ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮುಸ್ತಾಫ ಬ್ಯಾರಿ ಪ್ರಾಯ : 31 ವರ್ಷ, ತಂದೆ: ದಿ|| ಅಬೂಬಕ್ಕರ್ ಬ್ಯಾರಿ ವಾಸ: ಪೊನ್ನೆದಕಟ್ಟೆ ಮನೆ ,ಮಣಿನಾಲ್ಕೂರು  ಗ್ರಾಮ ಮತ್ತು ಅಂಚೆ  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 19.10.2021 ರಂದು  ತನ್ನ ಮನೆಯಿಂದ   ಜಾರಿಗೆ ಬೈಲು ಎಂಬಲ್ಲಿಗೆ ತನ್ನ ಬಾಬ್ತು KA 21 X 1269 ನೇ ಸ್ಕೂಟರಿನಲ್ಲಿ ಸವಾರಿ ಮಾಡಿಕೊಂಡು ಹೊಗುತ್ತಾ ಸಮಯ ಸುಮಾರು 19:45 ಗಂಟೆಗೆ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ತಾಂದಳಿಕೆ ಎಂಬಲ್ಲಿಗೆ ತಲುಪಿದಾಗ ಅವರ ಹಿಂದಿನಿಂದ ಅಂದರೆ ಮಾವಿನಕಟ್ಟೆ ಕಡೆಯಿಂದ   KA-09-C-1252 ನೇ ಮಿನಿ ಬಸ್ಸನ್ನು ಅದರ ಚಾಲಕ ಅಬ್ದುಲ್  ಜಬ್ಬಾರ್  ಎಂಬವರು  ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದಾಗ ಮಿನಿ ಬಸ್ಸು  ಪಿರ್ಯಾದಿದಾರರ ಬಲಕೈ ಗೆ ತಾಗಿದ  ಪರಿಣಾಮ ಪಿರ್ಯಾದಿದಾರರು  ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಬಲ ಭುಜಕ್ಕೆ ಬಲಕೋಲು ಕೈಗೆ ಬಲಬದಿ ತಲೆಗೆ  ಬಲ ಮುಂಗೈಗೆ ಬಲ ಅಲ್ಲೆಗೆ  ಬಲಕಾಲಿನ ಮೊಣಗಂಟಿಗೆ  ಪಾದಕ್ಕೆ  ಎಡ ಅಂಗೈಗೆ ತರಚಿದ  ಹಾಗೂ ಗುದ್ದಿದ ಗಾಯಗೊಂಡುವರು  ಚಿಕಿತ್ಸೆಗೆ  ತುಂಬೆ ಫಾದರ್  ಮುಲ್ಲರ್  ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 109/2021  ಕಲಂ 279,337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಲಕ್ಷ್ಮಣ ಪ್ರಾಯ : 47 ವರ್ಷ, ತಂದೆ: ದಿ|| ತನಿಯಪ್ಪ ಬಂಗೇರಾ ವಾಸ: ಕಾಮೆರಕೋಡಿ ಮನೆ ,ಮೊಡಂಕಾಪು ಅಂಚೆ  ಬಿ ಮೂಡಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ  ದಿನಾಂಕ 20-10-2021 ರಂದು ಬಿ.ಸಿ ರೋಡಿನಲ್ಲಿ ಇಲೆಕ್ಟ್ರಿಕಲ್‌ ಕೆಲಸ ಮುಗಿಸಿ ಅಜ್ಜಿಬೆಟ್ಟು ಎಂಬಲ್ಲಿಯ ಮನೆಯೊಂದರ ಕೆಲಸದ ಬಗ್ಗೆ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 18:00 ಗಂಟೆಗೆ ಬಂಟ್ವಾಳ ತಾಲೂಕು  ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಕ್ರಾಸ್ ಎಂಬಲ್ಲಿಗೆ ತಲುಪಿ ರಸ್ತೆ ಕ್ರಾಸ್ ಮಾಡುವರೇ ರಸ್ತೆ ಮಧ್ಯೆ ಇರುವ ವಿಭಾಜಕದ  ಬಳಿ ನಿಂತಿದ್ದಾಗ ಹಿಂದಿನಿಂದ ಅಂದರೆ ಬಿಸಿ ರೋಡ್ ಪ್ಲೈ ಓವರ್ ಮೇಲಿಂದ KA 12 A 2379 ನೇ ಸ್ವಿಪ್ಟ್ ಕಾರನ್ನು ಅದರ ಚಾಲಕ ಸಂಶುದ್ದೀನ್ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ್ ಕ್ರಾಸಿಂಗ್ ಬಳಿ ಯು ಟರ್ನ್ ಮಾಡಿ ಪಿರ್ಯಾದಿದಾರರಿಗೆ  ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಅವರ ಕಾಲಿನ ಮೇಲೆ ಕಾರಿನ ಬಲಬದಿ ಹಿಂಭಾಗದ ಚಕ್ರ ಚಲಿಸಿ ಕಾಲು ರಕ್ತಗಾಯವಾಗಿದ್ದು ಗಾಯಾಳುವನ್ನು ಕಾರು ಚಾಲಕ ಹಾಗೂ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಬಿಸಿರೋಡಿನ ಸೋಮಾಯಾಜಿ ಆಸ್ಪತ್ರೆಗೆ ಕರೆತಂದಿದ್ದು  ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 110/2021  ಕಲಂ 279,337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅನಂತಕೃಷ್ಣ ಎಂ   , ಪ್ರಾಯ: 38 ವರ್ಷ,       ತಂದೆ: ರುದ್ರಪ್ಪ ಗೌಡ ,ವಾಸ: ಮಂದ್ರಾಪ್ಪಾಡಿ ಮನೆ,ನೆಲ್ಲೂರು ಕೆಮ್ರಾಜೆ ಗ್ರಾಮ,ಸುಳ್ಯ ತಾಲೂಕು, ಎಂಬವರ ದೂರಿನಂತೆ   ದಿನಾಂಕ 19-10-21 ರಂದು ತನ್ನ ಬಾಬ್ತು ಆಕ್ಟಿವಾ ಸ್ಕೂಟಿ KA21 W 4578 ನೇ ಯದರಲ್ಲಿ ಕಲ್ಮಕಾರಿನಲ್ಲಿ ಕೆಲಸ ಮುಗಿಸಿ ಎಲಿಮಲೆ ಕಡೆಗೆ ಹೋಗುವರೇ ಸಂಜೆ 17-45 ಗಂಟೆ ಸಮಯಕ್ಕೆ ಹೊರಟು ಹರಿಹರ ಪಲ್ಲತ್ತಡ್ಕದಿಂದ ನಡುಗಲ್ಲು ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಿಯಿಸಿಕೊಂಡು ಬರುತ್ತಿದ್ದಾಗ ಕುಲುಮನ ಚಡಾವು ಎಂಬಲ್ಲಿಗೆ ಸುಮಾರು 18:30 ಗಂಟೆ ವೇಳೆಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ನಡುಗಲ್ಲು ಕಡೆಯಿಂದ ಹೀರೋ ಹೊಂಡಾ ಸ್ಪ್ಲೇಂಡರ್‌‌ ಮೋಟಾರ್ ಸೈಕಲ್  ಸವಾರನು ತೀರಾ ನಿರ್ಲಕ್ಷತನದಿಂದ ಮತ್ತು ಅಜಾಗರೂಕತೆಯಿಂದ ತನ್ನ ಬಾಬ್ತು KA-19 EB 1619 ನೇದನ್ನು ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಬಲ ಕಾಲಿನ ಮಂಡಿಯ ಕೆಳಭಾಗದಲ್ಲಿ ಗುದ್ದಿದ ರಕ್ತಗಾಯವಾಗಿದ್ದು ಮತ್ತು ಬಲ ಗೈ ಮಣಿಗಂಟಿಗೆ ತೀರ್ವ ಗುದ್ದಿದ ಗಾಯವಾಗಿದ್ದು ಈ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಫತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ  ಅ.ಕ್ರ : 70-2021 ಕಲಂ: 279,337  ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಿಯಾಬ್, ಪ್ರಯ: 33 ವರ್ಷ, ತಂದೆ: ದಿ.ಮೊಯಿದ್ದೀನ್ ಕುಂಞಿ, ವಾಸ: ಸುಂಟಿ ಸಾಲು ಮನೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದುರಿನಂತೆ ಅವರ ಬಾಬ್ತು ಕೆಎ-21-ಬಿ-7841ನೇ ಆಟೋ ರಿಕ್ಷಾದಲ್ಲಿ ಸದ್ರಿಯವರ ಸಂಬಂಧಿಕರಾದ ಬೀಪಾತುಮ್ಮ, ಮೈಮೂನಾ,ಮತ್ತು ಮಕ್ಕಳಾದ ಸುಜಾಹ್, ತೌಸಿನಾ, ಹಾಗೂ ತಾಹಿರ್‌ರವರನ್ನು ಕುಳ್ಳಿರಿಸಿಕೊಂಡು ಈಶ್ವರಮಂಗಲ ಮೇನಾಲದಿಂದ ಹೊರಟು ಕಾವು ಜಂಕ್ಷನ್‌ನಿಂದ ಅರಿಯಡ್ಕಕ್ಕೆ ಬಂದು ಮಾಣಿ-ಮೈಸೂರು ಹೆದ್ದಾರಿಯಲ್ಲಿ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಾ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬ್ಲಲಿಗೆ ಸಮಯ ಸುಮಾರು ಸಂಜೆ 4.00 ಗಂಟೆಗೆ ತಲುಪಿದಾಗ ಕುಂಬ್ರ ಕಡೆಯಿಂದ ಸುಳ್ಯ ಕಡೆಗೆ ಕೆಎ-12—ಝೆಡ್-4118ನೇ ನೋಂದಣಿ ನಂಬ್ರದ ಕಾರನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಾಗ ಆಟೋರಿಕ್ಷಾವು ಎಡ ಮಗ್ಗುಲಿಗೆ ಮಗುಚಿ ಬಿದ್ದಿದ್ದು, ಆಗ ಅಲ್ಲಿ ಸೇರಿದ ಜನರು ಮತ್ತು ಇತರ ಸಾರ್ವಜನಿಕರು ಆಟೋರಿಕ್ಷಾದ ಬಳಿಗೆ ಬಂದು ರಿಕ್ಷಾವನ್ನು ಮೇಲೆತ್ತಿ ರಿಕ್ಷಾದೊಳಗೆ ಸಿಲುಕಿಕೊಂಡಿದ್ದ  ಫಿರ್ಯಾದಿದಾರರು ಮತ್ತು ಇತರ ಪ್ರಯಾಣಿಕರನ್ನು ಎಬ್ಬಿಸಿ ಆರೈಕೆ ಮಾಡಿ ನೋಡಿದಾಗ ಫಿರ್ಯಾದಿದಾರರ ಎಡ ಕೋಲು ಕಾಲಿಗೆ ಗುದ್ದಿ ರಕ್ತ ಗಾಯ ಮತ್ತು ತಲೆಗೆ ತರಚಿದ ಗಾಯವಾಗಿದ್ದು, ಪ್ರಯಾಣಿಕರಾದ ಬೀಪಾತುಮ್ಮರವರ ಬಲ ಕೈ ರಟ್ಟೆಗೆ ಗುದ್ದಿದ ಗಾಯ, ಮೈಮೂನಾರವರ ಎಡ ಕೈ ತೋಳಿಗೆ ರಕ್ತ ಗಾಯ, ಮಕ್ಕಳಾದ ಸುಜಾಹ್‌ರವರ ಬಲ ಕಾಲಿನ ಕಿರು ಬೆರಳಿಗೆ ತರಚಿದ ಗಾಯ, ತೌಸಿನಾರವರ ಎಡ ಕೈಯ ರಟ್ಟೆಗೆ ಮತ್ತು ಎಡ ಕಣ್ಣಿನ ಬಳಿ ತರಚಿದ ಗಾಯ,ತಾಹಿರ್‌ ನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳು ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ   ಅಕ್ರ:  89/2021, ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-10-2021 12:35 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080