ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವೇಣುಗೋಪಾಲ (40) ತಂದೆ: ಅಪ್ಪಯ್ಯ ವಾಸ: ಶಾಂತಿನಗರ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 20.11.2021 ಸಮಯ ಸುಮಾರು 13:15 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಶಾಂತಿನಗರ ಎಂಬಲ್ಲಿ ನಡೆದುಕೊಂಡು ಬರುತ್ತಿರುವ ಸಮಯ ಪಿರ್ಯಾದುದಾರರ ಸಂಬಂಧಿ ಸಂತೋಷ್ ಎಂಬಾತನು ಆಟೋ ರಿಕ್ಷಾ ದಿಂದ ಇಳಿದು ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ಸಮಯ ಪೈಚಾರು ಕಡೆಯಿಂದ ಸುಳ್ಯ ಕಡೆಗೆ ಕೆಎ 21 ಇಬಿ 1038 ನೇದರ ಮೋಟಾರ್ ಸೈಕಲ್ ಸವಾರ ಶ್ರೇಯಸ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಸಂತೋಷ್ ರವರಿಗೆ ಡಿಕ್ಕಿವುಂಡು ಮಾಡಿದ ಪರಿಣಾಮ ಸಂತೋಷ್ ರವರು ರಸ್ತೆಗೆ ಬಿದ್ದು, ತೋಳುಕಾಲಿಗೆ ರಕ್ತಗಾಯವಾಗಿದ್ದವರನ್ನು ಪಿರ್ಯಾದುದಾರರು ಉಪಚರಿಸಿ ಸುಳ್ಯ ಸರ್ಕಾರಿ ಆಸ್ಪತ್ರಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣೆ  ನಂಬ್ರ 88/2021  ಕಲಂ 279.337 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೃಷ್ಣಪ್ಪ ಕೆ (40) ತಂದೆ:ಚನ್ನಪ್ಪಗೌಡ ವಾಸ:ಕಟ್ಟೆಮಜಲು ಮನೆ ಕೌಕ್ರಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:19.11.2021 ರಂದು ಮಧ್ಯಾನ್ಹ 3-30 ಗಂಟೆಗೆ ಕೆಎ-21-ವೈ-4221 ನೇ ಮೋಟಾರು ಸೈಕಲ್ ನಲ್ಲಿ ಆರೋಪಿತನು ರಾಜೇಶ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನೆಲ್ಯಾಡಿ ಪೇಟೆ ಕಡೆಯಿಂದ ಕಟ್ಟೆಮಜಲು ಕಡೆಗೆ ಅಜಾಗರೂಕತೆ ಮತ್ತು ತೀವ್ರ ನಿರ್ಲಲ್ಷತನದಿಂದ ವಾಹನವನ್ನು ಚಲಾಯಿಸಿಕೊಂಡು ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಕ್ರಾಸ್ ಬಳಿ ತಲುಪಿದಾಗ ಆರೋಪಿತನ ಮೋಟಾರು ಸೈಕಲ್ ಚಾಲನೆಯ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ  ಸಹ ಸವಾರ ರಾಜೇಶ್ ಎಂಬವರಿಗೆ ರಕ್ತಗಾಯವಾಗಿದ್ದು ಮಂಗಳೂರಿನ KMC ಅತ್ತಾವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ:143/2021 ಕಲಂ:279,337 ಭಾದಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಸಂತ, ಪ್ರಾಯ 21 ವರ್ಷ, ತಂದೆ: ಸುಂದರ ಗೌಡ, ವಾಸ: ಅಲೆಕ್ಕಿ ಮನೆ, ಕಣಿಯೂರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 20-11-2021 ರಂದು 14-20 ಗಂಟೆಗೆ ಆರೋಪಿ  ಚಾಲಕ ವಂಶಿಕ್ ಕೆ ಹೆಚ್ ಎಂಬವರು KA-12-ಎಂಬಿ-0133ನೇ ನೋಂದಣಿ ನಂಬ್ರದ ಕಾರನ್ನು ಉಪ್ಪಿನಂಗಡಿ-ಗುರುವಾಯನಕೆರೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ಗುರುವಾಯನಕೆರೆ ಕಡೆಯಿಂದ ಬರುವ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿ ಫಿರ್ಯಾದಿದಾರರು ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಕೆಎ-21-ಕ್ಯೂ-8210 ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರ ಬಲಕೈಯ ಅಂಗೈಯ ಮೇಲ್ಬಾಗಕ್ಕೆ ಮತ್ತು ಬಲ ಭುಜಕ್ಕೆ ತರಚಿದ ಹಾಗೂ ಗುದ್ದಿದ ಗಾಯ ಮತ್ತು ಬಲ ಕೈಯ ನಾಲ್ಕೂ ಬೆರಳುಗಳಿಗೆ ಗುದ್ದಿದ ನೋವಾದವರನ್ನು ಸಾರ್ವಜನಿಕರು  ಮತ್ತು ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕ ಉಪಚರಿಸಿ ಚಿಕಿತ್ಸೆ ಬಗ್ಗೆ ಬೇರೊಂದು ಕಾರಿನಲ್ಲಿ ಅಪಘಾತವನ್ನುಂಟು ಮಾಡಿದ ಕಾರಿನ ಚಾಲಕರು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಫಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  147/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಶಿಲ್ಪ ರಾಣಿ ಪ್ರಾಯ: 25 ವರ್ಷ  ಗಂಡ: ಮ್ಯಾಕ್ಸಿಂ ಪಾಯಸ್ ವಾಸ: ಕಂಪ ಮನೆ ಕೆದಿಲ ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಶ್ರೀಮತಿ ಶಿಲ್ಪ ರಾಣಿಯವರು ದಿನಾಂಕ: 19-11-2021 ರಂದು ಮಧ್ಯಾಹ್ನ 13:30 ಗಂಟೆಗೆ ಪಿರ್ಯಾದಿದಾರರ ಗಂಡ ಮ್ಯಾಕ್ಸಿಂ ಪಾಯಸ್ ರವರೊಂದಿಗೆ ಮನೆಯಲ್ಲಿರುವಾಗ   ಪಿರ್ಯಾದಿದಾರರ ಅತ್ತೆ ಗ್ರೇಸಿ ಮಸ್ಕರೇನಸ್ ,ನಾದಿನಿ ರೋಜಿನಾ ಪಾಯಸ್ , ಮೈದುನ ಕಿರಣ್ ಪಾಯಸ್ ಹಾಗೂ ಭಾವ ಅಂಡ್ರೋಪಾಯಸ್  ರವರು ಪಿರ್ಯಾದಿದಾರರ ಅಡಿಕೆ ತೋಟದಿಂದ ಅಡಿಕೆಯನ್ನು ಹೆಕ್ಕಿಕೊಂಡು ಪಿರ್ಯಾದಿದಾರರ ಮನೆಯ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ  ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಗಂಡ ಮ್ಯಾಕ್ಸಿಂ ಪಾಯಸ್ ರವರು   ಈ ಬಗ್ಗೆ ವಿಚಾರಿಸಲು ಹೋದಾಗ ಕಿರಣ್ ಪಾಯಸ್ ನು ಪಿರ್ಯಾದಿದಾರರ ಗಂಡನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿರುತ್ತಾನೆ. ಇದನ್ನು ತಡೆಯಲು ಹೋದ ಪಿರ್ಯಾದಿದಾರರನ್ನು ಎಲ್ಲರೂ ಸೇರಿ  ಅವಾಚ್ಯ ಶಬ್ದಗಳಿಂದ ಬೈದು  ನೀನು ಇಲ್ಲಿಂದ ಹೋಗಬೇಕು ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿ  ಪಿರ್ಯಾದಿದಾರರ ನಾದಿನಿ ರೊಜೀನಾ ಪಾಯಸ್ ಮತ್ತು ಅತ್ತೆ ಗ್ರೇಸಿ  ಬಲಭುಜಕ್ಕೆ ಕೈಯಿಂದ ಹಲ್ಲೆ ಮಾಡಿ ತಲೆಯ ಕೂದಲನ್ನು ಎಳೆದಿರುತ್ತಾರೆ.  ಮೂರು ಜನ ಸೇರಿ ಪಿರ್ಯಾದಿದಾರರನ್ನು  ಗಟ್ಟಿಯಾಗಿ ಹಿಡಿದುಕೊಂಡು  ರೋಜಿನಾ ಪಾಯಸ್ ರವರು ಕೈಯಲ್ಲಿ ಬಾಟ್ಲಿಯಲ್ಲಿದ್ದ  ಸ್ಯಾನಿಟೈಸರ್ ನ್ನು ಬಲವಂತದಿಂದ ಕುಡಿಸಿರುತ್ತಾರೆ. ಪಿರ್ಯಾದಿದಾರರ ಬೊಬ್ಬೆ ಕೇಳಿ  ಪಿರ್ಯಾದಿದಾರರ ಅಕ್ಕ ಪ್ರಿಯದರ್ಶಿನಿ  ಮತ್ತು  ಗಂಡ ಸುರೇಶ್ ವಾಡೇಕರ್ ಹಾಗೂ ಪಿರ್ಯಾದಿದಾರರ ಗಂಡ ಮ್ಯಾಕ್ಸಿಂ ಪಾಯಸ್ ರವರು ಪಿರ್ಯಾದಿದಾರರಿಗೆ ಹಲ್ಲೆ ಮಾಡದಂತೆ ತಡೆದಿರುತ್ತಾರೆ. ಬಳಿಕ  ಪಿರ್ಯಾದಿದಾರರಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾದಾಗ ಪರೀಕ್ಷಿಸಿದ ವೈದ್ಯರು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದಂತೆ ಪಿರ್ಯಾದಿದಾರರು ಮಂಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ:  96/2021 ಕಲಂ: 323, 504, 506, ,328  ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 20-11-2021 ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಕೃಷ್ಣಕಾಂತ ಪಾಟೀಲ ರವರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 10.00 ಗಂಟೆಗೆ ನೆಲ್ಯಾಡಿಯ ಬೆಥನಿ ರಸ್ತೆಯಿಂದ ಕೊಕ್ಕಡಕ್ಕೆ ಬರುವ ರಸ್ತೆಯ ಪಿಜಿನಡ್ಕ ಎಂಬಲ್ಲಿ ಕೆಎ-21-ಎ-9728 ನೇ  ಪಿಕ್ ಅಪ್ ವಾಹನದಲ್ಲಿ ಅದರ ಚಾಲಕನಾದ ಕೆ.ಎಂ ತೋಮಸ್ ಎಂಬಾತನು 2  ಹಸುಗಳನ್ನು ಯಾವುದೇ ದಾಖಲಾತಿಗಳಿಲ್ಲದೇ ಹಿಂಸಾತ್ಮಕ ರೀತಿಯಲ್ಲಿ ತುಂಬಿರುವುದು ಕಂಡು ಬಂದ ಮೇರೆಗೆ ಆರೋಪಿಯನ್ನು ವಿಚಾರಿಸಿದಲ್ಲಿ ಸದ್ರಿ ಹಸುಗಳನ್ನು ಆರ್ಲ ಎಂಬಲ್ಲಿಂದ ಕೊಕ್ಕಡ ಮಲ್ಲಿಗೆ ಮಜಲು ಎಂಬಲ್ಲಿಗೆ ಸಾಗಾಟ ಮಾಡುತ್ತಿರುವುದಾಗಿಯು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳು ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ಆರೋಪಿಯು ಯಾವುದೇ ದಾಖಲಾತಿ ಇಲ್ಲದೆ ಜಾನುವಾರುಗಳನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಮಹೇಂದ್ರ ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ಕಂಡು ಬಂದ ಮೇರೆಗೆ ಸ್ಥಳಕ್ಕೆ ಪಂಚರುಗಳನ್ನು ಬರಮಾಡಿಕೊಂಡು ಅವರ ಸಮಕ್ಷಮ ಮಹಜರು ಮುಖೇನ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣಾ ಅ ಕ್ರ. 75/2021,ಕಲಂ: 5.7.11. ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ  ಕಾಯಿದೆ -2020ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ;-19.11.2021 ರಂದು ಸಮಯ 17.30 ಗಂಟೆಯ ಸಮಯಕ್ಕೆ ಸಜಿಪನಡು ಗ್ರಾಮದ ಸಜಿಪ ನಡು ಜಂಕ್ಷನ್  ಬಳಿ ಒರ್ವ ವ್ಯಕ್ತಿಯು  ಯಾವುದೋ ನಶೆ ಬರುವ ವಸ್ತುವನ್ನು ಸೇವಿಸಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವರನ್ನು ಕಂಡು ಕೂಡಲೇ ಸಂಜೀವ .ಕೆ ಪಿಎಸ್ಐ (ಅಪರಾಧ ವಿಭಾಗ) ಬಂಟ್ವಾಳ ಗ್ರಾಮಾಂತರ ಠಾಣೆರವರು  ಠಾಣಾ ಸಿಬ್ಬಂದಿಗಳೊಂದಿಗೆ ಆತನ ಬಳಿಗೆ ಹೋಗಿ ವಿಚಾರಿಸಲಾಗಿ ಆತನು ನಶೆಯ ಅಮಲಿನಲ್ಲಿ ಉತ್ತರಿಸುತ್ತಿದ್ದವನನ್ನು ಮತ್ತೆ ಮತ್ತೆ ವಿಚಾರಿಸಲಾಗಿ ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 149/2021 ಕಲಂ 27(b) NDPS ACT   ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ವಾರಿಜ ಪ್ರಾಯ 68 ವರ್ಷ. ಗಂಡ; ಬಾಲಕೃಷ್ಣ ಕೆ. ವಾಸ; ಕರಿಂಬಿಲ ಮನೆ.ಕೇರ್ಪಡೆ ಮನೆ. ಎಡಮಂಗಲ ಗ್ರಾಮ. ಕಡಬ ಎಂಬವರ ದೂರಿನಂತೆ ಫಿರ್ಯಾದಿದಾರರ ಗಂಡ ಬಾಲಕೃಷ್ಣ ಕೆ ಪ್ರಾಯ 68 ವರ್ಷ ತಂದೆ ಗುಡ್ಡಪ್ಪ ಗೌಡ ರವರು ಸುಮಾರು 4 ವರ್ಷಗಳಿಂದ ಪಾರ್ಶುವಾಯು ಪೀಡಿತರಾಗಿ ಅನಾರೋಗ್ಯದಿಂದ ಇದ್ದವರು ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದು ಖಾಯಿಲೆಯಿಂದ ಗುಣಮುಖರಾಗದೇ ಇದ್ದವರು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 15.11.2021 ರಂದು ಮಧ್ಯಾಹ್ನ 3-00 ಗಂಟೆ ಅವಧಿಯಲ್ಲಿ ಫಿರ್ಯಾದಿದಾರರ ಗಂಡ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ  ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 20.11.2021 ರಂದು ಬೆಳಿಗ್ಗೆ 10-30 ಗಂಟೆಗೆ ಮೃತಪಟ್ಟಿದ್ದು.ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣಾ ಯುಡಿಆರ್‌ ಸಂಖ್ಯೆ 28/2021 ಕಲಂ;174 ಸಿಅರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-11-2021 10:29 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080