಮಯ ಮಂಚಿ - ಮುಡಿಪು ಸಾರ್ವಜನಿಕ ರಸ್ತೆಯಲ್ಲಿ ಮನೋಜ್ (10) ಎಂಬವನು ರಸ್ತೆ ದಾಟುತ್ತಿದ್ದ ಸಮಯ ಮಂಚಿ ಕಡೆಯಿಂದ ಮುಡಿಪು ಕಡೆಗೆ KA-04-MH-3058 ನೇ ಕಾರನ್ನು ಅದರ ಚಾಲಕ ಅಬ್ದುಲ್ ಅಹದ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮನೋಜ್ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮನೋಜ್ ರವರು ರಸ್ತೆಗೆ ಬಿದ್ದು ಎಡಬದಿ ತಲೆಗೆ, ಮುಖಕ್ಕೆ, ಎರಡೂ ಕೈಗಳಿಗೆ, ಸೊಂಟದ ಬಳಿ, ಹಾಗೂ ಎಡಕಾಲಿಗೆ ಗಾಯಗೊಂಡವನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ..ಈ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 97/2021 ಕಲಂ 279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಆಶಿಕ್, 27 ವರ್ಷ, ತಂದೆ: ಅಬೂಬಕ್ಕರ್ ವಾಸ: ಮಾನೂರು ಮನೆ, ತುಂಬೆ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ :20-09-2021 ರಂದು ತನ್ನ ಬಾಬ್ತು ಕಾರಿನಲ್ಲಿ ಕಾವಳಕಟ್ಟೆ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಭಂಡಾರಿಬೆಟ್ಟು ವಸ್ತಿ ಅಪಾರ್ಟ್ ಮೆಂಟ್ ಬಳಿ ತಲುಪಿದಾಗ ತನ್ನ ಎದುರಿನಿಂದ KA-21-W-8554 ನೇ ಮೋಟಾರ್ ಸೈಕಲನ್ನು ಅದರ ಸವಾರ ಸಿದ್ದಿಕ್ ಸಹದಿ ಯಾನೆ ಅಬೂಬಕ್ಕರ್ ಸಿದ್ದಿಕ್ ರವರು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲಿನೊಂದಿಗೆ ರಸ್ತೆಗೆ ಬಿದ್ದು ಹಣೆಗೆ ರಕ್ತಗಾಯ ಕೈಕಾಲಿಗೆ ತರಚಿದ ಗಾಯವಾಗಿದ್ದು, ಗಾಯಾಳು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 98/2021 ಕಲಂ 279,337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಂ. ಸುಧೀರ್ ರಾವ್, ಪ್ರಾಯ 49 ವರ್ಷ, ತಂದೆ: ರಾಜೇಂದ್ರ ರಾವ್, ವಾಸ: ಬಪ್ಪಳಿಗೆ ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ರವೆರು ನೀಡಿದ ದೂರಿನಂತೆ ದಿನಾಂಕ 20-09-2021 ರಂದು ಆರೋಪಿ ಕಾರು ಚಾಲಕ ಅಬ್ದುಲ್ ಹಮೀದ್ ಎಂಬವರು KA-21-Z-4786 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬಪ್ಪಳಿಗೆ ಕ್ರಾಸ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರು ಪುತ್ತೂರು ಕಡೆಯಿಂದ ಬಪ್ಪಳಿಗೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-W-5664 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಯಾಗಿ, ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎರಡೂ ಕೈಗಳಿಗೆ, ಬೆನ್ನಿನ ಹಿಂಭಾಗ, ಬಲಕಣ್ಣಿನ ಬಳಿ, ಎಡಕಾಲಿನ ಪಾದಕ್ಕೆ ರಕ್ತ ಗಾಯಗಳಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 117/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦2
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹೆಶ್. ಕೆ, ಪ್ರಾಯ: 26 ವರ್ಷ ತಂದೆ: ಚಿನ್ನಯ್ಯ ಪೂಜಾರಿ ವಾಸ: ಕೆರೆಕೋಡಿ ಮನೆ ಶಿಬಾಜೆ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 19-09-2021 ರಂದು ಶಿಬಾಜೆ ಗ್ರಾಮದ ಬಟ್ಟಾಜೆ ಡ್ಯಾಮ್ ಶ್ರಮದಾನ ಕೆಲಸಕ್ಕೆ ತನ್ನ ಸ್ನೇಹಿತರಾದ ಸುಬ್ರಾಯ ಗೌಡ, ರತೀಶ್ ಗೌಡ, ರಾಧಾಕೃಷ್ಣ ಗೌಡ, ರವಿ, ನಾಗೇಶ್ ಎಂವುವರೊಂದಿಗೆ ಹೋಗಿದ್ದು, ಸಂಜೆ 4.30 ಗಂಟೆ ಸಮಯಕ್ಕೆ ಶ್ರಮದಾನ ಮುಗಿಸಿ ಶಿಬಾಜೆ ಗ್ರಾಮದ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿರುವ ಸಮಯ ಪಿರ್ಯಾದಿದಾರರಿಗೆ ಪರಿಚಯದ ಮೋನಪ್ಪಗೌಡ, ವೆಂಕಪ್ಪ ಗೌಡರು ಪಿರ್ಯಾದಿದಾರರ ಜೊತೆಗಿದ್ದ, ರತೀಶ್ ಗೌಡ ಎಂಬವರನ್ನು ಕರೆದು ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದ ವಿಚಾರದಲ್ಲಿ ತಕರಾರು ತೆಗೆದು ಜೋರಾಗಿ ಮಾತನಾಡಲು ಪ್ರಾರಂಭಿಸಿದರು. ಆ ಸಮಯ ಭರತ್ ಗೌಡ, ಸತೀಶ್ ಗೌಡ, ಚಿತ್ರೇಶ್ ಗೌಡ ಎಂಬವರು ವೆಂಕಪ್ಪಗೌಡ ಹಾಗೂ ಮೋನಪ್ಪಗೌಡರ ಜೊತೆ ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿಕೊಂಡು ಪಿರ್ಯಾದಿದಾರರಿಗೆ ಹಾಗೂ ಅವರ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ, ಅವರಲ್ಲಿ ವೆಂಕಪ್ಪಗೌಡರು ಮುಷ್ಠಿ ಗಾತ್ರದ ಕಲ್ಲನ್ನು ಬಟ್ಟೆಗೆ ಕಟ್ಟಿ ಪಿರ್ಯಾದಿದಾರರ ಬೆನ್ನಿಗೆ ಮತ್ತು ಸುಬ್ರಾಯ ಗೌಡರ ತಲೆಗೆ ಹೊಡೆದು ಗಾಯಗೊಳಿಸಿದ್ದಲ್ಲದೇ, ಮುಂದಕ್ಕೆ ಈ ಜಾಗದ ಬಗ್ಗೆ ಮಾತನಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ 55/2021 ಕಲಂ;143, 147, 148, 504, 324, 506 ಜೊತೆಗೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರಾಜೀವ ಬಿ (54) ತಂದೆ:ದಿ||ಕೃಷ್ಣ ಬೆಳ್ಚಾಡ ವಾಸ: ಬರಂಗೋಡಿ ಮನೆ, ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ:19-09-2021 ರಂದು ಸಂಜೆ ಪಿರ್ಯಾಧಿದಾರರ ದೂರವಾಣಿ ನಂಬ್ರಕ್ಕೆ ಯಾರೋ ದೂರವಾಣಿ ಕರೆ ಮಾಡಿ ತರವಾಡು ಮನೆಯ ವಿಚಾರವನ್ನು ಮಾತನಾಡಲು ಹಾಗೂ ಜಾಗವನ್ನು ನೋಡಲು ಬರುತ್ತೇವೆ ಎಂದು ಹೇಳಿ ನಮಗೆ ದಾರಿ ಗೊತ್ತಿಲ್ಲ ರಸ್ತೆಗೆ ಬನ್ನಿ ಎಂದು ತಿಳಿಸಿದಂತೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಶಾರದಾ ವಿಹಾರ ಬೈರಿಕಟ್ಟೆ ರಸ್ತೆ ಬರಂಗೋಡಿ ಎಂಬಲ್ಲಿಗೆ ಬಂದಾಗ ಅಲ್ಲೆ ಹತ್ತಿರದ ತಿರುವಿನಲ್ಲಿ ನಿಂತಿದ್ದ ಓಮ್ನಿ ಕಾರಿನಿಂದ ಇಬ್ಬರೂ ಅಪರಿಚಿತರು ಇಳಿದು ಬಂದು ಪಿರ್ಯಾಧಿಗೆ ಕೈಯಿಂದ ಹಲ್ಲೆ ಮಾಡಿ , ಅವಾಚ್ಯ ಶಬ್ದಗಳಿಂದ ಬೈದು ,ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಆ ಸಮಯ ಪಿರ್ಯಾಧಿದಾರರು ಬೊಬ್ಬೆ ಹಾಕಿದ್ದು ಅದೇ ಸಮಯಕ್ಕೆ ದಾರಿಯಲ್ಲಿ ಒಂದು ಬೈಕು ಬಂರುವುದನ್ನು ಕಂಡು ಅಪರಿಚಿತ ಇಬ್ಬರು ಆಪಾದಿತರು ಓಮ್ನಿ ಕಾರನ್ನು ಹತ್ತಿ ಹೋಗಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 124/2021 323,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦2
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜೇಶ್ವರಿ ಪ್ರಾಯ 36 ವರ್ಷ ತಂದೆ: ಕೆ. ಶ್ರೀನಿವಾಸ್ ವಾಸ: 6/37 ಚರ್ಚ್ ರಸ್ತೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರ ಹಳೇಪೇಟೆ ಆನೆಕಲ್ ತಾಲೂಕು ಬೆಂಗಳೂರು ರವರು ಪ್ರಕರಣವೊಂದರ ಬಾಬ್ತು ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಮಾಲೀಕತ್ವದ ಕೆಎ 05 ಎನ್.ಬಿ 7355 ನೇ ಕಾರನ್ನು ಬಿಡಿಸಿಕೊಳ್ಳುವರೇ ತನ್ನ ಜೊತೆ ಕೆಲಸ ಮಾಡುತ್ತಿರುವ ಮಂಗಳೂರು ಉಳ್ಳಾಲ ನಿವಾಸಿ ಯು.ಕೆ ಮಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಎಂಬವರ ಜೊತೆ ಬಾಡಿಗೆ ವಾಹನವೊಂದರಲ್ಲಿ ದಿನಾಂಕ: 17.09.2021 ರಂದು ರಾತ್ರಿ ಬೆಂಗಳೂರಿನಿಂದ ಜೊತೆಯಲ್ಲಿ ಹೊರಟವರು ದಿನಾಂಕ: 18.09.2021 ರಂದು ಬೆಳಿಗ್ಗೆ ಪುತ್ತೂರು ತಲುಪಿ ಪುತ್ತೂರು ಕಸಬಾ ಗ್ರಾಮದಲ್ಲಿರುವ ಆಶ್ಮಿ ಲಾಡ್ಜ್ ನಲ್ಲಿ ಮೂವರು ತಂಗಿದ್ದು, ದಿನಾಂಕ: 20.09.2021 ರಂದು 18.55 ಗಂಟೆಗೆ ಸದ್ರಿ ಲಾಡ್ಜ್ ನಲ್ಲಿ ಮೂರು ಜನರು ಜೊತೆಯಲ್ಲಿ ಊಟ ಮಾಡಿಕೊಂಡಿದ್ದ ಸಮಯ ಸದ್ರಿ ಲಾಡ್ಜ್ ನ ಹೊರಗಡೆ ಸುಮಾರು 10 ಜನರು ನಿಂತುಕೊಂಡಿದ್ದವರ ಪೈಕಿ 4-5 ಮಂದಿ ಫಿರ್ಯಾದಿದಾರರ ಬಳಿಗೆ ಬಂದು ಫಿರ್ಯಾದಿದಾರರ ಹಾಗೂ ಜೊತೆಯಲ್ಲಿದ್ದವರ ಹೆಸರು ವಿಳಾಸ ಕೇಳಿ ಆ ಬಳಿಕ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರರ ಜೊತೆ ಇದ್ದ ಶಿವ ಎಂಬವರಿಗೆ ಕೈಯಿಂದ ಹೊಡೆದಿರುತ್ತಾರೆ. ಅಲ್ಲದೇ ಸದ್ರಿ ವ್ಯಕ್ತಿಗಳು ಫಿರ್ಯಾದುದಾರರ ಹಾಗೂ ಜೊತೆಯಲ್ಲಿದ್ದವರ ಭಾವಚಿತ್ರವನ್ನು ತೆಗೆದು ಅವಮಾನ ಪಡಿಸಿರುತ್ತಾರೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 70/2021 ಕಲಂ: 143,147,323,504,509,ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರು ದಿನಾಂಕ:20-09-2021 ರಂದು ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ಸಿಬ್ಬಂದಿಯವರೊಂದಿಗೆ ವಾಹನ ತಪಾಸನೆ ನಡೆಸುತ್ತಿರುವ ಸಮಯ 12-00 ಗಂಟೆಗೆ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿರುವ ಕೆಎ 21 ಯು 6006 ನೇ ಹೊಂಡಾ ಸಿಬಿಆರ್ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಆರೋಪಿ ಮಹಮ್ಮದ್ ಶಾಫಿ @ ನೇಜಿಕಾರ್ ಶಾಫಿ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಗಾಂಜಾ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿರುವುದರಿಂದ ಕೂಡಲೇ ದೂರವಾಣಿ ಮೂಲಕ ಮೇಲಾಧಿಕಾರಿಯವರ ಅನುಮತಿ ಪಡೆದುಕೊಂಡು ಪತ್ರಾಂಕಿತ ಅಧಿಕಾರಿ ಹಾಗೂ ಪಂಚರ ಸಮಕ್ಷಮದಲ್ಲಿ ಆರೋಪಿಗಳ ವಶದಲ್ಲಿದ್ದ ಸುಮಾರು 71,925/- ರೂ ಮೌಲ್ಯದ ಒಟ್ಟು 2 ಕೆ.ಜಿ 55 ಗ್ರಾಂ ಗಾಂಜಾವನ್ನು ಹಾಗೂ ಸಾಗಾಟಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ಬೆಳ್ತಂಗಡಿ ಠಾಣಾ ಅ.ಕ್ರ :74-2021, ಕಲಂ:8 (ಸಿ), ಜೊತೆಗೆ 20 (ಬಿ)(ii) NDPS Act 1985. ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦5
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋನಪ್ಪ ಸಫಲ್ಯ ತಂದೆ: ನೇಮು ಸಫಲ್ಯ ವಾಸ: ನೆಕ್ಕರಾಜೆ ಕಬಕ ಗ್ರಾಮ ಪುತ್ತೂರು ತಾಲೂಕು ರವರ ಮಗನಾದ ಪ್ರಶಾಂತ್ ಪ್ರಾಯ: 35 ವರ್ಷರವರು ಪಾಟ್ರಕೋಡಿಯಲ್ಲಿ ವೆಲ್ಡಿಂಗ್ ಶಾಫ್ ಹೊಂದಿದ್ದು. ದಿನಾಂಕ: 20-09-2021 ರಂದು ಬೆಳಿಗ್ಗೆ 9:00 ಗಂಟೆ ಸಮಯಕ್ಕೆ ಪ್ರಶಾಂತ್ ನು ಎದ್ದು ಪಿರ್ಯಾದಿದಾರರ ಮನೆಯ ಸಮೀಪದ ಹಳೆಯ ಮನೆಯಲ್ಲಿರುವ ಶೌಚಾಲಯಕ್ಕೆ ಹೋಗಿದ್ದು ಸುಮಾರು ಮುಕ್ಕಾಲು ಗಂಟೆಯಾದರೂ ಆತ ಶೌಚಾಲಯದಿಂದ ಹೊರಗೆ ಬಾರದೆ ಇರುವುದನ್ನು ಕಂಡು ಶೌಚಾಲಯಕ್ಕೆ ಹೋಗಿ ನೋಡಿದಾಗ ಶೌಚಾಲಯದಲ್ಲಿ ಇಲ್ಲದೇ ಇದ್ದು ದನ್ನು ಕಂಡು ಹಳೆಯ ಮನೆಯ ರೂಮಿಗೆ ಹೋಗಿ ನೋಡಿದಾಗ ರೂಮಿನ ಬಾಗಿಲು ಹಾಕಿದ್ದು ರೂಮಿನ ಕಿಟಕಿಯ ಮೂಲಕ ನೋಡಿದಾಗ ಪಿರ್ಯಾದಿದಾರರ ಮಗ ಪ್ರಶಾಂತನು ರೂಮಿಗೆ ಅಳವಡಿಸಿದ ತೆಂಗಿನ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಪ್ರಶಾಂತನು ಹೊಸ ಮನೆ ನಿರ್ಮಿಸುವ ಸಮಯದಲ್ಲಿ ಬ್ಯಾಂಕ್ ನಿಂದ ಸಾಲವನ್ನು ಪಡೆದುಕೊಂಡಿದ್ದು, ಸರಿಯಾಗಿ ಕೆಲಸವು ಇಲ್ಲದೇ ಇದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 20-09-2021 ರಂದು ಬೆಳಿಗ್ಗೆ 9:00 ಗಂಟೆಯಿಂದ 9:45 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿರುತ್ತಾನೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ: 25/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಗಣೇಶ್ ಪ್ರಾಯ 29 ವರ್ಷ ತಂದೆ. ಶ್ರೀನಿವಾಸ ಗೌಡ ವಾಸ: ಪುರಿಯ ಮನೆ ಬಿಳೀಯೂರು ಗ್ರಾಮ, ಬಂಟ್ವಾಳ ತಾಲೂಕು ರವರ ತಮ್ಮ ಗಿರೀಶನು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ಇದೇ ವಿಚಾರದಲ್ಲಿ ಜಿಗುಪ್ಸೆಗೊಂಡು ದಿನಾಂಕ:19-09-2021ರಂದು ರಾತ್ರಿ 08.00ಗಂಟೆಯಿಂದ ದಿನಾಂಕ: 20-09-2021ರಂದು ಬೆಳಿಗ್ಗೆ 06.45 ಗಂಟೆಯ ಮದ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಪುರಿಯ ಎಂಬಲ್ಲಿ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಯುಡಿಆರ್ ನಂಬ್ರ 29/2021 ಕಲಂ:174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ ಪ್ರಾಯ 29 ವರ್ಷ ತಂದೆ. ಮಾಯಿಲಪ್ಪ ಗೌಡ ವಾಸ: ನೇಜಿಕಾರು ಮನೆ,ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ರವರ ಅಣ್ಣ ಡೀಕಯ್ಯ ಗೌಡನು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿ ಮನೆಯವರೊಂದಿಗೆ ಜಗಳವಾಡುತ್ತಿದ್ದು ಇದೇ ವಿಚಾರದಲ್ಲಿ ಜಿಗುಪ್ಸೆಗೊಂಡು ದಿನಾಂಕ: 19-09-2021ರಂದು ರಾತ್ರಿ 8.30ಗಂಟೆಗೆ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಅಜೀರ ಎಂಬಲ್ಲಿರುವ ತನ್ನ ಮನೆಯ ಬಾತ್ ರೂಂ ನಲ್ಲಿರಿಸಿದ ಹುಲ್ಲು ಸಾಯಲೆಂದು ತಂದಿದ್ದ ಔಷದಿಯನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆ ಹಾಗೂ ಮಂಗಳೂರು ಮಂಗಳಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ದಿನಾಂಕ: 20-09-2021ರಂದು ಬೆಳಿಗ್ಗೆ 10.10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಯುಡಿಆರ್ ನಂಬ್ರ 30/2021 ಕಲಂ:174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸತೀಶ ಶೆಟ್ಟಿ (41) ತಂದೆ:ಸಂಜೀವ ಶೆಟ್ಟಿ ವಾಸ:ಪುಣಿಕೆದಡಿ ಮನೆ, ನಡ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆಯವರು ಮಾನಸಿಕ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದವರು ದಿನಾಂಕ:20.09.2021 ರಂದು ಬೆಳ್ತಂಗಡಿ ತಾಲೂಕು ನಡ ಗ್ರಾಮದ ಪುಣಿಕೆದಡಿ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲಧ ಸಮಯ ಬೆಳಿಗ್ಗೆ 08.00 ಗಂಟೆಯಿಂದ 11.30 ಗಂಟೆಯ ಮಧ್ಯದ ಅವಧಿಯಲ್ಲಿ ತನಗಿದ್ದ ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ತಮ್ಮ ಮನೆಯ ಅಡುಗೆ ಕೋಣೆಯ ಪಕ್ಕಾಸಿಗೆ ಸೀರೆಯನ್ನು ಕುಣಿಕೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 32/2021 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಈಶ್ವರ ಭಟ್ ಪ್ರಾಯ 65 ವರ್ಷ ತಂದೆ:ಶಿವನಾರಾಯಣ ಭಟ್ ವಾಸ:ಮಾದಕಟ್ಟೆ ಮನೆ, ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ರವರ ಹೆಂಡತಿ ಸುಮಾರು 35 ವರ್ಷಗಳ ಹಿಂದೆ ಮದುವೆಯಾಗಿ ಮದುವೆಯಾದ ನಂತರ ಕೆಲವು ವರ್ಷಗಳ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿ ಮಂಗಳೂರಿನ ಡಾಕ್ಟರ್ ಕಿರಣ್ ಕುಮಾರ್ ರವರಿಂದ ಔಷಧಿಯನ್ನು ಪಡೆದುಕೊಂಡು ಇತ್ತೀಚೆಗೆ 3 ದಿನಗಳ ಹಿಂದೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಆರೋಗ್ಯ ಸ್ಥಿತಿ ಸರಿಯಾಗಿ ಇಲ್ಲದ ಕಾರಣ ಈ ದಿನ ದಿನಾಂಕ 20-09-2021 ರಂದು 09.00 ಗಂಟೆಯಿಂದ 13.00 ಗಂಟೆಯ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಮಾದಕಟ್ಟೆ ಎಂಬಲ್ಲಿ ಪಾರ್ವತಿಯಮ್ಮ ರವರು ಒಬ್ಬರೇ ಮನೆಯಲ್ಲಿದ್ದು. ಮಧ್ಯಾಹ್ನ ಪಿರ್ಯಾದಿದಾರರು ಬಂದು ಮನೆಯಲ್ಲಿ ನೋಡಿದಾಗ ಮನೆಯಲ್ಲಿ ಪಾರ್ವತಿಯಮ್ಮರವರು ಇಲ್ಲದೇ ಎಲ್ಲಾ ಕಡೆಗೆ ಹುಡುಕಾಡಿದಾಗ ತೋಟದ ಕೆರೆಯ ಬದಿಯಲ್ಲಿ ಚಪ್ಪಲಿ ಹಾಗೂ ಕನ್ನಡಕ ಕಂಡು ಬಂದಿದ್ದು,ಸಂಶಯದಿಂದ ಕೆರೆಯ ನೀರನ್ನು ನೋಡಿದಾಗ ಪಾರ್ವತಿಯಮ್ಮರವರ ಮೃತ ದೇಹ ಕೆರೆಯ ನೀರಿನಲ್ಲಿ ಕೆಳಮುಖವಾಗಿ ಕವಚಿ ಬಿದ್ದದ್ದು, ಕಂಡು ಬಂತು. ಪಾರ್ವತಿಯಮ್ಮರವರು ಮಾನಸಿಕ ಅಸ್ವಸ್ಥೆಯಾಗಿದ್ದು. ಸರಿಯಾಗಿ ಔಷಧಿ ಮಾಡಿಸಿದರು ಮಾನಸಿಕ ಖಿತನ್ನತೆ ಗುಣವಾಗದೆ ಇದ್ದು ಅದೇ ವಿಷಯದಿಂದ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಜೀವನವೆ ಬೇಡವೆಂದು ನಿರ್ಧರಿಸಿ ಮನೆಯ ಬಳಿಯ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 28/2021 ಕಲಂ 174 ಸಿ ಅರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ