ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚೇತನ್ ಸುಗ್ದೇವ್ @ ಅಮಿನ್  ಪ್ರಾಯ:33 ವರ್ಷ ತಂದೆ: ದಿ|| ಕುಲ್ ದಾಸ್ ವಾಸ: ಬಂಡಾರ ಮನೆ, ಬಂಡಾರ ಗ್ರಾಮ ಮತ್ತು ಅಂಚೆ , ನಾಗಪುರ್ ಜಿಲ್ಲೆ ಮಹಾರಾಷ್ಟ್ರ ಎಂಬವರ ದೂರಿನಂತೆ ದಿನಾಂಕ: 18.01.2022 ರಂದು ಮಹಾರಾಷ್ಟ್ರದಿಂದ MH 12 HD 0639 ನೇ ಲಾರಿಯಲ್ಲಿ  ಪೈಬರ್ ಚೆಯರ್ ಗಳನ್ನು ಲೋಡ್ ಮಾಡಿಕೊಂಡು   ಪಿರ್ಯಾದಿದಾರರು ಕ್ಲೀನರ್ ಆಗಿ ಜಗದಂಬ ರವರು  ಚಾಲಕರಾಗಿ  ಲಾರಿಯನ್ನು ಚಲಾಯಿಸಿಕೊಂಡು ಬಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿಗೆ ದಿನಾಂಕ: 21.01.2022 ರಂದು ತಲುಪಿ ಚೆಯರ್ ಗಳನ್ನು ಅನ್ಲೋಡ್ ಮಾಡುವರೇ ಬಿ.ಸಿ.ರೋಡ್ – ಮಂಗಳೂರು ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಲಾರಿಯ ಮೇಲಿಂದ ಟರ್ಪಾಲ್ ನ್ನು ತೆಗೆಯುವರೇ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಸುಮಾರು ಬೆಳಿಗ್ಗೆ 05:30 ಗಂಟೆಗೆ   ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ  KA 19 ES 6830 ನೇ ಮೋಟರ್ ಸೈಕಲ್ ನ್ನು ಅದರ ಸವಾರ ಭವಿತ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿಗೆ  ಡಿಕ್ಕಿ ಹೊಡೆದು  ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಕೋಲುಕಾಲಿಗೆ ಗುದ್ದಿದ್ದ ಹಾಗೂ ರಕ್ತಗಾಯ, ಬಲಸೊಂಟಕ್ಕೆ ಎಡಕೈಗೆ, ಎಡಕಿವಿಯ ಬಳಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 08/2022 ಕಲಂ 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೇಖರ ಪ್ರಾಯ 40 ವರ್ಷ ತಂದೆ: ಸಾಂತು ಬೈರ ವಾಸ: ಸಾದಿಕುಕ್ಕು ಮನೆ, ಪೆರಾಜೆ ಗ್ರಾಮ ಬುಡೋಳಿ ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶೇಖರ ರವರು ದಿನಾಂಕ 21.01.2022 ರಂದು ತನ್ನ ಸಂಬಂಧಿಯಾದ ಶಾಂತಪ್ಪ ಮತ್ತು ಅವರ ಭಾವ ನವೀನ ಕುಮಾರ್‌ರವರೊಂದಿಗೆ ಅಡ್ಕಾರು ಸೊಸೈಟಿಗೆ ಹೋಗಲು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ಸೊಸೈಟಿ ಬಳಿ ನಿಂತುಕೊಂಡಿದ್ದ ಸಮಯ ಸುಮಾರು 10.30 ಗಂಟೆಗೆ ಜಾಲ್ಸೂರು ಕಡೆಯಿಂದ ಸುಳ್ಯ  ಕಡೆಗೆ ಒಂದು ಪಿಕಪ್‌ ವಾಹನವನ್ನು  ಅವರದ ಚಾಲಕ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ರಸ್ತೆ ಬದಿ ದಾಟಲು ನಿಂತಿದ್ದ ನವೀನ್‌ ಕುಮಾರ್‌ ರವರಿಗೆ ಡಿಕ್ಕಿ ಹೊಡೆದುದರಿಂದ ಅವರು ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಎಡಕೈ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯವಾದರವನ್ನು ಉಪಚರಿಸಿ ಅದೇ ಪಿಕಪ್‌ನಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ 10.50 ಗಂಟೆಗೆ ಕರೆ ತಂದಲ್ಲಿ ವೈದ್ಯರು ಪರೀಕ್ಷಿಸಿ ನವೀನ್ ಕುಮಾರ್‌ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  12/2022 ಕಲಂ:  279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀ ನಾಗರಾಜ ಭಟ್,   ಪ್ರಾಯ: 51 ವರ್ಷ, ಗಂಡ: ದಿ|| ನಾರಾಯಣ ಭಟ್,  ವಾಸ:  ಪರ್ವತಮುಖಿ ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು  ಎಂಬವರ ದೂರಿನಂತೆ ದಿನಾಂಕ: 13.01.2022 ರಂದು ಪಿರ್ಯಾದಿಯವರ ಅಕ್ಕನ ಮಗ ಶಾರದಾ ಪ್ರಸಾದ್, ಪಿರ್ಯಾದಿಯ ಆದಿಮನೆಯಾದ ಬಳ್ಪದಿಂದ 19:05 ಗಂಟೆಗೆ ಅವರ ಬಾಬ್ತು ಕೆಎ 19 ಇಆರ್ 9073 ನೇದರಲ್ಲಿ ಹರಿಹರಪಲ್ಲತಡ್ಕ ದೇವಾಲಯದಲ್ಲಿ ಅಡುಗೆ ತಯಾರಿಸಲು ಹೋಗುತ್ತಾ ಕಡಬ ತಾಲೂಕು ಐನೆಕಿದು ಗ್ರಾಮದ ಮಲ್ಲಾರ ಎಂಬಲ್ಲಿಗೆ ತಲುಪಿದಾಗ ಒಂದು ಕಡವೆ ಬೈಕ್ ಗೆ ಅಡ್ಡಬಂದುದರಿಂದ ಬೈಕ್ ನಿಯಂತ್ರಣ ತಪ್ಪಿ ಕಡವೆಗೆ ಡಿಕ್ಕಿ ಹೊಡೆದು ರಸ್ತೆಯ ಎಡಬದಿಗೆ ಬೈಕ್ ಸಮೇತ ಬಿದ್ದಿದ್ದು, ಶಾರದಾ ಪ್ರಸಾದ್ ರವರಿಗೆ ಬೆನ್ನಿಗೆ ಗುದ್ದಿದ ಗಾಯವಾಗಿ, ಎಲುಬಿಗೆ ನೋವುಂಟಾಗಿದ್ದು, ಅದೇ ದಾರಿಯಲ್ಲಿ ಬಂದ ಗೋವಿಂದ ಎನ್ ಎಸ್ ಎಂಬವರು ಪಿರ್ಯಾದಿದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸುಬ್ರಹ್ಮಣ್ಯದಿಂದ ಯುವತೇಜಸ್ಸು ಖಾಸಗಿ ಆ್ಯಂಬುಲೆನ್ಸ್ ನ್ನು ಬರ ಹೇಳಿ ಅದರಲ್ಲಿ ಗಾಯಾಳುವನ್ನು ಬೆಳ್ಳಾರೆಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಶಸ್ತ್ರ ಚಿಕಿತ್ಸೆ ಮಾಡುವರೇ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ  : 09-2022 ಕಲಂ: 279,338 IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಣೇಶ ಪ್ರಭು ಪ್ರಾಯ:75 ವರ್ಷ ತಂದೆ; ದಿ/ ರಘುನಾಥ ಪ್ರಭು ವಾಸ; ನಿಡಿಗಲ್ ಮನೆ ಮಂಡಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ನಿಡಿಗಲ್ ಎಂಬಲ್ಲಿರುವ  ಶ್ರೀ ಮಹಾಗಣಪತಿ ದೇವಸ್ಥಾನದ ಮೊಕ್ತೇಸ್ಥರರಾಗಿದ್ದು   ಪ್ರಸ್ತುತ ದೇವಸ್ಥಾನದ ಜಿರ್ಣೋಧಾರ ಕೆಲಸ ನಡೆಯುತ್ತಿದ್ದು ಗೋಡೆಗಳ ನಿರ್ಮಾಣ ಹಂತದಲ್ಲಿ ಇರುತ್ತದೆ.   ದಿನಾಂಕ:19-01-2022 ರಂದು 18.00 ಗಂಟೆ ಸಮಯಕ್ಕೆ ಪಿಲಿಫ್ ಎಂಬಾತನು  ದೇವಸ್ಥಾನಕ್ಕೆ ಅಕ್ರಮ ಪ್ರವೇಶ ಮಾಡಿ ದೇವಸ್ಥಾನದ ಸುತ್ತು ಪೌಳಿಯ ಗೋಡೆಯನ್ನು  ಕೆಡವಿ ನಷ್ಟಗೊಳಿಸಿದಲ್ಲದೇ   ಪಿರ್ಯಾದುದಾರರಿಗೆ ಅವ್ಯಾಚ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾನೆ.  ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 09/2022  ಕಲಂ:447,427,295,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 20.01.2022 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 09/2021 ಕಲಂ  498(ಎ), 506, 448, 504, 323 ಜೊತೆಗೆ 34 ಐಪಿಸಿ ಮತ್ತು ಕಲಂ 4 ಡಿ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸ್ವಸ್ತಿಕ್ ಪ್ರಾಯ 28 ವರ್ಷ ತಂದೆ: ನಾರಾಯಣ ನಾಯ್ಕ್ ಪಿಲಿಕೋಡಿ ಮನೆ, ಜಾಲ್ಸೂರು ಗ್ರಾಮ ಸೋಣಂಗೇರಿ ಅಂಚೆ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಸ್ವಸ್ತಿಕ್‌ರವರ ಚಿಕ್ಕಪ್ಪ ರವಿಕುಮಾರ್ ರವರು ಪಿರ್ಯಾದಿದಾರರ ಮನೆ ಬಳಿ ಸಂಸಾರದೊಂದಿಗೆ ವಾಸ್ತವ್ಯ ಇದ್ದು, ಅವರಿಗೆ ಕೆಲವು ಸಮಯಗಳಿಂದ ಕಫಧ ಸಮಸ್ಯೆ ಇದ್ದು ದಿನಾಂಕ 21.01.2022 ರಂದು ಬೆಳಿಗ್ಗೆ 06.00 ಗಂಟೆ  ಸಮಯಕ್ಕೆ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ 06.50 ಗಂಟೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು  ಚಿಕ್ಕಪ್ಪ ರವಿಕುಮಾರ್‌ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು,.ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 03/22 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-01-2022 10:36 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080